Tips and Tricks: ನಿಮ್ಮ ದೈನಂದಿನ ಡೇಟಾ ಕೋಟಾ ಖಾಲಿಯಾಗಿದ್ರೂ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬೇಕೆ?: ಈ ಟ್ರಿಕ್ ಫಾಲೋ ಮಾಡಿ

| Updated By: Vinay Bhat

Updated on: Jul 23, 2021 | 9:05 PM

Tips and Tricks: ನಿಮ್ಮ ದೈನಂದಿನ ಡೇಟಾ ಖಾಲಿಯಾದ ಮೇಲೆ ಜಿಯೋ ಸಿಮ್​ ನವರು ಇಂಟರ್ ನೆಟ್ ಸ್ಪೀಡ್ ಹೆಚ್ಚಿಸಲು ನಿಮ್ಮ 4ಜಿ ಸ್ಮಾರ್ಟ್​ಫೋನ್​ನಲ್ಲಿ ಕೆಲವು ಸೆಟ್ಟಿಂಗ್ ಗಳನ್ನ ಬದಲಾಯಿಸಬೇಕು.

Tips and Tricks: ನಿಮ್ಮ ದೈನಂದಿನ ಡೇಟಾ ಕೋಟಾ ಖಾಲಿಯಾಗಿದ್ರೂ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬೇಕೆ?: ಈ ಟ್ರಿಕ್ ಫಾಲೋ ಮಾಡಿ
Internet Speed
Follow us on

ಭಾರತ ಈಗ 5G ಯುಗದತ್ತ ಕಾಲಿಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದೇಶ ಈಗ ಟೆಕ್ನಾಲಜಿಯಿಂದ ಸಾಕಷ್ಟು ಬದಲಾಗಿದೆ. 5G ಸ್ಮಾರ್ಟ್​ಫೋನ್​ಗಳು ಒಂದರ ಹಿಂದೆ ಒಂದರಂತೆ ಮಾರುಕಟ್ಟೆಯಲ್ಲಿ ಬಿಡುಗಡೆ ಆಗುತ್ತಿದೆ. ಜನರಂತು ನೆಟ್​ವರ್ಜ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದು ಯಾವಾಗ 5ಜಿ ಭಾರತಕ್ಕೆ ಬರುತ್ತೆ ಅಂತ ಕಾಯುತ್ತಿದ್ದಾರೆ. 4G ಇಂಟರ್​ನೆಟ್ ಸ್ಪೀಡ್ ಈಗ ಯಾರಿಗೂ ಸಾಕಾಗುತ್ತಿಲ್ಲ ಎಂಬಂತಾಗಿದೆ.

ದೇಶದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋ ಅತಿ ಕಡಿಮೆ ಬೆಲೆಗೆ ಇಂಟರ್ ನೆಟ್ ಸೇವೆ ನೀಡಿ ಕಡಿಮೆ ಸಮಯದಲ್ಲಿ ನಂಬರ್ ಒನ್ ಪಟ್ಟ ಅಲಂಕರಿಸಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಇತರೆ ಟೆಲಿಕಾಂ ಕಂಪೆನಿಗಳಿಗೆ ಹೋಲಿಸಿದರೆ ಜಿಯೋದ ಇಂಟರ್ನೆಟ್ ಸ್ಪೀಡ್ ಅಧಿಕವಾಗಿದೆಯಂತೆ. ಆದರೆ, ಎಲ್ಲದರಲ್ಲೂ ಡೇಟಾ ಲಿಮಿಟ್ ಎಂಬುದು ಇದ್ದೇ ಇದೆ. ನಿಮ್ಮ ದೈನಂದಿನ ಡೇಟಾ ಖಾಲಿಯಾದ ಮೇಲೆ ಇಂಟರ್ ನೆಟ್ ತುಂಬಾನೆ ಸ್ಲೋ ಆಗುವುದು ಮಾಮಾಲಿ. ಹೀಗೆ ಆದಾಗ ಸ್ಪೀಡ್ ಹೆಚ್ಚಿಸಲು ಏನು ಮಾಡಬೇಕು.

ನಿಮ್ಮ ದೈನಂದಿನ ಡೇಟಾ ಖಾಲಿಯಾದ ಮೇಲೆ ಜಿಯೋ ಸಿಮ್​ ನವರು ಇಂಟರ್ ನೆಟ್ ಸ್ಪೀಡ್ ಹೆಚ್ಚಿಸಲು ನಿಮ್ಮ 4ಜಿ ಸ್ಮಾರ್ಟ್​ಫೋನ್​ನಲ್ಲಿ ಕೆಲವು ಸೆಟ್ಟಿಂಗ್ ಗಳನ್ನ ಬದಲಾಯಿಸಬೇಕು. ಮೊದಲು ನಿಮ್ಮ ಮೊಬೈಲ್ ಸೆಟ್ಟಿಂಗ್ಸ್​ಗೆ ಹೋಗಿ ಮೊಬೈಲ್ ನೆಟ್‌ವರ್ಕ್‌ ಮೇಲೆ ಟ್ಯಾಪ್ ಮಾಡಿ. ನಂತರ ನಿಮ್ಮ ರಿಲಯನ್ಸ್ ಜಿಯೋ 4 ಜಿ ಸಿಮ್ ಕಾರ್ಡ್‌ನಲ್ಲಿರುವ APN ಗೆ ಹೋಗಿ. ಆ ಬಳಿಕ ಜಿಯೋ ಸಿಮ್ ಸ್ಲಾಟ್ ಆಯ್ಕೆ ಮಾಡಿಕೊಳ್ಳಿ. ಇದಾದ ಬಳಿಕ ಬಲ ಮೂಲೆಯಲ್ಲಿಯಲ್ಲಿರುವ ಮೆನು ಆಯ್ಕೆ ಕ್ಲಿಕ್ ಮಾಡಿ new APN ಟ್ಯಾಪ್ ಮಾಡಿ. ಹೊಸ ಎಪಿಎನ್ ಆಯ್ಕೆ ಮಾಡಿದ ಬಳಿಕ ಸೇವ್ ಮಾಡಿಕೊಳ್ಳಿ. ಇದಾದ ನಂತರ ನಿಮ್ಮ ಇಂಟರ್ನೆಟ್ ವೇಗ ಹೆಚ್ಚಾಗಲಿದೆ.

ಇನ್ನೊಂದು ಮಾರ್ಗ ಎಂದರೆ ಅದು ಥರ್ಡ್ ಪಾರ್ಟಿ ಆ್ಯಪ್. ಪ್ಲೇ ಸ್ಟೋರ್ ನಿಂದ ಎಂಟಿಕೆ ಎಂಜಿನಿಯರಿಂಗ್ ಮೋಡ್ ( MTK Engineering mode), ಶಾರ್ಟ್ಕಟ್ ಮಾಸ್ಟರ್(Shortcut Master (Lite), ವಿಪಿಎನ್ ಮಾಸ್ಟರ್ ಅಥವಾ ಸ್ನ್ಯಾಪ್ ವಿಪಿಎನ್(VPN master or snap VPN), ಸ್ಪೀಡ್ ಬೂಸ್ಟರ್ ಮತ್ತು ಆಪ್ಟಿಮೈಜರ್ ಅಪ್ಲಿಕೇಶನ್(Speed Booster and Optimizer app) ಆ್ಯಪ್ ಗಳನ್ನು ಡೌನ್ಲೋಡ್ ಮಾಡಿ ಇಂಟರ್ನೆಟ್ ವೇಗ ಹೆಚ್ಚಿಸಬಹುದು.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ರಿಲಯನ್ಸ್ ಜಿಯೋ 4ಜಿVoLTE ನೆಟ್3 LTE ಬ್ಯಾಂಡ್‌ಗಳನ್ನು ಅವಲಂಭಿಸಿದೆ. ಬ್ಯಾಂಡ್ 3 (1800 Mhz), ಬ್ಯಾಂಡ್ 5 (850 Mhz) ಮತ್ತು ಬ್ಯಾಂಡ್ 40 (2300 Mhz) ನಲ್ಲಿ ಕಾರ್ಯ ನಿರ್ವಹಿಸುತ್ತದೆ. ಉದಾಹರಣೆಗೆ, ನಿಮ್ಮ ಫೋನ್‌ನಲ್ಲಿ ಮೇಲೆ ತಿಳಿಸಿದ ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡಿ ಈ ಬ್ಯಾಂಡ್ಗಳನ್ನು ಬಳಸಿ ನೆಟ್ ಸ್ಪೀಡ್ ಮಾಡಿಕೊಳ್ಳಬಹುದು. ಈ ಪೈಕಿ ಬ್ಯಾಂಡ್ 40> ಬ್ಯಾಂಡ್ 3> ಬ್ಯಾಂಡ್ 5 – ಅತ್ಯುತ್ತಮ ವೇಗವನ್ನು ಹೊಂದಿದೆ.

ಇಂಟರ್ ನೆಟ್ ಖಾಲಿಯಾಗಿ ಸ್ಪೀಡ್ ಬ್ರೌಸ್ ಮಾಡಬೇಕು ಎಂದಿದ್ದರೆ ನೀವು ಫೈರ್‌ಫಾಕ್ಸ್‌ ಬಳಸಿ. ಕಡಿಮೆ RAM ಬಳಸುವ ಈ ಬ್ರೌಸರ್‌ಗಳು ನಿಮ್ಮ ಅಂತರ್ಜಾಲ ಸಂಪರ್ಕವನ್ನು ಹೆಚ್ಚಿಸುತ್ತವೆ. ಇದರಲ್ಲಿ ಪಾಪ್‌ಅಪ್‌ ಬ್ಲಾಕರ್ ಮತ್ತು ಡೇಟಾ ಸೇವರ್‌ ಆಯ್ಕೆಗಳು ಬ್ರೌಸರ್‌ ವೇಗವನ್ನು ಹೆಚ್ಚಿಸಲು ನೆರವಾಗುತ್ತವೆ.

Poco F3 GT: ಇಂದು ಒಂದೇ ದಿನ ಭಾರತದಲ್ಲಿ ರಿಲೀಸ್ ಆಯ್ತು ಬರೋಬ್ಬರಿ 3 ಫೋನ್: ಯಾವುವು?, ಏನು ವಿಶೇಷತೆ?

Nokia 110 4G: ಕೇವಲ 2799 ರೂ. ಗೆ ಆಕರ್ಷಕ 4G ಫೋನ್ ಬಿಡುಗಡೆ ಮಾಡಿದ ನೋಕಿಯಾ: ಏನು ವಿಶೇಷತೆ?