AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio 5G: ಜಿಯೋದಿಂದ 1Gbps ವೇಗದ 5G ಪರೀಕ್ಷೆ ಯಶಸ್ವಿ; ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಮುಂಚೂಣಿ ಎಂದ ಕಂಪೆನಿ

ರಿಲಯನ್ಸ್ ಜಿಯೋದಿಂದ 5G ತಂತ್ರಜ್ಞಾನದಲ್ಲಿ 1Gbps ವೇಗದ ಪರೀಕ್ಷೆ ಯಶಸ್ವಿಯಾಗಿ ಮಾಡಿ ಮುಗಿಸಲಾಗಿದೆ. ಕಂಪೆನಿಯ ಭವಿಷ್ಯದ ಯೋಜನೆಗಳ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.

Jio 5G: ಜಿಯೋದಿಂದ 1Gbps ವೇಗದ 5G ಪರೀಕ್ಷೆ ಯಶಸ್ವಿ; ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಮುಂಚೂಣಿ ಎಂದ ಕಂಪೆನಿ
ಪ್ರಾತಿನಿಧಿಕ ಚಿತ್ರ
Srinivas Mata
|

Updated on:Jun 03, 2021 | 7:06 PM

Share

ನವದೆಹಲಿ: ಡಿಜಿಟಲ್ ವೇದಿಕೆಗಳು ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮುಂದಿನ ಪೀಳಿಗೆಯ 5ಜಿ ಸ್ಟ್ಯಾಕ್ ಅನ್ನು ಪರಿಚಯಿಸುವ ಪ್ರಕ್ರಿಯೆಯನ್ನು ಜಿಯೋ ವೇಗಗೊಳಿಸಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ. ಈ ಮೂಲಕ ಜಾಗತಿಕ ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂಬುದನ್ನು ವರದಿ ಎತ್ತಿ ತೋರಿಸಿದೆ ಎನ್ನಲಾಗಿದೆ. 300 ಮಿಲಿಯನ್ ಮೊಬೈಲ್ ಬ್ರಾಡ್‌ಬ್ಯಾಂಡ್ ಚಂದಾದಾರರಿಗೆ, 50 ಮಿಲಿಯನ್ ಫೈಬರ್ ಹೋಮ್ಸ್ ಮತ್ತು ಮತ್ತು 50 ಮಿಲಿಯನ್ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವ್ಯವಹಾರ ನಡೆಸುವವರಿಗೆ ಅಗತ್ಯವಿರುವಷ್ಟು ನೆಟ್‌ವರ್ಕ್ ಸಾಮರ್ಥ್ಯವನ್ನು ರಿಲಯನ್ಸ್ ಜಿಯೋದಿಂದ ನಿರ್ಮಿಸಿದೆ ಎಂದು ವರದಿಯಲ್ಲಿ ಹೇಳಿದೆ.

ಕ್ವಾಲ್​ಕಾಮ್ ಮತ್ತು ಜಿಯೋ ಭಾರತದಲ್ಲಿ 5ಜಿ ಪ್ರಯೋಗಗಳನ್ನು ಯಶಸ್ವಿಯಾಗಿ ಮಾಡಿದ್ದು, ಜಿಯೋ 5ಜಿ ವಿಭಾಗದಲ್ಲಿ 1 ಜಿಬಿಪಿಎಸ್ ಮೈಲುಗಲ್ಲು ಸಾಧಿಸಿದೆ ಎಂದು ರಿಲಯನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ವಾರ್ಷಿಕ ವರದಿಯಲ್ಲಿ ತಿಳಿಸಿದ್ದಾರೆ. ಜಿಯೋ ಹಾಗೂ ಕ್ವಾಲ್​ಕಾಮ್ ಜತೆಗೆ ಜೆಪಿಎಲ್‌ನ ಸಂಪೂರ್ಣ ಒಡೆತನದ ಅಂಗಸಂಸ್ಥೆ ರಾಡಿಸಿಸ್ ಕಾರ್ಪೊರೇಷನ್‌ನೊಂದಿಗೆ ಸೇರಿ, ವರ್ಚುವಲೈಸ್ಡ್ ರಾನ್ (ವಿಆರ್‌ಎಎನ್) ಜತೆ ಮುಕ್ತ ಮತ್ತು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವಂತಹ ಇಂಟರ್​ಫೇಸಸ್-ಕಂಪ್ಲೇಂಟ್ ಆರ್ಕಿಟೆಕ್ಚರ್-ಆಧಾರಿತ 5ಜಿ ಸಲ್ಯೂಷನ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ಭಾರತದಲ್ಲಿ 5ಜಿ ನೆಟ್‌ವರ್ಕ್ ಮೂಲಸೌಕರ್ಯ ಮತ್ತು ಸೇವೆಗಳು ವಿಭಾಗದಲ್ಲಿ ಸ್ವದೇಶಿ ಅಭಿವೃದ್ಧಿ ಮತ್ತು ಅನುಷ್ಠಾನವನ್ನು ವೇಗಗೊಳಿಸುತ್ತದೆ.

“ಜಿಯೋ 5ಜಿ ಕೋರ್ ನೆಟ್‌ವರ್ಕ್ ಮತ್ತು 5ಜಿ ಸ್ಮಾರ್ಟ್‌ಫೋನ್‌ಗಳಲ್ಲಿ, 5ಜಿ ರಾನ್ ಪ್ಲಾಟ್‌ಫಾರ್ಮ್ 1 ಜಿಬಿಪಿಎಸ್ ಮೈಲುಗಲ್ಲನ್ನು ದಾಟಿದೆ” ಎಂದು ವರದಿ ತಿಳಿಸಿದೆ. ಈ ಸಾಧನೆಯು ಜಿಯೋನ 5ಜಿ ಗುಣಮಟ್ಟ ತಿಳಿಸುತ್ತದೆ. ಮಾತ್ರವಲ್ಲ, ಜಿಯೋ ಮತ್ತು ಭಾರತವು 5ಜಿ ಎನ್ಆರ್ ಉತ್ಪನ್ನಗಳ ವಿಭಾಗದಲ್ಲಿ ಪ್ರವೇಶಿಸುತ್ತಿರುವುದನ್ನು ಸೂಚಿಸುತ್ತದೆ. “ಜಾಗತಿಕ ಡಿಜಿಟಲ್ ಕ್ರಾಂತಿಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಜಿಯೋ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಅನುಷ್ಠಾನವನ್ನು ವೇಗಗೊಳಿಸುತ್ತಿದೆ ಮತ್ತು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮುಂದಿನ ಪೀಳಿಗೆಯ 5ಜಿ ಸ್ಟ್ಯಾಕ್ ಎಲ್ಲರಿಗೂ ಕೈಗೆಟುಕುವಂತೆ ಮತ್ತು ಎಲ್ಲೆಡೆ ಲಭ್ಯವಾಗುವಂತೆ ಮಾಡುತ್ತದೆ” ಎಂದು ವಾರ್ಷಿಕ ವರದಿ ತಿಳಿಸಿದೆ.

ಭಾರತದಲ್ಲಿ ಅತಿದೊಡ್ಡ ಮತ್ತು ಸುಧಾರಿತ ಡಿಜಿಟಲ್ ಹಾಗೂ ಸಂಪರ್ಕ ವ್ಯವಸ್ಥೆಯನ್ನು ರೂಪಿಸುವ ಉದ್ದೇಶದೊಂದಿಗೆ ಜಿಯೋ ತನ್ನ ಆರಂಭದಿಂದಲೂ ಭಾರತದಲ್ಲಿ 50 ಬಿಲಿಯನ್ ಡಾಲರ್‌ಗಳಷ್ಟು ಹೂಡಿಕೆ ಮಾಡಿದೆ. ಇದರೊಂದಿಗೆ ಹಲವು ಆ್ಯಪ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿದೆ. “ಭಾರತವನ್ನು ವಿಶ್ವದ ಮುಂಚೂಣಿ ಡಿಜಿಟಲ್ ಸಮಾಜ ಮತ್ತು ಆರ್ಥಿಕತೆಯಾಗಿ ಬಲವರ್ಧನೆ ಪಡಿಸಲು, ಜಿಯೋ ಸದ್ಯ ಅಸ್ತಿತ್ವದಲ್ಲಿರುವ 426 ಮಿಲಿಯನ್ ಗ್ರಾಹಕರ ಅನುಭವವನ್ನು ವೃದ್ಧಿಸುತ್ತಿದೆ. ಮಾತ್ರವಲ್ಲ, ಮುಂದೆ 300 ಮಿಲಿಯನ್ ಹೊಸ ಬಳಕೆದಾರರು, 50 ಮಿಲಿಯನ್ ಮನೆಗಳು ಮತ್ತು, 50 ಮಿಲಿಯನ್ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವ್ಯವಹಾರ ನಡೆಸುತ್ತಿರುವವರನ್ನು ಡಿಜಿಟಲ್ ಕಡೆಗೆ ಪರಿವರ್ತನೆಗೊಳಿಸುವುದನ್ನು ಚುರುಕುಗೊಳಿಸಿದೆ,” ಎಂದು ವರದಿಯಲ್ಲಿ ಹೇಳಿದೆ.

2020-21ರ ಹಣಕಾಸಿನ ವರ್ಷದಲ್ಲಿ ಜಿಯೋ ಪ್ಲಾಟ್‌ಫಾರ್ಮ್‌ಗಳು (ಜೆಪಿಎಲ್) 13 ಜಾಗತಿಕ ಪ್ರಮುಖ ಹೂಡಿಕೆದಾರರ ಮೂಲಕ 1,52,056 ಕೋಟಿ ರೂಪಾಯಿ ಬಂಡವಾಳ ಸಂಗ್ರಹಿಸಿರುವುದಾಗಿ ವರದಿಯಲ್ಲಿ ತಿಳಿಸಿದೆ. ಶೀಘ್ರದಲ್ಲಿಯೇ ಸ್ವಾವಲಂಬಿ ಹಾಗೂ ಪರಿಣಾಮಕಾರಿ ಕಡಿಮೆ ವೆಚ್ಚದ ಜಾರಿಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಎಂಡ್ ಟು ಎಂಡ್ ಜಿಯೋ 5ಜಿ ರೇಡಿಯೋ ಮತ್ತು ಕೋರ್ ನೆಟ್‌ವರ್ಕ್ ಸಲ್ಯೂಷನ್ ಪರೀಕ್ಷೆಯನ್ನು ಪೂರ್ಣಗೊಳಿಸುವುದು. ಇದು ಮತ್ತೊಂದು ಪ್ರಮುಖ ಅಂಶವಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ, ಜಿಯೋ ದೇಶಾದ್ಯಂತ “ದೃಢವಾದ” ವೈರ್‌ಲೈನ್ ನೆಟ್‌ವರ್ಕ್ ಅನ್ನು ರಚಿಸುವುದರತ್ತ ಗಮನ ಹರಿಸಲಿದೆ. ಪ್ರತಿ ಮನೆ ಮತ್ತು ಉದ್ಯಮಗಳಿಗೆ ಹೆಚ್ಚಿನ ವೇಗದ ಸಂಪರ್ಕ ಮತ್ತು ಡಿಜಿಟಲ್ ಸೇವೆಗಳ ಹಲವು ಕೊಡುಗೆಗಳನ್ನು ನೀಡುವುದಾಗಿ ಭರವಸೆ ನೀಡಿದೆ ಎಂದು ಅದು ವರದಿ ಹೇಳಿದೆ.

ಇದನ್ನೂ ಓದಿ: Jio Recharge Plan: ಮತ್ತೆ ಬಂತು ಜಿಯೋದಿಂದ ಅಗ್ಗದ 98 ರೂ. ಪ್ರೀಪೇಯ್ಡ್ ಪ್ಲಾನ್; ಏನೆಲ್ಲ ವೈಶಿಷ್ಟ್ಯ?

(Reliance Jio successfully tested 5G with 1Gbps speed revealed in annual meeting report. Here is the details)

Published On - 7:05 pm, Thu, 3 June 21

ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಏರೋಸ್ಪೇಸ್ ಯೋಜನೆ ಬಗ್ಗೆ ಸಿಎಂ ಹೇಳಿಕೆ ಗೊಂದಲಮಯ: ವಿಜಯೇಂದ್ರ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಮನೆ ಕಟ್ಟಿಸಿಕೊಟ್ಟಿಲ್ಲ: KGF​ ಬಾಬು ಮನೆ ಮುಂದೆ ಜನರ ಪ್ರತಿಭಟನೆ
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು
ಬೀಗರನ್ನು ಒಮ್ಮೆ ನಂಬಿ ಮೋಸ ಹೋಗಿದ್ದೇನೆ, ಪುನಃ ನಂಬಲಾರೆ: ಕೆಜಿಎಫ್ ಬಾಬು