ನೋಕಿಯಾ ಕಮ್​ಬ್ಯಾಕ್?: ಒಂದೇ ದಿನ ಎರಡು ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ನೋಕಿಯಾ

|

Updated on: Aug 17, 2023 | 12:36 PM

Nokia G310 5G and Nokia C210 Launched: ನೋಕಿಯಾ G310 5G ಮತ್ತು ನೋಕಿಯಾ C210 ಸ್ಮಾರ್ಟ್​ಫೋನ್ ಸದ್ಯಕ್ಕೆ ಯುಎಸ್ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಈ ಫೋನ್ಸ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ಗಳಿಂದ ಚಾಲಿತವಾಗಿದ್ದು, ಆಕರ್ಷಕ ಕ್ಯಾಮೆರಾ, ಬ್ಯಾಟರಿ ಆಯ್ಕೆ ಕೂಡ ನೀಡಲಾಗಿದೆ. ಆದಾಗ್ಯೂ, ಸದ್ಯದಲ್ಲೇ ಈ ಫೋನ್ ಭಾರತಕ್ಕು ಬರುವ ನಿರೀಕ್ಷೆಯಿದೆ.

ನೋಕಿಯಾ ಕಮ್​ಬ್ಯಾಕ್?: ಒಂದೇ ದಿನ ಎರಡು ಆಕರ್ಷಕ ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದ ನೋಕಿಯಾ
Nokia G310 5G and Nokia C210
Follow us on

ನೋಕಿಯಾ ಕಂಪನಿಗಳ ಸ್ಮಾರ್ಟ್​ಫೋನ್​ಗೆ ಭಾರತದಲ್ಲಿ ಈಗ ಬೇಡಿಕೆ ಇಲ್ಲ. ರೆಡ್ಮಿ, ರಿಯಲ್ ಮಿ, ಸ್ಯಾಮ್​ಸಂಗ್, ಒಪ್ಪೋ ಕಂಪನಿಗಳ ಪದಾರ್ಪಣೆ ಬಳಿಕ ನೋಕಿಯಾ ಸ್ಮಾರ್ಟ್​ಫೋನ್​ಗಳನ್ನು ದೇಶದಲ್ಲಿ ಕೇಳುವವರಿಲ್ಲ. ಇದಕ್ಕಾಗಿಯೆ ನೋಕಿಯಾ ವಿದೇಶದಲ್ಲಿ ಹೆಚ್ಚು ಮೊಬೈಲ್​ಗಳನ್ನು ಅನಾವರಣ ಮಾಡುತ್ತಿದೆ. ಈಗ ಅದೇ ಸಾಲಿಗೆ ನೋಕಿಯಾ G310 5G (Nokia G310 5G) ಮತ್ತು ನೋಕಿಯಾ C210 ಸೇರಿದೆ. ಈ ಎರಡೂ ಸ್ಮಾರ್ಟ್​ಫೋನ್​ಗಳು ಯುಎಸ್ ಮಾರುಕಟ್ಟೆಯಲ್ಲಿ ಅನಾವರಣಗೊಂಡಿದೆ. ಈ ಫೋನ್ಸ್ ಸ್ನಾಪ್‌ಡ್ರಾಗನ್ ಚಿಪ್‌ಸೆಟ್‌ಗಳಿಂದ ಚಾಲಿತವಾಗಿದ್ದು, ಆಕರ್ಷಕ ಕ್ಯಾಮೆರಾ, ಬ್ಯಾಟರಿ ಆಯ್ಕೆ ಕೂಡ ನೀಡಲಾಗಿದೆ. ಆದಾಗ್ಯೂ, ಸದ್ಯದಲ್ಲೇ ಈ ಫೋನ್ ಭಾರತಕ್ಕೆ ಬರುವ ನಿರೀಕ್ಷೆಯಿದೆ.

ನೋಕಿಯಾ G310 5G, ನೋಕಿಯಾ C210 ಬೆಲೆ, ಲಭ್ಯತೆ:

ನೋಕಿಯಾ G310 5G ಸ್ಮಾರ್ಟ್​ಫೋನ್​ಗೆ ಯುಎಸ್​ನಲ್ಲಿ USD 186, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 15,000 ರೂ. ಎನ್ನಬಹುದು. ಮತ್ತೊಂದೆಡೆ, ನೋಕಿಯಾ C210 ಫೋನಿಗೆ USD 109 (ಸುಮಾರು ರೂ. 9,000) ಬೆಲೆಯನ್ನು ಹೊಂದಿದೆ. ನೋಕಿಯಾ G310 5G ನೀಲಿ ಬಣ್ಣದ ಆಯ್ಕೆಯಲ್ಲಿ ಮಾತ್ರ ಬರುತ್ತದೆ, ನೋಕಿಯಾ C210 ಗ್ರೇ ಫಿನಿಶ್‌ ಬಣ್ಣದಲ್ಲಿ ಲಭ್ಯವಿದೆ. ನೋಕಿಯಾ G310 5G ಆಗಸ್ಟ್ 24 ರಿಂದ ಮಾರಾಟವಾಗಲಿದೆ. ಅಂತೆಯೆ ನೋಕಿಯಾ C210 ಸೆಪ್ಟೆಂಬರ್ 14 ರಿಂದ ಲಭ್ಯವಿರುತ್ತದೆ. ಎರಡೂ ಫೋನುಗಳನ್ನು ಯುಎಸ್​ನಲ್ಲಿ T-ಮೊಬೈಲ್ ಆನ್‌ಲೈನ್, ಚಿಲ್ಲರೆ ವ್ಯಾಪಾರಿಗಳು ಮತ್ತು ಮೆಟ್ರೋ ಮೂಲಕ ಖರೀದಿಸಬಹುದು.

ಮಾರುಕಟ್ಟೆಗೆ ಎಂಟ್ರಿಕೊಟ್ಟ ರೆಡ್ಮಿ K60 ಆಲ್ಟ್ರಾ ಸ್ಮಾರ್ಟ್​ಫೋನ್: ಬೆಲೆ ಎಷ್ಟು?, ಏನಿದೆ ಫೀಚರ್ಸ್?

ಇದನ್ನೂ ಓದಿ
3 ವರ್ಷಗಳ ಬಳಿಕ ಭಾರತಕ್ಕೆ ಕಮ್​ಬ್ಯಾಕ್ ಮಾಡುತ್ತಿದೆ ಹಾನರ್: ರಿಲೀಸ್ ಮಾಡುತ್ತಿರುವ ಹೊಸ ಫೋನ್ ಯಾವುದು ನೋಡಿ
ಆ್ಯಪಲ್​ನಿಂದ ಐಫೋನ್ ಬಳಕೆದಾರರಿಗೆ ಎಚ್ಚರಿಕೆ: ಮಲಗುವಾಗ ತಪ್ಪಿಯೂ ಹೀಗೆ ಮಾಡಬೇಡಿ
ಒನ್​ಪ್ಲಸ್​ನ ಬಹುನಿರೀಕ್ಷಿತ ಏಸ್ 2 ಪ್ರೊ ​ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ
ನೀವು ಪವರ್ ಬ್ಯಾಂಕ್ ಮೂಲಕ ಮೊಬೈಲ್ ಚಾರ್ಜ್ ಮಾಡ್ತೀರಾ?: ಹಾಗಿದ್ರೆ ಒಮ್ಮೆ ಇಲ್ಲಿ ಗಮನಿಸಿ

ನೋಕಿಯಾ G310 5G ಫೀಚರ್ಸ್:

ಹೊಸ ನೋಕಿಯಾ G310 5G ಫೋನ್ ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 20:9 ಅನುಪಾತ, 90Hz ರಿಫ್ರೆಶ್ ದರದೊಂದಿಗೆ 6.56-ಇಂಚಿನ HD+ (720 x 1,612 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು ವಾಟರ್‌ಡ್ರಾಪ್-ಶೈಲಿಯ ಕಟೌಟ್ ಅನ್ನು ಹೊಂದಿದ್ದು, 2.5D ಗೊರಿಲ್ಲಾ ಗ್ಲಾಸ್ 3 ನಿಂದ ರಕ್ಷಿಸಲ್ಪಟ್ಟಿದೆ. 4GB RAM ಜೊತೆಗೆ ಸ್ನಾಪ್​ಡ್ರಾಗನ್ 480+ 5G SoC ನಿಂದ ಚಾಲಿತವಾಗಿದೆ.

ನೋಕಿಯಾ G310 5G ಎಲ್ಇಡಿ ಫ್ಲ್ಯಾಷ್ನೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. ಇದು ಆಟೋಫೋಕಸ್ ಮತ್ತು ಎರಡು ಮೆಗಾಪಿಕ್ಸೆಲ್ ಡೆಪ್ತ್ ಮತ್ತು ಮ್ಯಾಕ್ರೋ ಸಂವೇದಕಗಳೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಹಿಂಬದಿಯ ಕ್ಯಾಮೆರಾ ಸಂವೇದಕವನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೊಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮೆತಾ ಅಳವಡಿಸಲಾಗಿದೆ.

ನೋಕಿಯಾ G310 5G ಸ್ಮಾರ್ಟ್‌ಫೋನ್ 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಹ್ಯಾಂಡ್‌ಸೆಟ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP52 ರೇಟಿಂಗ್ ಅನ್ನು ಸಹ ಹೊಂದಿದೆ. ಈ ಫೋನ್ ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ನೀಡುತ್ತದೆ ಮತ್ತು ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ.

ನೋಕಿಯಾ C210 ಫೀಚರ್ಸ್:

ನೋಕಿಯಾ C210 ಫೋನ್ 20:9 ಅನುಪಾತದೊಂದಿಗೆ 6.3-ಇಂಚಿನ HD+ (720×1,560 ಪಿಕ್ಸೆಲ್‌ಗಳು) LCD ವಾಟರ್‌ಡ್ರಾಪ್-ಶೈಲಿಯ ನಾಚ್ ಡಿಸ್ ಪ್ಲೇಯನ್ನು ಹೊಂದಿದೆ. ಇದು 2.5D ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಪಡೆದುಕೊಂಡಿದೆ. ಸ್ನಾಪ್‌ಡ್ರಾಗನ್ 662 SoC ನಿಂದ ಚಾಲಿತವಾಗಿದ್ದು, 3GB RAM ನೊಂದಿಗೆ ಜೋಡಿಸಲಾಗಿದೆ. 13-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಒಳಗೊಂಡಂತೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಇದು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಫೇಸ್ ಅನ್‌ಲಾಕ್ ಅನ್ನು ಸಹ ಬೆಂಬಲಿಸುತ್ತದೆ. 3,000mAh ಬ್ಯಾಟರಿಯನ್ನು ಪ್ಯಾಕ್ ಮಾಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ