ಮೇಲಿಂದ ಬಿಸಾಕಿ ಮೊಬೈಲ್ ಟೆಸ್ಟ್ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌: ವಿಡಿಯೋ ನೋಡಿ

ಸಧ್ಯ ಮೊಬೈಲ್ ಯುಗದಲ್ಲಿ 5-Gyಯಗದ ಬಗ್ಗೆ ಚರ್ಚೆಗಳು ಆಗುತ್ತಿವೆ. ಮತ್ತೊಂದೆಡೆ ಕೇಂದ್ರ ಸಚಿವರು ಮೊಬೈಲ್​ಅನ್ನು ಮೇಲಿಂದ ಬಿಸಾಕುವ ಮೂಲಕ ಅದರ ಗುಣಮಟ್ಟವನ್ನು ಪರೀಕ್ಷಿಸಿದ್ದಾರೆ.

ಮೇಲಿಂದ ಬಿಸಾಕಿ ಮೊಬೈಲ್ ಟೆಸ್ಟ್ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌: ವಿಡಿಯೋ ನೋಡಿ
Minister Ashwini Vaishnaw performs smartphone drop test
TV9kannada Web Team

| Edited By: Nayana Rajeev

Oct 04, 2022 | 6:12 PM

ನವದೆಹಲಿ: ಭಾರತದಲ್ಲಿ ಇದೀಗ 5-G ಯುಗಾರಂಭವಾಗಿದೆ. ಮೊನ್ನೇ ಅಷ್ಟೇ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಇದೀಗ ಅದು ಹೇಗೆ ವರ್ಕ್ ಆಗುತ್ತೆ? ಯಾವ ಫೋನ್​ಗಳಿಗೆ ಸಪೋರ್ಟ್​ ಮಾಡಿತ್ತೆ? ಅಂತೆಲ್ಲಾ ಮೊಬೈಲ್ ಬಳಕೆದಾರರಲ್ಲಿ ಚರ್ಚೆ ಶುರುವಾಗಿವೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಟೆಲಿಕಾಂ ಮತ್ತು ಐಟಿ ಸಚಿವ ‘ಅಶ್ವಿನಿ ವೈಷ್ಣವ್ ಅವರು ವಿಶಿಷ್ಟ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಸ್ಮಾರ್ಟ್​ ಫೋನ್​ವೊಂದನ್ನು ನೆಲಕ್ಕೆ ಬೀಳಿಸಿ ಅದರ ಗುಣಮಟ್ಟವನ್ನು ಪರೀಕ್ಷಿಸಿದ್ದಾರೆ.

ಹೌದು…..ಒಂದು ಸ್ಮಾರ್ಟ್​ಫೋನ್​ ಖರೀದಿಸುತ್ತಿದ್ರೆ, ಅದರ ಆಳ ಅಗಲದ ಬಗ್ಗೆ ಪರೀಕ್ಷಿಸುತ್ತಾರೆ. ಅದರಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇಂಡಿಯನ್ ಮೊಬೈಲ್ ಕಾಂಗ್ರೆಸ್‌ನ ಆರನೇ ಆವೃತ್ತಿಯ ಕಾರ್ಯಕ್ರದಮಲ್ಲಿ ಭಾಗವಹಿಸಿ ಮೊಬೈಲ್​ವೊಂದನ್ನು ಮೇಲಿಂದ ಕೆಳಕ್ಕೆ ಬಿಸಾಡಿ ಪರೀಕ್ಷೆ ಮಾಡಿದ್ದಾರೆ.

ಭಾರತದಲ್ಲಿ ವಿನ್ಯಾಸಗೊಳಿಸಲಾದ ಈ ಹೊಸ ಹಾಗೂ ವಿಶಿಷ್ಟ ಹ್ಯಾಂಡ್‌ಸೆಟ್‌ನ್ನು ತಮ್ಮ ಎದೆ ಮಟ್ಟದ ಎತ್ತದದಿಂದ ಕೆಳಕ್ಕೆ ಬೀಳಿಸಿ ಅದರ ಸಾಮರ್ಥ್ಯ ಹಾಗೂ ಅದರ ಗುಣಮಟ್ಟವನ್ನು ಟೆಸ್ಟ್ ಮಾಡಿದರು. ಇದೀಗ ಈ ವಿಡಿಯೋ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ: 5G ಸೇವೆಗಳ ನಂತರ ಇದೀಗ 6G ವಿಭಾಗದಲ್ಲಿ ಮುನ್ನಡೆ ಸಾಧಿಸಲಿರುವ ಭಾರತ

ವಿಡಿಯೋದಲ್ಲಿ ಸ್ಮಾರ್ಟ್​ಫೋನ್​ಅನ್ನು ಸಚಿವರು ಮೇಲಿಂದ ಕೆಳಕ್ಕೆ ಬಿಟ್ಟಿದ್ದಾರೆ. ಆದ್ರೆ, ಈ ಫೋನ್​ಗೆ ಯಾವುದೇ ಹಾನಿಯಾಗಿಲ್ಲ. ಹಾಗೇ ಅದರ ಡಿಸ್​ಪ್ಲೇ ಪರಿಪೂರ್ಣ ಸ್ಥಿತಿಯಲ್ಲಿಯಲ್ಲಿರುವುದು ಕಾಣಬಹುದು. ಸಾಮಾನ್ಯವಾಗಿ ಜನರ ಎದೆ ಮಟ್ಟದಿಂದ ಫೋನ್​ಗಳು ಕೆಳಕ್ಕೆ ಬೀಳುತ್ತವೆ. ಅದರಂತೆ ಈ ಹೊಸ ತಂತ್ರಜ್ಞಾನದ ಸ್ಮಾರ್ಟ್​ ಫೋನ್​ ಅನ್ನು ಸಹ ಎದೆಮಟ್ಟದ ಎತ್ತರಿಂದ ಕೆಳಕ್ಕೆ ಬೀಳಿಸಿ ಟೆಸ್ಟ್ ಮಾಡಿರುವುದು ವಿಶೇಷ.

ಕೆಲವೊಮ್ಮೆ ಸ್ಮಾರ್ಟ್​ಫೋನ್​ ಖರೀದಿಸುವ ಗೋಜಿನಲ್ಲಿ ಅದರ ವಿಶೇಷತೆ? ಬಗೆಗೆ ತಿಳಿದೇ ಇರುವುದಿಲ್ಲ. ನಂತರ ತಲೆಕೆಡಿಸಿಕೊಳ್ಳುವ ಪ್ರಸಂಗಗಳು ಎದರುರಾಗುತ್ತದೆ. ಹಾಗಾಗಿ, ಸ್ಮಾರ್ಟ್​ಫೋನ್​ ಖರೀದಿಗೂ ಮುನ್ನ ಅದರಲ್ಲಿ ಅಳವಡಿಸಿಕೊಂಡಿರುವ ಪ್ರೊಸೆಸರ್​, ಬ್ಯಾಟರಿ, ಕ್ಯಾಮೆರಾ, ಸ್ಟೊರೇಜ್​ ಮುಂತಾದವುಗಳ ಕುರಿತು ತಿಳಿದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಡೆಮೋ ಮೊಬೈಲ್​ ಕೈಯಲ್ಲಿ ಹಿಡಿದುಕೊಂಡು ಪರೀಕ್ಷೆ ಮಾಡುವುದು ಉಂಟು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada