WhatsApp Update: ಹೊಸ ಫೀಚರ್ ಪರಿಚಯಿಸಿದ ವಾಟ್ಸಾಪ್; ಪ್ರೀತಿಪಾತ್ರರೊಂದಿಗೆ ಚಿಟ್-ಚಾಟ್ ಮಾಡುವುದು ಮತ್ತಷ್ಟು ಸುಲಭ
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ಆಗಾಗ್ಗೆ ತನ್ನ ಬಳಕೆದಾರರಿಗೆ ಉಪಯುಕ್ತವಾಗುವಂತಹ ಫೀಚರ್‌ಗಳನ್ನು ಪರಿಚಯಿಸುತ್ತಲೇ ಇರುತ್ತವೆ. ಇದೀಗ ಅಂತಹದೇ ಫೀಚರ್ ಒಂದನ್ನು ಪರಿಚಯಿಸಿದ್ದು, ಈ ಮೂಲಕ ನೀವು ನಿಮ್ಮ ಫೇವರೆಟ್ ಜನರೊಂದಿಗೆ ಬಹಳ ಸುಲಭವಾಗಿ ಚಿಟ್-ಚಾಟ್ ಮಾಡಬಹುದಾಗಿದೆ. ಈ ಕುರಿತ ಮಾಹಿತಿಯನ್ನು ವಾಟ್ಸಾಪ್ ತನ್ನ ಅಧೀಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.
ಜಗತ್ತಿನ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಮತ್ತಷ್ಟು ಅನುಕೂಲವಾಗಲು ಆಗಾಗ್ಗೆ ಹೊಸ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಈ ವೈಶಿಷ್ಟ್ಯಗಳು ಬಳಕೆದಾರರಿಗೆ ವಾಟ್ಸಾಪ್ ಬಳಕೆ ಮಾಡಲು ಇನ್ನಷ್ಟು ಸುಲಭಗೊಳಿಸುತ್ತವೆ. ಇದೀಗ ವಾಟ್ಸಾಪ್ ಅಂತಹದೇ ವಿಶಿಷ್ಟ ಫೀಚರ್ ಒಂದನ್ನು ಪರಿಚಯಿಸಿದ್ದು, ಈ ಮೂಲಕ ಬಳಕೆದಾರರು ತಮ್ಮ ನೆಚ್ಚಿನ ಜನರೊಂದಿಗೆ ಸುಲಭವಾಗಿ ಚಿಟ್-ಚಾಟ್ ಮಾಡಬಹುದಾಗಿದೆ. ಈ ಕುರಿತ ಮಾಹಿತಿಯನ್ನು ವಾಟ್ಸಾಪ್ ತನ್ನ ಅಧೀಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.
ಮೊದಲೆಲ್ಲಾ ಮೊಬೈಲ್ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ “ಫೇವರೆಟ್ಸ್” ಎಂಬ ಆಪ್ಷನ್ ಇತ್ತು. ಇದೀಗ ವಾಟ್ಸಾಪ್ ಕೂಡಾ ಈ ಹೊಸ ಫೀಚರ್ ಅನ್ನು ಪರಿಚಯಿಸಿದ್ದು, ಈ ಮೂಲಕ ನಿಮ್ಮ ಕ್ಲೋಸ್ ಫ್ರೆಂಡ್ಸ್, ಫ್ಯಾಮಿಲಿ ಮೆಂಬರ್ಸ್ ಇತ್ಯಾದಿ ನಿಮ್ಮ ಮನಸ್ಸಿಗೆ ತುಂಬಾ ಹತ್ತಿರವಾದ ಜನರ ಕಾಂಟ್ಯಾಕ್ಟ್ ನಂಬರ್ ಅನ್ನು ಫೇವರೆಟ್ ಲಿಸ್ಟ್‌ಗೆ ಸೇರಿಸುವ ಮೂಲಕ ಸುಲಭವಾಗಿ ಚಾಟ್ ಮಾಡಬಹುದಾಗಿದೆ. ಮತ್ತು ಅವರ ಚಾಟ್ ಲಿಸ್ಟ್ ಅನ್ನು ಸುಲಭವಾಗಿ ಹುಡುಕಬಹುದಾಗಿದೆ.
ಇದನ್ನೂ ಓದಿ: ಭಾರತದ ಲಕ್ಷಾಂತರ ಆಂಡ್ರಾಯ್ಡ್ ಬಳಕೆದಾರರಿಗೆ ಮಹತ್ವದ ಎಚ್ಚರಿಕೆ ನೀಡಿದ ಕೇಂದ್ರ
ವಾಟ್ಸಾಪ್‌ನ ಫೇವರೆಟ್ಸ್ ಲಿಸ್ಟ್‌ಗೆ ಕಾಂಟಾಕ್ಟ್ ನಂಬರ್ ಸೇರಿಸುವುದು ಹೇಗೆ:
· ಮೊದಲನೆಯದಾಗಿ ನಿಮ್ಮ ವಾಟ್ಸಾಪ್ ಓಪನ್ ಮಾಡಿ
· ನಂತರ ಮೇಲ್ಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ
· ಅಲ್ಲಿ ಸೆಟ್ಟಿಂಗ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ
· ನಂತರ ಅಲ್ಲಿ ಫೇವರೆಟ್ಸ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಫೇವರೆಟ್ ಪರ್ಸನ್ ಕಾಂಟ್ಯಾಕ್ಟ್ ಅನ್ನು favourite ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು.
ಮತ್ತಷ್ಟು ಟೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ