OnePlus Nord CE 3 Lite 5G: ಒನ್​ಪ್ಲಸ್ ಹೊಸ ಫೋನ್ ಬಿಡುಗಡೆ, ಬೆಲೆ ಎಷ್ಟು?

ಬಜೆಟ್ ದರದ ಒನ್​ಪ್ಲಸ್ ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ನೂತನ ಫೋನ್ ದರ ₹19,999ರಿಂದ ಆರಂಭವಾಗುತ್ತದೆ. ಬಜೆಟ್ ದರಕ್ಕೆ ಪ್ರೀಮಿಯಂ ಫೋನ್ ಬೇಕು ಎಂದು ಬಯಸುವವರಿಗಾಗಿ ಒನ್​ಪ್ಲಸ್ ನೂತನ ಮಾದರಿಯನ್ನು ಪರಿಚಯಿಸಿದೆ. ಕ್ವಾಲ್ಕಂ ಸ್ನ್ಯಾಪ್​ಡ್ರ್ಯಾಗನ್ ಸರಣಿಯ ಪ್ರೊಸೆಸರ್ ಮತ್ತು 108 ಮೆಗಾಪಿಕ್ಸೆಲ್ ಕ್ಯಾಮೆರಾ ಇದರ ವಿಶೇಷತೆಯಾಗಿದೆ.

OnePlus Nord CE 3 Lite 5G: ಒನ್​ಪ್ಲಸ್ ಹೊಸ ಫೋನ್ ಬಿಡುಗಡೆ, ಬೆಲೆ ಎಷ್ಟು?
ಒನ್​ಪ್ಲಸ್ ನಾರ್ಡ್ ಸಿಇ 3 ಲೈಟ್ 5G
Follow us
ಕಿರಣ್​ ಐಜಿ
|

Updated on:Apr 05, 2023 | 6:35 PM

ಒನ್​ಪ್ಲಸ್, ಪ್ರೀಮಿಯಂ ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ಗೆ ಹೆಸರುವಾಸಿ. ಒನ್​ಪ್ಲಸ್(OnePlus) ಬ್ರ್ಯಾಂಡ್ ಮೂಲಕ ವಿವಿಧ ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ. ಅದರಲ್ಲೂ, ಉತ್ತಮ ಕ್ಯಾಮೆರಾ ಫೀಚರ್ಸ್, ಗರಿಷ್ಠ ಬ್ಯಾಟರಿ ಹಾಗೂ ಗ್ರೇಟ್ ಅನ್ನಿಸುವ ಪರ್ಫಾಮೆನ್ಸ್​ಗೆ ಒನ್​ಪ್ಲಸ್ ಫೋನ್ ಹೆಸರುವಾಸಿಯಾಗಿದೆ. ಒನ್​ಪ್ಲಸ್ ನಾರ್ಡ್ ಸರಣಿಯಲ್ಲಿ ಆರಂಭಿಕ ಹಂತದ ಬಜೆಟ್ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡಿದೆ. ಈ ಬಾರಿ ಅದೇ ಸರಣಿಯಲ್ಲಿ ಮುಂದುವರಿದು, ಮತ್ತೊಂದು ಹೊಸ ನಾರ್ಡ್ ಫೋನ್ ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಒನ್​ಪ್ಲಸ್ ನಾರ್ಡ್ ಸಿಇ 3 ಲೈಟ್ 5G(OnePlus Nord CE 3 Lite 5G) ಫೋನ್ ವಿವರ ಇಲ್ಲಿದೆ.

ಒನ್​ಪ್ಲಸ್ ನಾರ್ಡ್ ಸಿಇ 3 ಲೈಟ್ 5G ನೂತನ ಸ್ಮಾರ್ಟ್​​ಫೋನ್

ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಒನ್​ಪ್ಲಸ್ ಸ್ಮಾರ್ಟ್​ಫೋನ್ ಸ್ನ್ಯಾಪ್​ಡ್ರ್ಯಾಗನ್ 695 ಪ್ರೊಸೆಸರ್ ಸಹಿತ ಬರುತ್ತಿದೆ. ಅಲ್ಲದೆ, ಒನ್​ಪ್ಲಸ್ Nord CE 3 Lite 5G ಫೋನ್​ನಲ್ಲಿ 6.72 ಇಂಚಿನ ಎಲ್​ಸಿಡಿ ಡಿಸ್​ಪ್ಲೇ ಇದೆ. ಒನ್​ಪ್ಲಸ್ Nord CE 3 Lite 5G ಫೋನ್ 5,000mAh ಬ್ಯಾಟರಿ ಬೆಂಬಲ ಹೊಂದಿದ್ದು 67W SuperVOOC ಫಾಸ್ಟ್ ಚಾರ್ಜಿಂಗ್ ಸೌಲಭ್ಯ ವಿಶೇಷತೆಯಾಗಿದೆ. ಕಡಿಮೆ ಅವಧಿಯಲ್ಲಿಯೇ ಗರಿಷ್ಠ ಚಾರ್ಜಿಂಗ್ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ.

ಒನ್​ಪ್ಲಸ್ ನಾರ್ಡ್ ಸಿಇ 3 ಲೈಟ್ 5G ಕ್ಯಾಮೆರಾ ಹೇಗಿದೆ?

ಒನ್​ಪ್ಲಸ್ ಹೊಸ Nord CE 3 Lite 5G ಫೋನ್ Android 13 ಆಧಾರಿತ OxygenOS 13.1 ಓಎಸ್ ಮೂಲಕ ಕಾರ್ಯನಿರ್ವಹಿಸುತ್ತದೆ. ಜತೆಗೆ ಹಿಂಭಾಗದಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 2 ಮೆಗಾಪಿಕ್ಸೆಲ್ ಹಾಗೂ 2 MP ಮ್ಯಾಕ್ರೋ ಕ್ಯಾಮೆರಾ ಸೆನ್ಸಾರ್ ಇದೆ. ಹಾಗೂ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರುವುದು Nord CE 3 Lite 5G ವಿಶೇಷತೆಯಾಗಿದೆ. ಕ್ಯಾಮೆರಾ ವೈಶಿಷ್ಟ್ಯಗಳು ಮತ್ತು ಉತ್ತಮ ಫೋಟೊ ಬೇಕು ಎನ್ನುವವರಿಗೆ ಒನ್​ಪ್ಲಸ್ ಹೊಸ ನಾರ್ಡ್ ಫೋನ್ ಬೆಸ್ಟ್ ಎನ್ನುವಂತಿದೆ.

ಒನ್​ಪ್ಲಸ್ ನಾರ್ಡ್ ಸಿಇ 3 ಲೈಟ್ 5G ದರ ಎಷ್ಟಿದೆ?

ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇರಿಸಿರುವ ಒನ್​ಪ್ಲಸ್ ಫೋನ್ ಎರಡು ಆವೃತ್ತಿಗಳಲ್ಲಿ ದೊರೆಯಲಿದೆ. 8 GB RAM + 128 GB ಸ್ಟೋರೇಜ್ ಆವೃತ್ತಿಗೆ ₹19,999 ದರವಿದ್ದು, 8 GB RAM + 256 GB ಸ್ಟೋರೇಜ್ ಇರುವ ಮಾದರಿಗೆ ₹21,999 ದರವಿದೆ. ಗ್ರಾಹಕರು ಐಸಿಐಸಿಐ ಕಾರ್ಡ್ ಬಳಸಿ ಖರೀದಿಸಿದರೆ ₹1,000 ಡಿಸ್ಕೌಂಟ್ ಲಭ್ಯವಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Wed, 5 April 23

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್