ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ (Amazon) ಇತ್ತೀಚೆಗೆ ಒಂದಲ್ಲ ಒಂದು ಆಕರ್ಷಕ ಆಫರ್ಗಳನ್ನು ನೀಡುತ್ತಿರುವ ಕಾರಣ ಬಳಕೆದಾರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಆ್ಯಪ್ ಅನ್ನು ಉಪಯೋಗಿಸುತ್ತಿದ್ದಾರೆ. ಆಗಾಗ ವಿಶೇಷ ಮೇಳಗಳನ್ನು ಹಮ್ಮಿಕೊಳ್ಳುವ ಅಮೆಜಾನ್‌ನಲ್ಲಿ ಮುಖ್ಯವಾಗಿ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ಗಳು ಮಾರಾಟ ಆಗುತ್ತವೆ. ಇದೀಗ ಅಮೆಜಾನ್‌ನಲ್ಲಿ ಅತಿ ಹೆಚ್ಚು ಮಾರಾಟವಾದ 5ಜಿ ಸ್ಮಾರ್ಟ್‌ಫೋನ್ ಯಾವುದು ಎಂಬ ವಿಚಾರ ಬೆಳಕಿಗೆ ಬಂದಿದೆ. ಶವೋಮಿ ಕಂಪನಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿದ ರೆಡ್ಮಿ 12 5G ಅಮೆಜಾನ್ ಇಂಡಿಯಾದಲ್ಲಿ ಮೊದಲ ಅತಿ ಹೆಚ್ಚು ಮಾರಾಟವಾದ 5G ಸ್ಮಾರ್ಟ್‌ಫೋನ್ ಆಗಿದೆಯಂತೆ.
ರೆಡ್ಮಿ 12 5G ಅಮೆಜಾನ್‌ನಲ್ಲಿ ಮೊದಲ ದಿನದ ಮಾರಾಟದಲ್ಲಿ ಹೆಚ್ಚು ಮಾರಾಟವಾದ 5G ಫೋನ್ ಎಂದು ಹೆಸರಿಸಿದೆ. ಇದು ಎಷ್ಟು ಫೋನ್ ಸೇಲ್ ಆಗಿದೆ ಎಂಬ ನಿಖರ ಸಂಖ್ಯೆಯನ್ನು ನಮೂದಿಸಿಲ್ಲ. ಆದರೆ, ಅಮೆಜಾನ್ ಇಂಡಿಯಾದಲ್ಲಿ ಮಾರಾಟವಾದ ಮೊದಲ ದಿನವೇ ಈ ಫೋನ್ ಸೋಲ್ಡ್ ಔಟ್ ಆಗಿದೆ ಎಂದು ಶವೋಮಿ ಬಹಿರಂಗಪಡಿಸಿದೆ. ಕಂಪನಿಯ ಪ್ರಕಾರ, ಈ ಸ್ಮಾರ್ಟ್ಫೋನ್ಗೆ ದೇಶದ ಎಲ್ಲಾ ಮೂಲೆಗಳಿಂದ ಆರ್ಡರ್ ಬಂದಿದೆ. ಭಾರತದಾದ್ಯಂತ 9,500 ವಿಭಿನ್ನ ಪಿನ್ ಕೋಡ್‌ಗಳಿಗೆ ಕಳುಹಿಸಲಾಗಿದೆಯಂತೆ.
ಕೇವಲ 10,999 ರೂ. ಗೆ ಖರೀದಿಸಿ 6000mAh ಬ್ಯಾಟರಿ, 50MP ಕ್ಯಾಮೆರಾದ ಈ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್
ರೆಡ್ಮಿ 12 5G ಮೂರು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಸಬಹುದು. ಇದರ 4GB+128GB ರೂಪಾಂತರಕ್ಕೆ 10,999 ರೂ., 6GB+128GB ರೂಪಾಂತರಕ್ಕೆ 12,499 ರೂ. ಮತ್ತು 8GB+256GB ರೂಪಾಂತರಕ್ಕೆ 14,999 ರೂ. ನಿಗದಿ ಮಾಡಲಾಗಿದೆ. ಇದನ್ನು ಅಮೆಜಾನ್ ಮಾತ್ರವಲ್ಲದೆ Mi.com, Mi Home, Mi Studio ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಖರೀದಿಸಬಹುದು. ರೆಡ್ಮಿ 12 5G ಜೊತೆ ರೆಡ್ಮಿ 12 4G ಆವೃತ್ತಿಯನ್ನು ಕೂಡ ರಿಲೀಸ್ ಮಾಡಲಾಗಿತ್ತು. ಇದರ 4GB+128GB ರೂಪಾಂತರಕ್ಕೆ ರೂ 8,999 ಮತ್ತು 6GB+ 128GB ರೂಪಾಂತರಕ್ಕೆ ರೂ 10,499 ಆಗಿದೆ.
ರೆಡ್ಮಿ 12 5G ಬಲಿಷ್ಠವಾದ ಮೊಟ್ಟ ಮೊದಲ ಸ್ನಾಪ್‌ಡ್ರಾಗನ್ 4 ಜೆನ್ 2 ಪ್ರೊಸೆಸರ್‌ನ ಬಲಯವನ್ನು ಹೊಂದಿದೆ. ಇದು ನಿಮಗೆ ಮೃದುವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ. ಕ್ಯಾಮೆರಾ ವಿಚಾರಕ್ಕೆ ಬಂದರೆ, ರೆಡ್ಮಿ 12 5G 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2-ಮೆಗಾಪಿಕ್ಸೆಲ್ ಆಲ್ಟ್ರಾ ವೈಡ್ ಕ್ಯಾಮೆರಾ ಮತ್ತು LED ಫ್ಲ್ಯಾಷ್ ಹೊಂದಿದೆ. ಮುಂಭಾಗದ ಕ್ಯಾಮರಾ 8 ಮೆಗಾಪಿಕ್ಸೆಲ್ ಆಗಿದೆ. ಎರಡೂ ಫೋನ್‌ಗಳು 5000mAh ಬ್ಯಾಟರಿಯನ್ನು ಹೊಂದಿದ್ದು ಅದು ಟೈಪ್ C USB ಪೋರ್ಟ್ ಮೂಲಕ 18W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ