Lava O2: ಲಾವಾದಿಂದ ಬಂತು ವಿಶೇಷವಾದ O2 ಸ್ಮಾರ್ಟ್‌ಫೋನ್: ಇದರ ಬೆಲೆ ಕೇವಲ 8,499 ರೂ.
Lava O2 Launched in India: ಭಾರತದಲ್ಲಿ ಲಾವಾ O2 ಎಂಬ ಹೆಸರಿನ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದೆ. ಇದೊಂದು ಬಜೆಟ್ ಫೋನ್ ಆಗಿದ್ದರೂ, ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ. ಭಾರತದಲ್ಲಿ ಲಾವಾ O2 ಬೆಲೆ, ಲಭ್ಯತೆಯ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದಾ ಬಜೆಟ್ ಬೆಲೆಗೆ ಒಂದೊಳ್ಳೊ ಫೋನನ್ನು ಅನಾವರಣ ಮಾಡುವ ಭಾರತದ ಪ್ರಸಿದ್ಧ ಮೊಬೈಲ್ ತಯಾರಕ ಸಂಸ್ಥೆ ಲಾವಾ ಇದೀಗ ಹೊಸ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದಕ್ಕೆ ಲಾವಾ O2 (Lava O2) ಎಂದು ಹೆಸರಿಡಲಾಗಿದೆ. ಈ ಫೋನ್ 50MP ಕ್ಯಾಮೆರಾ, 90Hz ಡಿಸ್ಪ್ಲೇ ಮತ್ತು 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಬಜೆಟ್ ಫೋನ್ ಆಗಿದ್ದರೂ, ಲಾವಾ O2 ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ. ಫೋನ್ ಚಾರ್ಜ್ ಮಾಡಲು ಯುಎಸ್‌ಬಿ ಟೈಪ್-ಸಿ ಪೋರ್ಟ್‌ನೊಂದಿಗೆ ಬರುತ್ತದೆ. ಭಾರತದಲ್ಲಿ ಲಾವಾ O2 ಬೆಲೆ, ಲಭ್ಯತೆಯ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಭಾರತದಲ್ಲಿ ಲಾವಾ O2 ಬೆಲೆ, ಮಾರಾಟ ದಿನಾಂಕ:
ಲಾವಾ O2 ಸ್ಮಾರ್ಟ್‌ಫೋನ್ ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಬಿಡುಗಡೆ ಆಗಿದೆ. ಇದರ 8GB RAM ಮತ್ತು 128GB ಸ್ಟೋರೇಜ್ ಹೊಂದಿರುವ ಏಕೈಕ ರೂಪಾಂತರಕ್ಕೆ ರೂ. 8,499 ನಿಗದಿ ಮಾಡಲಾಗಿದೆ. ಈ ಫೋನಿನ ಮೊದಲ ಮಾರಾಟವು ಮಾರ್ಚ್ 27 ರಂದು ಲಾವಾ ಇ-ಸ್ಟೋರ್ ಮತ್ತು ಅಮೆಜಾನ್ ಮೂಲಕ ನಡೆಯಲಿದೆ. ಮೆಜೆಸ್ಟಿಕ್ ಪರ್ಪಲ್, ಇಂಪೀರಿಯಲ್ ಗ್ರೀನ್ ಮತ್ತು ರಾಯಲ್ ಗೋಲ್ಡ್ ಎಂಬ ಮೂರು ಬಣ್ಣಗಳ ರೂಪಾಂತರಗಳಲ್ಲಿ ಬರುತ್ತದೆ.
ಮೂರೇ ದಿನ ಬಾಕಿ: ಭಾರತಕ್ಕೆ ಬರುತ್ತಿದೆ ಹೊಚ್ಚ ಹೊಸ ಪೋಕೋ C61 ಸ್ಮಾರ್ಟ್‌ಫೋನ್
ಲಾವಾ O2 ಫೀಚರ್ಸ್:
ಲಾವಾ O2 ಸ್ಮಾರ್ಟ್‌ಫೋನ್ 6.5-ಇಂಚಿನ HD+ ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು ಸೆಲ್ಫಿಗಳಿಗಾಗಿ ಪಂಚ್-ಹೋಲ್ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 8GB LPDDR4X RAM ಮತ್ತು 128GB UFS 2.2 ಸ್ಟೋರೇಜ್‌ನೊಂದಿಗೆ ಜೋಡಿಯಾಗಿರುವ ಯುನಿಸಾಕ್ T616 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಈ ಫೋನ್ 8GB ವರ್ಚುವಲ್ RAM ಅನ್ನು ಸಹ ಪಡೆಯುತ್ತದೆ. 512GB ವರೆಗೆ ಸಂಗ್ರಹಣೆ ವಿಸ್ತರಣೆಗಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಕೂಡ ಇದೆ.
ಛಾಯಾಗ್ರಹಣ ವಿಭಾಗದಲ್ಲಿ, ನೀವು AI ಮೋಡ್, HDR ಮೋಡ್, ಪೋರ್ಟ್ರೇಟ್ ಮೋಡ್, ಬ್ಯೂಟಿ ಮೋಡ್ ಮತ್ತು ನೈಟ್ ಮೋಡ್‌ನಂತಹ ವೈಶಿಷ್ಟ್ಯಗಳೊಂದಿಗೆ 50MP ಡ್ಯುಯಲ್ AI ಕ್ಯಾಮೆರಾವನ್ನು ಪಡೆಯುತ್ತೀರಿ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8MP ಮುಂಭಾಗದ ಕ್ಯಾಮೆರಾ ಇದೆ. ಈ ಫೋನ್ 18W ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
ಲ್ಯಾಪ್‌ಟಾಪ್ ಇದ್ದಕ್ಕಿದ್ದಂತೆ ನಿಧಾನವಾಗುತ್ತಿದೆಯೇ?: ಜಸ್ಟ್ ಹೀಗೆ ಮಾಡಿದ್ರೆ ಸೂಪರ್ ಸ್ಪೀಡ್ ಆಗುತ್ತೆ
ಈ ಫೋನ್ ಆಂಡ್ರಾಯ್ಡ್ 13 ಮೂಲಕ ರನ್ ಆಗುತ್ತದೆ. ನೀವು ಲಾವಾ O2 ಜೊತೆಗೆ ಕರೆ ರೆಕಾರ್ಡಿಂಗ್ ಮತ್ತು ಡ್ಯುಯಲ್ ಅಪ್ಲಿಕೇಶನ್ ಬೆಂಬಲವನ್ನು ಸಹ ಪಡೆಯುತ್ತೀರಿ. ಫೋನ್‌ನಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ