ಟೆಕ್ನೋ ಪೋವಾ 5, ಪೋವಾ 5 ಪ್ರೊ ಬೆಲೆ, ಲಭ್ಯತೆ ಬಗ್ಗೆ ಬಹಿರಂಗ ಪಡಿಸಿದ ಕಂಪನಿ

Tecno Pova 5 and Tecno Pova 5 Pro Price: ಪೋವಾ 5 ಸರಣಿಯ ಬೇಸ್ ಮತ್ತು ಪ್ರೊ ಮಾದರಿಗಳ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು AI ಲೆನ್ಸ್ ಜೊತೆಗೆ LED ಫ್ಲ್ಯಾಶ್ ಘಟಕವನ್ನು ಒಳಗೊಂಡಿವೆ. ಪೊವಾ 5 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಂವೇದಕವನ್ನು ಹೊಂದಿದೆ.

ಟೆಕ್ನೋ ಪೋವಾ 5, ಪೋವಾ 5 ಪ್ರೊ ಬೆಲೆ, ಲಭ್ಯತೆ ಬಗ್ಗೆ ಬಹಿರಂಗ ಪಡಿಸಿದ ಕಂಪನಿ
tecno pova 5 series
Follow us
|

Updated on:Aug 14, 2023 | 1:01 PM

ಪ್ರಸಿದ್ಧ ಟೆಕ್ನೋ ಕಂಪನಿ ಆಗಸ್ಟ್ 11 ರಂದು ಭಾರತದಲ್ಲಿ ಟೆಕ್ನೋ ಪೋವಾ 5 (Tecno Pova 5) ಮತ್ತು ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್​ಫೋನ್​ಗಳನ್ನು ಅನಾವರಣ ಮಾಡಿತ್ತು. ಇದೀಗ ಕಂಪನಿಯು ಈ ಫೋನ್‌ಗಳ ಬೆಲೆಯನ್ನು ಮತ್ತು ದೇಶದಲ್ಲಿ ಇವುಗಳ ಲಭ್ಯತೆ ಬಗ್ಗೆ ಮಾಹಿತಿ ನೀಡಿದೆ. ಬಜೆಟ್ ಬೆಲೆಯಾಗಿದ್ದರೂ ಈ ಫೋನಿನಲ್ಲಿ ಆಕರ್ಷಕ ಪ್ರೊಸೆಸರ್, ಡಿಸ್ ಪ್ಲೇ, ಬ್ಯಾಟರಿ ಆಯ್ಕೆ ನೀಡಲಾಗಿದೆ. ಟೆಕ್ನೋ ಪೊವಾ 5 ಮೀಡಿಯಾ ಟೆಕ್ ಹೆಲಿಯೋ ಜಿ 99 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ, ಟೆಕ್ನೋ ಪೊವಾ 5 ಪ್ರೊ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಪ್ರೊಸೆಸರ್ ಅನ್ನು ಹೊಂದಿದೆ.

ಟೆಕ್ನೋ ಪೋವಾ 5, ಪೋವಾ 5 ಪ್ರೊ ಬೆಲೆ ಮತ್ತು ಲಭ್ಯತೆ:

ಟೆಕ್ನೋ ಪೋವಾ 5 ಸ್ಮಾರ್ಟ್​ಫೋನ್ ದೇಶದಲ್ಲಿ ಸದ್ಯಕ್ಕೆ ಕೇವಲ ಒಂದು ಆಯ್ಕೆಯಲ್ಲಷ್ಟೆ ಅನಾವರಣಗೊಂಡಿದೆ. ಇದರ 8 GB RAM ಮತ್ತು 128 GB ಸಂಗ್ರಹಣೆಗೆ 11,999 ರೂ. ಇದೆ. ಟೆಕ್ನೋ ಪೋವಾ 5 ಪ್ರೊ ಎರಡು ಆಯ್ಕೆಗಳಲ್ಲಿ ರಿಲೀಸ್ ಆಗಿದೆ. ಇದರ 8 GB RAM + 128 GB ಸಂಗ್ರಹಣೆಗೆ 14,999 ರೂ. ಇದ್ದರೆ, 8 GB RAM + 256 GB ಸ್ಟೋರೇಜ್ ಸಾಮರ್ಥ್ಯಕ್ಕೆ 15,999 ರೂ. ನಿಗದಿಮಾಡಲಾಗಿದೆ.

ಈ ಎರಡೂ ಫೋನ್‌ಗಳು ಆಗಸ್ಟ್ 22 ರಿಂದ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಮೂಲಕ ಖರೀದಿಗೆ ಲಭ್ಯವಿರುತ್ತವೆ. ಟೆಕ್ನೋ ಪೋವಾ 5 ಅಂಬರ್ ಗೋಲ್ಡ್, ಹರಿಕನ್ ಬ್ಲೂ ಮತ್ತು ಮೆಚಾ ಬ್ಲಾಕ್ ಎಂಬ ಮೂರು ಬಣ್ಣಗಳಲ್ಲಿ ಬರುತ್ತದೆ. ಟೆಕ್ನೋ ಪೋವಾ 5 ಪ್ರೊ ಅನ್ನು ಡಾರ್ಕ್ ಇಲ್ಯೂಷನ್ ಮತ್ತು ಫ್ಯಾಂಟಸಿ ಸಿಲ್ವರ್‌ ಬಣ್ಣಗಳಲ್ಲಿ ಖರೀದಿಸಬಹುದು.

ಇದನ್ನೂ ಓದಿ
Image
ಸ್ಮಾರ್ಟ್​ಫೋನ್ ಬಳಕೆದಾರರಿಗೆ ಸರ್ಕಾರದಿಂದ ಎಚ್ಚರಿಕೆ: ಆಂಡ್ರಾಯ್ಡ್ ಬಳಕೆದಾರರು ಇಲ್ಲಿ ಗಮನಿಸಿ
Image
ಭಾರತದಲ್ಲಿಂದು ಬಹುನಿರೀಕ್ಷಿತ ಟೆಕ್ನೋ ಪೊವಾ 5 ಸರಣಿ ಸ್ಮಾರ್ಟ್​ಫೋನ್ ಬಿಡುಗಡೆ: ಏನಿದೆ ಫೀಚರ್ಸ್
Image
ಕೇವಲ 10,999 ರೂ. ಗೆ ಖರೀದಿಸಿ 6000mAh ಬ್ಯಾಟರಿ, 50MP ಕ್ಯಾಮೆರಾದ ಈ ಸ್ಯಾಮ್​ಸಂಗ್ ಸ್ಮಾರ್ಟ್​ಫೋನ್
Image
ಆಗಸ್ಟ್ 18 ರಂದು ಮೊದಲ ಸೇಲ್ ಕಾಣಲಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ Z ಫೋಲ್ಡ್ 5: ಬೆಲೆ ಎಷ್ಟು?

ಝೆಡ್​​​ಟಿಇ ಬಿಡುಗಡೆ ಮಾಡಿದೆ ಹೊಸ ಸ್ಮಾರ್ಟ್​ಫೋನ್

ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್​ಫೋನ್​ಗಳನ್ನು ವಿನಿಮಯ ಮಾಡಿಕೊಂಡರೆ 1,000 ರೂ. ಗಳ ಡಿಸ್ಕೌಂಟ್ ಇರಲಿದೆಯಂತೆ. ಇದರ ಜೊತೆಗೆ 6 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಯನ್ನು ಸಹ ಪಡೆಯಬಹುದು.

ಟೆಕ್ನೋ ಪೋವಾ 5, ಪೋವಾ 5 ಪ್ರೊ ಫೀಚರ್ಸ್:

ಟೆಕ್ನೋ ಪೋವಾ 5 ಸರಣಿಯು 6.78-ಇಂಚಿನ ಪೂರ್ಣ-HD+ ಡಿಸ್ ಪ್ಲೇಗಳೊಂದಿಗೆ 120Hz ರಿಫ್ರೆಶ್ ದರ ಮತ್ತು 240Hz ಟಚ್ ಮಾದರಿ ದರದೊಂದಿಗೆ ಬರುತ್ತದೆ. ಟೆಕ್ನೋ ಪೋವಾ 5 ಅದರ ಹಿಂದಿನ ಮಾದರಿಯಂತೆ, ಮೀಡಿಯಾಟೆಕ್ ಹಿಲಿಯೊ G99 SoC ನಿಂದ ಚಾಲಿತವಾಗಿದೆ. ಅದೇ ಟೆಕ್ನೋ ಪೋವಾ 5 ಪ್ರೊ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನ್‌ಗಳು ಆಂಡ್ರಾಯ್ಡ್ 13-ಆಧಾರಿತ HiOS ಮೂಲಕ ರನ್ ಆಗುತ್ತದೆ.

ಕ್ಯಾಮೆರಾ ವಿಚಾರಕ್ಕೆ ಬಂದರೆ, ಟೆಕ್ನೋ ಪೋವಾ 5 ಸರಣಿಯ ಬೇಸ್ ಮತ್ತು ಪ್ರೊ ಮಾದರಿಗಳ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು AI ಲೆನ್ಸ್ ಜೊತೆಗೆ LED ಫ್ಲ್ಯಾಶ್ ಘಟಕವನ್ನು ಒಳಗೊಂಡಿವೆ. ಪೊವಾ 5 8-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಸಂವೇದಕವನ್ನು ಹೊಂದಿದೆ, ಆದರೆ ಟೆಕ್ನೋ ಪೊವಾ 5 ಪ್ರೊನಲ್ಲಿ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.

ಈ ಫೋನ್‌ಗಳು 4G VoLTE, WiFi, ಬ್ಲೂಟೂತ್ 5.0, GPS, USB ಟೈಪ್-C ಮತ್ತು NFC ಸಂಪರ್ಕವನ್ನು ಬೆಂಬಲಿಸುತ್ತವೆ. ಅವು 3.5 ಎಂಎಂ ಆಡಿಯೋ ಜಾಕ್‌ನೊಂದಿಗೆ ಬರುತ್ತವೆ. ಪೊವಾ 5 ಪ್ರೊ 5G ಸಂಪರ್ಕವನ್ನು ಬೆಂಬಲಿಸುತ್ತದೆ ಮತ್ತು ಹಿಂಬದಿಯ ಪ್ಯಾನೆಲ್‌ನಲ್ಲಿ LED ಲೈಟ್​ನೊಂದಿಗೆ ಆರ್ಕ್ ಇಂಟರ್ಫೇಸ್ ಅನ್ನು ಹೊಂದಿದೆ. ಭದ್ರತೆಗಾಗಿ, ಎರಡೂ ಸ್ಮಾರ್ಟ್​ಫೋನ್​ಗಳನ್ನು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಆಯ್ಕೆ ನೀಡಲಾಗಿದೆ.

ಟೆಕ್ನೋ ಪೋವಾ 5 ಫೋನಿನಲ್ಲಿ ದೀರ್ಘ ಸಮಯ ಬಾಳಿಕೆ ಬರುವ ದೊಡ್ಡ 6,000mAh ಬ್ಯಾಟರಿಯನ್ನು ಹೊಂದಿದೆ. ಇದು 45W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅದೇ ಟೆಕ್ನೋ ಪೋವಾ 5 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಮತ್ತು 68W ವೇಗದ ಚಾರ್ಜಿಂಗ್ ಆಯ್ಕೆ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:01 pm, Mon, 14 August 23

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್