ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್ಕಾರ್ಟ್ (Flipkart) ತನ್ನ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಸೇಲ್ 2022 ಅನ್ನು (Flipkart annual Big Billion Days sale 2022) ಘೋಷಿಸಿದೆ. ಈ ಬಾರಿ ಕೂಡ ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ನೀಡುವುದಾಗಿ ತಿಳಿಸಿರುವ ಫ್ಲಿಪ್ಕಾರ್ಟ್ ಶೀಘ್ರದಲ್ಲೇ ಬಿಗ್ ಬಿಲಿಯನ್ ಡೇಸ್ ದಿನಾಂಕವನ್ನು ತಿಳಿಸಲಿದೆ. ಅದರಂತೆ ಮುಂದಿನ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು (Smartphones), ಎಲೆಕ್ಟ್ರಾನಿಕ್ಸ್, ವಸ್ತುಗಳು, ಫ್ಯಾಶನ್ ಮತ್ತು ಗೃಹ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ದೊರೆಯಲಿದೆ. ಆನ್ಲೈನ್ನಲ್ಲಿ ಸೋರಿಕೆಯಾದ ಮಾಹಿತಿ ಪ್ರಕಾರ ಈ ಸೇಲ್ ಸೆಪ್ಟೆಂಬರ್ 23 ರಂದು ಲೈವ್ ಆಗಲಿದ್ದು, ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ ಎಂದು ಹೇಳಲಾಗಿದೆ.
ಸೆಪ್ಟೆಂಬರ್ 7 ಕ್ಕೆ ಆ್ಯಪಲ್ ಐಫೋನ್ 14 ಸರಣಿ ಬಿಡುಗಡೆ ಆಗುತ್ತಿರುವ ಕಾರಣ ಈ ಬಾರಿಯ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಖರೀದಿದಾರರು ಐಫೋನ್ 13 ಮತ್ತು ಐಫೋನ್ 12 ಮೇಲೆ ಆಕರ್ಷಕ ಡಿಸ್ಕೌಂಟ್ ನಿರೀಕ್ಷಿಸಬಹುದು. ಇದಲ್ಲದೆ ಬ್ಯಾಂಕ್ ಆಫರ್ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಐಸಿಐಸಿಐ ಬ್ಯಾಂಕ್ ಕಾರ್ಡ್ ಅಥವಾ ಆಕ್ಸಿಸ್ ಬ್ಯಾಂಕ್ ಕಾರ್ಡ್ಗಳ ಮೇಲೆ 10% ಡಿಸ್ಕೌಂಟ್ ಪಡೆಯುವ ಸಾಧ್ಯತೆಯಿದೆ. ಇನ್ನು ಬ್ಯಾಂಕ್ ಆಫರ್ಗಳ ಜೊತೆಗೆ ನೋ ಕಾಸ್ಟ್ ಇಎಂಐ ಮತ್ತು ಸ್ಮಾರ್ಟ್ಫೋನ್ ಎಕ್ಸ್ಚೇಂಜ್ ಆಫರ್ ಕೂಡ ಪಡೆದುಕೊಳ್ಳಬಹುದಾಗಿದೆ.
ಇತ್ತ ಪ್ಲಿಪ್ಕಾರ್ಟ್ ಮಾರಾಟದ ಜೊತೆಗೆ ಅತ್ತ ಅಮೆಜಾನ್ ಕೂಡ ತನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಶಾಪಿಂಗ್ ಉತ್ಸವವನ್ನು ಆಯೋಜಿಸುವ ಸಾಧ್ಯತೆಯಿದೆ. ಹೀಗಾಗಿ ಎರಡು ಪ್ರಸಿದ್ಧ ಇ ಕಾಮರ್ಸ್ ನಡುವೆ ಪೈಪೋಟಿ ಏರ್ಪಡುವುದು ಖಚಿತ. ಫ್ಲಿಪ್ಕಾರ್ಟ್ ಸೇಲ್ನಲ್ಲಿ ಎಲೆಕ್ಟ್ರಾನಿಕ್ಸ್, ಪರಿಕರಗಳು, ಟಿವಿಗಳು ಮತ್ತು ಉಪಕರಣಗಳ ಮೇಲೆ ಖರೀದಿದಾರರು 80% ವರೆಗೆ ರಿಯಾಯಿತಿ ಪಡೆಯಬಹುದು ಹೇಳಲಾಗುತ್ತಿದೆ. ಜೊತೆಗೆ ಕಿಚನ್ ಅಥವಾ ಅಡುಗೆ ಸಾಮಾಗ್ರಿಗಳ ಮೇಲೆ ಪ್ಲಿಪ್ಕಾರ್ಟ್ ಶೇ 85ರಷ್ಟು ರಿಯಾಯಿತಿ ನೀಡಲಿದೆ ಎಂದು ಹೇಳಲಾಗುತ್ತಿದೆ.
ಫ್ಲಿಪ್ಕಾರ್ಟ್ ಜೊತೆ ಬಹುತೇಕ ಎಲ್ಲಾ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪೆನಿಗಳು ಒಪ್ಪಂದ ಮಾಡಿಕೊಂಡಿದ್ದು, ಈ ಮಾರಾಟದ ಸಮಯದಲ್ಲಿ ಬ್ಯಾಂಕ್ ಕೊಡುಗೆಗಳ ಜೊತೆಯಲ್ಲಿ ಎಲ್ಲಾ ಬ್ರ್ಯಾಂಡ್ ಸ್ಮಾರ್ಟ್ಫೋನ್ಗಳ ಮೇಲೆ ಶೇ. 10 ಪರ್ಸೆಂಟ್ಗಿಂತ ಹೆಚ್ಚು ಡಿಸ್ಕೌಂಟ್ಸ್ ಸಿಗಲಿದೆ ಎಂದು ಹೇಳಲಾಗಿದೆ. ಬೋಟ್ ಸೌಂಡ್ಬಾರ್ಗಳು ಮತ್ತು ಹೆಡ್ಫೋನ್ಗಳ ಮೇಲೆ 80% ರಿಯಾಯಿತಿ ನೀಡುತ್ತದೆ. ಬೊಟ್ ನಿಂದ ಹೊಸ ಹೆಡ್ಫೋನ್ ಅಥವಾ ಆಡಿಯೋ ಆಕ್ಸಸರಿಸಗಳನ್ನ ಪಡೆಯಲು ಇದು ಅತ್ಯುತ್ತಮ ಸಮಯವಾಗಿದೆ.
ಇನ್ನು ಇಂಟೆಲ್-ಚಾಲಿತ ಲ್ಯಾಪ್ಟಾಪ್ಗಳ ಮೇಲೆ ಆಕರ್ಷಕ ರಿಯಾಯಿತಿ ಇರಲಿದೆಯಂತೆ. ಇದರ ಜೊತೆಗೆ ಹಲವು ಬ್ರಾಂಡ್ಗಳು, ಕಿಚನ್ ಪ್ರಾಡಕ್ಟ್ಗಳು, ಗೃಹೋಪಯೋಗಿ ವಸ್ತುಗಳು, ರೆಫ್ರಿಜರೇಟರ್ಗಳು ಮತ್ತು ಹೆಚ್ಚಿನವುಗಳಿಂದ ಸ್ಮಾರ್ಟ್ ಟಿವಿಗಳ ಮೇಲೂ ಸಮಾರು 80% ರಿಯಾಯಿತಿ ನೀಡಬಹುದು.
Published On - 1:51 pm, Sun, 4 September 22