108MP ಕ್ಯಾಮೆರಾ, 67W ಫಾಸ್ಟ್ ಚಾರ್ಜರ್: ರಿಯಲ್ ಮಿ 11 ಫೀಚರ್ಸ್ ಬಹಿರಂಗ ಪಡಿಸಿದ ಕಂಪನಿ

Realme 11 and Realme 11X: ಭಾರತೀಯ ಮಾರುಕಟ್ಟೆಯಲ್ಲಿ ರಿಯಲ್ ಮಿ 11 ಮತ್ತು ರಿಯಲ್ ಮಿ 11X ಫೋನ್‌ಗಳ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ರಿಯಲ್ ಮಿ 11 ಪ್ರಾಥಮಿಕ ಕ್ಯಾಮೆರಾದಲ್ಲಿ ಸ್ಯಾಮ್​ಸಂಗ್ HM6 ಸಂವೇದಕವನ್ನು ಅಳವಡಿಸಲಾಗಿದೆ ಎಂದು ಕಂಪನಿ ಹೇಳಿದೆ.

108MP ಕ್ಯಾಮೆರಾ, 67W ಫಾಸ್ಟ್ ಚಾರ್ಜರ್: ರಿಯಲ್ ಮಿ 11 ಫೀಚರ್ಸ್ ಬಹಿರಂಗ ಪಡಿಸಿದ ಕಂಪನಿ
Realme 11
Follow us
Vinay Bhat
|

Updated on: Aug 14, 2023 | 2:41 PM

ಎರಡು ತಿಂಗಳ ಹಿಂದೆ ಪ್ರಸಿದ್ಧ ರಿಯಲ್ ಮಿ ಸಂಸ್ಥೆ ಭಾರತದಲ್ಲಿ ರಿಯಲ್ ಮಿ 11 ಪ್ರೊ ಸರಣಿಯನ್ನು ಅನಾವರಣಗೊಳಿಸಿತ್ತು. ಇದರಲ್ಲಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿತ್ತು. ಇದೀಗ ಕಂಪನಿ ಈ ಸರಣಿಯ ಅಡಿಯಲ್ಲಿ ರಿಯಲ್ ಮಿ 11 (Realme 11) ಮತ್ತು ರಿಯಲ್ ಮಿ 11X ಫೋನನ್ನು ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ರಿಯಲ್ ಮಿ 11 5G ಸ್ಮಾರ್ಟ್​ಫೋನ್ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 67W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ ಎಂದು ಕಂಪನಿ ಅಧಿಕೃತವಾಗಿ ಹೇಳಿದೆ. ರಿಯಲ್ ಮಿ 11X ಸಹ ಹೆಚ್ಚಿನ ವೇಗದ 5G ಬ್ರೌಸಿಂಗ್ ಮತ್ತು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆಯಂತೆ.

ಭಾರತೀಯ ಮಾರುಕಟ್ಟೆಯಲ್ಲಿ ರಿಯಲ್ ಮಿ 11 ಮತ್ತು ರಿಯಲ್ ಮಿ 11X ಫೋನ್‌ಗಳ ಬಿಡುಗಡೆ ದಿನಾಂಕವನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ. ರಿಯಲ್ ಮಿ 11 ಪ್ರಾಥಮಿಕ ಕ್ಯಾಮೆರಾದಲ್ಲಿ ಸ್ಯಾಮ್​ಸಂಗ್ HM6 ಸಂವೇದಕವನ್ನು ಅಳವಡಿಸಲಾಗಿದೆ ಎಂದು ಕಂಪನಿ ಹೇಳಿದೆ. ಜೊತೆಗೆ 3x ಇನ್-ಸೆನ್ಸಾರ್ ಜೂಮ್, 3X ಆಪ್ಟಿಕಲ್ ಝೂಮ್‌ನೊಂದಿಗೆ ಅನಾವರಣಗೊಳ್ಳಲಿದೆ. ರಿಯಲ್ ಮಿಯ ಈ ಫೋನಿನಲ್ಲಿ ಫೋಕಸ್ ಆಯ್ಕೆಯನ್ನು ಹೆಚ್ಚಿಸಲಾಗಿದೆ. ಕ್ಯಾಮೆರಾವು ಟ್ರ್ಯಾಂಕ್ವಿಲ್, ಕ್ರಿಸ್ಪ್ ಮತ್ತು ಸಿನೆಮ್ಯಾಟಿಕ್ ಸೇರಿದಂತೆ ಹೊಸ ಹೊಸ ಫಿಲ್ಟರ್‌ಗಳನ್ನು ಸಹ ಒಳಗೊಂಡಿದೆ.

ಆಗಸ್ಟ್ 18 ರಂದು ಮೊದಲ ಸೇಲ್ ಕಾಣಲಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5: ಬೆಲೆ ಎಷ್ಟು?

ಇದನ್ನೂ ಓದಿ
Image
ಟೆಕ್ನೋ ಪೋವಾ 5, ಪೋವಾ 5 ಪ್ರೊ ಬೆಲೆ, ಲಭ್ಯತೆ ಬಗ್ಗೆ ಬಹಿರಂಗ ಪಡಿಸಿದ ಕಂಪನಿ
Image
ಸ್ಮಾರ್ಟ್​ಫೋನ್ ಬಳಕೆದಾರರಿಗೆ ಸರ್ಕಾರದಿಂದ ಎಚ್ಚರಿಕೆ: ಆಂಡ್ರಾಯ್ಡ್ ಬಳಕೆದಾರರು ಇಲ್ಲಿ ಗಮನಿಸಿ
Image
ಭಾರತದಲ್ಲಿಂದು ಬಹುನಿರೀಕ್ಷಿತ ಟೆಕ್ನೋ ಪೊವಾ 5 ಸರಣಿ ಸ್ಮಾರ್ಟ್​ಫೋನ್ ಬಿಡುಗಡೆ: ಏನಿದೆ ಫೀಚರ್ಸ್
Image
ಕೇವಲ 10,999 ರೂ. ಗೆ ಖರೀದಿಸಿ 6000mAh ಬ್ಯಾಟರಿ, 50MP ಕ್ಯಾಮೆರಾದ ಈ ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್

67W ಚಾರ್ಜಿಂಗ್ ವೇಗದ ಚಾರ್ಜರ್ ನೀಡಲಾಗಿದ್ದು, ಇದು 17 ನಿಮಿಷಗಳಲ್ಲಿ 50 ಪ್ರತಿಶತ ಚಾರ್ಜ್ ಮತ್ತು 47 ನಿಮಿಷಗಳಲ್ಲಿ 100 ಪ್ರತಿಶತ ಬ್ಯಾಟರಿ ಫುಲ್ ಮಾಡುತ್ತದೆ. ಈ ಫೋನ್ 5,000mAh ಬ್ಯಾಟರಿಯನ್ನು ಒಳಗೊಂಡಿದೆ. ಬಿಡುಗಡೆಯ ಮೊದಲು, ರಿಯಲ್ ಮಿ 11 5G ವಿನ್ಯಾಸವನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಈ ಫೋನ್ ಐಫೋನ್ 12 ನಿಂದ ಪ್ರೇರಿತವಾದ ಫ್ಲಾಟ್ ಎಡ್ಜ್‌ಗಳನ್ನು ಒಳಗೊಂಡಿದೆ. ಪವರ್ ಬಟನ್‌ನಲ್ಲಿ ಅಳವಡಿಸಲಾಗಿರುವ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಕೆಳಭಾಗದಲ್ಲಿ 3.5mm ಆಡಿಯೋ ಜ್ಯಾಕ್ ಅನ್ನು ಪೋಸ್ಟರ್ ಮೂಲಕ ತಿಳಿದುಬಂದಿದೆ. ಮುಂಭಾಗವು ಸೆಲ್ಫಿ ಕ್ಯಾಮೆರಾಕ್ಕಾಗಿ ಹೋಲ್-ಪಂಚ್ ಕಟೌಟ್ ಅನ್ನು ನೀಡಲಾಗಿದೆ.

Realme 11 5G 8GB RAM ಮತ್ತು 256GB ಸಂಗ್ರಹಣೆಯೊಂದಿಗೆ ಜೋಡಿಸಲಾದ ಮೀಡಿಯಾಟೆಕ್ ಡೈಮೆನ್ಸಿಟಿ 6100+ SoC ನಿಂದ ಕಾರ್ಯನಿರ್ವಹಿಸುತ್ತದೆ. 6.72-ಇಂಚಿನ ಪೂರ್ಣ-HD+ AMOLED ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್ 5.2, ಮತ್ತು NFC ಇದೆ. ರಿಯಲ್ ಮಿ 11 ಮತ್ತು ರಿಯಲ್ ಮಿX ಭಾರತದಲ್ಲಿ 20,000 ರೂ. ಕ್ಕಿಂತ ಕಡಿಮೆ ಬೆಲೆಯನ್ನು ಬಿಡುಗಡೆ ಆಗುವ ನಿರೀಕ್ಷೆಯಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್