ಜೂನ್ 7ಕ್ಕೆ ಆದಾಯ ತೆರಿಗೆ ಇಲಾಖೆ ಇ- ಪೋರ್ಟಲ್ ಶುರು; ಜೂನ್ 1ರಿಂದ 6ರ ತನಕ ಈಗಿನ ಪೋರ್ಟಲ್ ಮಾಡಲ್ಲ ಕೆಲಸ

Income Tax e-portal launch: ಇದೇ ಜೂನ್ 7ನೇ ತಾರೀಕಿನಂದು ಆದಾಯ ತೆರಿಗೆ ಇಲಾಖೆಯ ಇ-ಪೋರ್ಟಲ್ ಆರಂಭವಾಗಲಿದೆ. ಆ ಹಿನ್ನೆಲೆಯಲ್ಲಿ ಜೂನ್​ 1ರಿಂದ 6ರ ತನಕ ಈಗಿನ ಐ.ಟಿ. ಪೋರ್ಟಲ್ ಕೆಲಸ ಮಾಡಲ್ಲ.

ಜೂನ್ 7ಕ್ಕೆ ಆದಾಯ ತೆರಿಗೆ ಇಲಾಖೆ ಇ- ಪೋರ್ಟಲ್ ಶುರು; ಜೂನ್ 1ರಿಂದ 6ರ ತನಕ ಈಗಿನ ಪೋರ್ಟಲ್ ಮಾಡಲ್ಲ ಕೆಲಸ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: May 25, 2021 | 9:34 PM

ಆದಾಯ ತೆರಿಗೆ ಇಲಾಖೆಯಿಂದ ಜೂನ್ 7ನೇ ತಾರೀಕಿನಂದು ಇ-ಫೈಲಿಂಗ್ ಪೋರ್ಟಲ್ ಆರಂಭಿಸಲಾಗುತ್ತಿದೆ. ಈ ಮೂಲಕ ತೆರಿಗೆ ಪಾವತಿದಾರರಿಗೆ ಅನುಕೂಲಕರವಾಗಿ, ಯಾವುದೇ ತೊಂದರೆ ಇಲ್ಲದಂತೆ, ಆಧುನಿಕ ವ್ಯವಸ್ಥೆ ಮಾಡಿಕೊಡುವ ಉದ್ದೇಶ ಇಲಾಖೆಯದಾಗಿದೆ. ತೆರಿಗೆ ಪಾವತಿದಾರರು 2021ರ ಮೇ 31ನೇ ತಾರೀಕಿನೊಳಗೆ ಪಾವತಿ ಮಾಡಿಬಿಡಬೇಕು. ಈಗ ಲಭ್ಯ ಇರುವ ಇ-ಫೈಲಿಂಗ್ ಪೋರ್ಟಲ್ ಜೂನ್ 1ನೇ ತಾರೀಕಿನಿಂದ 6ನೇ ತಾರೀಕಿನ ತನಕ ಸಿಗುವುದಿಲ್ಲ. “ತೆರಿಗೆ ಪಾವತಿಯ ಇ ಪೋರ್ಟಲ್ ಆರಂಭದ ಸಿದ್ಧತೆ ಹಾಗೂ ಬದಲಾವಣೆಯ ಚಟುವಟಿಕೆಗಳು ಇರುವುದರಿಂದ ಈಗಿರುವ ಇಲಾಖೆಯ ಪೋರ್ಟಲ್ ತೆರಿಗೆ ಪಾವತಿದಾರರಿಗೆ ಮತ್ತು ಇತರರಿಗೆ ಆರು ದಿನಗಳ ಕಾಲ, ಅಂದರೆ ಜೂನ್ 1, 2021ರಿಂದ ಜೂನ್ 6, 2021ರ ತನಕ ಅಲ್ಪಾವಧಿಗೆ ಲಭ್ಯ ಇರುವುದಿಲ್ಲ,” ಎಂದು ಇಲಾಖೆಯ ಘೋಷಣೆಯಲ್ಲಿ ತಿಳಿಸಲಾಗಿದೆ.

ತೆರಿಗೆಪಾವತಿದಾರರಿಗೆ ಯಾವುದೇ ಅನನುಕೂಲ ಆಗಬಾರದು ಎಂಬ ದೃಷ್ಟಿಯಿಂದ ಈ ದಿನಾಂಕದಲ್ಲಿ ಯಾವುದೇ ನಿಯಮಾವಳಿ ಅನುಸರಿಸುವುದಕ್ಕೆ ದಿನವನ್ನು ತೆರಿಗೆ ಇಲಾಖೆಯು ನಿಗದಿ ಮಾಡಿಲ್ಲ. ಪ್ರಕರಣಗಳಿಗೆ ಸಂಬಂಧಿಸಿದಂತೆ ಅಹವಾಲು ಆಲಿಸುವುದು ಮತ್ತು ನಿಯಮಾವಳಿಗಳನ್ನು ಸರಿಪಡಿಸುವುದು ಜೂನ್ 10, 2021ರ ಮೇಲ್ಪಟ್ಟು ಮಾಡಲಾಗುತ್ತದೆ. ಹೊಸ ವ್ಯವಸ್ಥೆಗೆ ಸ್ಪಂದಿಸಲು ಸಮಯ ನೀಡಲಾಗುತ್ತದೆ. ಈ ಅವಧಿಯಲ್ಲಿ ಯಾವುದಾದರೂ ಸಲ್ಲಿಕೆ ಆನ್​ಲೈನ್​ನಲ್ಲಿ ನಿಗದಿ ಆಗಿದ್ದಲ್ಲಿ ಒಂದೋ ಹಿಂದಕ್ಕೆ ಹಾಕಿರುವ ಅಥಚಾ ಮುಂದೂಡಿರುವ ಸಾಧ್ಯತೆ ಇದೆ. ಈ ಕೆಲಸಕ್ಕೆ ಅವಧಿ ಮುಗಿದ ಮೇಲೆ ಮತ್ತೆ ದಿನ ಗೊತ್ತು ಮಾಡಲಾಗುತ್ತದೆ.

ಬ್ಯಾಂಕ್​ಗಳು, ಎಂಸಿಎ, ಜಿಎಸ್​ಟಿಎನ್, ಡಿಪಿಐಐಟಿ, ಸಿಬಿಐಸಿ, ಜಿಇಎಂ, ಡಿಜಿಎಫ್​ಟಿ ಹೀಗೆ ಯಾವುದೆಲ್ಲ ಸಂಸ್ಥೆಗಳು ಪ್ಯಾನ್ ದೃಢೀಕರಣ ಮುಂತಾದ ಸೇವೆಗಳನ್ನು ಪಡೆಯುತ್ತವೆಯೋ ಅವುಗಳಿಗೆಲ್ಲ ತೆರಿಗೆ ಇಲಾಖೆಯು ಮಾಹಿತಿ ನೀಡಿದೆ. ಸೇವೆ ಸಿಗುವುದಿಲ್ಲವಾದ್ದರಿಂದ ತಮ್ಮ ಗ್ರಾಹಕರು ಹಾಗೂ ಸಂಬಂಧಪಟ್ಟವರ ಚಟುವಟಿಕೆಯನ್ನು ಜೂನ್ 1ರಿಂದ 6ನೇ ತಾರೀಕಿಗೆ ಮುಂಚೆ ಅಥವಾ ಆ ನಂತರ ಮುಗಿಸಿಕೊಳ್ಳುವುದಕ್ಕೆ ಸೂಕ್ತ ವ್ಯವಸ್ಥೆ ಖಾತ್ರಿ ಮಾಡಿಕೊಳ್ಳುವಂತೆ ತಿಳಿಸಿದೆ. ಕೊರೊನಾ ಇರುವುದರಿಂದ 2021-22ನೇ ಸಾಲಿನ ಅಸೆಸ್​ಮೆಂಟ್ ವರ್ಷಕ್ಕೆ ಐಟಿಆರ್​ ನೀಡಲು ಸೆಪ್ಟೆಂಬರ್ 30, 2021ರ ತನಕ ಅವಕಾಶ ನೀಡಲಾಗಿದೆ. ಆಡಿಟ್ ಆಗಬೇಕಾದ ಖಾತೆಗಳಿಗೆ ಅಕ್ಟೋಬರ್ 31, 2021ರ ತನಕ ಅವಕಾಶ ಇದೆ.

ಇದನ್ನೂ ಓದಿ: Income tax return filing: ಆದಾಯ ತೆರಿಗೆ ಫೈಲಿಂಗ್​ ಗಡುವು ವಿಸ್ತರಿಸಿದ ಸಿಬಿಡಿಟಿ

(Income tax department e portal will launch on June 7th. So, current portal will not work between June 1st to June 6th 2021)

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ