Realme C31: ಬಜೆಟ್ ಪ್ರಿಯರಿಗೆ ಯುಗಾದಿ ಗಿಫ್ಟ್: ಕೇವಲ 8,999 ರೂ. ಗೆ ರಿಯಲ್ ಮಿ C31 ಫೋನ್ ಬಿಡುಗಡೆ

Realme C31 Launched: ರಿಯಲ್‌ ಮಿ C31 ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಸ್ಟ್ಯಾಂಡ್‌ಬೈನಲ್ಲಿ 45 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ.

Realme C31: ಬಜೆಟ್ ಪ್ರಿಯರಿಗೆ ಯುಗಾದಿ ಗಿಫ್ಟ್: ಕೇವಲ 8,999 ರೂ. ಗೆ ರಿಯಲ್ ಮಿ C31 ಫೋನ್ ಬಿಡುಗಡೆ
Realme C31
Follow us
TV9 Web
| Updated By: Vinay Bhat

Updated on: Mar 31, 2022 | 2:58 PM

ಯುಗಾದಿ ಹಬ್ಬಕ್ಕೆ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡುವ ಪ್ಲಾನ್​ನಲ್ಲಿ ನೀವಿದ್ದರೆ, ಅಥವಾ ನೀವು ಅತೀ ಕಡಿಮೆ ಬೆಲೆ ಆಕರ್ಷಕ ಸ್ಮಾರ್ಟ್​​ಫೋನ್ (Smartphone) ಖರೀದಿಸುವ ಯೋಜನೆಯಲ್ಲಿದ್ದರೆ ರಿಯಲ್ ಮಿ ಕಂಪನಿ ಹೊಸ ಫೋನೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮೊನ್ನೆಯಷ್ಟೆ ಇದೇ ಮೊದಲ ಬಾರಿಗೆ 150W ಫಾಸ್ಟ್ ಚಾರ್ಜರ್​ನ ರಿಯಲ್‌ಮಿ ಜಿಟಿ ನಿಯೋ 3 (Realme GT Neo 3) ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ರಿಯಲ್ ಮಿ ಇದೀಗ ಭಾರತದಲ್ಲಿ ಹೊಸ ರಿಯಲ್‌ ಮಿ ಸಿ31 (Realme C31) ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಈಗಾಗಲೇ ಇಂಡೋನೇಷ್ಯಾದಲ್ಲಿ ಬಿಡುಗಡೆ ಆಗಿ ಬಹುದೊಡ್ಡ ಯಶಸ್ಸು ಕಂಡಿದೆ. ಇದೇ ಕಾರಣಕ್ಕೆ ಭಾರತದಲ್ಲಿ ಬಜೆಟ್‌ ಬೆಲೆಯಿಂದ ಗಮನ ಸೆಳೆದಿರುವ ರಿಯಲ್‌ ಮಿ C31 ಅನ್ನು ಬಿಡುಗಡೆ ಮಾಡಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಫೋನಿನ ಬೆಲೆ ಕೇವಲ 8,999 ರೂ. ಆಗಿದೆ.

ಭಾರತದಲ್ಲಿ ರಿಯಲ್‌ ಮಿ C31 ಸ್ಮಾರ್ಟ್‌ಫೋನ್‌ ಒಟ್ಟು ಎರಡು ಸ್ಟೋರೆಜ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ 3GB RAM ಮತ್ತು 32GB ಸ್ಟೋರೆಜ್ ಮಾದರಿಗೆ 8,999 ರೂ. ಬೆಲೆ ನಿಗದಿ ಮಾಡಲಾಗಿದೆ. ಅಂತೆಯೆ 4GB RAM ಮತ್ತು 64GB ರೂಪಾಂತರದ ಬೆಲೆ 9,999 ರೂ.ಆಗಿದೆ. ಈ ಫೋನ್‌ ಡಾರ್ಕ್‌ ಗ್ರೀನ್‌ ಮತ್ತು ಲೈಟ್ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಇದು ರಿಯಲ್‌ಮಿ ಕಂಪನಿಯ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ರಿಟೇಲ್‌ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಏಪ್ರಿಲ್ 6 ರಂದು ಮಧ್ಯಾಹ್ನ 12 ಗಂಟೆಗೆ ಖರೀದಿಗೆ ಸಿಗಲಿದೆ.

ರಿಯಲ್‌ ಮಿ C31 ಸ್ಮಾರ್ಟ್‌ಫೋನ್‌ 720×1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 88.7% ಸ್ಕ್ರೀನ್‌ ಟು ಬಾಡಿ ಅನುಪಾತದಿಂದ ಕೂಡಿದೆ. ಆಕ್ಟಾ-ಕೋರ್ ಯೂನಿಸೋಕ್‌ T612 ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು 12nm ಪ್ರಕ್ರಿಯೆಯನ್ನು ಆಧರಿಸಿದೆ. ಈ ಪ್ರೊಸೆಸರ್‌ ಲೊ-ಲೇವೆಲ್‌ ಆಗಿದೆ, ಅಂದರೆ ಹಗುರವಾದ ಕಾರ್ಯಗಳಿಗೆ ಸೂಕ್ತವಾಗಿದೆ.

ಇನ್ನು ರಿಯಲ್‌ ಮಿ C31 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಕಪ್ಪು-ಬಿಳುಪು ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ ವಾಟರ್‌ಡ್ರಾಪ್ ಶೈಲಿಯ ನಾಚ್‌ನೊಳಗೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಕೂಡ ನೀಡಲಾಗಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದು ಸ್ಟ್ಯಾಂಡ್‌ಬೈನಲ್ಲಿ 45 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi (2.4 GHz), ಬ್ಲೂಟೂತ್ v5, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-C ಪೋರ್ಟ್ ಬೆಂಬಲಿಸಲಿದೆ. ಇವೆಲ್ಲದರ ಜೊತೆಗೆ ಲೈಟ್‌ ಸೆನ್ಸಾರ್‌, ಮ್ಯಾಗ್ನೆಟಿಕ್ ಇಂಡಕ್ಷನ್ ಸೆನ್ಸಾರ್‌, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿದಂತೆ ಇತ್ತೀಚೆಗಿನ ಎಲ್ಲ ಆಯ್ಕೆಗಳನ್ನು ಒಳಗೊಂಡಿದೆ.

WhatsApp: ವಾಯ್ಸ್ ಮೆಸೇಜ್​ನಲ್ಲಿ ಅಚ್ಚರಿಯ ಫೀಚರ್ ಬಿಡುಗಡೆಗೊಳಿಸಿದ ವಾಟ್ಸ್​ಆ್ಯಪ್: ಏನದು?

WhatsApp: ನಂಬರ್ ಸೇವ್ ಮಾಡದೆಯೂ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸಬಹುದು: ಅದು ಹೇಗೆ ಗೊತ್ತೇ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ