Realme Narzo N55: ಇಷ್ಟು ಕಡಿಮೆ ಬೆಲೆಗೆ ಎಷ್ಟೊಂದು ಅದ್ಭುತ ಫೀಚರ್ಸ್: ರಿಯಲ್ ಮಿಯಿಂದ ಅಚ್ಚರಿಯ ನಾರ್ಜೊ N55 ಫೋನ್ ಬಿಡುಗಡೆ

|

Updated on: Apr 13, 2023 | 1:01 PM

ಭಾರತದಲ್ಲಿ ರಿಯಲ್ ಮಿ ಸಂಸ್ಥೆ ಹೊಸ ರಿಯಲ್‌ ಮಿ ನಾರ್ಜೊ ಎನ್​ 55 (Realme Narzo N55) ಫೋನನ್ನು ಅನಾವರಣ ಮಾಡಿದೆ. ಇದು ಕಡಿಮೆ ಬೆಲೆಯ ಆಕರ್ಷಕ ಮೊಬೈಲ್ ಆಗಿದೆ. ಬರೋಬ್ಬರಿ 64 ಮೆಗಾಫಿಕ್ಸೆಲ್ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ನೀಡಲಾಗಿದೆ.

Realme Narzo N55: ಇಷ್ಟು ಕಡಿಮೆ ಬೆಲೆಗೆ ಎಷ್ಟೊಂದು ಅದ್ಭುತ ಫೀಚರ್ಸ್: ರಿಯಲ್ ಮಿಯಿಂದ ಅಚ್ಚರಿಯ ನಾರ್ಜೊ N55 ಫೋನ್ ಬಿಡುಗಡೆ
Realme Narzo N55
Follow us on

ಭಾರತದಲ್ಲಿ ಈಗೇನಿದ್ದರು ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳ (Budget Smartphone) ಕಾಲ. ತಿಂಗಳಿಗೆ ಕಡಿಮೆ ಎಂದರೂ ಮೂರರಿಂದ ನಾಲ್ಕು ಮೊಬೈಲ್​ಗಳು ಕಡಿಮೆ ಬೆಲೆಗೆ ಬಿಡುಗಡೆ ಆಗುತ್ತವೆ. ಇದರಲ್ಲಿ ರಿಯಲ್ ಮಿ (Realme) ಕಂಪನಿಯ ಫೋನ್​ಗಳಿಗೆ ಭರ್ಜರಿ ಬೇಡಿಕೆ ಇದೆ. ಇದಕ್ಕಾಗಿಯೆ ಕಂಪನಿ ಹೆಚ್ಚಾಗಿ 15,000 ರೂ. ಒಳಗೆ ಆಕರ್ಷಕ ಫೀಚರ್​ಗಳ ಸ್ಮಾರ್ಟ್​ಫೋನ್​ಗಳನ್ನು ಲಾಂಚ್ ಮಾಡುತ್ತಿದೆ. ಈ ಸಾಲಿಗೆ ಇದೀಗ ಮತ್ತೊಂದು ಮೊಬೈಲ್ ಸೇರಿದೆ. ಭಾರತದಲ್ಲಿ ರಿಯಲ್ ಮಿ ಸಂಸ್ಥೆ ಹೊಸ ರಿಯಲ್‌ ಮಿ ನಾರ್ಜೊ ಎನ್​ 55 (Realme Narzo N55) ಫೋನನ್ನು ಅನಾವರಣ ಮಾಡಿದೆ. ಇದು ಕಡಿಮೆ ಬೆಲೆಯ ಆಕರ್ಷಕ ಮೊಬೈಲ್ ಆಗಿದೆ. ಬರೋಬ್ಬರಿ 64 ಮೆಗಾಫಿಕ್ಸೆಲ್ ಕ್ಯಾಮೆರಾ, ಅತ್ಯುತ್ತಮ ಬ್ಯಾಟರಿ ನೀಡಲಾಗಿದೆ. ಈ ಫೋನಿನ ಕುರಿತ ಪೂರ್ಣ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?:

ರಿಯಲ್‌ ಮಿ ನಾರ್ಜೊ N55 ಸ್ಮಾರ್ಟ್‌ಫೋನ್‌ ಎರಡು ಸ್ಟೋರೇಜ್ ಆಯ್ಕೆಯಲ್ಲಿ ರಿಲೀಸ್ ಆಗಿದೆ. ಇದರ 4GB RAM + 64GB ರೂಪಾಂತರದ ಆಯ್ಕೆಗೆ ಕೇವಲ 10,999ರೂ. ಇದೆ. ಅಂತೆಯೆ 6GB RAM + 128GB ರೂಪಾಂತರದ ಆಯ್ಕೆಯು 12,999ರೂ. ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್‌ ಇದೇ ಏಪ್ರಿಲ್ 18 ರಿಂದ ಖರೀದಿಗೆ ಸಿಗಲಿದೆ. ಆದರೆ, ವಿಶೇಷ ಲೈವ್ ಆನ್‌ಲೈನ್ ಮಾರಾಟವನ್ನು ಏಪ್ರಿಲ್ 13 ರಂದು ಮಧ್ಯಾಹ್ನ 12 ಗಂಟೆಯಿಂದ ನಿಗದಿಪಡಿಸಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮತ್ತು ರಿಯಲ್ ಮಿಯ ಅಧಿಕೃತ ವೆಬ್​ಸೈಟ್ ಮೂಲಕ ಖರೀದಿಸಬಹುದು. ಈ ಆನ್‌ಲೈನ್‌ ಸೇಲ್‌ ಸಮಯದಲ್ಲಿ ಆಕರ್ಷಕ ಆಫರ್ ಘೋಷಿಸಲಾಗಿದೆ.

ಇದನ್ನೂ ಓದಿ
Fire-Boltt Pristine: ಮಹಿಳೆಯರಿಗಾಗಿಯೇ ಆಕರ್ಷಕ ವಿನ್ಯಾಸ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್
Lava Blaze 2: ಬಜೆಟ್ ದರಕ್ಕೆ ಬೆಸ್ಟ್ ಫೀಚರ್ಸ್ ನೀಡುತ್ತಿದೆ ಹೊಸ ಲಾವಾ ಫೋನ್
ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಭಾರತದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿ
Fire-Boltt Collide: ಟ್ರೆಂಡಿ ಮತ್ತು ಸ್ಮಾರ್ಟ್ ಆಗಿದೆ ಫೈರ್ ಬೋಲ್ಟ್ ಸ್ಮಾರ್ಟ್​ವಾಚ್

Vivo X Fold 2: ಗ್ಯಾಜೆಟ್ ಮಾರುಕಟ್ಟೆಯಲ್ಲಿ ಸ್ಪರ್ಧೆ ಸೃಷ್ಟಿಸಿದ ಫೋಲ್ಡಿಂಗ್ ಫೋನ್

ಫೀಚರ್ಸ್ ಏನು?:

ರಿಯಲ್‌ ಮಿ ನಾರ್ಜೊ N55 ಸ್ಮಾರ್ಟ್‌ಫೋನ್‌ 6.72 ಇಂಚಿನ ಐಪಿಎಸ್ ಎಲ್​ಸಿಟಿ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ವಿಶೇಷವಾಗಿ ಇದರಲ್ಲಿ ಮಿನಿ ಕ್ಯಾಪ್ಸುಲ್‌ ಎಂಬ ಫೀಚರ್ಸ್‌ ನೀಡಲಾಗಿದ್ದು, ಇದರ ಮೂಲಕ ಡಿಸ್ ಪ್ಲೇಯನ್ನು ನಿಮಗೆ ಬೇಕಾದಂತೆ ಸೆಟ್‌ ಮಾಡಲು ಅವಕಾಶ ನೀಡಲಿದೆ. ಮೀಡಿಯಾಟೆಕ್‌ ಹಿಲಿಯೋ G88 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 13 ಆಧಾರಿತ ರಿಯಲ್ ಮಿ UI ಔಟ್-ಆಫ್-ದಿ-ಬಾಕ್ಸ್ ನಲ್ಲಿ ರನ್‌ ಆಗಲಿದೆ. ಮೈಕ್ರೊ ಎಸ್​ಡಿ ಕಾರ್ಡ್ ಮೂಲಕ ಸಂಗ್ರಹಣೆ ವಿಸ್ತರಣೆ ಮಾಡಬಹುದು.

ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ ಬರೋಬ್ಬರಿ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಪಡೆದುಕೊಂಡಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ ಸೆಲ್ಫೀ ಮತ್ತು ವಿಡಿಯೋ ಕರೆಗಳಿಗಾಗಿ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ರಿಯಲ್‌ ಮಿ ನಾರ್ಜೊ N55 ಸ್ಮಾರ್ಟ್‌ಫೋನ್‌ ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದಕ್ಕೆ ತಕ್ಕಂತೆ 33W ಸೂಪರ್‌ವೂಕ್‌ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಕಂಪನಿ ಹೇಳುವ ಪ್ರಕಾರ ಈ ಸ್ಮಾರ್ಟ್‌ಫೋನ್‌ ಕೇವಲ 29 ನಿಮಿಷಗಳಲ್ಲಿ 0 ದಿಂದ 50% ವರೆಗೆ ಚಾರ್ಜ್ ಮಾಡಬಹುದಂತೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. ಬದಲಾಗಿ 5ಜಿ ಎಲ್​ಟಿಇ, ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಅನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Thu, 13 April 23