Poco C51: ಕೇವಲ 5,499 ರೂ. ಗೆ ಪೋಕೋ C51 ರಿಲೀಸ್: ಇದನ್ನು ಖರೀದಿಸಿದ್ರೆ 50 GB ಡೇಟಾ ಉಚಿತ

|

Updated on: Jul 15, 2023 | 2:01 PM

ಪೋಕೋ C51 4G ಸ್ಮಾರ್ಟ್‌ಫೋನ್ ಬೆಲೆ ಕೇವಲ 5999 ರೂ. ಆಗಿದೆ. ಇಂದು ಅನಾವರಣಗೊಂಡಿರುವ ಈ ಮೊಬೈಲ್ ಜುಲೈ 18 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ.

Poco C51: ಕೇವಲ 5,499 ರೂ. ಗೆ ಪೋಕೋ C51 ರಿಲೀಸ್: ಇದನ್ನು ಖರೀದಿಸಿದ್ರೆ 50 GB ಡೇಟಾ ಉಚಿತ
POCO C51
Follow us on

ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್​ಫೋನ್ (Smartphone) ತಯಾರಿಕಾ ಕಂಪನಿ ಪೋಕೋ ಹೊಸ ಫೋನ್ ಜೊತೆಗೆ ಆಕರ್ಷಕ ಆಫರ್ ಮೂಲಕ ಬಂದಿದೆ. ಭಾರತದ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ (Airtel) ಜೊತೆ ಪೋಕೋ ಪಾಲುದಾರಿಕೆ ಮಾಡಿಕೊಂಡು ಕೈಗೆಟುವ ದರಕ್ಕೆ ಹೊಸ ಪೋಕೋ C51 (Poco C51) ಸ್ಮಾರ್ಟ್​ಫೋನ್ ಬಿಡುಗಡೆ ಮಾಡಿದೆ. ಇದು 4ಜಿ ಬೆಂಬಲ ಪಡೆದುಕೊಂಡಿರುವ ಫೋನಾಗಿದೆ. ಇದನ್ನು ಖರೀದಿಸಿದರೆ ಏರ್ಟೆಲ್ ಬಳಕೆದಾರರು 50 GB ಉಚಿತ ಡೇಟಾ ಆಫರ್ ಪಡೆಯುತ್ತಾರೆ.

ಈ ಬಗ್ಗೆ ಪೋಕೋ ಇಂಡಿಯಾದ ಮುಖ್ಯಸ್ಥ ಹಿಮಾಂಶು ಟಂಡನ್ ಮಾತನಾಡಿ, “ಪೋಕೋ ಮತ್ತು ಏರ್ಟೆಲ್ ಮೈತ್ರಿ ಮಾಡಿಕೊಂಡು ಅತಿ ಕಡಿಮೆ ಬೆಲೆಗೆ ದೇಶಾದ್ಯಂತ ಪೋಕೋ C51 ಸ್ಮಾರ್ಟ್​ಫೋನನ್ನು ಬಿಡುಗಡೆ ಮಾಡಿದೆ. ಏರ್ಟೆಲ್​ನ ವಿಸ್ತಾರವಾದ ನೆಟ್‌ವರ್ಕ್ ಅನ್ನು ಆನಂದಿಸುವ ಜೊತೆಗೆ ಪೋಕೋ ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಜನಗಳನ್ನು ಸಹ ನೀಡುತ್ತದೆ,” ಎಂದು ಹೇಳಿದ್ದಾರೆ.

Infinix Hot 30 5G: 6000mAh ಬ್ಯಾಟರಿ, ಬಲಿಷ್ಠ ಪ್ರೊಸೆಸರ್: ಕೇವಲ 12,499 ರೂ. ಗೆ ಇನ್ಫಿನಿಕ್ಸ್ ಹಾಟ್ 30 5G ಸ್ಮಾರ್ಟ್​ಫೋನ್ ಬಿಡುಗಡೆ

ಇದನ್ನೂ ಓದಿ
Amazon Prime Day sale: ಲೈವ್ ಆಗಿದೆ ಅಮೆಜಾನ್ ಪ್ರೈಮ್ ಡೇ ಸೇಲ್: ಆ್ಯಪಲ್ ಪ್ರೊಡಕ್ಟ್​ಗಳ ಮೇಲೆ ಬಂಪರ್ ಡಿಸ್ಕೌಂಟ್
Poco M5: ಫ್ಲಿಪ್​ಕಾರ್ಟ್​ ಭರ್ಜರಿ ಡಿಸ್ಕೌಂಟ್ ಮತ್ತು ಆಫರ್​ನಲ್ಲಿ ಪೋಕೊ ಫೋನ್
HP Envy x360: ಹೊಸ ಪ್ರೊಸೆಸರ್, ಲೇಟೆಸ್ಟ್ ಸರಣಿಯಲ್ಲಿ ಬಂತು HP Envy ಲ್ಯಾಪ್​ಟಾಪ್
Oppo A78 4G: ಒಪ್ಪೊ ಹೊಸ ಫೋನ್ ಸಿಂಪಲ್ ಸ್ಟೈಲ್​ನಲ್ಲಿ ಹೇಗಿದೆ ನೋಡಿ..

ಪೋಕೋ C51 4G ಸ್ಮಾರ್ಟ್‌ಫೋನ್ ಬೆಲೆ ಕೇವಲ 5999 ರೂ. ಆಗಿದೆ. ಇಂದು ಅನಾವರಣಗೊಂಡಿರುವ ಈ ಮೊಬೈಲ್ ಜುಲೈ 18 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಇದು ಭಾರತದ ಅತ್ಯಂತ ಕಡಿಮೆ ಬೆಲೆಯ 4G ಸ್ಮಾರ್ಟ್​ಫೋನ್ ಎಂದು ಕಂಪನಿ ಹೇಳಿದೆ.

ಪೋಕೋ C51 ಸ್ಮಾರ್ಟ್​ಫೋನ್ 6.52-ಇಂಚಿನ ಡಿಸ್ ಪ್ಲೇಯನ್ನು ಹೊಂದಿದೆ. ಇದು 7GB ಟರ್ಬೊ RAM (4GB LPDDR4X + 3GB ಟರ್ಬೊ RAM) ಮತ್ತು 64 GB ಆಂತರಿಕ ಸಂಗ್ರಹಣೆಯ ಶೇಖರಣಾ ಸಾಮರ್ಥ್ಯದೊಂದಿಗೆ ಬರುತ್ತದೆ. ಈ ಫೋನ್ ಮೀಡಿಯಾಟೆಕ್ ಹೀಲಿಯೊ G36 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ದೀರ್ಘ ಸಮಯ ಚಾರ್ಜ್ ಉಳಿಯುತ್ತಂತೆ.

ಪೋಕೋ C51 ಸ್ಮಾರ್ಟ್​ಫೋನ್​ನಲ್ಲಿ 8 ಮೆಗಾ ಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5 ಮೆಗಾ ಪಿಕ್ಸೆಲ್ ಮುಂಭಾಗ ಸೆಲ್ಫೀ ಕ್ಯಾಮೆರಾವನ್ನು ಒಳಗೊಂಡಿದೆ. ಈ ಫೋನ್ ಆಂಡ್ರಾಯ್ಡ್ 13 ನ ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಯಲ್ಲಿ ರನ್ ಆಗುತ್ತದೆ. ಫೋನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಅಕ್ಸೆಲೆರೊಮೀಟರ್‌ ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:56 pm, Sat, 15 July 23