Tech Tips: ವಾಟ್ಸ್ಆ್ಯಪ್ನಲ್ಲಿ ಕಾಲ್ ಅನ್ನು ಶೆಡ್ಯೂಲ್ ಮಾಡೋದು ಹೇಗೆ ಗೊತ್ತೇ?: ಇಲ್ಲಿದೆ ಟ್ರಿಕ್
ಈಗ ನೀವು ನಿಮ್ಮ ಪ್ರಮುಖ ಕರೆಗಳನ್ನು ವಾಟ್ಸ್ಆ್ಯಪ್ನಲ್ಲಿ ಶೆಡ್ಯೂಲ್ ಮಾಡಬಹುದು. ಈ ವೈಶಿಷ್ಟ್ಯದ ಮೂಲಕ ನೀವು ನೇರವಾಗಿ ವಾಟ್ಸ್ಆ್ಯಪ್ನಲ್ಲಿ ಕರೆಗಳನ್ನು ಶೆಡ್ಯೂಲ್ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ನೀವು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್‌ನ ಸಹಾಯವನ್ನು ತೆಗೆದುಕೊಳ್ಳಬೇಕಾಗಿಲ್ಲ. ನೀವು ವರ್ಚುವಲ್ ಮೀಟಿಂಗ್ ಹೊಂದಿಸುವ ಅಗತ್ಯ ಕೂಡ ಇಲ್ಲ.
ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಒಂದಲ್ಲ ಒಂದು ವಿಶೇಷ ಫೀಚರ್ಗಳನ್ನು ನೀಡುತ್ತಲೇ ಬರುತ್ತಿದೆ. ಇದೀಗ ಅಂತಹ ಒಂದು ಅದ್ಭುತ ಆಯ್ಕೆ ವಾಟ್ಸ್ಆ್ಯಪ್ ನೀಡಿದೆ. ನೀವು ವಾಟ್ಸ್ಆ್ಯಪ್ ಬಳಸುತ್ತಿದ್ದರೆ ಈ ಫೀಚರ್ ನಿಮಗೆ ತುಂಬಾ ಪ್ರಯೋಜನಕಾರಿ ಆಗಿದೆ. ಇದರ ಸಹಾಯದಿಂದ ನೀವು ಬಹಳಷ್ಟು ಪ್ರಯೋಜನ ಪಡೆಯುತ್ತೀರಿ. ಈಗ ನೀವು ನಿಮ್ಮ ಪ್ರಮುಖ ಕರೆಗಳನ್ನು ವಾಟ್ಸ್ಆ್ಯಪ್ನಲ್ಲಿ ಶೆಡ್ಯೂಲ್ ಮಾಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಪ್ರಮುಖ ಕರೆಗಳು, ಮೆಸೇಜ್, ಇನ್ವಿಟೇಷನ್ಗಳನ್ನು ನೀವು ತಪ್ಪಿಸಿಕೊಳ್ಳುವುದಿಲ್ಲ ಮತ್ತು ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತದೆ.
ಈ ವೈಶಿಷ್ಟ್ಯದ ಮೂಲಕ ನೀವು ನೇರವಾಗಿ ವಾಟ್ಸ್ಆ್ಯಪ್ನಲ್ಲಿ ಕರೆಗಳನ್ನು ಶೆಡ್ಯೂಲ್ ಮಾಡಲು ಸಾಧ್ಯವಾಗುತ್ತದೆ. ಇದಕ್ಕಾಗಿ ನೀವು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್‌ನ ಸಹಾಯವನ್ನು ತೆಗೆದುಕೊಳ್ಳಬೇಕಾಗಿಲ್ಲ. ನೀವು ವರ್ಚುವಲ್ ಮೀಟಿಂಗ್ ಹೊಂದಿಸುವ ಅಗತ್ಯ ಕೂಡ ಇಲ್ಲ.
ವಾಟ್ಸ್ಆ್ಯಪ್ ಕಾಲ್ ಶೆಡ್ಯೂಲ್ ಮಾಡುವುದು ಹೇಗೆ?:
ವಾಟ್ಸ್ಆ್ಯಪ್ ಕರೆಯನ್ನು ಶೆಡ್ಯೂಲ್ ಮಾಡಲು, ನಿಮ್ಮ ಫೋನ್‌ನಲ್ಲಿ ವಾಟ್ಸ್ಆ್ಯಪ್ ತೆರೆಯಿರಿ. ಇದರ ನಂತರ ನೀವು ಕರೆಯನ್ನು ನಿಗದಿಪಡಿಸಲು ಬಯಸುವ ಗ್ರೂಪ್ಗೆ ಹೋಗಿ. ಗ್ರೂಪ್ಗೆ ಹೋದ ನಂತರ, ನೀವು ಮೆಸೇಜ್ ಲಿಸ್ಟ್ನ ಕೆಳಗಿನ ಎಡಭಾಗದಲ್ಲಿ ಪ್ಲಸ್ ಐಕಾನ್ ಅನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ.
ಬಲಭಾಗದಲ್ಲಿ ಫೋಟೋ, ಕ್ಯಾಮೆರಾ, ಲೊಕೇಶನ್ ಜೊತೆಗೆ ಹಲವು ಆಯ್ಕೆಗಳೂ ಕಾಣಿಸುತ್ತವೆ. ಇವೆಲ್ಲವುಗಳಲ್ಲಿ, ಈವೆಂಟ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಈಗ ಈವೆಂಟ್ ಅನ್ನು ರಚಿಸಿ, ಈವೆಂಟ್‌ನ ಹೆಸರನ್ನು ಬರೆಯಿರಿ ಮತ್ತು ಸಮಯವನ್ನು ಹೊಂದಿಸಿ. ನೀವು ಲಿಂಕ್ ಮೂಲಕ ಮೀಟಿಂಗ್ ಪ್ರಾರಂಭಿಸಲು ಬಯಸಿದರೆ, ಟಾಗಲ್ ಅನ್ನು ಆನ್ ಮಾಡಿ. ಇದರಲ್ಲಿ ನೀವು ವಿಡಿಯೋ ಮತ್ತು ಆಡಿಯೋ ಕರೆಗಳ ನಡುವೆ ಆಯ್ಕೆ ಮಾಡಬಹುದು. ಇದರ ನಂತರ ನೀವು ಕೊನೆಯದಾಗಿ ಕಳುಹಿಸುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಇದನ್ನೂ ಓದಿ: ಬಜೆಟ್ 2025 ತಯಾರಿ ಪ್ರಾರಂಭ: ಮೇಕ್ ಇನ್ ಇಂಡಿಯಾ ಮೊಬೈಲ್ ಫೋನ್‌ಗಳು ಅಗ್ಗವಾಗಲಿದೆಯೇ?
ಶೆಡ್ಯೂಲ್ ಕಾಲ್ ಅನ್ನು ರದ್ದುಗೊಳಿಸುವ ಪ್ರಕ್ರಿಯೆ:
ಕರೆಗಳನ್ನು ಶೆಡ್ಯೂಲ್ ಮಾಡಿದ ನಂತರ, ಯಾವುದೇ ಕಾರಣಕ್ಕಾಗಿ ನೀವು ಇದನ್ನು ರದ್ದುಗೊಳಿಸಬೇಕಾದರೆ ಚಿಂತಿಸಬೇಡಿ. ಇದಕ್ಕೆ ಕೂಡ ಸುಲಭವಾದ ಪ್ರಕ್ರಿಯೆ ಇದೆ. ನೀವು ಚಾಟ್‌ಗಳಿಗೆ ಹೋಗಬೇಕು ಮತ್ತು ಅದೇ ಮೀಟಿಂಗ್ ವೇಳಾಪಟ್ಟಿಯಲ್ಲಿ ಎಡಿಟ್ ಈವೆಂಟ್ ಅನ್ನು ಕ್ಲಿಕ್ ಮಾಡಬೇಕು. ಇದರ ನಂತರ ನೀವು ರದ್ದು ಕ್ಲಿಕ್ ಮಾಡಬಹುದು.
ವಾಟ್ಸ್ಆ್ಯಪ್ ಚಾಟ್ ಲಾಕ್ ಮಾಡಿ:
ಚಾಟ್ ಅನ್ನು ಲಾಕ್ ಮಾಡಲು, ನೀವು ಲಾಕ್ ಮಾಡಲು ಬಯಸುವ ಚಾಟ್‌ಗೆ ಹೋಗಿ. ಇದರ ನಂತರ ಪ್ರೊಫೈಲ್ ಆಯ್ಕೆಗೆ ಹೋಗಿ ಮತ್ತು ಚಾಟ್ ಲಾಕ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರ ನಂತರ, ಫಿಂಗರ್‌ಪ್ರಿಂಟ್‌ನೊಂದಿಗೆ ಈ ಚಾಟ್ ಅನ್ನು ಲಾಕ್ ಮಾಡಿ ಅಥವಾ ಫೇಸ್ ಐಡಿ ಆಯ್ಕೆಯೊಂದಿಗೆ ಈ ಚಾಟ್ ಅನ್ನು ಲಾಕ್ ಮಾಡಬಹುದು.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ