ರಿಲಯನ್ಸ್ ಜಿಯೋ (Reliance Jio) ಭಾರತದಲ್ಲಿ ಯಾವುದೇ ಸೂಚನೆಯಿಲ್ಲದೆ ದಿಢೀರ್ ಆಗಿ ಜಿಯೋ ಭಾರತ್ (Jio Bharat 4G) ಹೆಸರಿನ ಫೋನನ್ನು ಲಾಂಚ್ ಮಾಡಿದೆ. ವಿಶೇಷ ಎಂದರೆ ಈ ಫೋನ್ 4ಜಿ ಬೆಂಬಲ ಪಡೆದುಕೊಂಡಿದ್ದು, ಬೆಲೆ ಮಾತ್ರ ಕೇವಲ 999 ರೂ.. ಭಾರತವನ್ನು ‘2G-ಮುಕ್ತ್ ಭಾರತ್’ ಮಾಡುವ ನಿಟ್ಟಿನಲ್ಲಿ ಜಿಯೋ ಈ ಮಹತ್ವದ ಫೋನನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈಗ ಕೂಡ 250 ಮಿಲಿಯನ್ ಮೊಬೈಲ್ (Mobile) ಬಳಕೆದಾರರು 2G ಬಳಸುತ್ತಿದ್ದಾರೆ. ಇದನ್ನು ಕೊನೆಗೊಳಿಸಿ 4G ಉಪಯೋಗಿಸುವಂತೆ ಮಾಡುವುದು ಜಿಯೋದ ಉದ್ದೇಶವಾಗಿದೆ. ಹೀಗಾಗಿ ಅತಿ ಕಡಿಮೆ ಬೆಲೆಗೆ ಜಿಯೋ ಭಾರತ್ 4ಜಿ ಫೋನನ್ನು ರಿಲೀಸ್ ಮಾಡಿದೆ.
ಜಿಯೋ ಭಾರತ್ ಫೋನ್ ನೋಡಲು ಇತರೆ ಫೀಚರ್ ಫೋನುಗಳ ರೀತಿಯಲ್ಲಿದೆ. ಕೀ-ಪೇಡ್ ಆಯ್ಕೆ ಇದ್ದು ಹಿಂಭಾಗ ಕ್ಯಾಮೆರಾ, ಸ್ಪೀಕರ್ ಜೊತೆಗೆ ಜಿಯೋ ಲೋಗೋ ಅಳವಡಿಸಲಾಗಿದೆ. ಭಾರತದಲ್ಲಿ ಎಲ್ಲಿಗೆ ಬೇಕಾದರೂ ಅನಿಯಮಿತ ಕರೆ ಮಾಡುವ ಅವಕಾಶ ಕಲ್ಪಿಸಲಾಗಿದೆ.
iQoo Neo 7 Pro: ಭಾರತದಲ್ಲಿಂದು ಬಹುನಿರೀಕ್ಷಿತ ಐಕ್ಯೂ ನಿಯೋ 7 ಪ್ರೊ ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ಎಷ್ಟಿರಬಹುದು?
ವಿಶೇಷ ಎಂದರೆ ಈ ಫೋನ್ನಲ್ಲಿ ಜಿಯೋ ಪೇ ಮೂಲಕ ಯುಪಿಐ ವಹಿಪಾಟು ನಡೆಸಬಹುದು. ಜಿಯೋ ಸಿನಿಮಾ, ಜಿಯೋ ಸಾವನ್ ಮತ್ತು ಎಫ್ಎಮ್ ರೆಡಿಯೋ ಸಪೋರ್ಟ್ ಮಾಡುತ್ತದೆ. ಒಂದು ಮಿಲಿಯನ್ ಜಿಯೋ ಭಾರತ್ ಫೋನ್ ತಯಾರಾಗಿದ್ದು, ಜುಲೈ 7 ರಿಂದ ಎಲ್ಲ ರಿಟೇಲ್ ಸ್ಟೋರ್ಗಳಲ್ಲಿ ಖರೀದಿಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಜಿಯೋ ಭಾರತ್ ಫೋನ್ಗಳಿಗೆ ಬೇಸ್ ರೀಚಾರ್ಜ್ ಪ್ಲಾನ್ ಅನ್ನು ಕೂಡ ಘೋಷಣೆ ಮಾಡಲಾಗಿದೆ. ಈ ರೀಚಾರ್ಜ್ ಪ್ಲಾನ್ ಬೆಲೆ ಕೇವಲ 123 ರೂ. ಆಗಿರಲಿದ್ದು, ಅನಿಯಮಿತ ಧ್ವನಿ ಕರೆಗಳು ಮತ್ತು 14GB ಡೇಟಾ ಪ್ರಯೋಜನವನ್ನು ಪಡೆಯಬಹುದು. ಇದು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಇದರ ಜೊತೆಗೆ 1234 ರೂ. ವಿನ ಒಂದು ವರ್ಷದ ಪ್ಲಾನ್ ಕೂಡ ಇದ್ದು, ಇದರಲ್ಲಿ 168GB ಡೇಟಾ ನೀಡಲಾಗಿದೆ. ಅನಿಯಮಿತ ಕರೆ ಅವಕಾಶ ಕೂಡ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ