ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ವಿಶೇಷ ಸ್ಥಾನ ಸಂಪಾದಿಸಿರುವ ವಿವೋ ಒಡೆತನದ ಐಕ್ಯೂ ಕಂಪನಿ ಇದೀಗ ಹೊಸ ಫೋನ್ನೊಂದಿಗೆ ಮತ್ತೆ ಬಂದಿದೆ. ಕಳೆದ ವರ್ಷ ಐಕ್ಯೂ ನಿಯೋ 7 ಸರಣಿ (iQOO Neo 7 Series) ಫೋನನ್ನು ಬಿಡುಗಡೆ ಮಾಡಿ ಸದ್ದು ಮಾಡಿದ್ದ ಕಂಪನಿ ಇದೀಗ ಇದರ ಮುಂದುವರೆದ ಭಾಗವಾಗಿ ಐಕ್ಯೂ ನಿಯೋ 8 (iQOO Neo 8 Series) ಸರಣಿ ಸ್ಮಾರ್ಟ್‌ಫೋನ್ ಅನ್ನು ರಿಲೀಸ್ ಮಾಡಿದೆ. ಈ ಸರಣಿಯಲ್ಲಿ ಐಕ್ಯೂ ನಿಯೋ 8 ಮತ್ತು ಐಕ್ಯೂ ನಿಯೋ 8 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ತನ್ನ ಫಾಸ್ಟ್ ಚಾರ್ಜರ್ನಿಂದ ಟೆಕ್ ಪ್ರಿಯರ ನಿದ್ದೆಗೆಡಿಸಿರುವ ಈ ಫೋನ್ನಲ್ಲಿ ಬಲಿಷ್ಠವಾದ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಕೂಡ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಪೀಚರ್ಸ್ ಇದೆ? ಎಂಬುದನ್ನು ನೋಡೋಣ.
ಬೆಲೆ ಎಷ್ಟು?:
ಐಕ್ಯೂ ನಿಯೋ 8 ಸರಣಿ ಸ್ಮಾರ್ಟ್‌ಫೋನ್‌ಗಳು ಸದ್ಯಕ್ಕೆ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿವೆ. ಕೆಲವು ದಿನಗಳ ಬಳಿಕ ಭಾರತಕ್ಕೂ ಕಾಲಿಡುವ ನಿರೀಕ್ಷೆ ಇದೆ. ಐಕ್ಯೂ ನಿಯೋ 8 ಸ್ಮಾರ್ಟ್‌ಫೋನ್ 12GB RAM + 256GB ರೂಪಾಂತರದ ಬೆಲೆ ಚೀನಾದಲ್ಲಿ CNY 2,499, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 29,300ರೂ. ಇರಬಹುದು. ಅಂತೆಯೆ 12GB RAM + 512GB ಆಯ್ಕೆಗೆ CNY 2,799 (ಸುಮಾರು 32,800ರೂ.) ಬೆಲೆ ನಿಗದಿ ಮಾಡಲಾಗಿದೆ. ಇನ್ನು ಐಕ್ಯೂ ನಿಯೋ 8 ಪ್ರೊ ಸ್ಮಾರ್ಟ್‌ಫೋನ್ 16GB RAM + 256GB ರೂಪಾಂತರದ ಆಯ್ಕೆಯು CNY 3,299 (ಭಾರತದಲ್ಲಿ ಅಂದಾಜು 38,700ರೂ.) ಮತ್ತು 16GB RAM + 512GB ಆಯ್ಕೆಯು CNY 3,599 (42,300ರೂ.) ಬೆಲೆಯನ್ನು ಪಡೆದುಕೊಂಡಿದೆ.
Infinix Note 30i: ಮಾರುಕಟ್ಟೆಗೆ ಪ್ರವೇಶಿಸಿತು ಹಲವು ವೈಶಿಷ್ಟ್ಯಗಳ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್
ಏನು ವಿಶೇಷತೆ?:
ಐಕ್ಯೂ ನಿಯೋ 8 ಮತ್ತು ನಿಯೋ 8 ಪ್ರೊ 6.78 ಇಂಚಿನ 1.5K ಅಮೋಲೆಡ್ ಡಿಸ್‌ಪ್ಲೇಗಳನ್ನು ಹೊಂದಿವೆ. 144Hz ರಿಫ್ರೆಶ್ ರೇಟ್ ಬೆಂಬಲಿಸಲಿದ್ದು, 2160Hz PWM ಡಿಮ್ಮಿಂಗ್ ಅನ್ನು ನೀಡಲಾಗಿದೆ. ನಿಯೋ 8 ಸ್ಮಾರ್ಟ್ಫೋನ್ನಲ್ಲಿ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 SoC ಪ್ರೊಸೆಸರ್ ನೀಡಿದ್ದರೆ, ನಿಯೋ 8 ಪ್ರೊನಲ್ಲಿ ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 9200+ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ.
ಐಕ್ಯೂ ನಿಯೋ 8 ಪ್ರೊ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX866V ಸೆನ್ಸಾರ್ ಅನ್ನು ಹೊಂದಿದೆ. ಆದರೆ ಐಕ್ಯೂ ನಿಯೋ 8 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 MP ಸೋನಿ ಸ್ಯಾಮ್‌ಸಂಗ್ GNV ಸೆನ್ಸಾರ್ ಅನ್ನು ಒಳಗೊಂಡಿದೆ. ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿವೆ.
ಐಕ್ಯೂ ನಿಯೋ 8 ಸರಣಿ ಸ್ಮಾರ್ಟ್‌ಫೋನ್‌ಗಳು ದೀರ್ಘ ಸಮಯ ಬಾಳಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿವೆ. ಜೊತೆಗೆ 120W ಅತ್ಯಂತ ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಇದು 15 ನಿಮಿಷಗಳಲ್ಲಿ 0-75 ಪರ್ಸೆಂಟ್ ಚಾರ್ಜ್ ಆಗುತ್ತದೆ ಎಂದು ಕಂಪನಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, 5G, 4G LTE, Wi-Fi 7, ಬ್ಲೂಟೂತ್ 5.3, GPS ಮತ್ತು NFC ಸಂಪರ್ಕವನ್ನು ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:21 pm, Thu, 25 May 23