ಪ್ರಸಿದ್ಧ ಒನ್ಪ್ಲಸ್ ಕಂಪನಿ ತನ್ನ ಮೊಟ್ಟ ಮೊದಲ ಫೋಲ್ಡಬಲ್ ಫೋನ್ ಒನ್ಪ್ಲಸ್ ಓಪನ್ (OnePlus Open) ಅನ್ನು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಈ ಹ್ಯಾಂಡ್‌ಸೆಟ್ ಕ್ವಾಲ್‌ಕಾಮ್‌ನ ಪ್ರಮುಖ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ನಿಂದ ಚಾಲಿತವಾಗಿದೆ. ಈ ಫೋನ್ ಮೂರು Hasselblad-ಬ್ರಾಂಡ್ನ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. ಇವುಗಳಲ್ಲಿ ಒಂದು ಸೋನಿಯ ಮುಂದಿನ ಪೀಳಿಗೆಯ LYTIA-T808 “ಪಿಕ್ಸೆಲ್ ಸ್ಟ್ಯಾಕ್ಡ್” CMOS ಸಂವೇದಕವಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಒನ್ಪ್ಲಸ್ ಓಪನ್ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 16GB RAM + 512GB ಸ್ಟೋರೇಜ್ ಕಾನ್ಫಿಗರೇಶನ್‌ಗಾಗಿ 1,39,999 ರೂ. ನಿಗದಿ ಮಾಡಲಾಗಿದೆ. ಇದು ಎಮರಾಲ್ಡ್ ಡಸ್ಕ್ ಮತ್ತು ವಾಯೇಜರ್ ಕಪ್ಪು ಬಣ್ಣದ ಆಯ್ಕೆಗಳಲ್ಲಿ, ಅಧಿಕೃತ ಒನ್ಪ್ಲಸ್ ವೆಬ್‌ಸೈಟ್, ಅಮೆಜಾನ್ ಮೂಲಕ ಮತ್ತು ದೇಶದಾದ್ಯಂತದ ಚಿಲ್ಲರೆ ಅಂಗಡಿಗಳ ಮೂಲಕ ಮಾರಾಟ ಕಾಣಲಿದೆ. ಮುಂಗಡ-ಆರ್ಡರ್‌ಗಳು ಪ್ರಾರಂಭವಾಗಿವೆ. ಮತ್ತು ಅಕ್ಟೋಬರ್ 27 ರಿಂದ ಮಾರಾಟ ಶುರುವಾಗಲಿದೆ. ICICI ಬ್ಯಾಂಕ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 5,000 ರೂ. ಗಳ ರಿಯಾಯಿತಿ ಇದೆ.
ಡ್ಯುಯಲ್-ಸಿಮ್ (ನ್ಯಾನೋ) ಒನ್ಪ್ಲಸ್ ಓಪನ್ ಮಡಿಸಬಹುದಾದ ಫೋನ್ ಆಗಿದ್ದು, ಇದು ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್ ಆಧಾರಿತ OxygenOS 13.2 ನಲ್ಲಿ ಕಾರ್ಯನಿರ್ವಹಿಸುತ್ತದೆ. 7.82-ಇಂಚಿನ (2,268×2,440 ಪಿಕ್ಸೆಲ್‌ಗಳು) 2K ಫ್ಲೆಕ್ಸಿ-ಫ್ಲೂಯಿಡ್ LTPO 3.0 AMOLED ಡಿಸ್‌ಪ್ಲೇ ಜೊತೆಗೆ 1-120Hz ಡೈನಾಮಿಕ್ ರಿಫ್ರೆಶ್ ರೇಟ್, 240Hz ಟಚ್ ರೆಸ್ಪಾನ್ಸ್ ರೇಟ್ ಮತ್ತು 2,800 nits ವರೆಗಿನ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆ.
Google Digikavach: ಇನ್ಮುಂದೆ ನಿಮ್ಮ ಹಣ ಸುರಕ್ಷಿತ: ಗೂಗಲ್ನಿಂದ ಡಿಜಿಕವಚ್ ಅನಾವರಣ, ಏನಿದು ನೋಡಿ
ಒನ್ಪ್ಲಸ್ ಓಪನ್‌ನ ಹೊರಗಿನ ಡಿಸ್ ಪ್ಲೇ 6.31-ಇಂಚಿನ (1,116×2,484 ಪಿಕ್ಸೆಲ್‌ಗಳು) 2K LTPO 3.0 ಸೂಪರ್ ಫ್ಲೂಯಿಡ್ AMOLED ಡಿಸ್‌ಪ್ಲೇ ಜೊತೆಗೆ 10-120Hz ಡೈನಾಮಿಕ್ ರಿಫ್ರೆಶ್ ರೇಟ್, 240Hz ಟಚ್ ರೆಸ್ಪಾನ್ಸ್ ರೇಟ್ ಮತ್ತು ಗರಿಷ್ಠ 2,800 ಗರಿಷ್ಠ ಬ್ರೈಟ್ನೆಸ್ನಿಂದ ಕೂಡಿದೆ. ಕಂಪನಿಯ ಪ್ರಕಾರ ಇದು ಸೆರಾಮಿಕ್ ಗಾರ್ಡ್ ರಕ್ಷಣಾತ್ಮಕ ಕವಚವನ್ನು ಹೊಂದಿದೆ.
ಒನ್ಪ್ಲಸ್ ಮಡಿಸಬಹುದಾದ ಹ್ಯಾಂಡ್‌ಸೆಟ್ ಅನ್ನು ಕ್ವಾಲ್‌ಕಾಮ್‌ನ ಸ್ನಾಪ್‌ಡ್ರಾಗನ್ 8 Gen 2 ಚಿಪ್ ಜೊತೆಗೆ Adreno 740 GPU 16GB LPDDR5x RAM ನೊಂದಿಗೆ ಜೋಡಿಸಿದೆ. ಫೋಟೋಗಳು ಮತ್ತು ವಿಡಿಯೋಗಳಿಗಾಗಿ, ಒನ್ಪ್ಲಸ್ Hasselblad-ಬ್ರಾಂಡ್ನ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 48-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದ್ದು, 1/1.43-ಇಂಚಿನ ಸೋನಿ LYT-T808 “Pixel Stacked” CMOS ಸೆನ್ಸಾರ್ ಜೊತೆಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS), 85-ಡಿಗ್ರಿ ಫೀಲ್ಡ್-ಆಫ್-ವ್ಯೂ ಆಯ್ಕೆಯನ್ನು ಹೊಂದಿದೆ.
ಜೊತೆಗೆ 64-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವು 33.4-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಎಫ್/2.6 ಅಪರ್ಚರ್ ಅನ್ನು ಹೊಂದಿದೆ. ಇದು 3x ಆಪ್ಟಿಕಲ್ ಜೂಮ್, 6x ಇನ್-ಸೆನ್ಸರ್ ಜೂಮ್ ಮತ್ತು 120x ಡಿಜಿಟಲ್ ಜೂಮ್ ಅನ್ನು ಬೆಂಬಲಿಸುತ್ತದೆ. 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಸೋನಿ IMX581 ಸಂವೇದಕದೊಂದಿಗೆ EIS, 114-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು ಎಫ್/2.2 ಅಪರ್ಚರ್ ಅನ್ನು ಹೊಂದಿದೆ. ಒನ್ಪ್ಲಸ್ ಓಪನ್‌ನ ಹೊರ ಡಿಸ್ ಪ್ಲೇಯಲ್ಲಿ 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು EIS ಮತ್ತು 88.5-ಡಿಗ್ರಿ ಫೀಲ್ಡ್ ಆಫ್ ವ್ಯೂ ಮತ್ತು f/2.4 ದ್ಯುತಿರಂಧ್ರದೊಂದಿಗೆ ಸೆಲ್ಫಿಗಳು ಮತ್ತು ವಿಡಿಯೊ ಚಾಟ್‌ಗಳಿಗಾಗಿ ಅಳವಡಿಸಲಾಗಿದೆ.
ಈ ಫೋನ್‌ನಲ್ಲಿ ಡ್ಯುಯಲ್-ಸೆಲ್ 4,800mAh ಬ್ಯಾಟರಿ (3,295+1,510mAh) ಅಳವಡಿಸಲಾಗಿದ್ದು ಅದು 67W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹ್ಯಾಂಡ್‌ಸೆಟ್ ಬಾಕ್ಸ್‌ನಲ್ಲಿ 80W ಚಾರ್ಜರ್‌ನೊಂದಿಗೆ ಬರುತ್ತದೆ. ಈ ಹ್ಯಾಂಡ್‌ಸೆಟ್ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ಸಂಪರ್ಕ ಆಯ್ಕೆಗಳು 5G, 4G LTE, Wi-Fi 7, ಬ್ಲೂಟೂತ್ 5.3, USB 3.1 ಸಂಪರ್ಕದೊಂದಿಗೆ USB ಟೈಪ್-C ಪೋರ್ಟ್ ಅನ್ನು ಒಳಗೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ