3 ದಿನಗಳಲ್ಲಿ 1000 ಕೋಟಿ: ಭಾರತದಲ್ಲಿ ದಾಖಲೆ ಬರೆದ 200MP ಕ್ಯಾಮೆರಾದ ರೆಡ್ಮಿ ನೋಟ್ 13 ಸರಣಿ

|

Updated on: Jan 14, 2024 | 10:00 AM

Redmi Note 13 series: ರೆಡ್ಮಿ ನೋಟ್ 13 5G ಮಾರಾಟವು ಭಾರತದಲ್ಲಿ ಜನವರಿ 10 ರಿಂದ ಪ್ರಾರಂಭವಾಯಿತು. ಕಂಪನಿಯು ತನ್ನ ಆದಾಯದ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. ಸೇಲ್ ಆರಂಭವಾದಾಗಿನಿಂದ ಬರೋಬ್ಬರಿ 1,000 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ ಎಂದು ಹೇಳಿದೆ.

3 ದಿನಗಳಲ್ಲಿ 1000 ಕೋಟಿ: ಭಾರತದಲ್ಲಿ ದಾಖಲೆ ಬರೆದ 200MP ಕ್ಯಾಮೆರಾದ ರೆಡ್ಮಿ ನೋಟ್ 13 ಸರಣಿ
Redmi Note 13 Series
Follow us on

ಗ್ಲೋಬಲ್ ಟೆಕ್ನಾಲಜಿ ಬ್ರ್ಯಾಂಡ್ ಶವೋಮಿ ಇಂಡಿಯಾ ಇತ್ತೀಚೆಗಷ್ಟೆ ರೆಡ್ಮಿ ನೋಟ್ 13 ಸರಣಿಯ (Redmi Note 13 series) ಸ್ಮಾರ್ಟ್​ಫೋನ್ ಅನ್ನು ಅನಾವರಣ ಮಾಡಿತ್ತು. ಜನವರಿ 10 ರಂದು ಈ ಫೋನಿನ ಮಾರಾಟ ಕೂಡ ಪ್ರಾರಂಭವಾಗಿದೆ. ಇದೀಗ ಶವೋಮಿ ಈ ಫೋನುಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಸೇಲ್ ಆರಂಭವಾದಾಗಿನಿಂದ ಬರೋಬ್ಬರಿ 1,000 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ ಎಂದು ಹೇಳಿದೆ. ಇದು ರೆಡ್ಮಿ ನೋಟ್ 12 5G ಸರಣಿಯ ಆದಾಯವನ್ನು 95 ಪ್ರತಿಶತದಷ್ಟು ಮೀರಿಸಿದೆ. ಹೊಸ ಸರಣಿಯು ಮೂರು ಮಾದರಿಗಳನ್ನು ಒಳಗೊಂಡಿದೆ. ಇದು ರೆಡ್ಮಿ ನೋಟ್ 13 5G, ರೆಡ್ಮಿ ನೋಟ್ 13 ಪ್ರೊ 5G ಮತ್ತು ರೆಡ್ಮಿ ನೋಟ್ 13 ಪ್ರೊ+ 5G ಆಗಿದೆ.

ಶವೋಮಿ ಕಂಪನಿಯು ರೆಡ್ಮಿ ನೋಟ್ 13 ಪ್ರೊ ಮತ್ತು ಪ್ರೊ ಪ್ಲಸ್ ಮಾದರಿಗಳಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒದಗಿಸಿದೆ. ಇದರಲ್ಲಿ ಉತ್ತಮ ಗುಣಮಟ್ಟದ ಡಿಸ್​ಪ್ಲೇ, ಪ್ರಮುಖ ಕ್ಯಾಮೆರಾ ಮತ್ತು ವೇಗದ ಚಾರ್ಜಿಂಗ್ ಸೇರಿವೆ. ಎಂದಿನಂತೆ, ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ವೈಶಿಷ್ಟ್ಯಗಳನ್ನು ಒದಗಿಸಲು ಪ್ರಯತ್ನಿಸಿದೆ. ಈ ಕಾರಣದಿಂದಾಗಿ ರೆಡ್ಮಿ ನೋಟ್ 13 ಸರಣಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ.

ಇದನ್ನೂ ಓದಿ
ಬೆಲೆ ಕೇವಲ 7,499 ರೂ.: ಬಜೆಟ್ ಪ್ರಿಯರಿಗಾಗಿ ಬಂದಿದೆ ಹೊಸ ಸ್ಮಾರ್ಟ್​ಫೋನ್
ಟ್ರಾಫಿಕ್ ಫೈನ್ ಎಸ್​ಎಂಎಸ್ ಬಂದ್ರೆ ಅಲರ್ಟ್ ಆಗಿ!
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಆರಂಭ: ಯಾವುದಕ್ಕೆ ಎಷ್ಟು ಡಿಸ್ಕೌಂಟ್?
ಧಮಾಕ ಆಫರ್: 200MP ಕ್ಯಾಮೆರಾದ ಈ ಸ್ಮಾರ್ಟ್​ಫೋನ್ ಈಗ 20,000ಕ್ಕೆ ಲಭ್ಯ

Itel Power 450: ಭಾರತದಲ್ಲಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್​ನ ಮೊಟ್ಟ ಮೊದಲ ಫೀಚರ್ ಫೋನ್ ಬಿಡುಗಡೆ

ರೆಡ್ಮಿ ನೋಟ್ 13 5G ಮಾರಾಟವು ಭಾರತದಲ್ಲಿ ಜನವರಿ 10 ರಿಂದ ಪ್ರಾರಂಭವಾಯಿತು. ಕಂಪನಿಯು ತನ್ನ ಆದಾಯದ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದೆ. ಮಾರಾಟ ಪ್ರಾರಂಭವಾಗಿ ಕೇವಲ 3 ದಿನಗಳು ಕಳೆದಿವೆ. ಶವೋಮಿ ಇಂಡಿಯಾ #RedmiNote13 5G ಸರಣಿಯ ಮಾರಾಟದ ಮೂಲಕ 1 ಸಾವಿರ ಕೋಟಿಗೂ ಹೆಚ್ಚು ಆದಾಯವನ್ನು ಗಳಿಸಿದೆ ಎಂದು ಹೇಳಿದೆ. ಕಂಪನಿಯು ಪೋಸ್ಟರ್‌ನಲ್ಲಿ ದೊಡ್ಡ ಅಕ್ಷರಗಳಲ್ಲಿ 1000 ಕೋಟಿ ರೂಪಾಯಿ ಎಂದು ಬರೆದಿದೆ.

 

ನೀವು ಸಹ ಈ ಫೋನ್ ಅನ್ನು ಖರೀದಿಸಲು ಬಯಸಿದರೆ, ನೀವು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ 2,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ, ಶವೋಮಿ ಗ್ರಾಹಕರಿಗೆ 2,500 ರೂಪಾಯಿಗಳ ಲಾಯಲ್ಟಿ ಬೋನಸ್ ನೀಡುತ್ತದೆ. ಇದಲ್ಲದೆ, ರೆಡ್ಮಿ ನೋಟ್ 13 ಸರಣಿಯ ಸ್ಮಾರ್ಟ್‌ಫೋನ್‌ಗಳ ಖರೀದಿಯಲ್ಲಿ, ಕಂಪನಿಯು ಕೇವಲ 1,999 ರೂಗಳಿಗೆ ರೆಡ್ಮಿ ವಾಚ್ 3 ಆಕ್ಟಿವ್ ಅನ್ನು ಪಡೆಯುವ ಅವಕಾಶವನ್ನು ನೀಡುತ್ತಿದೆ.

ರೆಡ್ಮಿ ನೋಟ್ 13 5G, ರೆಡ್ಮಿ ನೋಟ್ 13 ಪ್ರೊ 5G ಮತ್ತು ರೆಡ್ಮಿ ನೋಟ್ 13 ಪ್ರೊ+ 5G ಬೆಲೆ:

ರೆಡ್ಮಿ ನೋಟ್ 13 5G ಯ 6GB + 128GB ಸ್ಟೋರೇಜ್ ರೂಪಾಂತರದ ಬೆಲೆ 17,999 ರೂ., 8GB + 256GB ಸ್ಟೋರೇಜ್ ರೂಪಾಂತರದ ಬೆಲೆ ರೂ. 19,999 ಮತ್ತು 12GB + 256GB ಸ್ಟೋರೇಜ್ ರೂಪಾಂತರದ ಬೆಲೆ ರೂ. 21,999 ಆಗಿದೆ. ಈ ಸ್ಮಾರ್ಟ್​ಫೋನ್ ಆರ್ಕ್ಟಿಕ್ ವೈಟ್, ಪ್ರಿಸ್ಮ್ ಗೋಲ್ಡ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ರೆಡ್ಮಿ ನೋಟ್ 13 ಪ್ರೊ 5G ಯ ​​8GB + 128GB ಸ್ಟೋರೇಜ್ ರೂಪಾಂತರದ ಬೆಲೆ ರೂ. 25,999, 8GB + 256GB ಸ್ಟೋರೇಜ್ ರೂಪಾಂತರದ ಬೆಲೆ ರೂ 27,999 ಮತ್ತು 12GB + 256GB ಸ್ಟೋರೇಜ್ ರೂಪಾಂತರದ ಬೆಲೆ ರೂ 29,999 ಆಗಿದೆ. ಈ ಫೋನ್ ಆರ್ಕ್ಟಿಕ್ ವೈಟ್, ಕೋರಲ್ ಪರ್ಪಲ್ ಮತ್ತು ಮಿಡ್ನೈಟ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಿದೆ.

ರೆಡ್ಮಿ ನೋಟ್ 13 ಪ್ರೊ+ ನ 8GB + 256GB ಸ್ಟೋರೇಜ್ ರೂಪಾಂತರದ ಬೆಲೆ 31,999 ರೂ. 12GB + 256GB ಸ್ಟೋರೇಜ್ ರೂಪಾಂತರದ ಬೆಲೆ ರೂ 33,999 ಮತ್ತು 12GB + 512GB ಸ್ಟೋರೇಜ್ ರೂಪಾಂತರದ ಬೆಲೆ ರೂ 35,999 ಆಗಿದೆ. ಈ ಸ್ಮಾರ್ಟ್​ಫೋನ್ ಫ್ಯೂಷನ್ ಬ್ಲ್ಯಾಕ್, ಫ್ಯೂಷನ್ ಪರ್ಪಲ್ ಮತ್ತು ಫ್ಯೂಷನ್ ವೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ