ಮೈಕ್ರೋಸಾಫ್ಟ್ ಸರ್ವರ್ಗಳಲ್ಲಿ ಉದ್ಭವಿಸಿದ ಸಮಸ್ಯೆಯಿಂದಾಗಿ ಜಾಗತಿಕವಾಗಿ ತಾಂತ್ರಿಕ ಬಿಕ್ಕಟ್ಟು ತಲೆದೋರಿದೆ. ಹಾಗಾದರೆ ಈ ಸಮಸ್ಯೆಗೆ ಕಾರಣವೇನು ಎನ್ನುವ ಮಾಹಿತಿ ಇಲ್ಲಿದೆ. ಕ್ಲೌಡ್ ಸ್ಟ್ರೈಕ್ ಆ್ಯಂಟಿ-ವೈರಸ್ ನವೀಕರಿಸಬೇಕಾಗಿತ್ತು. ಕಂಪನಿ ಸಮಯಕ್ಕೆ ಸರಿಯಾಗಿ ಅಪ್ಡೇಟ್ ಮಾಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಜಗತ್ತು ಈ ಐಟಿ ಬಿಕ್ಕಟ್ಟು ಎದುರಿಸುವಂತಾಯಿತು ಎಂದು ಮೈಕ್ರೋಸಾಫ್ಟ್-ಸಂಯೋಜಿತ ಸೈಬರ್ ಸೆಕ್ಯುರಿಟಿ ಸಂಸ್ಥೆ ತಿಳಿಸಿದೆ.
ದೆಹಲಿ ವಿಮಾನ ನಿಲ್ದಾಣ ಕೂಡಾ ಸರ್ವರ್ ಅಸಮರ್ಪಕ ಕಾರ್ಯಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದೆ. ಐಟಿ ಬಿಕ್ಕಟ್ಟಿನಿಂದಾಗಿ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿದ್ದು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದೆ.
ಈ ಸಮಸ್ಯೆ ಮೊದಲು ಅಮೆರಿಕದ ಫ್ರಾಂಟಿಯರ್ ಏರ್‌ಲೈನ್ಸ್‌ನಲ್ಲಿ ಉಂಟಾಗಿದ್ದು, ಕ್ರಮೇಣವಾಗಿ ಪ್ರಪಂಚದಾದ್ಯಂತ ಹರಡಿತ್ತು. ದೆಹಲಿ, ಮುಂಬೈ ಸೇರಿದಂತೆ ಹಲವು ದೇಶದ ವಿಮಾನ ಸೇವೆಗಳಿಗೂ ತೊಂದರೆಯುಂಟಾಗಿತ್ತು. ಏರ್‌ಲೈನ್‌ಗಳು, ಬ್ಯಾಂಕ್‌ಗಳು, ಮಾಧ್ಯಮಗಳು ಮತ್ತು ಹಣಕಾಸು ಸಂಸ್ಥೆಗಳು ಪ್ರಕ್ಷುಬ್ಧತೆಗೆ ಒಳಗಾಗಿವೆ.
ಮತ್ತಷ್ಟು ಓದಿ: Microsoft Windows outage: ಮೈಕ್ರೋಸಾಫ್ಟ್ ಸಮಸ್ಯೆ; ಕೈಬರಹದ ಬೋರ್ಡಿಂಗ್ ಪಾಸ್ ನೀಡಿದ ಇಂಡಿಗೋ
ಲಕ್ಷಾಂತರ ಜನರು ಬ್ಲೂ ಸ್ಕ್ರೀನ್ ಆಫ್ ಡೆತ್ (BSOD) ದೋಷವನ್ನು ಎದುರಿಸಿದ್ದಾರೆ, ಇದು ಹಠಾತ್ ಸಿಸ್ಟಮ್ ಸ್ಥಗಿತಗೊಳಿಸುವಿಕೆ ಅಥವಾ ರಿಸ್ಟಾರ್ಟ್ಗೆ ಕಾರಣವಾಗುತ್ತದೆ. ಭಾರತದಲ್ಲಿ, ಬಹುತೇಕ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ಪ್ರಮುಖ ವಿಮಾನ ನಿಲ್ದಾಣಗಳು ಆನ್‌ಲೈನ್ ಬುಕಿಂಗ್, ವೆಬ್ ಚೆಕ್-ಇನ್‌ಗಳು ಮತ್ತು ಫ್ಲೈಟ್ ಸ್ಟೇಟಸ್ ಅಪ್‌ಡೇಟ್‌ಗಳನ್ನು ಒದಗಿಸಲು ಹೆಣಗಾಡುತ್ತಿದ್ದವು. ಇಂಡಿಗೋ ದೇಶಾದ್ಯಂತ ಸುಮಾರು 200 ವಿಮಾನಗಳನ್ನು ರದ್ದುಗೊಳಿಸಿತ್ತು.
ಸ್ಪೈಸ್‌ಜೆಟ್, ಏರ್ ಇಂಡಿಯಾ, ಅಕಾಸಾ ಮತ್ತು ವಿಸ್ತಾರಾ ಕೂಡ ಮೈಕ್ರೋಸಾಫ್ಟ್ ಅಜುರೆ, ಕ್ಲೌಡ್ ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ತಾಂತ್ರಿಕ ದೋಷದಿಂದಾಗಿ ಅಡೆತಡೆಗಳನ್ನು ಎದುರಿಸಿತು. ದಿನವಿಡೀ, ಏರ್‌ಲೈನ್‌ಗಳು ಹಸ್ತಚಾಲಿತ ಚೆಕ್-ಇನ್‌ಗಳನ್ನು ಮಾಡುವುದನ್ನು ಮತ್ತು ಕೈಬರಹದ ಬೋರ್ಡಿಂಗ್ ಪಾಸ್‌ಗಳನ್ನು ನೀಡಿದ್ದರು.
ಮೈಕ್ರೋಸಾಫ್ಟ್ನಲ್ಲಿ ಗುರುವಾರ ಸಂಜೆ 6 ಗಂಟೆಗೆ (ಸ್ಥಳೀಯ ಕಾಲಮಾನ) ಸಮಸ್ಯೆ ಪ್ರಾರಂಭವಾಗಿತ್ತು.
ವಿಂಡೋಸ್‌ನ ಇತ್ತೀಚಿನ ಐಟಿ ಸಮಸ್ಯೆಯಿಂದ ಕೆಲವು ಮೈಕ್ರೋಸಾಫ್ಟ್ ಸೇವೆಗಳಿಗೂ ಭಾರೀ ಅಡಚಣೆ ಉಂಟಾಗಿದೆ ಎಂದು ವರದಿಯಾಗಿದೆ.
ಮೈಕ್ರೋಸಾಫ್ಟ್ನ ತಾಂತ್ರಿಕ ಸಮಸ್ಯೆ ಬೆನ್ನಲ್ಲೇ ಭಾರತದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಫಾಲ್ಕನ್ ಸೆನ್ಸಾರ್ನ ವಿಂಡೋಸ್ ಸಿಸ್ಟಂಗಳಿಗೆ ಅಪ್ಡೇಟ್ ಪರಿಚಯಿಸಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಹಾಗಾಗಿ ಕ್ರೌಡ್ ಸ್ಟ್ರೈಕ್ ಪೋರ್ಟಲ್ಗೆ ಹೋಗಿ ಹೊಸ ಅಪ್ಡೇಟ್ ಡೌನ್ಲೋಡ್ ಮಾಡಬೇಕು ಎಂದು ಹೇಳಿದೆ.
ತಂತ್ರಜ್ಞಾನಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ