ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಐಫೋನ್ 15 ಸರಣಿಯ (iPhone 15 Series) ಮಾರಾಟ ಶುರುವಾಗಿದೆ. ಗ್ರಾಹಕರು ಕ್ಯೂ ನಿಂತು ನೂತನ ಐಫೋನ್ ಅನ್ನು ಖರೀದಿಸುತ್ತಿದ್ದು, ಕೆಲವು ಕಡೆಗಳಲ್ಲಿ ಈಗಾಗಲೇ ಸೋಲ್ಡ್ ಔಟ್ ಕೂಡ ಆಗಿದೆ. ಆದರೆ, ಇವುಗಳಲ್ಲಿ ಕೆಲವು ನಕಲಿ ಐಫೋನ್ 15 ಕೂಡ ಮಾರಾಟ ಆಗುತ್ತಿದೆ. ನಕಲಿ ಉತ್ಪನ್ನಗಳ ಈ ಯುಗದಲ್ಲಿ, ನೀವು ಐಫೋನ್ ನಂತಹ ದುಬಾರಿ ಉತ್ಪನ್ನವನ್ನು ಖರೀದಿಸುವಾಗ ಜಾಗರೂಕರಾಗಿರಬೇಕು. ನಕಲಿ ಫೋನ್‌ಗಳನ್ನು ಅಸಲಿ ಎಂದು ಬಿಂಬಿಸಿ ಮಾರಾಟ ಮಾಡುವುದು ಹಲವು ಕಡೆಗಳಲ್ಲಿ ಕಂಡುಬಂದಿದೆ.
ಹೊಸ ಐಫೋನ್ 15 ಅನ್ನು ಖರೀದಿಸುವ ಮೊದಲು ಆ ಫೋನ್ ಅಸಲಿಯೋ ಅಥವಾ ನಕಲಿಯೇ ಎಂದು ನೀವು ಹೇಗೆ ಪರಿಶೀಲಿಸಬಹುದು ಎಂಬುದನ್ನು ನಿಮಗೆ ಹೇಳುತ್ತೇವೆ. ನಕಲಿ ಐಫೋನ್ಗಳ ಹಾವಳಿಯನ್ನು ಕಂಡು ಈ ಬಾರಿ ಸ್ವತಃ ಆ್ಯಪಲ್ ಸಂಸ್ಥೆ ಈ ಸಮಸ್ಯೆಗೆ ಅಂತ್ಯ ಹಾಡಿದೆ. ಹೊಸ ಐಫೋನ್ 15 ಸರಣಿಯ ಚಿಲ್ಲರೆ ಬಾಕ್ಸ್‌ನಲ್ಲಿಯೇ ಹೈ-ಸೆಕ್ಯುರಿಟಿ ಸಿಸ್ಟಮ್ ಅನ್ನು ನೀಡಿದೆ. ಅದನ್ನು ನೋಡುವ ಮೂಲಕ ನೀವು ಖರೀದಿಸುತ್ತಿರುವ ಫೋನ್ ನಿಜವಾಗಿಯೂ ಅಸಲಿಯೇ ಅಥವಾ ಅಲ್ಲವೇ ಎಂಬುದನ್ನು ತಿಳಿಯಬಹುದು.
ನಿಯೋ ಎಂಬ ಹೊಸ ಸ್ಮಾರ್ಟ್ಫೋನ್ ಬಿಡುಗಡೆ: ಟೆಕ್ ಮಾರುಕಟ್ಟೆ ಅಲ್ಲೋಲ-ಕಲ್ಲೋಲ
ಇದರ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಆದರೆ ಈ ಬಾರಿ ಆ್ಯಪಲ್ ಚಿಲ್ಲರೆ ಬಾಕ್ಸ್‌ನಲ್ಲಿಯೇ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಿದೆ. ಅದನ್ನು ನೀವು ಫೋನ್ ಖರೀದಿಸುವ ಮೊದಲು ಪರಿಶೀಲಿಸಬೇಕು. ಇತ್ತೀಚಿಗೆ, ಪೋಸ್ಟ್ ಮೂಲಕ ಈ ವಿಡಿಯೋ ಕಾಣಿಸಿಕೊಂಡಿದೆ.
The boxes of the new iPhone 15 are equipped with a security system that displays holograms under a UV light. This is a measure introduced by Apple to recognize real boxes and prevent people from being scammed pic.twitter.com/oBhQoc5IDI
— Majin Bu (@MajinBuOfficial) September 21, 2023
ನಿಮ್ಮ ಐಫೋನ್ ನಕಲಿ ಎಂದು ನಿಮಗೆ ಅನುಮಾನವಿದ್ದರೆ, ಫೋನ್‌ನ ಸೆಟ್ಟಿಂಗ್ಸ್ಗೆ ತೆರಳಿ ಅಪ್ಲಿಕೇಶನ್‌ಗೆ ಹೋಗುವ ಮೂಲಕ ಅಥವಾ ಫೋನ್‌ನ ಹಿಂಭಾಗದಲ್ಲಿ ತೋರಿಸಿರುವ ಮಾಹಿತಿಯನ್ನು ನೋಡುವ ಮೂಲಕ ಬಾಕ್ಸ್‌ನಲ್ಲಿ ನೀಡಲಾದ ಸರಣಿ ಸಂಖ್ಯೆ ಅಥವಾ IMEI ಸಂಖ್ಯೆಯನ್ನು ನೀವು ಪರಿಶೀಲಿಸಬಹುದು. ಇದಲ್ಲದೆ, SIM ಟ್ರೇನಲ್ಲಿ IMEI ಸಂಖ್ಯೆಯನ್ನು ಸಹ ಬರೆಯಲಾಗಿದೆ. ಈ ಮೂಲಕ ಫೋನ್ ನಿಜವಾಗಿಯೂ ಅಸಲಿಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು.
ಫೋನ್ ತೆಗೆದುಕೊಳ್ಳುವಾಗ, ಫೋನ್‌ನಲ್ಲಿ ಆ್ಯಪಲ್ ಐಡಿಗೆ ಲಾಗ್ ಇನ್ ಮಾಡಿ, ಈ ಫೋನ್ ಕ್ಲೋನ್ ಆಗಿದ್ದರೆ ಆ್ಯಪಲ್ ಐಡಿ ಲಾಗ್ ಇನ್ ಆಗುವುದಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಐಫೋನ್ 15 ಸರಣಿಯನ್ನು ಖರೀದಿಸಿ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ