ನವದೆಹಲಿ: ದೂರಸಂಪರ್ಕ ಇಲಾಖೆ (DoT) ಅಧಿಕೃತ ಮಾಹಿತಿ ಪ್ರಕಾರ, SIM ಕಾರ್ಡ್ ಬದಲಾಯಿಸದೆ OTP (ಒನ್ ಟೈಮ್ ಪಾಸ್ವರ್ಡ್) ಆಧಾರದಲ್ಲಿ ಪೋಸ್ಟ್ಪೇಯ್ಡ್ ಸಂಪರ್ಕದಿಂದ ಪ್ರೀಪೇಯ್ಡ್ಗೆ ಹಾಗೂ ಪ್ರೀಪೇಯ್ಡ್ನಿಂದ ಪೋಸ್ಟ್ಪೇಯ್ಡ್ಗೆ ಬದಲಾವಣೆ ಮಾಡಿಕೊಳ್ಳುವುದಕ್ಕೆ ಸದ್ಯದಲ್ಲೇ ಅವಕಾಶ ದೊರೆಯಬಹುದಾಗಿದೆ. ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಹೇಗೆ ಇದನ್ನು ಮಾಡಬಹುದು ಎಂಬ ಬಗ್ಗೆ ದೂರಸಂಪರ್ಕ ಇಲಾಖೆಗೆ ಪ್ರಸ್ತಾವ ಮಾಡಿದೆ. ಇಲಾಖೆಯು ಟೆಲಿಕಾಂ ಆಪರೇಟರ್ಗಳಿಗೆ ಈ ಬಗ್ಗೆ ಪ್ರೂಫ್ ಆಫ್ ಕಾನ್ಸೆಪ್ಟ್ (PoC) ಮುಂದುವರಿಸಲು ಕೇಳಲಾಗಿದೆ. PoC ಏನು ಬರುತ್ತದೆ ಎಂಬುದರ ಆಧಾರದಲ್ಲಿ ಖಾತೆ ಬದಲಾವಣೆ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.
COAI ಸದಸ್ಯರಾದ ರಿಲಯನ್ಸ್ ಜಿಯೋ, ಭಾರ್ತಿ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದಿಂದ ಏಪ್ರಿಲ್ 9ರಂದು ದೂರಸಂಪರ್ಕ ಇಲಾಖೆಗೆ ಮನವಿ ಸಲ್ಲಿಸಿದೆ. ಮೊದಲೇ ಹೇಳಿದ ಹಾಗೆ ಗ್ರಾಹಕರು ಪೋಸ್ಟ್ಪೇಯ್ಡ್ನಿಂದ ಪ್ರೀಪೇಯ್ಡ್ಗೆ ಹಾಗೂ ಪ್ರೀಪೇಯ್ಡ್ನಿಂದ ಪೋಸ್ಟ್ಪೇಯ್ಡ್ಗೆ ಬದಲಾವಣೆಯನ್ನು ಒಟಿಪಿಯಿಂದಲೇ ಮಾಡಿಕೊಳ್ಳುವಂತಾಗಬೇಕು. ಹೊಸದಾಗಿ ಕೆವೈಸಿ (ನೋ ಯುವರ್ ಕಸ್ಟಮರ್) ಪಡೆಯುವ ಅಗತ್ಯ ಇರಬಾರದು ಎಂದು ಮನವಿ ಸಲ್ಲಿಸಿವೆ.
ಈ ಹೊಸ ಪ್ರಸ್ತಾವಿತ ಪ್ರಕ್ರಿಯೆಯಲ್ಲಿ ಚಂದಾದಾರರು ತಮ್ಮ ಮೊಬೈಲ್ ಸಂಪರ್ಕದ ಬಗೆಯನ್ನು ಎಸ್ಸೆಮ್ಮೆಸ್, ಐವಿಆರ್ಎಸ್, ವೆಬ್ಸೈಟ್ ಅಥವಾ ಅಧಿಕೃತ ಆ್ಯಪ್ ಮೂಲಕ ಮಾಡಬಹುದು. ಮನವಿ ಬಂದ ಮೇಲೆ, ಚಂದಾದಾರಿಗೆ ಮೊಬೈಲ್ ಖಾತೆ ಬದಲಾವಣೆ ಬಗ್ಗೆ ಖಾತ್ರಿ ಬರುತ್ತದೆ. ವಿಶಿಷ್ಟ ವಹಿವಾಟಿನ ಐಡಿ (ಯೂನಿಕ್ ಟ್ರಾನ್ಸಾಕ್ಷನ್ ಐಡಿ) ಮತ್ತು ಒಟಿಪಿ 10 ನಿಮಿಷಗಳ ಸಿಂಧುತ್ವದೊಂದಿಗೆ ಬರುತ್ತದೆ.
ಇದನ್ನೂ ಓದಿ: Mobile data plan: 100 ರೂಪಾಯಿಯೊಳಗೆ ಅನ್ಲಿಮಿಟೆಡ್ ಮೊಬೈಲ್ ಇಂಟರ್ನೆಟ್ ಸಿಗುವ ಪ್ಲಾನ್ಗಳಿವು
(Mobile users may soon change their postpaid to prepaid and viceversa with OTP. Here is the details)