Realme Anniversary Sale: ಭಾರತದ ಮಾರುಕಟ್ಟೆಗೆ ರಿಯಲ್ ಮಿ ಕಾಲಿಟ್ಟು 5 ವರ್ಷ: ಸ್ಮಾರ್ಟ್‌ಫೋನ್, ಲ್ಯಾಪ್ಟಾಪ್ಗಳ ಮೇಲೆ ಬಂಪರ್ ಆಫರ್ ಘೋಷಣೆ
ರಿಯಲ್ ಮಿ ಕಂಪನಿಯ ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಲ್ ಸೇರಿದಂತೆ ಎಲ್ಲ ಪ್ರಾಡಕ್ಟ್ಗಳು ಬಂಪರ್ ಡಿಸ್ಕೌಂಟ್ನಲ್ಲಿ ಖರೀದಿಸಬಹುದು. ರಿಯಲ್ ಮಿಯ ಅಧಿಕೃತ ವೆಬ್ಸೈಟ್, ಫ್ಲಿಪ್ಕಾರ್ಟ್, ಅಮೆಜಾನ್ ಸೇರಿದಂತೆ ರಿಟೆಲ್ ಸ್ಟೋರ್ಗಳಲ್ಲಿ ಈ ಆಫರ್ಗಳು ಲಭ್ಯವಿರುತ್ತಿದೆ.
ಭಾರತದ ಮಾರುಕಟ್ಟೆಗೆ ಪ್ರಸಿದ್ಧ ರಿಯಲ್ ಮಿ(Realme) ಕಂಪನಿ ಕಾಲಿಟ್ಟು ಐದು ವರ್ಷಗಳಾಗಿವೆ. ಈ ಪ್ರಯುಕ್ತ ವಿಶೇಷ ಮೇಳವನ್ನು ಹಮ್ಮಿಕೊಂಡಿದೆ. ಮೇ 1 ರಿಂದ ಆರಂಭವಾಗಿರುವ ಈ ಸೇಲ್ ಮೇ 11ರ ವರೆಗೆ ನಡೆಯಲಿದೆ. ಇದರಲ್ಲಿ ರಿಯಲ್ ಮಿ ಕಂಪನಿಯ ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಲ್ ಸೇರಿದಂತೆ ಎಲ್ಲ ರಿಯಲ್ ಮಿ ಪ್ರಾಡಕ್ಟ್ಗಳು ಬಂಪರ್ ಡಿಸ್ಕೌಂಟ್ನಲ್ಲಿ ಖರೀದಿಸಬಹುದು. ರಿಯಲ್ ಮಿಯ ಅಧಿಕೃತ ವೆಬ್ಸೈಟ್, ಫ್ಲಿಪ್ಕಾರ್ಟ್ (Flipkart), ಅಮೆಜಾನ್ (Amazon) ಸೇರಿದಂತೆ ರಿಟೆಲ್ ಸ್ಟೋರ್ಗಳಲ್ಲಿ ಈ ಆಕರ್ಷಕ ಆಫರ್ಗಳು ಲಭ್ಯವಿರುತ್ತಿದೆ. ಕೇವಲ ಬಜೆಟ್ ಬೆಲೆಯ ಫೋನ್ಗಳಿಗೆ ಮಾತ್ರ ಆಫರ್ ನೀಡಿದೆ ರಿಯಲ್ ಮಿ ಜಿಟಿ 2 ಪ್ರೋ ದಂತಹ ದುಬಾರಿಯ ಬೆಲೆಯ ಸ್ಮಾರ್ಟ್‌ಫೋನ್ ಮೇಲೂ ಬಂಪರ್ ಡಿಸ್ಕೌಂಟ್ ನೀಡಿದೆ.
ರಿಯಲ್ ಮಿ ಜಿಟಿ 2 ಪ್ರೋ ಫೋನಿನ 8GB RAM + 128GB ಸ್ಟೋರೇಜ್ ಆಯ್ಕೆಯ ಮೂಲಬೆಲೆ 57,999 ರೂ. ಆದರೀಗ ಈ ಫೋನ್ ಮೇಲೆ ಫ್ಲಿಪ್ಕಾರ್ಟ್ನಲ್ಲಿ ಶೇ. 37 ರಷ್ಟು ರಿಯಾಯಿತಿ ಘೋಷಿಸಲಾಗಿದದೆ. 22,000 ಕಡಿತಗೊಂಡು ಕೇವಲ 35,999 ರೂ. ಗೆ ಸೇಲ್ ಆಗುತ್ತಿದೆ. ಇದರೊಂದಿಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ.
Tech Tips: ನಿಮ್ಮ ಸ್ಮಾರ್ಟ್‌ಫೋನ್ ಡಿಸ್ ಪ್ಲೇ ಒಡೆದು ಹೋಗಿದ್ದರೆ ಸರಿಪಡಿಸಲು ಈ ಟ್ರಿಕ್ ಫಾಲೋ ಮಾಡಿ
ಇದು 6.7 ಇಂಚಿನ 2K LTPO 2.0 ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ಟೆಕ್ನಾಲಜಿಯನ್ನು ಹೊಂದಿರುವ ಕ್ಯಾಮೆರಾ ಸೆಟ್ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್, 50 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್, 32 ಮೆಗಾಪಿಕ್ಸೆಲ್ನ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು 65W ಸೂಪರ್‌ಡಾರ್ಟ್ ಚಾರ್ಜ್ ವರ್ಧಿತ ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದೆ.
ಇನ್ನು 12 ನಿಮಿಷಗಳಲ್ಲಿ ಶೇ. 50 ರಷ್ಟು ಚಾರ್ಜ್ ಆಗುವ ರಿಯಲ್ ಮಿ GT ನಿಯೋ 3T ಸ್ಮಾರ್ಟ್‌ಫೋನ್ ಕೂಡ ಆಕರ್ಷಕ ಆಫರ್ನಲ್ಲಿ ಲಭ್ಯವಿದೆ. ಇದರ 8GB RAM + 256GB ಸ್ಟೋರೇಜ್ ಆಯ್ಕೆಯ ಮೂಲಕ ಬೆಲೆ 38,999 ರೂ. ಆದರೀಗ ಫ್ಲಿಪ್ಕಾರ್ಟ್ನಲ್ಲಿ ಶೇ. 43 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ. ಈ ಮೂಲಕ 17,000 ರೂ. ರಿಯಾಯಿತಿ ಪಡೆದುಕೊಂಡು ಈ ಫೋನನ್ನು 21,999 ರೂ. ಗೆ ನಿಮ್ಮದಾಗಿಸಬಹುದು.
ಈ ಫೋನ್ 6.62-ಇಂಚಿನ ಫುಲ್ ಹೆಚ್‌ಡಿ ಪ್ಲಸ್ E4 ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ 119 ಡಿಗ್ರಿ ಫೀಲ್ಡ್–ಆಫ್–ವ್ಯೂ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ರಿಯಲ್ ಮಿ GT ನಿಯೋ 3T ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W ಸೂಪರ್‌ಡಾರ್ಟ್ ಚಾರ್ಜ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ