ನೋಕಿಯಾ (Nokia) ಕಂಪನಿಯ ಫೋನ್ಗಳಿಗೆ ಈಗ ಹಿಂದಿನಂತೆ ಬೇಡಿಕೆಯಿಲ್ಲ. ಶವೋಮಿ (Xiaomi), ಸ್ಯಾಮ್ಸಂಗ್, ರಿಯಲ್ ಮಿ, ಒಪ್ಪೋ, ಒನ್ಪ್ಲಸ್ ನಂತಹ ಘಟಾನುಘಟಿ ಕಂಪನಿಗಳ ಸ್ಮಾರ್ಟ್ಫೋನ್ ಹೊಡೆತಕ್ಕೆ ಸಿಲುಕಿರುವ ನೋಕಿಯಾ ಅಪರೂಪಕ್ಕೆ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿದೆ. ಮೊನ್ನೆಯಷ್ಟೆ ಭಾರತದಲ್ಲಿ ಮೊಟ್ಟ ಮೊದಲ 5G ಫೋನ್ ಬಿಡುಗಡೆ ಮಡಿದ್ದ ನೋಕಿಯಾ ಕಂಪನಿ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ನೋಕಿಯಾ 2780 ಫ್ಲಿಪ್ (Nokia 2780 Flip) ಫೀಚರ್ ಫೋನ್ ರಿಲೀಸ್ ಮಾಡಿದೆ. ಡ್ಯುಯಲ್ ಸ್ಕ್ರೀನ್ ಹೊಂದಿರುವ ಈ ಫೋನ್ನಲ್ಲಿ ಬಲವಾದ ಬ್ಯಾಟರಿ ನೀಡಲಾಗಿದೆ. ಇದರ ವಿನ್ಯಾಸಕ್ಕೆ ಜನರು ಮನಸೋತಿದ್ದಾರೆ. ಹಾಗಾದರೆ ನೋಕಿಯಾ 2660 ಫ್ಲಿಪ್ ಫೋನಿನ ಬೆಲೆ ಎಷ್ಟು?, ಏನು ವಿಶೇಷತೆ ಎಂಬುದನ್ನು ನೋಡೋಣ.
ಭಾರತಕ್ಕೆ ಬಂದಿದೆ ನೋಕಿಯಾ G60 5G:
ನೋಕಿಯಾ ಕಂಪನಿ ಭಾರತದಲ್ಲಿ ತನ್ನ ಮೊಟ್ಟ ಮೊದಲ 5G ಫೋನ್ ಬಿಡುಗಡೆ ಮಾಡಿದೆ. ಮಧ್ಯಮ ಬೆಲೆ ಹೊಂದಿರುವ ಈ ಫೋನಿನ ಹೆಸರು ನೋಕಿಯಾ G60 5G. ಇದರ 6GB RAM, 128GB ಸ್ಟೋರೇಜ್ ಆಯ್ಕೆಗೆ 29,999 ರೂ. ನಿಗದಿ ಮಾಡಲಾಗಿದೆ. 6.58 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ವೇಗದೊಂದಿಗೆ ಕಾರ್ಯನಿರ್ವಹಿಸಲಿದ್ದು ಆಂಡ್ರಾಯ್ಡ್ 12 OS ಅಳವಡಿಸಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯ ಪಡೆದುಕೊಂಡರೆ, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್, 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ. 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದಕ್ಕೆ ತಕ್ಕಂತೆ 20W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.
Published On - 12:45 pm, Fri, 4 November 22