ರೆಡ್ಮಿ ನೋಟ್ 11 ಫೋನಿನ ಉತ್ತರಾಧಿಕಾರಿಯಾಗಿ ರೆಡ್ಮಿ ನೋಟ್ 12 4G (Redmi 12 4G) ಸ್ಮಾರ್ಟ್‌ಫೋನ್ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಕೆಲವು ಹೊಸ ಫೀಚರ್ ಮತ್ತು ವಿನ್ಯಾಸದಲ್ಲಿ ಬದಲಾವಣೆ ಮಾಡಿ 14,999 ರೂ. ಗಳ ಪ್ರೈಸ್ಟ್ಯಾಗ್ನಲ್ಲಿ ಈ ಹ್ಯಾಂಡ್‌ಸೆಟ್ ದೇಶದಲ್ಲಿ ಅನಾವರಣಗೊಂಡಿತ್ತು. ಈ ಫೋನ್ ಈಗ ಭರ್ಜರಿ ಡಿಸ್ಕೌಂಟ್ನಲ್ಲಿ ಸೇಲ್ ಆಗುತ್ತಿದೆ. ಶವೋಮಿ ಕಂಪನಿ ಕಳೆದ ವಾರ ಚೀನಾದಲ್ಲಿ ರೆಡ್ಮಿ ನೋಟ್ 13 ಸರಣಿ ರಿಲೀಸ್ ಮಾಡಿದ ನಂತರ ನೋಟ್ 12 4ಜಿ ಅಮೆಜಾನ್ ಮತ್ತು ಇತರ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಡಿಮೆ ಬೆಲೆಗೆ ಲಭ್ಯವಿದೆ.
ರೆಡ್ಮಿ ನೋಟ್ 12 ಭಾರತದಲ್ಲಿ 6GB/64GB ಮಾದರಿಗೆ 14,999 ರೂ. ಮತ್ತು 6GB/128GB ಆವೃತ್ತಿಗೆ 16,999 ರೂ. ಗೆ ಬಿಡುಗಡೆಯಾಗಿತ್ತು. ಇದೀಗ ಬೆಲೆ ಕಡಿತಗೊಂಡು ಈ ಫೋನ್ 6GB + 64GB 12,999 ರೂ. ಗೆ ಮತ್ತು 6GB + 128GB 14,999 ರೂ. ಗೆ ಲಭ್ಯವಿದೆ. 2,000 ರೂ. ಗಳ ಡಿಸ್ಕೌಂಟ್ ಘೋಷಿಸಲಾಗಿದೆ. ಗ್ರಾಹಕರು HDFC, ICICI, Axis ಮತ್ತು SBI ಕ್ರೆಡಿಟ್ ಕಾರ್ಡ್‌ಗಳೊಂದಿಗೆ 1,000 ರೂ. ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದು. ಈ ಹ್ಯಾಂಡ್‌ಸೆಟ್ ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು Mi.com ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಲು ಲಭ್ಯವಿದೆ.
ಡಿಸ್‌ಪ್ಲೇ: ರೆಡ್ಮಿ ನೋಟ್ 12 ಸ್ಮಾರ್ಟ್‌ಫೋನ್ 1080 × 2400 ಪಿಕ್ಸೆಲ್‌ಗಳ ರೆಸಲ್ಯೂಶನ್, 394ppi ಪಿಕ್ಸೆಲ್ ಸಾಂದ್ರತೆ, 120Hz ರಿಫ್ರೆಶ್ ದರ, 1200 nits ಪೀಕ್ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯೊಂದಿಗೆ 6.67-ಇಂಚಿನ FHD+ AMOLED ಡಿಸ್ ಪ್ಲೇಯನ್ನು ಹೊಂದಿದೆ.
ಐಫೋನ್ 15 ಬಾಕ್ಸ್ನಲ್ಲಿ ಹೈ-ಸೆಕ್ಯುರಿಟಿ ಸಿಸ್ಟಮ್: ಫೇಕ್ ಐಫೋನ್ ಮಾರುವವರಿಗೆ ಶಾಕ್
ಪ್ರೊಸೆಸರ್: ಈ ಫೋನ್ Adreno 610 GPU ಜೊತೆಗೆ ಕ್ವಾಲ್ಕಂ ಸ್ನಾಪ್ಡ್ರಾಗನ್ 685 ಪ್ರೊಸೆಸರ್ನಿಂದ ಚಾಲಿತವಾಗಿದೆ.
ಮೆಮೊರಿ ಮತ್ತು ಸಂಗ್ರಹಣೆ: 6GB LPDDR4X RAM, 64GB/128GB UFS 2.2 ಸಂಗ್ರಹಣೆ, ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.
ಸಾಫ್ಟ್‌ವೇರ್: ಆಂಡ್ರಾಯ್ಡ್ 13-ಆಧಾರಿತ MIUI 14 ಕಸ್ಟಮ್ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾಗಳು: 50MP ಸ್ಯಾಮ್ಸಂಗ್ ISOCELL JN1 ಪ್ರಾಥಮಿಕ ಕ್ಯಾಮೆರಾ ಸಂವೇದಕ, 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, 2MP ಮ್ಯಾಕ್ರೋ ಕ್ಯಾಮೆರಾ ಮತ್ತು LED ಫ್ಲಾಷ್ ಇದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 16MP ಶೂಟರ್ ಇದೆ.
ಬ್ಯಾಟರಿ-ಇತರೆ: 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಇದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ. ಡ್ಯುಯಲ್-ಸಿಮ್, 4ಜಿ, ವೈಫೈ 802.11 ಎಸಿ, ಬ್ಲೂಟೂತ್ 5.0, ಜಿಪಿಎಸ್, ಗ್ಲೋನಾಸ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅಳವಡಿಸಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ