ಭಾರತದಲ್ಲಿ ಬಿಡುಗಡೆಯಾದ PUBG ನ್ಯೂ ಸ್ಟೇಟ್ ಗೇಮ್, PUBG ಯ ಮುಂದುವರೆದ ಭಾಗವಾಗಿ ಪಾದಾರ್ಪಣೆ ಮಾಡಿದೆ. ಬ್ಯಾಟಲ್ಗ್ರೌಂಡ್ ಮೊಬೈಲ್ ಇಂಡಿಯಾ ತಯಾರಕರು ಅಭಿವೃದ್ಧಿಪಡಿಸಿದ ಗೇಮ್ ಪ್ರಸ್ತುತ Android ಮತ್ತು iOS ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. PUBG ನ್ಯೂ ಸ್ಟೇಟ್ನಲ್ಲಿ ಗ್ರಾಫಿಕ್ಸ್, ನ್ಯೂ ಟೆಕ್ನಾಲಜಿ ಮತ್ತು ಹೊಸ ಫೀಚರ್ಸ್ಗಳೊಂದಿಗೆ ಪಾದಾರ್ಪಣೆ ಮಾಡಿದೆ.
PUBG ನ್ಯೂ ಸ್ಟೇಟ್ ಡೌನ್ಲೋಡ್ ಲಿಂಕ್
PUBG ನ್ಯೂ ಸ್ಟೇಟ್ ಡೌನ್ಲೋಡ್ ಪ್ರಸ್ತುತ Android ಸ್ಮಾರ್ಟ್ಫೋನ್ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ PUBG ನ್ಯೂ ಸ್ಟೇಟ್ ಡೌನ್ಲೋಡ್ ಎಂದು ಪರಿಶೀಲಿಸಬಹುದು. ಸುಮಾರು 1.4 GB ಗಾತ್ರದ ಈ ಗೇಮ್ ಆಂಡ್ರಾಯ್ಡ್ 6.0 ಅಥವಾ ಕನಿಷ್ಠ 2 GM RAM ಹೊಂದಿರುವ ಸ್ಮಾರ್ಟ್ಫೋನ್ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಗೇಮ್ ಡೌನ್ಲೋಡ್ ಮಾಡಿದ ಬಳಿಕ ಹೆಚ್ಚುವರಿ ವಿಧಗಳನ್ನು ಪಡೆಯಬಹುದಾಗಿದೆ.
PUBG ನ್ಯೂ ಸ್ಟೇಟ್ iOS ಬಿಡುಗಡೆ ದಿನಾಂಕ
PUBG ನ್ಯೂ ಸ್ಟೇಟ್ iOS ಅಪ್ಲಿಕೇಶನ್ Android ಬಿಡುಗಡೆಯ ಜೊತೆಗೆ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದಾಗ್ಯೂ ಆಂಡ್ರಾಯ್ಡ್ ಅಪ್ಲಿಕೇಶನ್ ರೋಲ್ಔಟ್ ಮಾಡಿದ ಕೆಲವು ಗಂಟೆಗಳ ನಂತರ ಕ್ರಾಫ್ಟನ್ ಆಪಲ್ ಆ್ಯಪ್ ಸ್ಟೋರ್ನಲ್ಲಿ ಗೇಮ್ಅನ್ನು ಬಿಡುಗಡೆ ಮಾಡಿತು. iOS ಅಪ್ಲಿಕೇಶನ್ನ ಫೈಲ್ ಗಾತ್ರವು ಸುಮಾರು 1.5 GB ಇದೆ.
ವೈಶಿಷ್ಟ್ಯತೆಗಳು
PUBG ನ್ಯೂ ಸ್ಟೇಟ್ ಡೌನ್ಲೋಡ್ ಮಾಡುವ ಮೂಲಕ ಆಟವನ್ನು ಅಂತರಾಷ್ಟ್ರೀಯ ಆಟಗಾರರೊಂದಿಗೆ ಆಡಬಹುದು. ಆಟವು ಉತ್ತಮ ಗ್ರಾಫಿಕ್ಸ್ನೊಂದಿಗೆ ಬರುತ್ತದೆ. ಇದರಲ್ಲಿ 100 ಆಟಗಾರರು (ವೈಯಕ್ತಿಕವಾಗಿ ಅಥವಾ ನಾಲ್ವರ ತಂಡವಾಗಿ) ಪಂದ್ಯವನ್ನು ಗೆಲ್ಲಲು ಹೋರಾಟ ನಡೆಸುತ್ತಾರೆ. ಇದು ಟ್ರಂಕ್ಅನ್ನು ಸಹ ಪರಿಚಯಿಸುತ್ತದೆ. ಆಟಗಾರರು ತಮ್ಮ ತಂಡದ ಆಟಗಾರರೊಂದಿಗೆ ಮ್ಯಾಪ್ನ ಸುತ್ತಲೂ ಶಸ್ತ್ರಾಸ್ತ್ರಗಳನ್ನು ಹಿಡಿದು ಇತರ ಲೂಟಿ ಮಾಡಿರುವುದನ್ನು ಟ್ರಂಕ್ನಲ್ಲಿ ಸಂಗ್ರಹಿಸಬಹುದು. ಸಂಗ್ರಹಿಸಿದ ಲೂಟಿಯನ್ನು ಎದುರಾಳಿಗಳು ಆಯ್ಕೆ ಮಾಡಬಹುದು. ಆಟವು ಈಗಾಗಲೇ ವಿಶ್ವದಾದ್ಯಂತ 55 ಮಿಲಿಯನ್ಗಿಂತಲೂ ಹೆಚ್ಚು ಪೂರ್ವ- ನೋಂದಣಿಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ:
ಬ್ಯಾಟಲ್ಗ್ರೌಂಡ್ಸ್ ಮೊಬೈಲ್ ಇಂಡಿಯಾ ಆಗಿ ಬರುತ್ತಿದೆ PUBG; ಅಧಿಕೃತ ಪೋಸ್ಟರ್ ಬಿಡುಗಡೆ
ಆನ್ಲೈನ್ನಲ್ಲಿ ಸಿಗುತ್ತಿದೆ ಬೀಟಾ ವರ್ಷನ್ PUBG; ಇಲ್ಲಿದೆ ಡೌನ್ಲೋಡ್ ಲಿಂಕ್