ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಂದು ಕೆಲಸ ಕಾರ್ಯಕ್ಕೂ ತಂತ್ರಜ್ಞಾನವನ್ನೇ ಅವಲಂಬಿಸಿಕೊಂಡಿದ್ದಾರೆ. ಅದಲ್ಲದೇ, ಈ ಡಿಜಿಟಲ್ ಇಂಡಿಯಾ ಎನ್ನುವುದು ಕೇಂದ್ರ ಸರಕಾರದ ಬಹು ದೊಡ್ಡ ಕನಸಾಗಿದ್ದು, ಈ ನಿಟ್ಟಿನಲ್ಲಿ ಭಾರತದಾದಂತ್ಯ ಎಲ್ಲಾ ಕೆಲಸ ಕಾರ್ಯಗಳು ಡಿಜಿಟಲ್ ಆಗಿಯೇ ನಡೆಯುತ್ತಿದೆ. ಆದರೆ ಇಂದಿನಿಂದ ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸದಸ್ಯರು ಎಲೆಕ್ಟ್ರಾನಿಕ್ ಟ್ಯಾಬ್‌ಲ್ಲಿ ಡಿಜಿಟಲ್ ಆಗಿ ಸಹಿ ಹಾಕಿದ್ದಾರೆ.
ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಡಿಸೆಂಬರ್ 20ರವರೆಗೆ ನಡೆಯಲಿದ್ದು, ಮೊದಲ ದಿನವೇ ಲೋಕಸಭಾ ಸದಸ್ಯರು ಎಲೆಕ್ಟ್ರಾನಿಕ್ ಟ್ಯಾಬ್‌ನಲ್ಲಿ ಡಿಜಿಟಲ್ ಪೆನ್ ಬಳಸಿ ಡಿಜಿಟಲ್ ಹಾಜರಾತಿ ಹಾಕುವ ಮೂಲಕ ಅಧಿವೇಶನದಲ್ಲಿ ಡಿಜಿಟಲ್ ಟಚ್ ನೀಡಿದ್ದಾರೆ.
ಸ್ಪೀಕರ್ ಓಂ ಬಿರ್ಲಾ ಅವರ ಸಂಸತ್ತನ್ನು ಪೇಪರ್‌ಲೆಸ್ ಮಾಡುವ ಉಪಕ್ರಮದ ಭಾಗವಾಗಿ ಲೋಕಸಭೆಯ ಸಭಾಂಗಣದ ಲಾಬಿಯಲ್ಲಿ ನಾಲ್ಕು ಕೌಂಟರ್‌ಗಳಲ್ಲಿ ಎಲೆಕ್ಟ್ರಾನಿಕ್ ಟ್ಯಾಬ್‌ಗಳು ಇರಿಸಲಾಗಿದೆ. ಈ ಡಿಜಿಟಲ್ ಹಾಜರಾತಿ ಮೂಲಕ ಲೋಕಸಭಾ ಸ್ಪೀಕರ್ ಅವರ ಈ ಉಪಕ್ರಮವನ್ನು ಸಂಸದರು ಖುಷಿಯಿಂದಲೇ ಸ್ವಾಗತಿಸಿದ್ದಾರೆ. ಅದಲ್ಲದೇ, ಈ ವ್ಯವಸ್ಥೆಯೂ ಸರಳ, ಅನುಕೂಲಕರ ಮತ್ತು ಸ್ನೇಹಪರ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಒಂದೇ ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆಗಳನ್ನು ಹೇಗೆ ಬಳಸುವುದು?: ಇಲ್ಲಿದೆ ಟ್ರಿಕ್
ಡಿಜಿಟಲ್ ಹಾಜರಾತಿಗಾಗಿ ಲೋಕಸಭೆಯ ಸಭಾಂಗಣದ ಲಾಬಿಯಲ್ಲಿ ನಾಲ್ಕು ಕೌಂಟರ್‌ಗಳಲ್ಲಿ ಎಲೆಕ್ಟ್ರಾನಿಕ್ ಟ್ಯಾಬ್‌ಗಳನ್ನು ಇರಿಸಲಾಗಿದೆ. ಡಿಜಿಟಲ್ ಹಾಜರಾತಿಯ ವೇಳೆ ತಾಂತ್ರಿಕ ಸಹಾಯಕ್ಕಾಗಿ ಪ್ರತಿ ಕೌಂಟರ್‌ನಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರದ ಇಂಜಿನಿಯರ್‌ಗಳ ತಂಡವನ್ನು ನಿಯೋಜಿಸಲಾಗಿದೆ. ಅದಲ್ಲದೇ, ದೈಹಿಕ ಹಾಜರಾತಿ ರಿಜಿಸ್ಟರ್‌ಗಳನ್ನು ಇಡಲಾಗಿದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ