ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಭಾರತೀಯ ಗ್ರಾಹಕರಿಗೆ ತನ್ನ A- ಸರಣಿ ಅಡಿಯಲ್ಲಿ ಎರಡು ನೂತನ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದು ಸ್ಯಾಮ್ಸಂಗ್ ಗ್ಯಾಲಕ್ಸಿ A15 5G ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ A25 5G ಆಗಿದೆ. ಈ ಎರಡೂ ಫೋನುಗಳು ಈಗಾಗಲೇ ಹಲವಾರು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 5G- ಬೆಂಬಲ ಪಡೆದುಕೊಂಡಿದ್ದು, ಗ್ಯಾಲಕ್ಸಿ A25 ಎಕ್ಸಿನೋಸ್ 1280 SoC ನಿಂದ ಚಾಲಿತವಾದರೆ, ಗ್ಯಾಲಕ್ಸಿ A15 5G ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಸಾಕಷ್ಟು ಬಲಿಷ್ಠವಾಗಿರುವ ಈ ಎರಡೂ ಸ್ಮಾರ್ಟ್ಫೋನ್ಗಳ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಗ್ಯಾಲಕ್ಸಿ A15 5G ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಇದರ 8GB+128GB ಬೆಲೆ ರೂ. 19,499 ಮತ್ತು 8GB+256GB ಬೆಲೆ ರೂ. 22,499 ಆಗಿದೆ. ಮತ್ತೊಂದೆಡೆ, ಗ್ಯಾಲಕ್ಸಿ A25 5G ಫೋನಿನ 8GB+128GB ರೂಪಾಂತರದ ಬೆಲೆ 26,999 ರೂ. ಮತ್ತು 8GB+256GB ರೂಪಾಂತರದ ಬೆಲೆ 29,999 ರೂ. ಗ್ಯಾಲಕ್ಸಿ A15 5G ಅನ್ನು ಲೈಟ್ ಬ್ಲೂ, ಲೈಟ್ ಬ್ಲಾಕ್ ಮತ್ತು ಬ್ಲೂ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಗ್ಯಾಲಕ್ಸಿ A15 5G ತಿಳಿ ನೀಲಿ, ತಿಳಿ ಕಪ್ಪು ಮತ್ತು ಹಳದಿ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. A-ಸರಣಿಯ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದು ಆದರೆ ಮಾರಾಟದ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಡಿಸ್ಪ್ಲೇ: ಗ್ಯಾಲಕ್ಸಿ A15 5G ಫೋನ್ 6.5-ಇಂಚಿನ FHD+ ಸೂಪರ್ AMOLED ಡಿಸ್‌ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 800 nits ಗರಿಷ್ಠ ಬ್ರೈಟ್ನೆಸ್ ಹೊಂದಿದೆ.
ಟಿವಿ ಕಪ್ಪು ಮತ್ತು ಎಸಿ ಬಿಳಿ ಬಣ್ಣದಲ್ಲಿ ಏಕೆ ಇರುತ್ತದೆ ಗೊತ್ತೇ?: ಇಲ್ಲಿದೆ ಕುತೂಹಲಕಾರಿ ಸಂಗತಿ
ಚಿಪ್‌ಸೆಟ್: ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಮತ್ತು ಮಾಲಿ G57-MP2 GPU ನಿಂದ ಚಾಲಿತವಾಗಿದೆ.
ಹಿಂಬದಿಯ ಕ್ಯಾಮೆರಾಗಳು: ಹಿಂಬದಿಯ ಕ್ಯಾಮೆರಾಕ್ಕೆ ಸಂಬಂಧಿಸಿದಂತೆ, ಇದು 50MP ಮುಖ್ಯ ಕ್ಯಾಮೆರಾ, 5MP ಅಲ್ಟ್ರಾವೈಡ್ ಸಂವೇದಕ ಮತ್ತು 2MP ಡೆಪ್ತ್ ಲೆನ್ಸ್ ಅನ್ನು ಒಳಗೊಂಡಿದೆ.
ಸೆಲ್ಫಿ ಕ್ಯಾಮೆರಾ: ಮುಂಭಾಗದ ಕ್ಯಾಮೆರಾ 13MP ಸಂವೇದಕದೊಂದಿಗೆ ಬರುತ್ತದೆ.
ಸಂಗ್ರಹಣೆ: ಗ್ಯಾಲಕ್ಸಿ A15 5G 8GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ, ಮೈಕ್ರೊ SD ಕಾರ್ಡ್‌ನೊಂದಿಗೆ 1TB ವರೆಗೆ ವಿಸ್ತರಿಸಬಹುದಾಗಿದೆ.
OS: ಹೊಸದಾಗಿ ಬಿಡುಗಡೆಯಾದ ಫೋನ್ ಆಂಡ್ರಾಯ್ಡ್ 13 ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಬ್ಯಾಟರಿ: ಈ ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಡಿಸ್ಪ್ಲೇ: ಗ್ಯಾಲಕ್ಸಿ A25 5G ಇನ್ಫಿನಿಟಿ U ವಿನ್ಯಾಸದೊಂದಿಗೆ 6.5-ಇಂಚಿನ FHD+ ಸೂಪರ್ AMOLED ಡಿಸ್ಪ್ಲೇ, 120Hz ರಿಫ್ರೆಶ್ ದರ ಹೊಂದಿದೆ.
ಚಿಪ್‌ಸೆಟ್: ಎಕ್ಸಿನೊಸ್ 1280 SoC ಮತ್ತು Mali-G68 MP4 GPU ನಿಂದ ಚಾಲಿತವಾಗಿದೆ.
ಹಿಂದಿನ ಕ್ಯಾಮೆರಾಗಳು: ಈ ಫೋನ್ 50MP OIS ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಡೆಪ್ತ್ ಲೆನ್ಸ್ ಅನ್ನು ಒಳಗೊಂಡಿದೆ.
ಸೆಲ್ಫಿ ಕ್ಯಾಮೆರಾ: ಗ್ಯಾಲಕ್ಸಿ A25 5G 13MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಸಂಗ್ರಹಣೆ: ಈ ಫೋನ್ 8GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ, ಮೈಕ್ರೊ SD ಕಾರ್ಡ್‌ನೊಂದಿಗೆ 1TB ವರೆಗೆ ವಿಸ್ತರಿಸಬಹುದು.
ಓಎಸ್: ಆಂಡ್ರಾಯ್ಡ್ 13 ಆಧಾರಿತ One UI 5 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಬ್ಯಾಟರಿ: ಫೋನ್ 5,000mAh ಬ್ಯಾಟರಿಯನ್ನು ಹೊಂದಿದೆ ಮತ್ತು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ