Microsoft Outage: ಸಮಸ್ಯೆಗಳು ಬಗೆಹರಿದಿವೆ, ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತಿವೆ ಏರ್ಪೋರ್ಟ್ ಸರ್ವರ್ಗಳು
ಸಮಸ್ಯೆಗಳು ಬಗೆಹರಿದಿವೆ, ಈಗ ಏರ್ಪೋರ್ಟ್ಗಳ ಸರ್ವರ್ಗಳು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಸಮಸ್ಯೆಗಳು ಬಗೆಹರಿದಿವೆ, ಈಗ ಏರ್ಪೋರ್ಟ್ಗಳ ಸರ್ವರ್ಗಳು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಭಾರತದಲ್ಲಿರುವ ವಿಮಾನ ನಿಲ್ದಾಣದಲ್ಲಿ ಶನಿವಾರ ಬೆಳಗಿನಜಾವದಿಂದಲೇ ಸಾಮಾನ್ಯ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಹೇಳಿದೆ.
ಈ ಕುರಿತು ಎಕ್ಸ್ನಲ್ಲಿ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಪೋಸ್ಟ್ ಮಾಡಿ ಅಧಿಕೃತ ಹೇಳಿಕೆ ನೀಡಿದ್ದಾರೆ. ಇದೀಗ ವಿಮಾನ ಹಾರಾಟಗಳು ಸುಗಮವಾಗಿ ಸಾಗುತ್ತಿದೆ. ನಿನ್ನೆ ಉದ್ಭವಿಸಿದ ಸಮಸ್ಯೆಗಳಿಂದಾಗಿ ಬಾಕಿ ಉಳಿದಿರುವ ಸಮಸ್ಯೆಗಳು ಕ್ರಮೇಣವಾಗಿ ಬಗೆಹರಿಯುತ್ತಿವೆ.
ಇಂದು ಮಧ್ಯಾಹ್ನದ ವೇಳೆಗೆ ಎಲ್ಲಾ ಸಮಸ್ಯೆಗಳು ಬಗೆಹರಿಯುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಕ್ರೋಸಾಫ್ಟ್ ಸ್ಥಗಿತವು ದೇಶಾದ್ಯಂತ ವಿಮಾನ ಕಾರ್ಯಾಚರಣೆಗಳ ಮೇಲೆ ತೀವ್ರ ಪರಿಣಾಮ ಬೀರಿದ ನಂತರ, ಭಾರತದಲ್ಲಿನ ವಿಮಾನ ನಿಲ್ದಾಣಗಳಾದ್ಯಂತ ವಿಮಾನಯಾನ ವ್ಯವಸ್ಥೆಗಳು ಶನಿವಾರ ಮುಂಜಾನೆ 3 ಗಂಟೆಯಿಂದ ಸಾಮಾನ್ಯವಾಗಿ ಕಾರ್ಯಾಚರಣೆಯನ್ನು ಪುನರಾರಂಭಿಸಿದವು ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಮತ್ತಷ್ಟು ಓದಿ: ಮೈಕ್ರೋಸಾಫ್ಟ್ ಸರ್ವರ್ ಸಮಸ್ಯೆಗೆ ಆ್ಯಂಟಿವೈರಸ್ ಅಪ್ಡೇಟ್ ಕಾರಣ
ಮೈಕ್ರೋಸಾಫ್ಟ್ 365 ಸ್ಥಗಿತದ ಪರಿಣಾಮವು ವಾಯುಯಾನ ವಲಯದಲ್ಲಿ ಹೆಚ್ಚು ಸ್ಪಷ್ಟವಾಗಿ ಕಂಡುಬಂದಿದೆ. ಇಂಡಿಗೋ, ಏರ್ ಇಂಡಿಯಾ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ ಸೇರಿದಂತೆ ನೂರಾರು ವಿಮಾನಗಳು ವಿಳಂಬಗೊಂಡವು ಮತ್ತು ಏರ್‌ಲೈನ್ ಆಪರೇಟರ್‌ಗಳು ತಮ್ಮ ಸಿಸ್ಟಮ್‌ಗಳು ನಿಷ್ಕ್ರಿಯವಾಗಿದ್ದವು.
ದೆಹಲಿ ವಿಮಾನ ನಿಲ್ದಾಣದಲ್ಲಿ 400ಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡಿವೆ, 50ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.ಈ ಸಂಪೂರ್ಣ ಸಮಸ್ಯೆಯನ್ನು ಪರಿಹರಿಸಲು ಸುಮಾರು 17 ಗಂಟೆಗಳನ್ನು ತೆಗೆದುಕೊಂಡಿತು. ಇಂಡಿಗೋ 192 ವಿಮಾನಗಳನ್ನು ರದ್ದುಗೊಳಿಸಿದೆ.
#Update on #MicrosoftGlobalOutage pic.twitter.com/ujZCnosPdB
— Ram Mohan Naidu Kinjarapu (@RamMNK) July 20, 2024
ಈ ಪರಿಸ್ಥಿತಿ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತದ ಎಲ್ಲಾ ವಿಮಾನಯಾನ ಸಂಸ್ಥೆಗಳ ಮೇಲೆ ಇದರ ಪರಿಣಾಮ ಕಂಡುಬಂದಿದೆ. ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು ಚೆಕ್-ಇನ್ ಪ್ರಕ್ರಿಯೆಯನ್ನು ಹಸ್ತಚಾಲಿತವಾಗಿ ನಿರ್ವಹಿಸುತ್ತಿದೆ. ಅಮೆರಿಕನ್ ಏರ್‌ಲೈನ್ಸ್, ಸ್ಪೇನ್, ಟರ್ಕಿಯೆ ಸೇರಿದಂತೆ ಹಲವು ವಿಮಾನ ನಿಲ್ದಾಣಗಳು ಸಮಸ್ಯೆ ಎದುರಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ