ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿರುವ ಇನ್ಫಿನಿಕ್ಸ್ ಕಂಪನಿ ಇದೀಗ ದೇಶದಲ್ಲಿ ಮತ್ತೊಂದು ಹೊಸ ಮೊಬೈಲ್ ಲಾಂಚ್ ಮಾಡಲು ತಯಾರಾಗಿದೆ. ಈ ತಿಂಗಳ ಅಂತ್ಯದಲ್ಲಿ ಮಾರುಕಟ್ಟೆಗೆ ಇನ್ಫಿನಿಕ್ಸ್ ಜಿರೋ 30 5G (Infinix Zero 30 5G) ಸ್ಮಾರ್ಟ್ಫೋನ್ ಲಗ್ಗೆಯಿಡಲಿದೆ. ಇದು ಕಳೆದ ವರ್ಷ ಡಿಸೆಂಬರ್ನಲ್ಲಿ ಬಿಡುಗಡೆ ಆದ ಇನ್ಫಿನಿಕ್ಸ್ ಜಿರೋ 20 5G ಯ ಉತ್ತರಾಧಿಕಾರಿಯಾಗಿದೆ. ಇನ್ಫಿನಿಕ್ಸ್ ಜಿರೋ 30 ಹಿಂದಿನ ಮಾದರಿಗಿಂತ ಕೆಲವು ನವೀಕರಣಗಳೊಂದಿಗೆ ಆಗಮಿಸುವ ನಿರೀಕ್ಷೆಯಿದೆ.
ಇನ್ಫಿನಿಕ್ಸ್ ಪತ್ರಿಕಾ ಹೇಳಿಕೆಯಲ್ಲಿ, ಇನ್ಫಿನಿಕ್ಸ್ ಜಿರೋ 30 5G ಅನ್ನು ಆಗಸ್ಟ್ ಅಂತ್ಯದ ವೇಳೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಲಾಗುವುದು ಎಂದು ಘೋಷಿಸಿದೆ. ಬಿಡುಗಡೆಯ ನಿಖರವಾದ ದಿನಾಂಕವನ್ನು ಇನ್ನೂ ಖಚಿತಪಡಿಸಿಲ್ಲ. ಮುಂಬರುವ ಇನ್ಫಿನಿಕ್ಸ್ ಜಿರೋ 30 5G ಯ ಹಿಂದಿನ ಪ್ಯಾನೆಲ್ ವಿನ್ಯಾಸ ಮತ್ತು ಬಣ್ಣದ ಆಯ್ಕೆಗಳನ್ನು ಕಂಪನಿಯು ಬಹಿರಂಗಪಡಿಸಿದೆ. ಕಂಪನಿಯು ಹಂಚಿಕೊಂಡ ಫೋಟೋದಲ್ಲಿ, ಫೋನ್ ಲ್ಯಾವೆಂಡರ್ ಮತ್ತು ಗೋಲ್ಡನ್ ಬಣ್ಣದ ಆಯ್ಕೆಗಳಲ್ಲಿ ಗ್ಲಾಸ್ ಬ್ಯಾಕ್ ಪ್ಯಾನೆಲ್ ಇದೆ.
ಸ್ಮಾರ್ಟ್ಫೋನ್ನಿಂದ ಟ್ವಿಟ್ಟರ್ ಮೂಲಕ ಲಕ್ಷ ಲಕ್ಷ ಹಣ ಗಳಿಸಿ: ನೀವು ಮಾಡಬೇಕಾಗಿರುವುದು ಇಷ್ಟೇ
ಹಿಂಭಾಗದಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ನೀಡಲಾಗಿದ್ದು, ಇದರ ಎಡ ಮೂಲೆಯಲ್ಲಿ ಎಲ್ಇಡಿ ಫ್ಲ್ಯಾಷ್ ಅಳವಡಿಸಲಾಗಿದೆ. ಅಮೊಲೆಡ್ ಡಿಸ್ ಪ್ಲೇ ಹೊಂದಿರುತ್ತದೆ. ಈ ಫೋನಿನ ಮುಂಭಾಗ ಮತ್ತು ಹಿಂಭಾಗದ ಎರಡೂ ಪ್ಯಾನೆಲ್‌ಗಳು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯೊಂದಿಗೆ ಬರುತ್ತವೆ.
ಈ ಹ್ಯಾಂಡ್‌ಸೆಟ್‌ನ ಹಿಂದಿನ ವರ್ಷನ್ ಇನ್ಫಿನಿಕ್ಸ್ ಜಿರೋ 20 5G ಅನ್ನು ಭಾರತದಲ್ಲಿ ಏಕೈಕ 8GB + 128 GB ರೂಪಾಂತರದಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಬೆಲೆ 15,999 ರೂ. ಆಗಿದೆ. ಇದು ಸ್ಪೇಸ್ ಗ್ರೇ, ಗ್ಲಿಟರ್ ಗೋಲ್ಡ್ ಮತ್ತು ಗ್ರೀನ್ ಫ್ಯಾಂಟಸಿ ಬಣ್ಣ ಆಯ್ಕೆಗಳಲ್ಲಿ ಮಾರಾಟ ಆಗುತ್ತಿದೆ. ಈ ಹ್ಯಾಂಡ್‌ಸೆಟ್ 108-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ನೊಂದಿಗೆ 13-ಮೆಗಾಪಿಕ್ಸೆಲ್ ಸಂವೇದಕ ಮತ್ತು ಕ್ವಾಡ್-ರಿಯರ್ ಫ್ಲ್ಯಾಷ್ ಘಟಕದೊಂದಿಗೆ 2-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ಮುಂಭಾಗದ ಕ್ಯಾಮೆರಾವು 60-ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಿಂದ ಕೂಡಿದೆ.
ಏತನ್ಮಧ್ಯೆ, ಇನ್ಫಿನಿಕ್ಸ್ ಇತ್ತೀಚೆಗೆ ಭಾರತದಲ್ಲಿ ಇನ್ಫಿನಿಕ್ಸ್ ಜಿರೋ GT 10 ಪ್ರೊ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 8GB RAM + 256GB ರೂಪಾಂತರಕ್ಕಾಗಿ 19,999ರೂ. ಈ ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 8050 SoC ಯನ್ನು ಹೊಂದಿದೆ ಮತ್ತು 45W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ