WhatsApp: ವಾಯ್ಸ್ ಮೆಸೇಜ್ನಲ್ಲಿ ಅಚ್ಚರಿಯ ಫೀಚರ್ ಬಿಡುಗಡೆಗೊಳಿಸಿದ ವಾಟ್ಸ್ಆ್ಯಪ್: ಏನದು?
WhatsApp New Features: ಇದೀಗ ಮತ್ತೊಂದು ಹೊಸ ಫೀಚರ್ನೊಂದಿಗೆ ವಾಟ್ಸ್ಆ್ಯಪ್ ಬಂದಿದೆ. ಸದ್ಯ ತನ್ನ ವಾಯ್ಸ್ ಮೆಸೇಜ್ ಎಕೋ ಸಿಸ್ಟಂನಲ್ಲಿ ಅನೇಕ ಫೀಚರ್ಗಳನ್ನು ಘೋಷಣೆ ಮಾಡಿದೆ.
ವಿಶ್ವದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ (WhatsApp) ಇಂದು ಅತಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ. ಇದಕ್ಕೆ ಕಾರಣ ಅದರಲ್ಲಿರುವ ಫೀಚರ್ಗಳು. ಬಳಕೆದಾರರ ಮನಸ್ಥಿತಿಯನ್ನು ಅರ್ಥಹಿಸಿ ಅವರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ಅಪ್ಡೇಟ್ಗಳನ್ನು ನೀಡುತ್ತಲೇ ಇದೆ. ಮೊನ್ನೆಯಷ್ಟೆ ವಾಟ್ಸ್ಆ್ಯಪ್ನಲ್ಲಿ ಬರೋಬ್ಬರಿ 2GB ವರೆಗೆ ಫೈಲ್ಗಳನ್ನು ಕಳುಹಿಸಲು ಅನುವು ಮಾಡಿಕೊಡುವ ಫೀಚರ್ ಪರಿಚಯಿಸುತ್ತೇವೆ ಎಂದು ಹೇಳಿತ್ತು. ಈ ಆಯ್ಕೆ ಆಂಡ್ರಾಯ್ಡ್ (Android) ಮತ್ತು ಐಒಸ್ (iOS) ಎರಡೂ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡುತ್ತೇವೆ ಎಂದು ತಿಳಿಸಿತ್ತು. ಇದೀಗ ಮತ್ತೊಂದು ಹೊಸ ಫೀಚರ್ನೊಂದಿಗೆ ವಾಟ್ಸ್ಆ್ಯಪ್ ಬಂದಿದೆ. ಸದ್ಯ ತನ್ನ ವಾಯ್ಸ್ ಮೆಸೇಜ್ ಎಕೋ ಸಿಸ್ಟಂನಲ್ಲಿ ಅನೇಕ ಫೀಚರ್ಗಳನ್ನು ಘೋಷಣೆ ಮಾಡಿದೆ. ಬಳಕೆದಾರರಿಗೆ ಇನ್ನೂ ಹೆಚ್ಚು ಅನುಕೂಲವಾಗುವಂತೆ ಹೊಸ ಫೀಚರ್ಸ್ ಪರಿಚಯಿಸುತ್ತಿದ್ದು, ಇದುಕೂಡ ಆಂಡ್ರಾಯ್ಡ್, ಐಒಎಸ್ ಬಳಕೆದಾರರಿಗೆ ಏಕಕಾಲದಲ್ಲಿ ಲಭ್ಯವಾಗಲಿದೆ.
ಇದರಲ್ಲಿ ಮೊದಲನೆಯದಾಗಿ ಔಟ್ ಆಪ್ ಚಾಟ್ ಪ್ಲೇ ಬ್ಯಾಕ್ ಫೀಚರ್ ಆಗಿದೆ. ಇದು ವಾಯ್ಸ್ ಮೆಸೇಜ್ ಅನ್ನು ಚಾಟ್ ಹೊರಗಡೆಯೂ ಕೇಳಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ನೀವು ಮಲ್ಟಿ ಟಾಸ್ಕ್ ಮಾಡಬಹುದು. ಇದರ ಜೊತೆಗೆ ವಾಯ್ಸ್ ಮೆಸೇಜ್ ಅನ್ನು ರೆಕಾರ್ಡ್ ಮಾಡುವಾಗ, ನೀವು ರೆಕಾರ್ಡಿಂಗ್ ಅನ್ನು ವಿರಾಮಗೊಳಿಸಬಹುದು. ಮತ್ತೇ ಬೇಕು ಎನಿಸಿದಾಗ ಪುನರಾರಂಭಿಸಬಹುದು. ಅಷ್ಟೇ ಅಲ್ಲದೆ ನಿಮ್ಮ ವಾಯ್ಸ್ ಮೆಸೇಜ್‌ಗಳನ್ನು ಸೆಂಡ್ ಮಾಡುವುದಕ್ಕು ಮೊದಲೇ ನೀವೊಮ್ಮೆ ಕೇಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ.
ಇನ್ನು ವಾಯ್ಸ್ ಮೆಸೇಜ್ ಅನ್ನು ಕೇಳುವಾಗ ನೀವು ವಿರಾಮಗೊಳಿಸಿದರೆ, ನೀವು ಚಾಟ್‌ಗೆ ಹಿಂತಿರುಗಿದಾಗ ನೀವು ಎಲ್ಲಿಗೆ ಸ್ಟಾಪ್ ಮಾಡಿದ್ದಿರೋ ಅಲ್ಲಿಂದಲೇ ಮುಂದುವರೆಸು ಆಯ್ಕೆ ಕೂಡ ಸಿಗಲಿದೆ. ವಾಟ್ಸ್ಆ್ಯಪ್ ಪ್ರಕಟಿಸಿರುವ ಈ ಫೀಚರ್ಗಳಲ್ಲಿ ಕೆಲವು ಫೀಚರ್ಸ್ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಈ ಫೀಚರ್ಸ್ ಅನ್ನು ಓವರ್ ದಿ ಏರ್ (OTA) ಅಪ್‌ಡೇಟ್ ಮೂಲಕ ಹೊರತರಲಾಗುವುದು ಎನ್ನಲಾಗಿದೆ.
100MB ಯಿಂದ 2GB:
ಈವರೆಗೆ ನಮಗೆ ವಾಟ್ಸ್ಆ್ಯಪ್ನಲ್ಲಿ 100MB ಗಿಂತ ಅಧಿಕ ಘಾತ್ರ ಹೊಂದಿರುವ ಫೋಟೋ, ವಿಡಿಯೋ ಅಥವಾ ಯಾವುದೇ ಫೈಲ್ಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಮುಕ್ತಿ ಸಿಗಲಿದೆ. ಅಚ್ಚರಿ ಎಂಬಂತೆ ವಾಟ್ಸ್ಆ್ಯಪ್ ತನ್ನ ಮುಂದಿನ ಅಪ್ಡೇಟ್ನಲ್ಲಿ ಬರೋಬ್ಬರಿ 2GB ವರೆಗೆ ಫೈಲ್ಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಆಂಡ್ರಾಯ್ಡ್ (Android) ಮತ್ತು ಐಒಸ್ (iOS) ಬಳಕೆದಾರರಿಗೆ ಈ ಆಯ್ಕೆ ಸದ್ಯದಲ್ಲೇ ಸಿಗಲಿದೆ.
ಗೂಗಲ್ ಒಡೆತನದ ಜೀಮೇಲ್ನಲ್ಲೂ ಇಷ್ಟು ದೊಡ್ಡ ಘಾತ್ರದ ಫೈಲ್ಗಳನ್ನು ಒಮ್ಮೆಲೆ ಕಳುಹಿಸುವ ಆಯ್ಕೆಯಿಲ್ಲ. ಇದರಲ್ಲಿ ಒಂದು ಬಾರಿ 25MB ಅನ್ನು ಮಾತ್ರ ಸೆಂಡ್ ಮಾಡಬಹುದು. ಇದೀಗ ವಾಟ್ಸ್ಆ್ಯಪ್ನಲ್ಲಿ 2GB ವರೆಗಿನ ಫೈನಲ್ ಅನ್ನು ಒಮ್ಮೆಲೆ ಕಳುಹಿಸಬಹುದು. ಇದರ ಮೂಲಕ ನೀವು ಕಳುಹಿಸುವ ಫೋಟೋ ಅಥವಾ ವಿಡಿಯೋ ಹೈ ಕ್ವಾಲಿಟಿಯಲ್ಲಿ ಇರಲಿದೆಯಂತೆ. ಸದ್ಯಕ್ಕೆ ಈ ಫೀಚರ್ ಅರ್ಜೆಂಟಿನಾದ ಬೇಟಾ ಬಳಕೆದಾರರಿಗೆ ನೀಡಲಾಗಿದ್ದು ಪರೀಕ್ಷಾ ಹಂತದಲ್ಲಿದೆ. ಸದ್ಯದಲ್ಲೇ ಈ ಆಯ್ಕೆ ಎಲ್ಲ ಬಳಕೆದಾರರಿಗೆ ಸಿಗಲಿದೆ ಎಂದು ಹೇಳಲಾಗಿದೆ.
WhatsApp: ನಂಬರ್ ಸೇವ್ ಮಾಡದೆಯೂ ವಾಟ್ಸ್ಆ್ಯಪ್ನಲ್ಲಿ ಮೆಸೇಜ್ ಕಳುಹಿಸಬಹುದು: ಅದು ಹೇಗೆ ಗೊತ್ತೇ?
Galaxy A73 5G: ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಿತು 108MP ಕ್ಯಾಮೆರಾದ ಸ್ಯಾಮ್ಸಂಗ್ ಫೋನ್: ಬೆಲೆ ಎಷ್ಟು?
Published On - 1:51 pm, Thu, 31 March 22