Microsoft Outage: ಮೈಕ್ರೋಸಾಫ್ಟ್ ಸ್ಥಗಿತ, ಏರ್‌ಲೈನ್‌ಗಳು, ಬ್ಯಾಂಕ್‌ಗಳು, ಷೇರು ಮಾರುಕಟ್ಟೆ ಮೇಲೆ ಎಫೆಕ್ಟ್​​​

ಮೈಕ್ರೋಸಾಫ್ಟ್ ಜಾಗತಿಕವಾಗಿ ಸ್ಥಗಿತವಾಗಿದೆ. ವಿಮಾನಯಾನ, ಬ್ಯಾಂಕ್‌ಗಳು, ಷೇರು ಮಾರುಕಟ್ಟೆ ಸೇರಿದಂತೆ ದೈತ್ಯ ಟೆಕ್​​​ಗಳ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡಿದೆ. ಇನ್ನು ಈ ಸಮಸ್ಯೆಗೆ ಸಂಬಂಧಿಸಿದಂತೆ ತಾಂತ್ರಿಕ ಸಲಹಗಾರರು ಈ ಬಗ್ಗೆ ಸಮಲೋಚನೆ ನಡೆಸುತ್ತಿದ್ದಾರೆ.

Microsoft Outage: ಮೈಕ್ರೋಸಾಫ್ಟ್ ಸ್ಥಗಿತ, ಏರ್‌ಲೈನ್‌ಗಳು, ಬ್ಯಾಂಕ್‌ಗಳು, ಷೇರು ಮಾರುಕಟ್ಟೆ ಮೇಲೆ ಎಫೆಕ್ಟ್​​​
ಮೈಕ್ರೋಸಾಫ್ಟ್
Follow us
|

Updated on:Jul 19, 2024 | 3:02 PM

ಜಾಗತಿಕವಾಗಿ ಮೈಕ್ರೋಸಾಫ್ಟ್ ಸ್ಥಗಿತಗೊಂಡಿದೆ. ವಿಮಾನಯಾನ ಮತ್ತು ಷೇರು ಮಾರುಕಟ್ಟೆ, ಬ್ಯಾಂಕಿಂಗ್ ಕಾರ್ಯಾಚರಣೆಗಳು ಸೇರಿದಂತೆ ವಿವಿಧ ವಲಯಗಳಲ್ಲಿ ವ್ಯಾಪಕ ತಾಂತ್ರಿಕ ತೊಂದರೆ ಉಂಟು ಮಾಡುತ್ತಿದೆ. ಪಾವತಿ ವ್ಯವಸ್ಥೆಯ ವೈಫಲ್ಯಗಳು ಮತ್ತು ನ್ಯಾಷನಲ್ ಆಸ್ಟ್ರೇಲಿಯ ಬ್ಯಾಂಕ್‌ನಂತಹ ಹಣಕಾಸು ಸಂಸ್ಥೆಗಳನ್ನು ಪ್ರವೇಶ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವೂಲ್‌ವರ್ತ್ಸ್‌ನಂತಹ ಆಸ್ಟ್ರೇಲಿಯನ್ ಸ್ಟೋರ್‌ಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದಾರೆ.

ಮೈಕ್ರೋಸಾಫ್ಟ್ ಸ್ಥಗಿತದಿಂದಾಗಿ ಜಾಗತಿಕ ವಿಮಾನಯಾನ ಸಂಸ್ಥೆಗಳು ಮೇಲೆ ಪರಿಣಾಮ ಬೀರಿವೆ

ಜಾಗತಿಕವಾಗಿ ಮೈಕ್ರೋಸಾಫ್ಟ್ ಸ್ಥಗಿತಗೊಂಡಿದೆ. ಇದು ವಿಮಾನಯಾನಕ್ಕೆ ದೊಡ್ಡ ತೊಂದರೆಯನ್ನು ಉಂಟು ಮಾಡಿದೆ. ಭಾರತದ ಆಕಾಶ, ಇಂಡಿಗೋ, ಏರ್ ಇಂಡಿಯಾ, ವಿಸ್ತಾರಾ ಮತ್ತು ಸ್ಪೈಸ್‌ಜೆಟ್‌ನಂತಹ ಪ್ರಮುಖ ವಿಮಾನಯಾನ ಸಂಸ್ಥೆಗಳು ಈ ಸಮಸ್ಯೆಯನ್ನು ಎದುರಿಸುತ್ತಿದೆ. ಇದರ ಜತೆಗೆ ಸಣ್ಣಪುಟ್ಟ ವಿಮಾನಯಾನಕ್ಕೂ ಪರಿಣಾಮ ಉಂಟು ಮಾಡಬಹುದು ಎಂದು ಹೇಳಲಾಗಿದೆ.

ದೆಹಲಿ ವಿಮಾನ ನಿಲ್ದಾಣದಲ್ಲೂ ಈ ಸಮಸ್ಯೆ ಎದುರಾಗಿದೆ. ಜಾಗತಿಕ ಐಟಿ ಸಮಸ್ಯೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಕೆಲವು ಸೇವೆಗಳು ತಾತ್ಕಾಲಿಕವಾಗಿ ನಿಂತು ಹೋಗಿದೆ.

ಜಾಗತಿಮಟ್ಟದಲ್ಲಿ ಲಕ್ಷಾಂತರ ವಿಂಡೋಸ್ ಬಳಕೆದಾರರು ನೀಲಿ ಪರದೆಯನ್ನು (blue screen) ಎದುರಿಸುತ್ತಿದ್ದಾರೆ , ಇದು ಕಂಪ್ಯೂಟರ್ ಶಟ್‌ಡೌನ್‌ ಅಥವಾ ಮರುಪ್ರಾರಂಭಗಳಿಗೆ ಕಾರಣವಾಗುತ್ತದೆ. ಇನ್ನು ಕೆಲವು  ಕಂಪ್ಯೂಟರ್‌ಗಳು ಪುನರಾರಂಭಗೊಳ್ಳುತ್ತವೆ, ಇದರಿಂದಾಗಿ ಬಳಕೆದಾರರ ಡೇಟಾ ಮತ್ತು ಅಮೂಲ್ಯ ವಿಚಾರಗಳು ಡಿಲೀಟ್​​ ಆಗುತ್ತದೆ. ಮೈಕ್ರೋಸಾಫ್ಟ್‌ನ ಕ್ಲೌಡ್ ಸೇವೆಗಳು ಗುರುವಾರ ಸಂಜೆಯಿಂದ ಈ ಸಮಸ್ಯೆ ಕಾಣಲು ಶುರುವಾಗಿದೆ.

ಇದನ್ನೂ ಓದಿ: ಹೊಸ ಫೀಚರ್‌ ಪರಿಚಯಿಸಿದ ವಾಟ್ಸಾಪ್‌; ಪ್ರೀತಿಪಾತ್ರರೊಂದಿಗೆ ಚಿಟ್‌-ಚಾಟ್‌ ಮಾಡುವುದು ಮತ್ತಷ್ಟು ಸುಲಭ

ಮೈಕ್ರೋಸಾಫ್ಟ್ ಸೇವೆಗಳು

ಪವರ್‌ಬಿಐ

ಮೈಕ್ರೋಸಾಫ್ಟ್ ಫ್ಯಾಬ್ರಿಕ್

Microsoft ತಂಡಗಳು

ಮೈಕ್ರೋಸಾಫ್ಟ್ ಪರ್ವ್ಯೂ

ವಿಮಾನಯಾನಗಳಿಗೆ ಮನವಿ:

ಮೈಕ್ರೋಸಾಫ್ಟ್​ನ ‘ಕ್ಲೌಡ್​’ ಸರ್ವಿಸ್​ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿಶ್ವದ ವಿಮಾನಯಾನ ಸಂಸ್ಥೆಗಳ ಮೇಲೆ ಭಾರಿ ಪರಿಣಾಮ ಉಂಟು ಮಾಡಿದೆ. ಬುಕಿಂಗ್, ಚೆಕ್​​ ಇನ್ ಸೇವೆಗಳಲ್ಲಿ ತೊಂದರೆ ಉಂಟು ಮಾಡಿದೆ. ಹಲವು ಏರ್​ಪೋರ್ಟ್​ಗಳಲ್ಲಿ ಪ್ರಯಾಣಿಕರ ಪರದಾಡುವಂತಾಗಿದೆ. ಅದಕ್ಕಾಗಿ ವಿಮಾನಯಾನ ಸಂಸ್ಥೆಗಳು ಎಕ್ಸ್​​ ಮೂಲಕ ಮನವಿ ಮಾಡಿಕೊಂಡಿದೆ. ಟಿಕೆಟ್ ಬುಕಿಂಗ್, ಚೆಕ್​ಇನ್ ಸೇವೆ ಮೇಲೆ ಪರಿಣಾಮ ಬೀರಿದ ಕಾರಣ, ಈ ಸಮಸ್ಯೆಯನ್ನು ಬಗೆಹರಿಸಲು ನಮ್ಮ ತಂಡ ಪ್ರಯತ್ನಿಸುತ್ತಿದೆ. ಏರ್​ಪೋರ್ಟ್​ಗಳಲ್ಲಿ ಮ್ಯಾನುಯೆಲ್ ಆಗಿ ಬೋರ್ಡಿಂಗ್ ಪ್ರಕ್ರಿಯೆ ಹಾಗೂ ಟಿಕೆಟ್ ಬುಕಿಂಗ್ ಮಾಡಿದ್ದವರು ಮುಂಚಿತವಾಗಿ ಬರುಬೇಕು ಹಾಗೂ ಸೇವಾ ಕೌಂಟರ್​​ಗಳಲ್ಲಿ ಮ್ಯಾನುಯೆಲ್ ಆಗಿ ಚೆಕ್ಇನ್ ಆಗಬೇಕು ಎಂದು ಹೇಳಿದೆ.

ಮತ್ತಷ್ಟು ಟೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:41 pm, Fri, 19 July 24

ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್