ಟೆಕ್ ಲೋಕದ ದೈತ್ಯ ಕಂಪನಿ ಆ್ಯಪಲ್ (Apple) ಐಫೋನ್ 14 ಸರಣಿಯನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಇದೀಗ ಹೊಸ ಆಪರೇಟಿಂಗ್ ಸಿಸ್ಟಮ್ iOS 16 ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ವಿನೂತನವಾದ ಆಯ್ಕೆಗಳು ನೀಡಲಾಗಿದ್ದು ಸಾಕಷ್ಟು ವಿಶೇಷತೆಯಿಂದ ಕೂಡಿದೆ. ಈ ಹೊಸ ಐಒಎಸ್ 16 (iOS 16) ಆಯ್ದ ಐಫೋನ್ಗಳಲ್ಲಿ (iPhone 13) ಮಾತ್ರ ಲಭ್ಯವಿದ್ದು ಈಗಾಗಲೇ ಅಪ್ಡೇಟ್ಗೆ ಕೂಡ ಸಿಗುತ್ತಿದೆ. ಹೋಮ್ ಸ್ಕ್ರೀನ್, ಅಧಿಸೂಚನೆಗಳು ಮತ್ತು ಫೋಟೋಗಳ ಅಪ್ಲಿಕೇಶನ್ ನವೀಕೃತವಾಗಿದೆ.
iOS 16 ನಲ್ಲಿ ಫೋಟೋಗಳನ್ನು ಲಾಕ್ ಸ್ಕ್ರೀನ್ನಲ್ಲಿ ಕಾಣಿಸಿಕೊಳ್ಳುವಂತೆ ಮಾಡಬಹುದಾಗಿದೆ. ಜೊತೆಗೆ ಫಾಂಟ್ ಶೈಲಿಗಳನ್ನು ಬದಲಾಯಿಸುವ ಆಯ್ಕೆಯ ವಿಜೆಟ್ಗಳನ್ನು ಒದಗಿಸಲಾಗಿದೆ. ಜೊತೆಗೆ IOS 16 ಇತ್ತೀಚೆಗೆ ಕಳುಹಿಸಿದ ಸಂದೇಶವನ್ನು ಸಂಪಾದಿಸುವ ಅಥವಾ ಅಳಿಸುವ ವೈಶಿಷ್ಟ್ಯವನ್ನು ಹೊಂದಿದೆ. ಫೋಟೋಗಳು ಮತ್ತು ವಿಷಯಾಧಾರಿತ ಸ್ಟೋರೇಜ್‌ಗಳೊಂದಿಗೆ ವಾಲ್‌ಪೇಪರ್ ಗ್ಯಾಲರಿಯನ್ನು ಬಳಕೆದಾರರು ಪ್ರವೇಶಿಸಬಹುದು. ಇದು ಬಳಕೆದಾರರಿಗೆ ಸಮಯ ಮತ್ತು ದಿನಾಂಕಕ್ಕಾಗಿ ಫಾಂಟ್‌ಗಳನ್ನು ಕಸ್ಟಮೈಸ್ ಮಾಡಲು ಅವಕಾಶ ನೀಡಲಿದೆ.
ಇನ್ನು ಈ ಹೊಸ ಅಪ್ಡೇಟ್ನಲ್ಲಿ ನೋಟಿಫಿಕೇಶನ್‌ಗಳು ಮತ್ತು ಆಲರ್ಟ್‌ಗಳನ್ನು ಡಿಸ್‌ಪ್ಲೇ ಡೌನ್‌ಸೈಡ್‌ನಲ್ಲಿ ಕಾಣಬಹುದಾಗಿದೆ. ಇದರಿಂದ ಟ್ಯಾಪ್ ಮಾಡುವುದು ಹಾಗೂ ವೀಕ್ಷಿಸುವುದು ಸುಲಭವಾಗಲಿದೆ. ಲೈವ್ ಆಕ್ಟಿವಿಟಿಸ್ ಎಂಬ ಹೊಸ ಟೂಲ್ ಮೂಲಕ ಬಳಕೆದಾರರು ಲಾಕ್ ಸ್ಕ್ರೀನ್‌ನಿಂದ ರಿಯಲ್ ಟೈಂ ನಡೆಯುತ್ತಿರುವ ಕಂಟೆಂಟ್ ಅನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ವಿಶೇಷವಾಗಿ ಲಾಕ್ ಸ್ಕ್ರೀನ್‌ನಿಂದ ಸ್ವೈಪ್ ಮಾಡುವ ಮೂಲಕ ಫೋಕಸ್ ಮೋಡ್ ಅನ್ನು ಪ್ರವೇಶಿಸಬಹುದಾಗಿದೆ. ಇದರಲ್ಲಿ ನೀವು ಸೆಂಡ್ ಮಾಡಿದ ಮೆಸೇಜ್ ಅನ್ನು ಎಡಿಟ್ ಮಾಡುವುದಕ್ಕೆ ಮತ್ತು ಡಿಲೀಟ್ ಮಾಡುವುದಕ್ಕೆ ಅವಕಾಶ ಕೂಡ ಸಿಗಲಿದೆ. ಫೋಟೋ ಲೈಬ್ರರಿಯಲ್ಲಿ ಹೊಸ ಆಯ್ಕೆ ಬಂದಿದ್ದು ಇದರಲ್ಲಿ ನೀವು ನಿರ್ದಿಷ್ಟ ವ್ಯಕ್ತಿಗಳ ಫೋಟೋಗಳನ್ನು ಆಯ್ಕೆ ಮಾಡಲು ಸಾಧ್ಯವಾಗಲಿದೆ.
ಯಾವ ಐಫೋನ್ನಲ್ಲಿ ಲಭ್ಯ?:
ಹೊಸ iOS 16 ಐಫೋನ್ 14, ಐಫೋನ್ 14 ಪ್ಲಸ್, ಐಫೋನ್ 14 ಪ್ರೊ, ಐಫೋನ್ 14 ಪ್ರೊ ಮ್ಯಾಕ್ಸ್, ಐಫೋನ್ 13, ಐಫೋನ್ 13 ಮಿನಿ, ಐಫೋನ್ 13 ಪ್ರೊ, ಐಫೋನ್ 13 ಪ್ರೊ ಮ್ಯಾಕ್ಸ್, ಐಫೋನ್ 12, ಐಫೋನ್ 12 ಮಿನಿ, ಐಫೋನ್ 12 ಪ್ರೊ ನಲ್ಲಿ ಲಭ್ಯವಾಗಲಿದೆ. ಇದಲ್ಲದೆ ಐಫೋನ್ 12 ಪ್ರೊ ಮ್ಯಾಕ್ಸ್, ಐಫೋನ್ 11, ಐಫೋನ್ 11 ಪ್ರೊ, ಐಫೋನ್ 11 ಪ್ರೊ ಮ್ಯಾಕ್ಸ್, ಐಫೋನ್ XS, ಐಫೋನ್ XS ಮ್ಯಾಕ್ಸ್, ಐಫೋನ್ XR, ಐಫೋನ್ X, ಐಫೋನ್ 8, ಐಫೋನ್ 8 ಪ್ಲಸ್, ಮತ್ತು ಐಫೋನ್ SE ಗಳಲ್ಲಿ ಕಾರ್ಯನಿರ್ವಹಿಸಲಿದೆ.
ಡೌನ್‌ಲೋಡ್ ಮಾಡುವುದು ಹೇಗೆ?: