ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್‌ಸಂಗ್ (Samsung) ಕಂಪನಿ ಆಯೋಜಿಸಿದ್ದ ಈವೆಂಟ್ನಲ್ಲಿ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 (Samsung Galaxy Z Fold 5) ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 5 (Galaxy Z Flip 5) ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದೆ. ಇದು ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 4 ನ ಮುಂದಿನ ಆವೃತ್ತಯಾಗಿದೆ. ಈ ಎರಡೂ ಫೋನ್ ಸಾಕಷ್ಟು ಬಲಿಷ್ಠವಾಗಿದ್ದು, ಕ್ವಾಲ್ಕಂ ಸ್ನಾಪ್‌ಡ್ರಾಗನ್ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ, ಬ್ಯಾಟರಿ ನೀಡಲಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಯುಎಸ್ನಲ್ಲಿ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 5 ಬೆಲೆ $1,799, ಅಂದರೆ ಭಾರತದಲ್ಲಿ ಇದರ ಬೆಲೆ ಸುಮಾರು 1,47,570 ರೂ. ಇರಬಹುದು. ಗ್ಯಾಲಕ್ಸಿ Z ಫ್ಲಿಪ್ 5 ಸ್ಮಾರ್ಟ್‌ಫೋನ್ ಆರಂಭಿಕ ಬೆಲೆ $999 ಭಾರತದಲ್ಲಿ ಸುಮಾರು 81,940 ರೂ. ಎಂದು ಅಂದಾಜಿಸಲಾಗಿದೆ. ಈ ಎರಡೂ ಫೋನಿನ ಭಾರತದ ಬೆಲೆಗಳು ಇನ್ನೂ ಬಹಿರಂಗವಾಗಿಲ್ಲ.
Oppo K11 5G: ಗ್ಯಾಜೆಟ್ ಮಾರುಕಟ್ಟೆಗೆ ಕಮಾಲ್ ಮಾಡಲು ಬರುತ್ತಿದೆ ಒಪ್ಪೊ ಫೋನ್
ಡಿಸ್ ಪ್ಲೇ: Z ಫೋಲ್ಡ್ 5 7.6-ಇಂಚಿನ QXGA+ AMOLED ಒಳಗಿನ ಡಿಸ್ ಪ್ಪೇ ಜೊತೆಗೆ 6.2-ಇಂಚಿನ ಕವರ್ ಡಿಸ್ ಪ್ಲೇಯನ್ನು ಹೊಂದಿದೆ. ಫ್ಲಿಪ್ ಫೋನ್ 6.7-ಇಂಚಿನ ಪೂರ್ಣ-HD+ ಒಳಗಿನ AMOLED 120Hz ಡಿಸ್ ಪ್ಲೇ ಮತ್ತು 3.4-ಇಂಚಿನ AMOLED ಹೊರ 60Hz ಡಿಸ್ ಪ್ಲೇ ನೀಡಲಾಗಿದೆ.
ಚಿಪ್‌ಸೆಟ್: ಈ ಸ್ಮಾರ್ಟ್ಫೋನ್ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಫೋಲ್ಡಬಲ್ ಫೋನ್‌ಗಳು ಇತ್ತೀಚಿನ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ರನ್ ಆಗುತ್ತದೆ.
ಬ್ಯಾಟರಿ: ಗ್ಯಾಲಕ್ಸಿ Z ಫೋಲ್ಡ್ 5 4,400mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಗ್ಯಾಲಕ್ಸಿ Z ಫ್ಲಿಪ್ 5 ಫೋನ್ 3,700mAh ಬ್ಯಾಟರಿ ಆಯ್ಕೆ ಇದೆ.
ಹಿಂಬದಿಯ ಕ್ಯಾಮೆರಾ: ಗ್ಯಾಲಕ್ಸಿ Z ಫ್ಲಿಪ್ 5 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಪ್ರೈಮರಿ ಸೆನ್ಸಾರ್ ಜೊತೆಗೆ OIS ಬೆಂಬಲದೊಂದಿಗೆ 12-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಗ್ಯಾಲಕ್ಸಿ Z Fold 5 ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50-ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ, 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು 10-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದ ಕ್ಯಾಮೆರಾ 10-ಮೆಗಾಪಿಕ್ಸೆಲ್ನಲ್ಲಿದೆ.
-ಈ ಎರಡೂ ಹ್ಯಾಂಡ್‌ಸೆಟ್‌ಗಳು ಕ್ವಾಲ್‌ಕಾಮ್‌ನ ಪ್ರಮುಖ ಸ್ನಾಪ್‌ಡ್ರಾಗನ್ 8 ಜನ್ 2 ಚಿಪ್‌ಸೆಟ್‌ನಿಂದ ಚಾಲಿತವಾಗಿವೆ, ಅಂದರೆ ನೀವು ಹೊಸ ಫೋಲ್ಡಬಲ್ ಫೋನ್‌ಗಳೊಂದಿಗೆ ಉನ್ನತ-ಮಟ್ಟದ ಕಾರ್ಯಕ್ಷಮತೆಯನ್ನು ನಿರೀಕ್ಷಿಸಬಹುದು.
-ಸ್ಯಾಮ್ಸಂಗ್ನ ಫೋಲ್ಡಬಲ್ ಫೋನ್‌ಗಳಲ್ಲಿ ಕ್ಯಾಮೆರಾ ವೈಶಿಷ್ಟ್ಯವನ್ನು ಸುಧಾರಿಸಲಾಗಿದೆ. ಹಿಂದಿನ Z ಫೋಲ್ಡ್ 4 ಸ್ಮಾರ್ಟ್‌ಫೋನ್ ಕಡಿಮೆ ಬೆಳಕಿನಲ್ಲಿ ಮತ್ತು ಹಗಲು ಬೆಳಕಿನಲ್ಲಿ ಮೋಡಿಮಾಡುವ ಫೋಟೋ ಬರುತ್ತಿತ್ತು. ಹೊಸ ಫೋನಿನಲ್ಲಿ ಇದು ಇನ್ನಷ್ಟು ಉತ್ತಮವಾಗಿದೆ.
-ಎರಡೂ ಫೋನ್‌ಗಳಲ್ಲಿ ಅನಿಮೇಷನ್‌ಗಳು ಸಾಕಷ್ಟು ಮೃದುವಾಗಿರುತ್ತವೆ ಮತ್ತು ಡಿಸ್‌ಪ್ಲೇಗಳು ಸಹ ಅದ್ಭುತವಾಗಿದೆ. ಗ್ಲಾಸ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಪ್ರೀಮಿಯಂ ವಿನ್ಯಾಸದಲ್ಲಿದೆ. ಡಿಸ್ ಪ್ಲೇಯನ್ನು ಮಡಿಸಿದಾಗ ಅವುಗಳ ನಡುವೆ ಯಾವುದೇ ಅಂತರವಿಲ್ಲ. ಸ್ಯಾಮ್‌ಸಂಗ್ ಇವೆರಡರಲ್ಲೂ LTPO ಪ್ಯಾನೆಲ್‌ಗಳನ್ನು ನೀಡಿದೆ. ಅಂದರೆ ರಿಫ್ರೆಶ್ ದರವು ಸ್ವಯಂಚಾಲಿತವಾಗಿ 1Hz ನಿಂದ 120Hz ಗೆ ಸರಿಹೊಂದಿಸುತ್ತದೆ.
-ಎರಡೂ ಫೋನ್‌ಗಳಲ್ಲಿನ ಬ್ಯಾಟರಿಗಳು ದೊಡ್ಡದಾಗಿಲ್ಲ, ಆದರೆ ಸ್ಯಾಮ್‌ಸಂಗ್ ಕನಿಷ್ಠ 25W ವೇಗದ ಚಾರ್ಜರ್‌ಗೆ ಬೆಂಬಲವನ್ನು ಒದಗಿಸಿದೆ. ಆದಾಗ್ಯೂ, ನೀವು ಈ ಸ್ಮಾರ್ಟ್ಫೋನ್ಗಳಿಗೆ ಚಾರ್ಜರ್ ಅನ್ನು ಖರೀದಿಸಬೇಕಾಗುತ್ತದೆ.
-ಈ ಸ್ಯಾಮ್‌ಸಂಗ್ ಫೋಲ್ಡಬಲ್ ಫೋನ್‌ಗಳು IPX8 ರೇಟಿಂಗ್‌ಗೆ ಬೆಂಬಲವನ್ನು ಹೊಂದಿವೆ, ಅಂದರೆ ಇವು ವಾಟರ್ ಪ್ರೂಫ್ ಆಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ