AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

August Horoscope 2025: ಆಗಸ್ಟ್ ಮಾಸ ಭವಿಷ್ಯ, ಈ ತಿಂಗಳಿನಲ್ಲಿ ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ?

2025ರ ಆಗಸ್ಟ್ ತಿಂಗಳಲ್ಲಿ ಗ್ರಹಗಳ ಬದಲಾವಣೆ ಸ್ಥೂಲ ಸೂಕ್ಷ್ಮವಾಗಿ ಆಗಲಿದೆ. ಮೇಲ್ನೋಟಕ್ಕೆ ಅರಿಯುವುದಾದರೆ, ಗುರು ಮಿಥುನ, ಶುಕ್ರ ಕರ್ಕ, ಕೇತು, ಸೂರ್ಯ, ಬುಧ ಸಿಂಹ, ಮಂಗಳ‌ ಕನ್ಯಾ, ರಾಹು ಕುಂಭ, ಶನಿ ಮೀನ. ಇವೆಲ್ಲವೂ ಮಿತ್ರರು, ಶತ್ರುಗಳ ರಾಶಿಯಲ್ಲಿ ಇದ್ದು ಮನುಷ್ಯ ಪುಣ್ಯ ಅಪುಣ್ಯಕ್ಕೆ ಯೋಗ್ಯವಾದ ಫಲವನ್ನು ಕೊಡುವರು. ರಾಶಿಯ ಅಧಿಪತಿಯ ಆರಾಧನೆಯಿಂದ ಉನ್ನತಿಗೆ ಏರುವ ಮಾರ್ಗ ಗೊತ್ತಾಗಲಿದೆ. ಸತ್ಕಾರವೂ ಸನ್ಮಾರ್ಗವನ್ನೇ ತೋರಿಸುವುದು. ಎಲ್ಲರಿಗೂ ಗ್ರಹಗಳು ಏಕಾದಶ ಸ್ಥಾನದ ಫಲವನ್ನು ಕೊಡಲಿ.

August Horoscope 2025: ಆಗಸ್ಟ್ ಮಾಸ ಭವಿಷ್ಯ, ಈ ತಿಂಗಳಿನಲ್ಲಿ ಯಾವ ರಾಶಿಗೆ ಶುಭ? ಯಾವ ರಾಶಿಗೆ ಅಶುಭ?
Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on:Jul 29, 2025 | 12:57 PM

Share

ಮೇಷ ರಾಶಿ : ರಾಶಿ ಚಕ್ರದ ಮೊದಲೇ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಶುಭ. ಅಷ್ಟಮ ಹಾಗೂ ಅಷ್ಟಮಾಧಿಪತಿ ಷಷ್ಠದಲ್ಲಿ. ಎಲ್ಲವನ್ನೂ ಮಾಡುವ ಉತ್ಸಾಹ ಬಲ ಎಲ್ಲವೂ ಇರಲಿದೆ. ಶತ್ರುಗಳನ್ನು ಬಹಳ ಚಾಣಾಕ್ಷತೆಯಿಂದ ಗೆಲ್ಲುವಿರಿ. ಕಾನೂನು ವ್ಯವಹಾರದಲ್ಲಿ ಲೋಪವಾಗದಂತೆ ನೋಡಿಕೊಳ್ಳುವಿರಿ. ನಿಮ್ಮ ಸಮರ್ಥನೆಯನ್ನು ಕಠೋರವಾಗಿ ಮಾಡಿಕೊಳ್ಳುವಿರಿ. ಕುಜನ ದೃಷ್ಟಿ ಇರುವ ಕಾರಣ ದೇಹ ಸದೃಢವಾಗಲಿದೆ. ಸ್ಕಂದನು ರಾಶಿಯ ಅಧಿಪತಿಯಾಗಿ ಅಭೀಷ್ಟಗಳನ್ನು ಪೂರೈಸುವನು. ನಿಮಗೆ ಕುಜ ದಶೆ ಇದ್ದರೆ ಉತ್ತಮ.

ವೃಷಭ ರಾಶಿ :ಆಗಸ್ಟ್ ತಿಂಗಳು ನಿಮಗೆ ಮಂಗಲಪ್ರದವಾಗಿದೆ. ರಾಶಿಯ ಅಧಿಪತಿ ಹಾಗೂ ಷಷ್ಠಾಧಿಪತಿ ದ್ವಿತೀಯದಲ್ಲಿ. ಸುಳ್ಳು ಸೇರಿಸಿ ಮಾತನಾಡುವುದು ಹೆಚ್ಚಾಗುವುದು. ಸ್ತ್ರೀದ್ವೇಷವನ್ನು ಕಟ್ಟಿಕೊಳ್ಳುವಿರಿ. ಭೋಗ ವಸ್ತುಗಳಿಂದ ಸುಖ. ವಿದ್ಯಾಭ್ಯಾಸದಿಂದ ಒಳ್ಳೆಯ ಕೆಲಸ ಸಿಗುವುದು. ಸಾಹಿತ್ಯ ಕ್ಷೇತ್ರದಿಂದ ಗೌರವ ಪ್ರಾಪ್ತಿ. ವಿದೇಶ ಸುತ್ತುವ, ಮನೋಹರ ಪ್ರದೇಶಗಳ ಸುತ್ತಾಟ ಮಾಡುವಿರಿ. ಗಾಯವು ಬೇರೆ ರೂಪವನ್ನು ಪಡೆಯಬಹುದು. ಶುಕ್ರ ದಶೆ ಪೂರ್ಣ ಶುಭ ನೀಡದು. ಸಂಜೆಯಲ್ಲಿ ಮಹಾಲಕ್ಷ್ಮಿ ಭಜಿಸಿ.

ಮಿಥುನ ರಾಶಿ :ರಾಶಿ ಚಕ್ರದ ಮೂರನೇ ರಾಶಿಯವರಿಗೆ ಈ ತಿಂಗಳು ಶುಭಾಶುಬಭ. ರಾಶಿಯ ಅಧಿಪತಿ ಚತುರ್ಥಾಧಿಪತಿ ತೃತೀಯದಲ್ಲಿ ಸೂರ್ಯನ ಜೊತೆ ಸೂರ್ಯನ ರಾಶಿಯಲ್ಲಿ. ಕೇತುವೂ ಜೊತೆಗೆ. ಸಹೋದರರ ನಡುವೆ ವೈಷಮ್ಯ. ಕುಟುಂಬ ನಿಮ್ಮ ಜೊತೆ ಇರಲಿದೆ. ಅಲಂಕಾರಕ್ಕಾಗಿ ಹಣ ವ್ಯಯ. ವಾಹನದಿಂದ ನಷ್ಟ ಮಾಡಿಕೊಳ್ಳುವಿರಿ. ಒತ್ತಡ ಮಾಡಿಕೊಳ್ಳದೇ ಇರಲು ಆಗದು. ಬುಧ ದಶೆಯಿಂದ ನಿಮಗೆ ವಿದ್ಯಾಂತರ ಹಾಗೂ ಪ್ರಭಾವಿಗಳ ಭೇಟಿಯಾಗುವುದು. ಲಕ್ಷ್ಮೀನಾರಾಯಣ ಆರಾಧನೆಯಿಂದ ವಿವಾಹ ಕಾರ್ಯಕ್ಕೆ ಬಂದ‌ ವಿಘ್ನ ದೂರ.

ಕರ್ಕಾಟಕ ರಾಶಿ :ಇದು ನಾಲ್ಕನೇ ರಾಶಿಯಾಗಿದ್ದು ಈ ತಿಂಗಳಲ್ಲಿ ನಿಮಗೆ ಅಶುಭ. ಬಾಹ್ಯವಾಗಿ ಆಂತರಂಗಿಕವಾಗಿವ ಕೆಲವು ನಿಮಿತ್ತಗಳು ಆಗಾಗ ಆಗುವುದನ್ನು ನಿರ್ಲಕ್ಷ್ಯ ಮಾಡುವಿರಿ. ಸ್ವಜನರ ವೈರವು ನೇರವಾಗಿ ಕಾಣಿಸುವುದು. ಸಿಹಿಯಾದ ಮಾತನ್ನು ಕಹಿಯಾಗಿ ಆಡಿವಿರಿ. ವಿವಾಹ ಮಾತುಕತೆಗಳು ಕೂಡಲೇ ನಿರ್ಧಾರಕ್ಕೆ ಬರದು. ರೋಗವು ಚಿಕಿತ್ಸೆಯಿಂದ ಪರಿಹಾರವಾಗಲಿದೆ. ರಾಶಿಯ ಅಧಿಪತಿಯ ದಶೆ ಪೂರ್ಣ ಶುಭವಲ್ಲ. ಶಾಂತಿಕಾ ಪರಮೇಶ್ವರಿಯನ್ನು ಉಪಾಸಿಸಿ.

ಸಿಂಹ ರಾಶಿ :ರಾಶಿ ಚಕ್ರದ ಐದನೇ ರಾಶಿ ಇದು. ರಾಶಿಯ ಅಧಿಪತಿ ಸೂರ್ಯ ತಿಂಗಳ ಮಧ್ಯದಲ್ಲಿ ಸ್ವ ಸ್ಥಾನಕ್ಕೆ ಬರಲಿದ್ದಾನೆ. ನಿಮ್ಮಲ್ಲಿ ಮಹತ್ತ್ವದ ಬದಲಾವಣೆಯಾಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸುವಿರಿ. ವಂಚನೆಯನ್ನು ಮಾಡುವ ಮನಸ್ಸು ಬಾರದು. ಆರೋಗ್ಯದ ಕಿರಿಕಿರಿ ಕಂಡದರೂ ಕಡಿಮೆಯಾಗಲಿದೆ. ಸರ್ಕಾರದ ಹುದ್ದೆಗಳಲ್ಲಿ ಪದೋನ್ನತಿಯಾಗುವುದು. ಮಾತು ನಿಮ್ಮ ನೈಜತೆಯನ್ನು ಹೊರಹಾಕುವುದು. ರವಿ ದಶೆ ಬುಧ ಭುಕ್ತಿಗೆ ಶ್ರೇಯಸ್ಸು. ಸೂರ್ಯನು ನಮಸ್ಕಾರದಿಂದ ಪ್ರಸನ್ನನಾಗುವನು.

ಕನ್ಯಾ ರಾಶಿ :ಆರನೇ ರಾಶಿಯವರಿಗೆ ಆಗಸ್ಟ್ ತಿಂಗಳು ಶುಭಾಶುಭ. ಆರಂಭದ ದಿನಗಳು ಲಾಭದಾಯಕವಾದರೂ ಅನಂತರ ಸಂದಿಗ್ಧತೆ ಎದುರಾಗುವುದು. ಬಾಂಧವರ ವಿರೋಧವಿದ್ದರೂ ತಂದೆ ನಿಮ್ಮ ಪರವಾಗಿ ಇರುವ ಕಾರಣ ನಿಶ್ಚಿಂತರು. ಆದರೆ ಅನಂತರ ಹಾಗಾಗದು. ದ್ವಾದಶ ಸ್ಥಾನಕ್ಕೆ ಬರುವುದರಿಂದ ಉದ್ಯೋಗ ಉದ್ಯಮ ನಿಮ್ಮ ಯೋಜನೆಯಂತೆ ಇರದು. ಆತ್ಮವಿಶ್ವಾಸ ಪೂರ್ಣವಾಗಿ ಇರದು. ಇದ್ದರೂ ಒಳ್ಳೆಯ ಕಾರ್ಯದಲ್ಲಿ ಇರದು. ರಾಶ್ಯಧಿಪತಿಯ ದಶೆ ಶುಭವೇ.

ತುಲಾ ರಾಶಿ :ಏಳನೇ ರಾಶಿವರಿಗೆ ಈ ತಿಂಗಳಲ್ಲಿ ಶುಭ. ಅಧಿಪತಿಯು ನವಮ ಸ್ಥಾನದಲ್ಲಿ ಇದ್ದು ಆರೋಗ್ಯ ಸುಧಾರಣೆ ಮಾಡಿಸುವನು. ಕಲಾವಿದರು ಗೌರವಕ್ಕೆ ಪಾತ್ರರಾಗುವರು. ಸುಖಭೋಗಗಳಲ್ಲಿ ಆಸಕ್ತಿ ಹಾಗೂ ಎಲ್ಲವನ್ನೂ ಪಡೆಯುವಿರಿ. ಶುಕ್ರ ದಶೆಯಿಂದ ನಿಮಗೆ ಅತಿ ಹೆಚ್ಚು ಪ್ರಯೋಜನವಾಗಲಿದೆ‌. ಸ್ಪರ್ಧಾತ್ಮ ವಿಚಾರದಲ್ಲಿ ಸ್ತ್ರೀಯರಿಂದ ಪರಾಜಿತರಾಗುವಿರಿ. ವ್ಯಾಪಾರ ವಹಿವಾಟಿಗೆ ಕೂಲಂಕಷವಾಗಿ ಚರ್ಚೆ ಮಾಡುವಿರಿ. ಗುರವಿನ ದೃಷ್ಟಿ ನಿಮ್ಮ ರಾಶಿಯ ಮೇಲೆ ಇರುವುದರಿಂದ ಕ್ಲಿಷ್ಟ ಸ್ಥಿತಿ ಬಂದರೂ ಹೆದರುವುದಿಲ್ಲ.

ವೃಶ್ಚಿಕ ರಾಶಿ :ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಅಶುಭ. ಸಾರ್ವಜನಿಕರಿಂದ ನಿಮ್ಮ ಕಾರ್ಯಕ್ಕೆ ಅಪಪ್ರಚಾರ ಸಿಗಲಿದೆ. ತಪ್ಪು ಭಾವನೆಯೂ ಬರದೇ ಧೈರ್ಯದಿಂದ ಮಾಡುವಿರಿ. ತಂದೆಯಿಂದ ನಿಮಗೆ ಸಹಕಾರವೂ ಸಿಗಲಿದೆ. ಸರ್ಕಾರದ ಕಾರ್ಯದಲ್ಲಿ ತಡೆ. ಸ್ನೇಹಿತರು ನಿಮ್ಮ ಸಹಾಯಕ್ಕೆ ಬರುವರು. ನಿಮ್ಮ ಬಯಕೆಯನ್ನು ಪೂರೈಸಿಕೊಳ್ಳುವಿರಿ. ಉನ್ನತ ಸ್ಥಾನ ಸಿಗಲಿದ್ದು, ಉತ್ತಮವಾಗಿದೆ ಎನ್ನುವಂತಿಲ್ಲ. ಕುಜ ದಶೆ ನಿಮಗೆ ಶ್ರೇಯಸ್ಸು ತಂದುಕೊಡುವುದು. ಸುಬ್ರಹ್ಮಣ್ಯನ ಆರಾಧನೆಯಿಂದ ಸಮಸ್ಯೆಗೆ ಪರಿಹಾರ ಸಿಗಲಿದೆ.

ಧನು ರಾಶಿ :ಆಗಸ್ಟ್ ತಿಂಗಳಲ್ಲಿ ಈ ರಾಶಿಯವರಿಗೆ ಶುಭ. ರಾಶಿಯ ಅಧಿಪತಿ ಗುರು ಸಪ್ತಮದಲ್ಲಿ ಅಂದರೆ ಶತ್ರುವಿನ ರಾಶಿಯಲ್ಲಿ ಮತ್ತೊಂದು ಶತ್ರುವಿನ ಸಂಯೋಗದಿಂದ ಇರಲಿದ್ದಾನೆ. ಸಾಮಾಜಿಕ ಜೀವನದಲ್ಲಿ ವಿರೋಧಗಳು ನಿಮಗೆ ಬರಲಿದ್ದು ಎದುರಿಸುವ ಚಾಣಾಕ್ಷತೆಯೂ ಇರಲಿದೆ. ಪಾಲುದಾರರ ಜೊತೆ ವಾಗ್ವಾದ, ಹೊಂದಾಣಿಕೆಯ ಕೊರತೆ ಕಾಣಿಸುವುದು. ಸುಂದರ ಸ್ಥಳ ಪ್ರವಾಸ, ಸುಂದರಿಯೂ ಬುದ್ಧಿವಂತೆಯೂ ಆದ ಸ್ತ್ರೀಯರ ಸಹವಾಸ ಇರುವುದು.

ಮಕರ ರಾಶಿ :ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಆಗಸ್ಟ್ ತಿಂಗಳಲ್ಲಿ ಶುಭ. ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದು ಉತ್ತಮ‌ ಸ್ಥಾನಕ್ಕೆ ಬೇಕಾದ ಎಲ್ಲ ಅನುಕೂಲತೆಯನ್ನು ಮಾಡಿಕೊಡುವನು‌. ನಕಾರಾತ್ಮಕ ಆಲೋಚನೆಗೆ ಅವಕಾಶ ಕೊಡದೇ ಧೈರ್ಯದಿಂದ ಮುನ್ನಡೆಯುವಿರಿ‌‌. ಯಾರ ಜೊತೆಗಾದರೂ ನಿಮ್ಮ ಸಂವಹನ ದಿಟ್ಟತನದಿಂದ ಇರಲಿದೆ. ಸಹೋದರ ನಡುವೆ ಸಾಮರಸ್ಯ, ನೌಕರರಿಂದ ನಿಮಗೆ ಸಮಾಧಾನ. ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಧನಲಾಭ. ಶನಿ ದಶೆ ನಿಮಗೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಶಿವಕವಚವನ್ನು ಪಠಿಸಿ.

ಕುಂಭ ರಾಶಿ :ಈ ತಿಂಗಳು ರಾಶಿಯ ಅಧಿಪತಿ ದ್ವಿತೀಯದಲ್ಲಿ ಇದ್ದು ನಿಮಗೆ ಮಿಶ್ರಫಲ. ಹೂಡಕೆಯಿಂದ ಹಣವನ್ನು ಅಧಿಕವಾಗಿ ಗಳಿಸಲಾಗದು. ಮಾತಿನ ಶಕ್ತಿಯ ಇರದೇ ಯಾವ ಕೆಲಸವೂ ಆಗದು. ಬೇಸರವೂ ಆಗಿದ್ದು, ಹೇಳಿಕೊಳ್ಳದ ಸ್ಥಿತಿ ಇರಲಿದೆ. ಇನ್ನು ಆಹಾರ ಸ್ವೀಕಾರದಲ್ಲಿ ಸಮಯ ಸರಿಯಾಗಿ ಇರದೇ ಅನಾರೋಗ್ಯದಿಂದ ಬಳಲುವಿರಿ. ಕುಟುಂಬದ ಜೊತೆ ಇರಲು ಬಹಳ ಆಸಕ್ತಿ ಇರದು. ಮಕ್ಕಳ ಬಗ್ಗೆ ಆಸಕ್ತಿ ಇರದು. ಶನಿಸ್ತೋತ್ರವನ್ನು ಮಾಡಿ.

ಮೀನ ರಾಶಿ :ಆಗಸ್ಟ್ ತಿಂಗಳು ನಿಮಗೆ ಹೆಚ್ಚು ಶುಭ. ರಾಶಿಯ ಅಧಿಪತಿ ಗುರುವಿನ ಸ್ಥಾನ ಚತುರ್ಥದಲ್ಲಿ ಇದ್ದು ತಾಯಿಯಿಂದ ನಿಮಗೆ ನಿರಪೇಕ್ಷಿತ ಸಹಾಯ ಸಿಗಲಿದೆ. ದೊಡ್ಡ ಮನೆಯಲ್ಲಿ ಕೆಲವು ಕಾಲ ವಾಸ ಮಾಡುವಿರಿ. ಬಂಧುಗಳ ಮನೆಯಲ್ಲಿ ಕೆಲವು ಕಾಲ ವಾಸ ಮಾಡುವ ಸ್ಥಿತಿ ಬರಲಿದೆ. ನೀವಾಗಿಯೇ ಅಲ್ಲಿಂದ ಹೊರಡುವಿರಿ. ಮನಸ್ಸನ್ನು ಶಾಂತವಾಗಿ ಇರಿಕೊಳ್ಳುವುದು ನಿಮಗೆ ಗೊತ್ತಿದೆ. ಉತ್ತಮ ನಡವಳಿಕೆಯಿಂದ ಪ್ರಶಂಸೆ. ಶನಿಯು ನಿಮ್ಮ ಮನಸ್ಸನ್ನು ವಿಚಲಿತ ಮಾಡಬಹುದು. ಗುರುದೆಶೆ ನಿಮಗೆ ಪರಿವರ್ತನೆ ತರಲಿದೆ. ವಿಷ್ಣುಸ್ತೋತ್ರವನ್ನು ಮಾಡುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

Published On - 9:49 pm, Mon, 28 July 25

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್