Realme GT 2 series: ಮಾರುಕಟ್ಟೆಗೆ ಲಗ್ಗೆಯಿಟ್ಟ ರಿಯಲ್‌ ಮಿ GT 2, GT 2 ಪ್ರೊ: ಖರೀದಿಸಲು ಕ್ಯೂ ಗ್ಯಾರಂಟಿ

Realme GT 2 and Realme GT 2 Pro: ರಿಯಲ್ ಮಿ ಕಂಪನಿ ಇದೀಗ ತನ್ನ ಬಹುನಿರೀಕ್ಷೆತ ರಿಯಲ್‌ ಮಿ GT 2 ಮತ್ತು ರಿಯಲ್‌ ಮಿ GT 2 ಪ್ರೊ ಫೋನನ್ನು ಅನಾವರಣ ಮಾಡಿದೆ. ಈ ಎರಡೂ ಫೋನ್‌ಗಳು ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್​​ ಬಲವನ್ನು ಪಡೆದುಕೊಂಡಿದೆ.

Realme GT 2 series: ಮಾರುಕಟ್ಟೆಗೆ ಲಗ್ಗೆಯಿಟ್ಟ ರಿಯಲ್‌ ಮಿ GT 2, GT 2 ಪ್ರೊ: ಖರೀದಿಸಲು ಕ್ಯೂ ಗ್ಯಾರಂಟಿ
Realme GT 2 and Realme GT 2 Pro
Follow us
TV9 Web
| Updated By: Vinay Bhat

Updated on: Mar 01, 2022 | 1:18 PM

ಜಾಗತೀಕ ಮೊಬೈಲ್ ಮಾರುಕಟ್ಟೆಯಲ್ಲಿ ವಿಭಿನ್ನ ಸ್ಮಾರ್ಟ್​ಫೋನ್​ಗಳನ್ನು (Smartphone) ಪರಿಚಯಿಸಿ ವಿಶೇಷ ಸ್ಥಾನ ಸಂಪಾದಿಸಿರುವ ರಿಯಲ್ ಮಿ ಕಂಪನಿ ಇದೀಗ ತನ್ನ ಬಹುನಿರೀಕ್ಷೆತ ರಿಯಲ್‌ ಮಿ ಜಿಟಿ 2 (Realme GT 2) ಮತ್ತು ರಿಯಲ್‌ ಮಿ ಜಿಟಿ 2 ಪ್ರೊ (Realme GT 2 Pro) ಫೋನನ್ನು ಅನಾವರಣ ಮಾಡಿದೆ. ಈ ಎರಡೂ ಫೋನ್‌ಗಳು ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್​​ ಬಲವನ್ನು ಪಡೆದುಕೊಂಡಿದೆ. ತ್ರಿವಳಿ ಕ್ಯಾಮೆರಾ ರಚನೆ ಹಾಗೂ 120Hz ಡಿಸ್‌ಪ್ಲೇ, ಬಲಿಷ್ಠ ಬ್ಯಾಟರಿ ಈ ಫೋನುಗಳ ಮತ್ತೊಂದು ಹೈಲೇಟ್ಸ್. ಜಾಗತೀಕವಾಗಿ ರಿಲೀಸ್ ಆಗಿರುವ ಈ ಎರಡೂ ಫೋನ್​ಗಳು ಸದ್ಯದಲ್ಲೇ ಭಾರತೀಯ ಮಾರುಕಟ್ಟೆಯಲ್ಲೂ ಬಿಡುಗಡೆಗೊಳ್ಳಲಿದೆ. ಹಾಗಾದ್ರೆ ಇದರ ವಿಶೇಷತೆ ಏನು?, ಬೆಲೆ ಎಷ್ಟು? ಎಂಬುದನ್ನು ನೋಡುವುದಾದರೆ…

ರಿಯಲ್‌ ಮಿ GT 2 ಫೋನ್ 6.62 ಇಂಚಿನ ಫುಲ್‌ ಹೆಚ್‌ಡಿ+ E4 AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 120Hz ರೀಫ್ರೇಶ್ ರೇಟ್​ನಿಂದ ಕೂಡಿದ್ದು, 1,300 nits ಬ್ರೈಟ್ನೆಸ್‌ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 12GB RAM ಮತ್ತು 128GB ಇಂಟರ್‌ ಸ್ಟೋರೇಜ್​ನಿಂದ ಆವೃತ್ತವಾಗಿದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX682 ಸೆನ್ಸಾರ್ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5000mAh ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದ್ದು, 65W ಸೂಪರ್ ಡಾರ್ಟ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ v5.2, GPS/ A-GPS, NFC ಮತ್ತು USB Type-C ಪೋರ್ಟ್ ಬೆಂಬಲಿಸಲಿದೆ.

ಇನ್ನು ರಿಯಲ್‌ ಮಿ GT 2 ಪ್ರೊ ಫೋನ್ 6.7 ಇಂಚಿನ 2K ಫುಲ್‌ ಹೆಚ್‌ಡಿ+ E4 AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಕೂಡ 120Hz ರೀಫ್ರೇಶ್ ರೇಟ್​ನಿಂದ ಕೂಡಿದ್ದು, 1,400 nits ಬ್ರೈಟ್ನೆಸ್‌ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 1 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 12GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ.

ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX682 ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 5000mAh ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ v5.2, GPS/ A-GPS, NFC ಮತ್ತು USB Type-C ಪೋರ್ಟ್ ಬೆಂಬಲಿಸಲಿದೆ. ರಿಯಲ್‌ಮಿ GT 2 ಫೋನ್ ಬೇಸ್‌ ಮಾಡೆಲ್‌ ಬೆಲೆ EUR 549, ಅಂದರೆ ಭಾರತದಲ್ಲಿ ಇದರ ದರ ಅಂದಾಜು 46,300 ರೂ. ಎನ್ನಬಹುದು. ಇನ್ನು ರಿಯಲ್‌ಮಿ GT 2 ಪ್ರೊ ಫೋನ್ ಬೇಸ್ ವೇರಿಯಂಟ್ ಫೋನ್ EUR 749 (ಭಾರತದಲ್ಲಿ ಅಂದಾಜು 63,100ರೂ) ಆಗಿದೆ.

Poco M4 Pro 4G: 1 ಗಂಟೆಯಲ್ಲಿ ಫುಲ್ ಚಾರ್ಜ್: ಭಾರತದಲ್ಲಿ ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್‌ ಬಿಡುಗಡೆ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ