ರಿಯಲ್ ಮಿ ನಾರ್ಜೊ N53 ಹೊಸ ರೂಪಾಂತರ ಬಿಡುಗಡೆ: ಬೆಲೆ ಕೇವಲ 11,999 ರೂ.

|

Updated on: Oct 26, 2023 | 12:27 PM

Realme Narzo N53 New Variant: ರಿಯಲ್ ಮಿ ನಾರ್ಜೊ N53 ನ 4GB + 64GB ಮತ್ತು 6GB + 128GB ರೂಪಾಂತರಗಳು ಭಾರತದಲ್ಲಿ ಕ್ರಮವಾಗಿ ರೂ. 7,999 ಮತ್ತು 9,499 ರೂ. ಗೆ ಬಿಡುಗಡೆ ಆಗಿತ್ತು. ಇದೀಗ ಇದರ ಹೊಸ 8GB + 128GB ರೂಪಾಂತರವು 11,999 ರೂ. ಗೆ ಪರಿಚಯಿಸಲಾಗಿದೆ. ಈ ಹ್ಯಾಂಡ್‌ಸೆಟ್ ಅನ್ನು ಫೆದರ್ ಬ್ಲಾಕ್ ಮತ್ತು ಫೆದರ್ ಗೋಲ್ಡ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗಿದೆ.

ರಿಯಲ್ ಮಿ ನಾರ್ಜೊ N53 ಹೊಸ ರೂಪಾಂತರ ಬಿಡುಗಡೆ: ಬೆಲೆ ಕೇವಲ 11,999 ರೂ.
realme narzo n53
Follow us on

ರಿಯಲ್ ಮಿ ನಾರ್ಜೊ N53 (Realme Narzo N53) ಅನ್ನು ಈ ವರ್ಷ ಮೇ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಆಗ ಈ ಸ್ಮಾರ್ಟ್​ಫೋನ್ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಮಾತ್ರ ಅನಾವರಣಗೊಂಡಿತ್ತು. ಇದೀಗ ಈ ಹ್ಯಾಂಡ್‌ಸೆಟ್‌ನ ಹೊಸ 8GB RAM ರೂಪಾಂತರವನ್ನು ರಿಲೀಸ್ ಮಾಡಲಾಗಿದೆ. ಇದಕ್ಕೆ 128GB ಅಂತರ್ಗತ ಸಂಗ್ರಹಣೆಯನ್ನು ಜೋಡಿಯಾಗಿದೆ. ಈ ಫೋನ್ ಫೆದರ್ ಬ್ಲಾಕ್ ಮತ್ತು ಫೆದರ್ ಗೋಲ್ಡ್ ಬಣ್ಣಗಳಲ್ಲಿ ಬರುತ್ತದೆ. ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ರಿಯಲ್ ಮಿ ನಾರ್ಜೊ N53 ಬೆಲೆ:

ರಿಯಲ್ ಮಿ ನಾರ್ಜೊ N53 ನ 4GB + 64GB ಮತ್ತು 6GB + 128GB ರೂಪಾಂತರಗಳು ಭಾರತದಲ್ಲಿ ಕ್ರಮವಾಗಿ ರೂ. 7,999 ಮತ್ತು 9,499 ರೂ. ಗೆ ಬಿಡುಗಡೆ ಆಗಿತ್ತು. ಇದೀಗ ಇದರ ಹೊಸ 8GB + 128GB ರೂಪಾಂತರವು 11,999 ರೂ. ಗೆ ಪರಿಚಯಿಸಲಾಗಿದೆ. ಈ ಹ್ಯಾಂಡ್‌ಸೆಟ್ ಅನ್ನು ಫೆದರ್ ಬ್ಲಾಕ್ ಮತ್ತು ಫೆದರ್ ಗೋಲ್ಡ್ ಬಣ್ಣ ಆಯ್ಕೆಗಳಲ್ಲಿ ನೀಡಲಾಗಿದೆ.

ಲಾವಾದಿಂದ ಮಹತ್ವದ ಘೋಷಣೆ: ಬರುತ್ತಿದೆ ಹೊಸ ದೇಶೀಯ ಸ್ಮಾರ್ಟ್​ಫೋನ್

ಇದನ್ನೂ ಓದಿ
ಇಂದು ಮಾರುಕಟ್ಟೆಗೆ ಅಪ್ಪಳಿಸಲಿದೆ ಶವೋಮಿ 14 ಸರಣಿ
ಮಕ್ಕಳ ಇನ್ಸ್​ಟಾಗ್ರಾಂ ವ್ಯಸನ; ಮೆಟಾ ವಿರುದ್ಧ ಅಮೆರಿಕದಲ್ಲಿ ಕಾನೂನು ಕ್ರಮ
ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಚಾಟ್ ಫಿಲ್ಟರ್ ಎಂಬ ಆಯ್ಕೆ: ಏನಿದು ನೋಡಿ
SAR ಮೌಲ್ಯ: ಹೊಸ ಸ್ಮಾರ್ಟ್​ಫೋನ್ ಖರೀದಿಸುವಾಗ ಈ 3 ವಿಷಯಗಳನ್ನು ಪರಿಶೀಲಿಸಿ

ರಿಯಲ್ ಮಿ ನಾರ್ಜೊ N53 ಫೀಚರ್ಸ್:

ರಿಯಲ್ ಮಿ ನಾರ್ಜೊ N53 ಸ್ಮಾರ್ಟ್​ಫೋನ್ 6.74-ಇಂಚಿನ ಡಿಸ್ಪ್ಲೇ ಜೊತೆಗೆ 90Hz ವರೆಗೆ ರಿಫ್ರೆಶ್ ದರ, 180Hz ಟಚ್ ಮಾದರಿ ದರ ಮತ್ತು 90.3 ಪ್ರತಿಶತದಷ್ಟು ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಬರುತ್ತದೆ. ಈ ಹ್ಯಾಂಡ್‌ಸೆಟ್ ಆಕ್ಟಾ-ಕೋರ್ ಯುನಿಸೊಕ್ T612 SoC ಮೂಲಕ ARM Mali-G57 GPU ಜೊತೆ ಜೋಡಿಸಲ್ಪಟ್ಟಿದೆ. ಇದು ರಿಯಲ್ ಮಿ ಮಿನಿ ಕ್ಯಾಪ್ಸುಲ್ ಅನ್ನು ಒಳಗೊಂಡಿರುವ ಆಂಡ್ರಾಯ್ಡ್ 13-ಆಧಾರಿತ ರಿಯಲ್ ಮಿ ಯುಐ 4.0 ನೊಂದಿಗೆ ರನ್ ಆಗುತ್ತದೆ.

ರಿಯಲ್ ಮಿ ನಾರ್ಜೊ N53 ನ ಡ್ಯುಯಲ್ ಕ್ಯಾಮೆರಾ ಘಟಕವು 50-ಮೆಗಾಪಿಕ್ಸೆಲ್ AI- ಬೆಂಬಲಿತ ಪ್ರಾಥಮಿಕ ಸಂವೇದಕವನ್ನು ಹೊಂದಿದೆ. 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಂವೇದಕವನ್ನು ಡಿಸ್ಪ್ಲೇಯ ಮೇಲ್ಭಾಗದ ಮಧ್ಯದಲ್ಲಿ ಜೋಡಿಸಲಾಗಿದೆ. ಇದು 33W ವೈರ್ಡ್ SuperVOOC ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ ಫೋನ್ ಅನ್ನು 30 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದವರೆಗೆ ಚಾರ್ಜ್ ಮಾಡಲಾಗುತ್ತದೆ ಎಂದು ಕಂಪನಿ ಹೇಳಿದೆ.

ಸುರಕ್ಷತೆಗಾಗಿ, ರಿಯಲ್ ಮಿ ನಾರ್ಜೊ N53 ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು ಬ್ಲೂಟೂತ್ 5.0, 4G, GPS, GLONASS / GALILEO, ಮತ್ತು USB ಟೈಪ್-C ಸಂಪರ್ಕವನ್ನು ಬೆಂಬಲಿಸುತ್ತದೆ. ಫೋನ್ 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ