AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣರಾಜ್ಯೋತ್ಸವಕ್ಕೆ ಜಿಯೋದಿಂದ ಧಮಾಕ ಆಫರ್: ಈ ಪ್ರಿಪೇಯ್ಡ್ ಪ್ಲಾನ್​ನಲ್ಲಿ ಭರ್ಜರಿ ಪ್ರಯೋಜನ

Jio Announces Republic Day Offer: 2,999 ಬೆಲೆಯ, ರಿಲಯನ್ಸ್ ಜಿಯೋ ಗಣರಾಜ್ಯೋತ್ಸವ ಯೋಜನೆಯು 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ, ಬಳಕೆದಾರರು ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಜೊತೆಗೆ 2.5GB ಯ ದೈನಂದಿನ 5G ಡೇಟಾ ಪಡೆಯುತ್ತಾರೆ.

ಗಣರಾಜ್ಯೋತ್ಸವಕ್ಕೆ ಜಿಯೋದಿಂದ ಧಮಾಕ ಆಫರ್: ಈ ಪ್ರಿಪೇಯ್ಡ್ ಪ್ಲಾನ್​ನಲ್ಲಿ ಭರ್ಜರಿ ಪ್ರಯೋಜನ
Jio Republic Day Offer
Vinay Bhat
|

Updated on: Jan 16, 2024 | 3:36 PM

Share

ದೇಶದ ನಂಬರ್ ಒನ್ ಟೆಲಿಕಾಂ ಆಪರೇಟರ್ ಜಿಯೋ (Jio) ಗಣರಾಜ್ಯೋತ್ಸವದ ಅಂಗವಾಗಿ 2,999 ರೂ. ಮೌಲ್ಯದ ವಾರ್ಷಿಕ ಪ್ರಿಪೇಯ್ಡ್ ಯೋಜನೆಗೆ ಹೊಸ ಕೊಡುಗೆಗಳನ್ನು ಸೇರ್ಪಡೆ ಮಾಡಿದೆ. ಇದು 365 ದಿನಗಳ ಮಾನ್ಯತೆ, ಅನಿಯಮಿತ ಧ್ವನಿ ಕರೆಗಳು, 5G ಡೇಟಾ ಮತ್ತು ಹೆಚ್ಚಿನವುಗಳೊಂದಿಗೆ ಬರುತ್ತದೆ. ಈ ಯೋಜನೆಯು ವಾಸ್ತವವಾಗಿ, ಮೊದಲೇ ಅಸ್ತಿತ್ವದಲ್ಲಿರುವ ಯೋಜನೆಯಾಗಿದೆ ಎಂಬುದು ಗಮನಿಸಬೇಕಾದ ಅಂಶ. ಆದಾಗ್ಯೂ, ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಕಂಪನಿಯು ಹೆಚ್ಚುವರಿ ಕೂಪನ್‌ಗಳು ಮತ್ತು ವಿಶೇಷ ಕೊಡುಗೆಗಳನ್ನು ಯೋಜನೆಯೊಂದಿಗೆ ಸೇರಿಸಿದೆ.

2,999 ಬೆಲೆಯ, ರಿಲಯನ್ಸ್ ಜಿಯೋ ಗಣರಾಜ್ಯೋತ್ಸವ ಯೋಜನೆಯು 365 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯಲ್ಲಿ, ಬಳಕೆದಾರರು ಅನ್ಲಿಮಿಟೆಡ್ ವಾಯ್ಸ್ ಕಾಲ್ ಮತ್ತು 100 SMS ಜೊತೆಗೆ 2.5GB ಯ ದೈನಂದಿನ 5G ಡೇಟಾ ಪಡೆಯುತ್ತಾರೆ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್​ಗೆ ಚಂದಾದಾರಿಕೆಗಳನ್ನು ಸೇರಿಸಲಾಗಿದೆ.

Tech Tips: ಪಾಸ್​ಪೋರ್ಟ್ ಸೈಜ್ ಫೋಟೋ ಬೇಕಿದ್ದರೆ ನಿಮಿಷದಲ್ಲಿ ನೀವೇ ಪಡೆಯಿರಿ: ಹೇಗೆ ಗೊತ್ತೇ?

ಇದನ್ನೂ ಓದಿ
Image
ರೆಡ್ಮಿ ನೋಟ್ ಅಲ್ಲ: ರಿಯಲ್ ಮಿಯಿಂದ ಹೊಸ ರಿಯಲ್ ಮಿ ನೋಟ್ 1 ​ಫೋನ್
Image
ಸೈಬರ್ ಕ್ರೈಮ್ ತಡೆಗಟ್ಟಲು ಮಾಸ್ಟರ್ ಪ್ಲಾನ್ ರೂಪಿಸಿದ ಮೋದಿ ಸರ್ಕಾರ
Image
ರಿಪಬ್ಲಿಕ್ ಡೇ ಸೇಲ್: ಒನ್‌ಪ್ಲಸ್-ರೆಡ್ಮಿ ಫೋನುಗಳು ಅತಿ ಕಡಿಮೆ ಬೆಲೆಗೆ ಲಭ್ಯ
Image
ರಾತ್ರಿ ಪೂರ್ತಿ ಫೋನ್ ಚಾರ್ಜ್​ಗೆ ಹಾಕಬಹುದು: ಆದರೆ, ಈ ವಿಚಾರ ನೆನಪಿರಲಿ

ಇನ್ನು ನೀವು ಕನಿಷ್ಠ 2,499 ರೂ. ಖರೀದಿಗೆ 500 ರೂ. ಗಳ Ajio ಕೂಪನ್ ಅನ್ನು ನೀಡಲಾಗುತ್ತದೆ. ಅಂತೆಯೆ ಓಮ್ನಿಚಾನಲ್ ಬ್ಯೂಟಿ ಸ್ಟೋರ್ ಆಗಿರುವ ತೀರಾ ದಲ್ಲಿ ರೂ. 9,999 ಕ್ಕಿಂತ ಹೆಚ್ಚಿನ ಖರೀದಿಗಳಿಗೆ 30 ಪ್ರತಿಶತ ರಿಯಾಯಿತಿಯನ್ನು (ರೂ. 1,000 ವರೆಗೆ) ಒದಗಿಸುತ್ತದೆ. Ixigo, ಆನ್‌ಲೈನ್ ಟ್ರಾವೆಲ್ ಪೋರ್ಟಲ್, ಬಳಕೆದಾರರಿಗೆ ಫ್ಲೈಟ್ ಟಿಕೆಟ್‌ಗಳಲ್ಲಿ ರೂ. 1,500 ವರೆಗೆ ರಿಯಾಯಿತಿಯನ್ನು ನೀಡುತ್ತದೆ. ಸ್ವಿಗ್ಗಿ ಫುಡ್ ಆರ್ಡರ್‌ಗಳ ಮೇಲೆ ತಲಾ 125 ರೂಪಾಯಿ ಮೌಲ್ಯದ ಎರಡು ರಿಯಾಯಿತಿ ಕೂಪನ್‌ಗಳ ಮೂಲಕ 250 ರೂಪಾಯಿಗಳ ರಿಯಾಯಿತಿ ಇದೆ.

ಮತ್ತೊಂದೆಡೆ, ಜಿಯೋ ಇತ್ತೀಚೆಗೆ ಪ್ರಿಪೇಯ್ಡ್ ಯೋಜನೆಗಳಿಗಾಗಿ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಪರಿಚಯಿಸಿತು. ಟೆಲಿಕಾಂ ನೆಟ್‌ವರ್ಕ್ ರೂ. 399 ಪ್ರಿಪೇಯ್ಡ್ ಯೋಜನೆಗೆ ಹೆಚ್ಚುವರಿ 6GB ಡೇಟಾವನ್ನು ಒದಗಿಸುತ್ತದೆ, ಇದು ಯೋಜನೆಯ ಮಾನ್ಯತೆಯ ಅವಧಿಯಾದ್ಯಂತ ಅನ್ವಯಿಸುತ್ತದೆ.

ಆರಂಭದಲ್ಲಿ, ಈ ಯೋಜನೆಯು ದಿನಕ್ಕೆ 3GB ಡೇಟಾವನ್ನು ನೀಡಿತ್ತು. ಇದು 28 ದಿನಗಳವರೆಗೆ ವ್ಯಾಲಿಡಿಟಿಯಿಂದ ಕೂಡಿರುತ್ತದೆ. ಇದು ಅನಿಯಮಿತ ಕರೆಗಳು, 100 ದೈನಂದಿನ SMS ಮತ್ತು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಒಳಗೊಂಡಿದೆ. ಅರ್ಹ ಗ್ರಾಹಕರು ಅನಿಯಮಿತ 5G ನೆಟ್‌ವರ್ಕ್ ಬೆಂಬಲವನ್ನು ಸಹ ಆನಂದಿಸಬಹುದು.

ಏತನ್ಮಧ್ಯೆ, ಜಿಯೋದಿಂದ ರೂ. 219 ಪ್ರಿಪೇಯ್ಡ್ ಯೋಜನೆಯು ಹೆಚ್ಚುವರಿ 2GB ಡೇಟಾವನ್ನು ಪಡೆದುಕೊಂಡಿದೆ. ಇದು ದಿನಕ್ಕೆ 3GB ಡೇಟಾವನ್ನು ಒಳಗೊಂಡಿರುತ್ತದೆ ಮತ್ತು 14 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳು, 100 ದೈನಂದಿನ SMS ಮತ್ತು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ರೂ 399 ಪ್ಲಾನ್‌ನಂತೆ, ಇದು ಅರ್ಹ ಗ್ರಾಹಕರಿಗೆ ಅನಿಯಮಿತ 5G ನೆಟ್‌ವರ್ಕ್ ಬೆಂಬಲವನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ರಾಜಸ್ಥಾನದಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪತನ, ಇಬ್ಬರು ಸಾವು
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಜೈಲಿನಲ್ಲೇ ಉಗ್ರರಿಗೆ ರಾಜಾತಿಥ್ಯ, ಗೃಹ ಇಲಾಖೆ ನಿದ್ದೆ ಮಾಡ್ತಿದೆ: ಅಶೋಕ್
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹುದ್ದೆ ಒಪ್ಪಿಕೊಂಡರೂ ಸಿದ್ದರಾಮಯ್ಯ ಸಿಎಂ ಬಿಡಬೇಕಿಲ್ಲ: ಸತೀಶ್ ಜಾರಕಿಹೊಳಿ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಹೇಗಿದೆ ನೋಡಿ ತುಕಾಲಿ ಸಂತೋಷ್ ಹೆಣ್ಣಿನ ಅವತಾರ
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗಡ್ಕರಿಯವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು ಸಂತೋಷ: ಶಿವಕುಮಾರ್
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗುಜರಾತ್​​ನಲ್ಲಿ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳು, 9 ಮಂದಿ ಸಾವು
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ಗಂಭೀರ ನಡಿಗೆ, ಧೈರ್ಯಶಾಲಿ ಅನೆಗಳನ್ನು ಅಯ್ಕೆ ಮಾಡಲಾಗುತ್ತದೆ: ಅರಣ್ಯಾಧಿಕಾರಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ
ನಮೀಬಿಯಾದ ಸಾಂಪ್ರದಾಯಿಕ ಡ್ರಮ್ ನುಡಿಸಿದ ಪ್ರಧಾನಿ ಮೋದಿ