AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಮಾರ್ಟ್​ಫೋನ್ ಬಳಕೆದಾರರಿಗೆ ಸರ್ಕಾರದಿಂದ ಎಚ್ಚರಿಕೆ: ಆಂಡ್ರಾಯ್ಡ್ ಬಳಕೆದಾರರು ಇಲ್ಲಿ ಗಮನಿಸಿ

Government alerts mobile users: "ಆಂಡ್ರಾಯ್ಡ್‌ನಲ್ಲಿ ಹಲವಾರು ದುರ್ಬಲತೆಗಳು ವರದಿಯಾಗಿದೆ, ಇದನ್ನು ಬಳಸಿಕೊಂಡು ಹ್ಯಾಕರ್​ಗಳು ಫೋನಿನಿಂದ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಾರೆ," ಎಂದು ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಹೇಳಿದೆ.

ಸ್ಮಾರ್ಟ್​ಫೋನ್ ಬಳಕೆದಾರರಿಗೆ ಸರ್ಕಾರದಿಂದ ಎಚ್ಚರಿಕೆ: ಆಂಡ್ರಾಯ್ಡ್ ಬಳಕೆದಾರರು ಇಲ್ಲಿ ಗಮನಿಸಿ
Android
Follow us
Vinay Bhat
|

Updated on: Aug 14, 2023 | 12:23 PM

ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In), ಆಂಡ್ರಾಯ್ಡ್ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಿದೆ. ಇತ್ತೀಚಿನ ಆಂಡ್ರಾಯ್ಡ್ 13 ಸೇರಿದಂತೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಹಲವಾರು ಆವೃತ್ತಿಗಳಲ್ಲಿ ದುರ್ಬಲತೆಗಳು ಕಂಡುಬಂದಿದೆ. ಇವುಗಳು ನಿಮ್ಮ ಸ್ಮಾರ್ಟ್​ಫೋನ್​ ಒಳಗಡೆ ಪ್ರವೇಶ ಪಡೆದು, ಸೂಕ್ಷ್ಮ ಮಾಹಿತಿಯನ್ನು ಕದಿಯಲು ಪ್ರಾರಂಭಿಸುತ್ತದೆ ಎಂದು ಸರ್ಕಾರ ಹೇಳಿದೆ.

CERT-In ಎಂಬುದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಭಾರತದಲ್ಲಿ ನಡೆಯುವ ಸೈಬರ್ ಅಟ್ಯಾಕ್ ಅನ್ನು ಸುರಕ್ಷಿತಗೊಳಿಸುವುದು ಇದರ ಗುರಿಯಾಗಿದೆ. ಹ್ಯಾಕಿಂಗ್ ಮತ್ತು ಫಿಶಿಂಗ್ ಸೇರಿದಂತೆ ಸೈಬರ್ ಭದ್ರತೆ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಇದು ಹೊಂದಿದೆ. CERT-In ಹೇಳಿರುವ ಪ್ರಕಾರ ಅತ್ಯಂತ ಜನಪ್ರಿಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಒಂದಾದ ಆಂಡ್ರಾಯ್ಡ್ OS ನ ಹಲವಾರು ಆವೃತ್ತಿಗಳಲ್ಲಿ ಅಪಾಯಗಳು ಕಂಡುಬಂದಿದೆ.

120W ಹೈಪರ್‌ ಚಾರ್ಜರ್, 50MP ಕ್ಯಾಮೆರಾ: ಶವೋಮಿ 12 ಪ್ರೊ ಫೋನ್ ಮೇಲೆ 38,000 ರೂ. ಡಿಸ್ಕೌಂಟ್

ಇದನ್ನೂ ಓದಿ
Image
ಭಾರತದಲ್ಲಿಂದು ಬಹುನಿರೀಕ್ಷಿತ ಟೆಕ್ನೋ ಪೊವಾ 5 ಸರಣಿ ಸ್ಮಾರ್ಟ್​ಫೋನ್ ಬಿಡುಗಡೆ: ಏನಿದೆ ಫೀಚರ್ಸ್
Image
ಕೇವಲ 10,999 ರೂ. ಗೆ ಖರೀದಿಸಿ 6000mAh ಬ್ಯಾಟರಿ, 50MP ಕ್ಯಾಮೆರಾದ ಈ ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್
Image
ಆಗಸ್ಟ್ 18 ರಂದು ಮೊದಲ ಸೇಲ್ ಕಾಣಲಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5: ಬೆಲೆ ಎಷ್ಟು?
Image
ಝೆಡ್​​​ಟಿಇ ಬಿಡುಗಡೆ ಮಾಡಿದೆ ಹೊಸ ಸ್ಮಾರ್ಟ್​ಫೋನ್

“ಆಂಡ್ರಾಯ್ಡ್‌ನಲ್ಲಿ ಹಲವಾರು ದುರ್ಬಲತೆಗಳು ವರದಿಯಾಗಿದೆ, ಇದನ್ನು ಬಳಸಿಕೊಂಡು ಹ್ಯಾಕರ್​ಗಳು ಫೋನಿನಿಂದ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಾರೆ,” ಎಂದು ಹೇಳಿದೆ.

CERT-In ಹೈಲೈಟ್ ಮಾಡಿದ ದುರ್ಬಲತೆಗಳ ಪಟ್ಟಿ ಇಲ್ಲಿದೆ:

– CVE-2020-29374 – CVE-2022-34830 -CVE-2022-40510 – CVE-2023-20780 – CVE-2023-20950 -209623 – CVE-2023-21133 – CVE-2023-21134 – CVE-2023-21140

CVE-2023-21142 – CVE- 2023-21264 – CVE-2023-21267 – CVE-2023-21267 – CVE-312023

CVE -2023-21270 – CVE-2023-21271 – CVE-2023-21272 – CVE-2023-21273 – CVE-2023-21274 -CVE-2023-21275 – CVE-20275 – CVE-2026-212027 023 -21278 – CVE-2023-21279 – CVE-2023-21280 – CVE-2023-21281 – CVE-2023-21282 – CVE-2023-21283 – CVE-2023-21284 – CVE-2023-21285 – CVE-2023-21286 – CVE-2023-212823 – CVE-281-2023-21289 – CVE-2023-21290 – CVE-2023-21292 – CVE-2023-21626 – CVE-2023-22666 – CVE-2023-28537 CVE-20523-

CERT ಪ್ರಕಾರ ಈ ದೋಷಗಳು ಆಂಡ್ರಾಯ್ಡ್ ಆವೃತ್ತಿ 10, 11, 12, 12L ಮತ್ತು 13 ಮೇಲೆ ಪರಿಣಾಮ ಬೀರುತ್ತವೆ. ಫ್ರೇಮ್‌ವರ್ಕ್, ಆಂಡ್ರಾಯ್ಡ್ ರನ್‌ಟೈಮ್, ಸಿಸ್ಟಮ್ ಕಾಂಪೊನೆಂಟ್, ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್‌ಗಳು, ಕರ್ನಲ್, ಆರ್ಮ್ ಕಾಂಪೊನೆಂಟ್‌ಗಳು ಮತ್ತು ಕ್ವಾಲ್ಕಂನಲ್ಲಿನ ದೋಷಗಳಿಂದ ಅವು ಉಂಟಾಗಿವೆ ಎಂದು ಹೇಳಿದೆ.

ರಕ್ಷಣೆ ಹೇಗೆ?:

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ಗಳು ಸುರಕ್ಷಿತವಾಗಿರಿಸಲು, ಬಳಕೆದಾರರು ತಮ್ಮ ಸಾಧನಗಳನ್ನು ಇತ್ತೀಚಿನ ಭದ್ರತಾ ಆವೃತ್ತಿಗೆ ಅಪ್ಡೇಟ್ ಮಾಡುವಂತೆ CERT-In ಶಿಫಾರಸು ಮಾಡಿದೆ. ಇದಕ್ಕಾಗಿ ಗೂಗಲ್ ಈಗಾಗಲೇ ಅಪ್ಡೇಟ್ ಬಿಡುಗಡೆ ಮಾಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ಶಿವರಾಜ್ ಕುಮಾರ್​ಗಾಗಿ ಸಿನಿಮಾ ನಿರ್ಮಿಸುವಾಸೆ ವ್ಯಕ್ತಪಡಿಸಿದ ಯಶ್ ತಾಯಿ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ