Poco M4 Pro 4G: 1 ಗಂಟೆಯಲ್ಲಿ ಫುಲ್ ಚಾರ್ಜ್: ಭಾರತದಲ್ಲಿ ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್‌ ಬಿಡುಗಡೆ

Poco M4 Pro 4G: 1 ಗಂಟೆಯಲ್ಲಿ ಫುಲ್ ಚಾರ್ಜ್: ಭಾರತದಲ್ಲಿ ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್‌ ಬಿಡುಗಡೆ
Poco M4 Pro 4G

Poco M4 Pro 4G Price: ಪೋಕೋ ಸಂಸ್ಥೆ 4G ಸಾಮರ್ಥ್ಯದ ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಕೂಡ ಅತ್ಯಂತ ಕಡಿಮೆ ಆಗಿದ್ದು ಆಕರ್ಷಕ ಫೀಚರ್​ಗಳಿಂದ ಕೂಡಿದೆ.

TV9kannada Web Team

| Edited By: Vinay Bhat

Mar 01, 2022 | 9:33 AM

ಭಾರತದಲ್ಲಿ ಅಪರೂಪಕ್ಕೆ ಆಕರ್ಷಕ ಸ್ಮಾರ್ಟ್​​ಫೋನ್​ಗಳನ್ನು (Smartphone) ಬಿಡುಗಡೆ ಮಾಡಿ ಭಾರೀ ಸದ್ದು ಮಾಡುವ ಪೋಕೋ ಸಂಸ್ಥೆ ಇದೀಗ ಹೊಸ ಫೋನೊಂದನ್ನು ಅನಾವರಣ ಮಾಡಿದೆ. ಮೊನ್ನೆಯಷ್ಟೆ ಪೋಕೋ ದೇಶದಲ್ಲಿ ತನ್ನ ಹೊಸ ಪೋಕೋ ಎಮ್​4 ಪ್ರೊ 5G (Poco M4 Pro 5G) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿ ಸೇಲ್ ಆರಂಭಿಸಿತ್ತು. ದೇಶದಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಕಡಿಮೆ ಬೆಲೆಯ ಈ 5G ಫೋನ್ ಭರ್ಜರಿ ಸೇಲ್ ಆಗುತ್ತಿದೆ. ಹೀಗಿರುವಾಗ ಪೋಕೋ ಸಂಸ್ಥೆ ಇದೇ ಹೆಸರಿನ 4G ಸಾಮರ್ಥ್ಯದ ಪೋಕೋ M4 ಪ್ರೊ 4G (Poco M4 Pro 4G) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ಕೂಡ ಅತ್ಯಂತ ಕಡಿಮೆ ಆಗಿದ್ದು ಆಕರ್ಷಕ ಫೀಚರ್​ಗಳಿಂದ ಕೂಡಿದೆ. ಹಾಗಾದ್ರೆ ಇದರ ವಿಶೇಷತೆಯಲ್ಲಿ ಏನೇನಿದೆ?, ಬೆಲೆ ಎಷ್ಟು ನಿಗದಿ ಮಾಡಲಾಗಿದೆ? ಎಂಬ ಬಗೆಗಿನ ಮಾಹಿತಿ ಇಲ್ಲಿದೆ.

ಏನು ವಿಶೇಷತೆ?:

ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್​ನಿಂದ ಕೂಡಿದೆ. ಇದು ಮೀಡಿಯಾ ಟೆಕ್ ಹೀಲಿಯೊ G96 CPU ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 11 ಅನ್ನು ಆಧರಿಸಿದ MIUI 12.5 ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಮುಂದಿನ ಕೆಲವು ವಾರಗಳಲ್ಲಿ MIUI 13 ಅನ್ನು ಸ್ವೀಕರಿಸುವ ಭರವಸೆ ಇದೆ. ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ

ಈ ಸ್ಮಾರ್ಟ್‌ಫೋನ್‌ ತ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ f/1.8 ಲೆನ್ಸ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್‌ ಅನ್ನು ಒಳಗೊಂಡಿದೆ. 2 ಮೆಗಾಫಿಕ್ಸೆಲ್ ಮ್ಯಾಕ್ರೊ ಸೆನ್ಸಾರ್​ನ ಮೂರನೇ ಕ್ಯಾಮೆರಾ ಕೂಡ ಇದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಇದು f/2.45 ಲೆನ್ಸ್‌ ಅನ್ನು ಪಡೆದಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಪ್ರೊ ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಕಂಪನಿ ಹೇಳಿರುವ ಪ್ರಕಾರ ಈ ಸ್ಮಾರ್ಟ್​ಫೋನ್ 61 ನಿಮಿಷಗಳಲ್ಲಿ 0 ರಿಂದ 100 ವರೆಗೆ ಫುಲ್ ಚಾರ್ಜ್ ಆಗುತ್ತದಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್ v5.1, GPS/ A-GPS, ಇನ್ಫ್ರಾರೆಡ್ (IR) ಬ್ಲಾಸ್ಟರ್, USB ಟೈಪ್-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಬೆಂಬಲಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಒಳಗೊಂಡಿದೆ.

 ಬೆಲೆ ಎಷ್ಟು?:

ಪೋಕೋ M4 ಪ್ರೊ 4G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಮೂರು ಮಾದರಿಯಲ್ಲಿ ಖರೀದಿಗೆ ಲಭ್ಯವಿದೆ. ಇದರ 6GB RAM ಮತ್ತು 64GB RAM ಸ್ಟೊರೇಜ್ ಮಾದರಿಗೆ ಕೇವಲ 14,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 6GB RAM ಮತ್ತು 128GB ರೂಪಾಂತರಕ್ಕೆ 16,499 –  8GB RAM ಮತ್ತು 128GB ರೂಪಾಂತರಕ್ಕೆ 17,999 ರೂ. ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಲೇಸರ್ ಬ್ಲಾಕ್, ಲೇಸರ್ ಬ್ಲೂ ಮತ್ತು ಹೊಸ ಪೊಕೊ ಹಳದಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ಮಾರ್ಚ್ 7 ರಿಂದ ಖರೀದಿಸಬಹುದು.

Nokia C21: ಬಜೆಟ್ ಬೆಲೆಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 3 ಫೋನ್ ಬಿಡುಗಡೆ ಮಾಡಿದ ನೋಕಿಯಾ

Asus 8z: ಭಾರತದಲ್ಲಿ ಅತ್ಯಂತ ಬಲಿಷ್ಠವಾದ ಆಸುಸ್‌ 8z ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ಎಷ್ಟು?

Follow us on

Related Stories

Most Read Stories

Click on your DTH Provider to Add TV9 Kannada