AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tech Tips: ಕಂಪ್ಯೂಟರ್ ಎದುರು ಮೌಸ್ ಬಳಸುವಾಗ ಈ ತಪ್ಪು ಮಾಡದಿರಿ

ಸತತವಾಗಿ ಮೌಸ್ ಬಳಸುವವರ ಮಣಿಕಟ್ಟಿನ ಕೊಂಚ ಮೇಲೆ ಅಂದರೆ ಕಿರುಬೆರಳಿನ ಕೆಳಗೆ ಚರ್ಮ ಗಡಸಾಗಿರುತ್ತದೆ. ಇದು ಹಸ್ತವನ್ನು ಮೌಸ್ ಪ್ಯಾಡ್ ಮೇಲೆ ಸತತವಾಗಿ ಮುಂದೆ ಹಿಂದೆ ಮೌಸ್ ಓಡಿಸುವ ಮೂಲಕ ಈ ಭಾಗವೂ ಉಜ್ಜಿ ಆಗಿರುವ ಗಡಸುತನ. ಕೆಲವರಲ್ಲಿ ಇದು ಕಲೆಯಂತೆ ಕಪ್ಪಗೂ ಆಗಿರುತ್ತದೆ. ಇದನ್ನು ತಡೆಯಲು ಸರಿಯಾದ ಉಪಾಯವೆಂದರೆ ಮೌಸ್ ಪ್ಯಾಡ್ ಮತ್ತು ರಿಸ್ಟ್ ಪ್ಯಾಡ್ ಎಂಬ ಮಣಿಕಟ್ಟಿನ ದಿಂಬು ಬಳಸುವುದು.

Tech Tips: ಕಂಪ್ಯೂಟರ್ ಎದುರು ಮೌಸ್ ಬಳಸುವಾಗ ಈ ತಪ್ಪು ಮಾಡದಿರಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jan 03, 2025 | 3:37 PM

Share

ಕಂಪ್ಯೂಟರ್ ಇಂದು ಹೆಚ್ಚಿನವರು ಬಳಸುವ ಎಲೆಕ್ಟ್ರನಿಕ್ ಸಾಧನವಾಗಿದೆ. ಎಲ್ಲೆಲ್ಲಿ ಕಂಪ್ಯೂಟರ್ ಇದೆಯೋ ಅಲ್ಲೆಲ್ಲಾ ಕೀಬೋರ್ಡ್, ಮೌಸ್ ಗಳು ಅನಿವಾರ್ಯ. ಇವುಗಳ ಬಳಕೆ ಹೆಚ್ಚಿದಂತೆಯೇ ಇವುಗಳನ್ನು ಸರಿಯಾಗಿ ಬಳಸದೇ ನಮ್ಮ ದೇಹ ಹಲವು ತೊಂದರೆಗಳಿಗೂ ಎದುರಾಗುತ್ತದೆ ಎಂಬುದು ಅನೇಕರಿಗೆ ತಿಳಿದಿರದ ಸಂಗತಿ. ಅಂದರೆ ಕಂಪ್ಯೂಟರ್ ಪರದೆ ಸೂಕ್ತ ಸ್ಥಳದಲ್ಲಿ ಇಲ್ಲದೇ ಮೇಲೆ ಕೆಳಗೆ ಅಥವಾ ಅಗತ್ಯಕ್ಕಿಂತ ಹೆಚ್ಚು ದೂರದಲ್ಲಿದ್ದ ಕಾರಣ ಎದುರಾಗುವ ಬೆನ್ನು ನೋವು, ಕೀಬೋರ್ಡ್ ಸರಿಯಾದ ಜಾಗದಲ್ಲಿಲ್ಲದೇ ಇರುವ ಕಾರಣ ಎದುರಾಗುವ ಮೊಣಕೈ ನೋವು ಮತ್ತು ಮೌಸ್ ಬಳಕೆಯನ್ನು ನಿರಂತರವಾಗಿ ಮಾಡುವ ಕಾರಣ ಎದುರಾಗುವ ಮಣಿಕಟ್ಟಿನ ನೋವು. ಹೀಗೆ ನಾನಾ ತೊಂದರೆ ಇದೆ.

ಮೌಸ್ ಹಿಡಿಯಲು ಒಂದು ಸರಿಯಾದ ವಿಧಾನವಿದೆ. ಅದೆಂದರೆ ಮಣಿಕಟ್ಟಿನ ಕೆಳಗೆ ಚಿಕ್ಕ ಆಧಾರವೊಂದನ್ನು ಇರಿಸಿ ಹಸ್ತ ಮಡಚದೇ ಬೆರಳುಗಳನ್ನೂ ಮಡಚದೆ ಸುಲಭವಾಗಿ ಹಿಡಿಯುವುದು. ಹೀಗೆ ಹಿಡಿಯಬೇಕೆಂತಲೇ ಇದನ್ನು ಈ ರೀತಿಯಾಗಿ ವಿನ್ಯಾಸಮಾಡಲಾಗಿದ್ದು ಇದರ ರೂಪ ನಮ್ಮ ಗಣಪನ ವಾಹನವನ್ನೇ ಹೋಲುವ ಕಾರಣ ಇದಕ್ಕೆ ಮೌಸ್ ಎಂದು ಹೆಸರಿಡಲಾಗಿದೆ. ಅಂದರೆ ಯಾವುದೇ ಕಾರಣಕ್ಕೂ ಮಣಿಕಟ್ಟಿನ ಮೇಲೆ ಭಾರ ಬೀಳಬಾರದು. ಒಂದು ವೇಳೆ ನೀವು ಇಡೀ ದಿನ ಮೌಸ್ ಬಳಸುವ ಉದ್ಯೋಗದಲ್ಲಿರುವಿರಾದರೆ ಕೆಳಗೆ ನೀಡಿರುವ ಅಮೂಲ್ಯ ಮಾಹಿತಿಗಳು ನೀವು ಅರಿಯದೇ ಮಾಡುತ್ತಿರುವ ತಪ್ಪನ್ನು ತಿದ್ದಿ ಮುಂದೆಂದೋ ಆಗಬಹುದಾದ ದೊಡ್ಡ ತೊಂದರೆಯಿಂದ ತಪ್ಪಿಸಿಕೊಳ್ಳಬಹುದು.

ಸತತವಾಗಿ ಮೌಸ್ ಬಳಸುವವರ ಮಣಿಕಟ್ಟಿನ ಕೊಂಚ ಮೇಲೆ ಅಂದರೆ ಕಿರುಬೆರಳಿನ ಕೆಳಗೆ ಚರ್ಮ ಗಡಸಾಗಿರುತ್ತದೆ. ಇದು ಹಸ್ತವನ್ನು ಮೌಸ್ ಪ್ಯಾಡ್ ಮೇಲೆ ಸತತವಾಗಿ ಮುಂದೆ ಹಿಂದೆ ಮೌಸ್ ಓಡಿಸುವ ಮೂಲಕ ಈ ಭಾಗವೂ ಉಜ್ಜಿ ಆಗಿರುವ ಗಡಸುತನ. ಕೆಲವರಲ್ಲಿ ಇದು ಕಲೆಯಂತೆ ಕಪ್ಪಗೂ ಆಗಿರುತ್ತದೆ. ಇದನ್ನು ತಡೆಯಲು ಸರಿಯಾದ ಉಪಾಯವೆಂದರೆ ಮೌಸ್ ಪ್ಯಾಡ್ ಮತ್ತು ರಿಸ್ಟ್ ಪ್ಯಾಡ್ ಎಂಬ ಮಣಿಕಟ್ಟಿನ ದಿಂಬು ಬಳಸುವುದು (ಇವೆರಡೂ ಒಂದೇ ಫಲದಲ್ಲಿರುವ ಮೌಸ್ ಪ್ಯಾಡ್ ಇನ್ನೂ ಉತ್ತಮ) ಕಾಲಕಾಲಕ್ಕೆ ಎಡಗೈಗೆ ಮೌಸ್ ಬಳಸುವುದೂ ಇನ್ನೊಂದು ಕ್ರಮ. ಆದರೆ ಇದರಿಂದ ನಮ್ಮ ಸಾಮಾನ್ಯ ವೇಗ ಕಡಿಮೆಯಾಗುವ ಕಾರಣ ಧಾವಂತವಿಲ್ಲದ ಕೆಲಸದ ಸಮಯದಲ್ಲಿ ಎಡಗೈ (ಎಡಗೈ ಅಭ್ಯಾಸವಿರುವವರಲ್ಲಿ ಬಲಗೈ) ಬಳಸಬಹುದು.

ಇನ್ನೂ ಕಂಪ್ಯೂಟರ್ ಮುಂದೆ ಕುಳಿತಾಗ ನಮ್ಮ ಮೊಣಕೈಗಳು ಕುರ್ಚಿಯ ಕೈಗಳ ಮೇಲೆ ಯಾವುದೇ ಒತ್ತಡವಿಲ್ಲದೇ ಕುಳಿತುಕೊಳ್ಳುವಂತಾಗಬೇಕು. ಇದೇ ಕಾರಣಕ್ಕೆ ಇಂದು ಲಭ್ಯವಿರುವ ಕಂಪ್ಯೂಟರ್ ಮೇಜಿನ ಜೊತೆ ಕುಳಿತುಕೊಳ್ಳುವ ಕುರ್ಚಿಯ ಈ ಕೈಗಳನ್ನೂ ಮೇಲೆ ಕೆಳಗೆ ಮಾಡುವಂತೆ ನಿರ್ಮಿಸಿರಲಾಗಿರುತ್ತದೆ. ಒಂದು ವೇಳೆ ಕೈಗಳಿಗೆ ಯಾವುದೇ ಆಧಾರವಿಲ್ಲದೇ ಮೌಸ್ ನಡೆಸುತ್ತಿದ್ದರೆ ಕೊಂಚ ಕಾಲಕ್ಕೇ ಮೊಣಕೈಯಲ್ಲಿ ನೋವು ಬರುತ್ತದೆ. ಇದನ್ನು ತಡೆಯಲು ನಿಮ್ಮ ಕುರ್ಚಿಯ ಕೈಗಳ ಎತ್ತರಕ್ಕೆ ಸರಿಯಾಗಿ ಮೌಸ್ ಮತ್ತು ಕೀಬೋರ್ಡ್ ಗಳನ್ನು ಇರಿಸುವುದು. ಕೊಂಚ ಕೆಳಗಿದ್ದರೂ ಪರವಾಗಿಲ್ಲ, ಆದರೆ ಎತ್ತರದಲ್ಲಿರಕೂಡದು ಅಷ್ಟೆ. ಕೀಬೋರ್ಟ್ ಸುಮಾರು ಮೂವತ್ತು ಡಿಗ್ರಿ ಕೋನದಲ್ಲಿ ಓರೆಯಾಗಿದ್ದು ಮೊಣಕೈ ಕುರ್ಚಿಯ ಕೈಮೇಲೆ ಇದ್ದಾಗ ಇದನ್ನೇ ಕೇಂದ್ರವಾಗಿಸಿ ಹಸ್ತವನ್ನು ಬಲಭಾಗದತ್ತ ತಿರುಗಿಸಿದರೆ ಮೌಸ್ ಸುಲಭವಾಗಿ ಸಿಗುವಂತಿರಬೇಕು.

ಕಂಪ್ಯೂಟರ್ ಮುಂದೆ ದಿನಪೂರ್ತಿ ಕುಳಿತು ಹೊರಬರುವವರನ್ನು ಕೊಂಚ ಗಮನಿಸಿದರೆ ಇವರೆಲ್ಲರಿಗೂ ಕೊಂಚವಾದರೂ ಬೆನ್ನು, ಭುಜನೋವುಗಳು ಕಾಡುತ್ತಿವೆ ಎಂದು ಗೊತ್ತಾಗುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಮಾನಿಟರ್ ನೋಡುವ ಭರದಲ್ಲಿ ಕೊಂಚವೇ ಬಗ್ಗುತ್ತೇವೆ. ಇದು ನಮ್ಮ ಭುಜ, ಕುತ್ತಿಗೆಯ ಸ್ನಾಯುಗಳಿಗೆ ಹೆಚ್ಚಿನ ಸೆಳೆತ ನೀಡುತ್ತದೆ. ಸತತವಾಗಿ ಹೀಗೇ ಮಾಡುತ್ತಿರುವ ಕಾರಣ ದಿನದ ಕೊನೆಯಲ್ಲಿ ಈ ನೋವೆಲ್ಲಾ ಒಂದುಗೂಡಿ ದೊಡ್ಡನೋವಾಗಿ ಹೊರಹೊಮ್ಮುತ್ತದೆ. ಇದಕ್ಕೆ ಪರಿಹಾರವೆಂದರೆ ಈ ಸೆಳೆತಕ್ಕೆ ವಿರುದ್ದವಾದ ಕೆಲವು ವ್ಯಾಯಾಮಗಳನ್ನು ಆಗಾಗ ಮಾಡುತ್ತಿರುವುದು. ಭುಜಗಳನ್ನು ಹಿಂದೆ ವಾಲಿಸುವುದು. ಬಲಗೈ ಬಲಹಣೆಗೆ ಒತ್ತಿ ಕುತ್ತಿಗೆಯನ್ನು ಬಲಭಾಗಕ್ಕೆ ಒತ್ತುವುದು, ಎರಡೂ ಕೈಗಳನ್ನು ಕೈಗಳ ಹಿಂದೆ ಕಟ್ಟಿ ತಲೆಯನ್ನು ಹಿಂದಕ್ಕೆ ವಾಲಿಸಲು ಒತ್ತಡ ನೀಡುವುದು ಮೊದಲಾದ ವ್ಯಾಯಾಮಗಳನ್ನು ಮಾಡುತ್ತಿರಬೇಕು.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಲ್ಲಿ ಕಾಲ್ ಅನ್ನು ಶೆಡ್ಯೂಲ್ ಮಾಡೋದು ಹೇಗೆ ಗೊತ್ತೇ?: ಇಲ್ಲಿದೆ ಟ್ರಿಕ್

ಇಡೀ ದಿನ ಮೌಸ್ ಮತ್ತು ಕೀಪ್ಯಾಡ್ ಗಳಲ್ಲಿ ಕೆಲಸ ಮಾಡುವವರಿಗೆ ಕೈಗಳಲ್ಲಿ ನೋವು ಸಾಮಾನ್ಯವಾಗಿರುತ್ತದೆ. ಏಕೆಂದರೆ ಟೈಪಿಂಗ್ ಹಾಗೂ ಮೌಸ್ ಅನ್ನು ಕ್ಲಿಕ್ ಮಾಡಲು ನಮ್ಮ ಕೆಲವೇ ಸ್ನಾಯುಗಳ ಬಳಕೆಯಾಗುತ್ತಿದ್ದರೂ ಇದೇ ಸ್ನಾಯುಗಳ ಮೇಲೆ ಸತತವಾಗಿ ಇಡೀ ದಿನ ಒತ್ತಡ ಬೀಳುವ ಕಾರಣ ಈ ಸ್ನಾಯುಗಳು ದಣಿಯುತ್ತವೆ. ಆದರೆ ಸರಿಯಾದ ಭಂಗಿಯಲ್ಲಿ ಕುಳಿತು ಕನಿಷ್ಟ ಒತ್ತಡ ನೀಡುವ ಮೂಲಕ ಈ ನೋವನ್ನೂ ಕನಿಷ್ಟಗೊಳಿಸಬಹುದು. ಇದಕ್ಕೆ ಕೀಬೋರ್ಡ್ ಮತ್ತು ನಮ್ಮ ಮೊಣಕೈ ಸರಿಯಾದ ಎತ್ತರದಲ್ಲಿರಬೇಕು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್