ಭರ್ಜರಿ ಕ್ಯಾಮೆರಾ, ಬಂಪರ್ ಬ್ಯಾಟರಿ, ಕಡಿಮೆ ಬೆಲೆ: ಹೊಸ ಆವೃತ್ತಿಯಲ್ಲಿ Samsung Galaxy M21

ಜುಲೈ 21 ರಿಂದ ಗ್ಯಾಲಕ್ಸಿ M21 2021 ಎಡಿಷನ್ ಸ್ಮಾರ್ಟ್​ಫೋನ್ ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್​ನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಾಗುತ್ತಿದೆ. ಇದರ ಜೊತೆಗೆ ಅನೇಕ ಆಫರ್​ಗಳನ್ನೂ ನೀಡಲಾಗಿದೆ.

ಭರ್ಜರಿ ಕ್ಯಾಮೆರಾ, ಬಂಪರ್ ಬ್ಯಾಟರಿ, ಕಡಿಮೆ ಬೆಲೆ: ಹೊಸ ಆವೃತ್ತಿಯಲ್ಲಿ Samsung Galaxy M21
Samsung Galaxy M21

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್​ಫೋನ್​ಗಳಿಗೆ (Smartphone) ವಿಶೇಷ ಬೇಡಿಕೆಯಿದೆ. ಅದಕ್ಕಾಗಿಯೆ ವಿದೇಶಿ ಮೊಬೈಲ್ ಕಂಪೆನಿಗಳು ಭಾರತದಲ್ಲಿ ಒಂದರ ಹಿಂದೆ ಒಂದರಂತೆ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತವೆ. ಇನ್ನೂ ಈಗಾಗಲೇ ಬಿಡುಗಡೆ ಮಾಡಿ ಯಶಸ್ಸು ಕಂಡಂತಹ ಮೊಬೈಲ್​ಗಳನ್ನು ಹೊಸ ಆವೃತ್ತಿಯಲ್ಲಿ ಮತ್ತೆ ರೀ-ರಿಲೀಸ್ ಮಾಡುವುದು ಈಗೀಗ ಹೆಚ್ಚಾಗುತ್ತಿದೆ. ಇದೇ ಸಾಲಿಗೆ ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್ (Samsung) ಕಂಪೆನಿ ಕೂಡ ಸೇರುತ್ತಿದ್ದು, ಕಳೆದ ವರ್ಷ ಬಿಡುಗಡೆ ಆಗಿ ಉತ್ತಮ ಸೇಲ್ ಕಂಡತಹ ಗ್ಯಾಲಕ್ಸಿ M21 (Samsung Galaxy M21) ಸ್ಮಾರ್ಟ್​ಫೋನನ್ನು ಹೊಸ ಆವೃತ್ತಿಯಲ್ಲಿ ಲಾಂಚ್ ಮಾಡುತ್ತಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ M21 ಸ್ಮಾರ್ಟ್​ಫೋನ್ 2020 ರಲ್ಲಿ ಬಿಡುಗಡೆ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ಸದ್ಯ ಇದೇ ಫೋನಿನ ಬ್ಯಾಟರಿ, ಕ್ಯಾಮೆರಾದಲ್ಲಿ ಬದಲಾವಣೆ ಮಾಡಿ ಇದೇ ಜುಲೈ 21ಕ್ಕೆ ಭಾರತದಲ್ಲಿ ಮಾರಾಟ ಮಾಡಲು ತಯಾರಾಗಿದೆ. ಎರಡು ಬಣ್ಣಗಳಲ್ಲಿ ಗ್ಯಾಲಕ್ಸಿ M21 2021 ಎಡಿಷನ್ ಲಭ್ಯವಿದ್ದು ಡಿಸೈನ್​ನಲ್ಲೂ ಕೆಲವು ವ್ಯತ್ಯಾಸ ಮಾಡಲಾಗಿದೆ.

ಜುಲೈ 21 ರಿಂದ ಗ್ಯಾಲಕ್ಸಿ M21 2021 ಎಡಿಷನ್ ಸ್ಮಾರ್ಟ್​ಫೋನ್ ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್​ನಲ್ಲಿ ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಾಗುತ್ತಿದೆ. ಇದರ ಜೊತೆಗೆ ಅನೇಕ ಆಫರ್​ಗಳನ್ನೂ ನೀಡಲಾಗಿದೆ.

ಏನು ವಿಶೇಷತೆ?

ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್‌ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಜೊತೆಗೆ ಇನ್‌ಫಿನಿಟಿ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ exynos 9611 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ Mali-G72 MP3 GPU ಪಡೆದಿದೆ. ಎರಡು ವೇರಿಯಂಟ್ ಆಯ್ಕೆಗಳಿದ್ದು, 4GB RAM + 64GB ಸ್ಟೋರೇಜ್ ಮತ್ತು 6GB RAM + 128GB ಸಾಮರ್ಥ್ಯ ಸ್ಟೋರೇಜ್ ಆಯ್ಕೆಗಳನ್ನು ಪಡೆದಿದೆ.

ಇನ್ನೂ ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್‌ ತ್ರಿವಳಿ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಕ್ಯಾಮೆರಾವು 5 ಎಂಪಿ ಸೆನ್ಸಾರ್ ಬಲವನ್ನು ಪಡೆದಿದೆ. ಇದರೊಂದಿಗೆ ಸೆಲ್ಫಿಗಾಗಿ 20 ಎಂಪಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ.

ವಿಶೇಷವಾಗಿ ಇದು 6,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಇಂಥಹ ಆಕರ್ಷಕ ಫೀಚರ್​ಗಳನ್ನು ಒಳಗೊಂಡಿರುವ ಗ್ಯಾಲಕ್ಸಿ M21 2021 ಎಡಿಷನ್ ಸ್ಮಾರ್ಟ್​ಫೋನ್ ಬೆಲೆ 20,000 ರೂ. ಒಳಗೆ ಇರಬಹುದೆಂದು ಅಂದಾಜಿಸಲಾಗಿದೆ.

ಮೇ 15ರಿಂದ ಜೂನ್ 15ರ ನಡುವೆ 20 ಲಕ್ಷ ಭಾರತೀಯರ ವಾಟ್ಸ್ಯಾಪ್ ಅಕೌಂಟ್ ನಿರ್ಬಂಧ

WhatsApp Update: ವಾಟ್ಸ್ಆ್ಯಪ್​ಗೆ ಬರಲಿದೆ ಬಹುನಿರೀಕ್ಷೆಯ ಫೀಚರ್: ಸದ್ಯದಲ್ಲೇ ಬಳಕೆದಾರರಿಗೆ ಲಭ್ಯ

(Samsung Galaxy M21 2021 Edition upgraded camera battery Launch in July 21 here is the specs)