Poco F3 GT: ಅದ್ಭುತ ಫೀಚರ್ಸ್ ಮೂಲಕ ಹುಬ್ಬೇರುವಂತೆ ಮಾಡಿರುವ ಈ ಫೋನ್ ಜುಲೈ 23ಕ್ಕೆ ಲಾಂಚ್

ಪೋಕೋ ಎಫ್3 ಜಿಟಿ ಮಿಡಿಯಾ ಟೆಕ್ ನ ಹೊಚ್ಚ ಹೊಸ ಡೈಮೆನ್ಸಿಟಿ 1200 ಪ್ರೊಸೆಸರ್ ಹೊಂದಿರುವುದು ಖಚಿತವಾಗಿದೆ. ಅಲ್ಲದೆ ಡಾಲ್ಬಿ ಅಟ್ನೋಮಸ್​ನ ಡ್ಯುಯೆಲ್ ಸ್ಟೆರಿಯೊ ಸ್ಪೀಕರ್​ಗಳನ್ನು ಹೊಂದಿದೆ.

Poco F3 GT: ಅದ್ಭುತ ಫೀಚರ್ಸ್ ಮೂಲಕ ಹುಬ್ಬೇರುವಂತೆ ಮಾಡಿರುವ ಈ ಫೋನ್ ಜುಲೈ 23ಕ್ಕೆ ಲಾಂಚ್
Poco F3 GT

ಸ್ಮಾರ್ಟ್​ಫೋನ್ (Smartphone) ಮಾರುಕಟ್ಟೆಯ ಅತಿ ದೊಡ್ಡ ಕಂಪೆನಿ ಶವೋಮಿ (Xiaomi) ತನ್ನ ಸಬ್​ ಬ್ರ್ಯಾಂಡ್​ಗಳಾದ ರೆಡ್ಮಿ (Redmi), ಎಂಐ, ಪೋಕೋ ಅಡಿಯಲ್ಲಿ ಹೊಸ ಹೊಸ ಫೋನುಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಸದ್ಯ ಕಳೆದ ಕೆಲವು ತಿಂಗಳುಗಳಿಂದ ಅದ್ಭುತ ಫೀಚರ್ಸ್ ಮೂಲಕ ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿದ್ದ ಶವೋಮಿ ಕಂಪೆನಿಯ ಹೊಸ ಪೋಕೋ ಎಫ್​3 ಜಿಟಿ (Poco F3 GT) ಸ್ಮಾರ್ಟ್​ಫೋನ್ ಕೊನೆಗೂ ಮಾರುಕಟ್ಟೆಗೆ ಕಾಲಿಡಲು ಸಜ್ಜಾಗಿದೆ. ಈ ಬಗ್ಗೆ ಕಂಪೆನಿ ಅಧಿಕೃತ ಮಾಹಿತಿ ನೀಡಿದ್ದು, ಇದೇ ಜುಲೈ 23 ಮಧ್ಯಾಹ್ನ 12 ಗಂಟೆಗೆ Poco F3 GT ಭಾರತದಲ್ಲಿ ಅನಾವರಣಗೊಳ್ಳಲಿದೆ.

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್​ಫೋನ್ ಎರಡು ತಿಂಗಳಹಿಂದೆ ಚೀನಾದಲ್ಲಿ ಬಿಡುಗಡೆ ಆದ Redmi K40 Gaming Edition ನ ರಿಬ್ರ್ಯಾಂಡೆಡ್ ಆಗಿದೆ. ಪೋಕೋ ಎಫ್3 ಜಿಟಿ ಮಿಡಿಯಾ ಟೆಕ್ ನ ಹೊಚ್ಚ ಹೊಸ ಡೈಮೆನ್ಸಿಟಿ 1200 ಪ್ರೊಸೆಸರ್ ಹೊಂದಿರುವುದು ಖಚಿತವಾಗಿದೆ. ಅಲ್ಲದೆ ಡಾಲ್ಬಿ ಅಟ್ನೋಮಸ್​ನ ಡ್ಯುಯೆಲ್ ಸ್ಟೆರಿಯೊ ಸ್ಪೀಕರ್​ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ ಇದು ಶವೋಮಿಯಿಂದ ಹಿಂದೆಂದು ತಯಾರಿಸದ ಮೊಟ್ಟ ಮೊದಲ ಗೇಮಿಂಗ್ ಸ್ಮಾರ್ಟ್ ಫೋನ್ ಆಗಿದೆ.

ರೆಡ್ಮಿ ಕೆ40 ಗೇಮಿಂಗ್ ಎಡಿಷನ್ ನಂತೆಯೆ Poco F3 GT ಸ್ಪೆಸಿಫಿಕೇಶನ್ ಇರಲಿದೆಯಂತೆ. ಇದು 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ರಿಫ್ರೇಶ್‌ ರೇಟ್ 120Hz ಆಗಿದ್ದು, ಹಾಗೆಯೇ 1,300 nits ಬ್ರೈಟ್ನೆಸ್‌ ಪಡೆದಿದೆ. ಮಿಡಿಯಾ ಟೆಕ್ ನ ಹೊಚ್ಚ ಹೊಸ ಡೈಮೆನ್ಸಿಟಿ 1200 ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಓಎಸ್‌ ಹಾಗೂ MIUI 12 ಓಎಸ್‌ ಬೆಂಬಲವನ್ನು ಪಡೆದಿದೆ.

ಹಿಂಬದಿಯಲ್ಲಿ ರಿಯರ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಅದರಲ್ಲಿ ಮುಖ್ಯ ಕ್ಯಾಮೆರಾವು 64 ಮೆಗಾಫಿಕ್ಸೆಲ್ ಸಾಮರ್ಥ್ಯದಲ್ಲಿದೆ. ಉಳಿದಂತೆ ಇನ್ನೆರಡು ಕ್ಯಾಮೆರಾಗಳು ಕ್ರಮವಾಗಿ 8ಎಂಪಿ ಸೆನ್ಸಾರ್ ಕ್ಯಾಮೆರಾ, 2ಎಂಪಿ ಸೆನ್ಸಾರ್ ನಲ್ಲಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ.

ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಬರೋಬ್ಬರಿ 67W ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿದೆ.

ಚೀನಾದಲ್ಲಿ ಬಿಡುಗಡೆ ಆಗಿದ್ದ ಈ ಸ್ಮಾರ್ಟ್‌ಫೋನ್ ಆರಂಭಿಕ 6GB RAM + 128GB ವೇರಿಯಂಟ್ ಬೆಲೆಯು CNY 1,999 ಅಂದರೆ ಭಾರತದಲ್ಲಿ ಅಂದಾಜು 23,00ರೂ. ಎನ್ನಲಾಗಿದೆ. ಇನ್ನು 12GB RAM + 256GB ವೇರಿಯಂಟ್ ಬೆಲೆಯು CNY 2,699 ಅಂದರೆ ಭಾರತದಲ್ಲಿ ಅಂದಾಜು 31,000ರೂ. ಎಂದು ಊಹಿಸಲಾಗಿದೆ.

ಭರ್ಜರಿ ಕ್ಯಾಮೆರಾ, ಬಂಪರ್ ಬ್ಯಾಟರಿ, ಕಡಿಮೆ ಬೆಲೆ: ಹೊಸ ಆವೃತ್ತಿಯಲ್ಲಿ Samsung Galaxy M21

ಮೇ 15ರಿಂದ ಜೂನ್ 15ರ ನಡುವೆ 20 ಲಕ್ಷ ಭಾರತೀಯರ ವಾಟ್ಸ್ಯಾಪ್ ಅಕೌಂಟ್ ನಿರ್ಬಂಧ

(Poco F3 GT MediaTek Dimensity 1200 SoC India Launch Date Set for July 23 Xiaomi company)