Tech Tips: ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ತೋರಿಸುವಂತೆ ಮಾಡಬೇಕಾ?: ಇಲ್ಲಿದೆ ಟ್ರಿಕ್

|

Updated on: Feb 20, 2023 | 7:04 PM

WhatsApp Tricks: ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್​ನಲ್ಲಿ ಇದ್ದರೂ ಆಫ್​ಲೈನ್ ಕಾಣಿಸುವಂತೆ ಮಾಡಬಹುದು. ಇದಕ್ಕೂ ಟ್ರಿಕ್​ಗಳಿವೆ. ಹಾಗಂತೆ ನೀವು ಥರ್ಡ್​ ಪಾರ್ಟಿ ಆ್ಯಪ್ ಮೊರೆ ಹೋಗಬೇಕು ಎಂದಿಲ್ಲ. ಬದಲಾಗಿ ವಾಟ್ಸ್​ಆ್ಯಪ್​ನಲ್ಲೇ ಕೆಲ ಸೆಟ್ಟಿಂಗ್​ಗಳನ್ನು ಬದಲಾಯಿಸಿ ಈರೀತಿ ಮಾಡಬಹುದು.

Tech Tips: ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್ ಇದ್ದರೂ ಆಫ್​ಲೈನ್ ತೋರಿಸುವಂತೆ ಮಾಡಬೇಕಾ?: ಇಲ್ಲಿದೆ ಟ್ರಿಕ್
WhatsAapp Tricks
Follow us on

ಮೆಟಾ (Meta) ಒಡೆತನದ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಇಂದು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ವಿಶ್ವದಲ್ಲಿ 2.24 ಬಿಲಿಯನ್ ತಿಂಗಳು ಬಳಕೆದಾರರನ್ನು ಹೊಂದಿದೆ. ವಾರಕ್ಕೆ ಒಂದರಂತೆ ಹೊಸ ಫೀಚರ್​​ಗಳನ್ನು ಪರಿಚತಿಸುವ ವಾಟ್ಸ್​ಆ್ಯಪ್​ನಲ್ಲಿ (WhatsApp) ಅನೇಕ ಮಂದಿಗೆ ತಿಳಿದಿರದ ಅದೆಷ್ಟೊ ಟ್ರಿಕ್​ಗಳು ಅಡಕವಾಗಿದೆ. ಅದು ಡಿಲೀಟ್ ಆದ ಮೆಸೇಜ್ ಅನ್ನು ನೋಡುವುದು ಇರಬಹುದು ಅಥವಾ ನಮ್ಮ ಡಿಪಿಯನ್ನು ಯಾರೆಲ್ಲ ನೋಡಿದ್ದಾರೆಂದು ತಿಳಿಯುವುದು ಇರಬಹುದು. ಅಂತೆಯೆ ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್​ನಲ್ಲಿ (Online) ಇದ್ದರೂ ಆಫ್​ಲೈನ್ ಕಾಣಿಸುವಂತೆ ಮಾಡಬಹುದು. ಇದಕ್ಕೂ ಟ್ರಿಕ್​ಗಳಿವೆ. ಹಾಗಂತೆ ನೀವು ಥರ್ಡ್​ ಪಾರ್ಟಿ ಆ್ಯಪ್ ಮೊರೆ ಹೋಗಬೇಕು ಎಂದಿಲ್ಲ. ಬದಲಾಗಿ ವಾಟ್ಸ್​ಆ್ಯಪ್​ನಲ್ಲೇ ಕೆಲ ಸೆಟ್ಟಿಂಗ್​ಗಳನ್ನು ಬದಲಾಯಿಸಿ ಈರೀತಿ ಮಾಡಬಹುದು.

ವಾಟ್ಸ್​ಆ್ಯಪ್​ನಲ್ಲಿ ನೀವು ಆನ್​ಲೈನ್​ನಲ್ಲಿ ಇದ್ದರೂ ಆಫ್​ಲೈನ್ ಇರುವಂತೆ ಕಾಣಲಿ ಈ ಕೆಳಗಿನ ಸೂತ್ರ ಅನುಸರಿಸಿ.

  • ಮೊದಲಿಗೆ ನಿಮ್ಮ ವಾಟ್ಸ್​ಆ್ಯಪ್ ಅನ್ನು ಹೊಸ ವರ್ಷನ್​ಗೆ ಅಪ್ಡೇಟ್ ಮಾಡಿಕೊಳ್ಳಿ.
  • ಆ ಬಳಿಕ, ವಾಟ್ಸ್​ಆ್ಯಪ್ ತೆರೆಯಿರಿ ಮತ್ತು ಸೆಟ್ಟಿಂಗ್ ಟ್ಯಾಬ್‌ಗೆ ಹೋಗಿ
  • ನಂತರ ಅಲ್ಲಿ ಕಾಣಿಸುವ ಪ್ರೈವಸಿ ಆಯ್ಕೆ ಮೇಲೆ ಕ್ಲಿಕ್ ಮಾಡಿ
  • ಈಗ ಮೊದಲಿಗೆ ಕಾಣಿಸುವ ಲಾಸ್ಟ್​ ಸೀನ್ ಮತ್ತು ಆನ್​ಲೈನ್ ಎಂಬ ಆಯ್ಕೆ ಸೆಲೆಕ್ಟ್ ಮಾಡಿರಿ
  • ಇಲ್ಲಿ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತದೆ. ನನ್ನ ಲಾಸ್ಟ್ ಸೀನ್ ಯಾರು ನೋಡಬೇಕು ಮತ್ತು ನಾನು ಆನ್​ಲೈನ್​ನಲ್ಲಿ ಇದ್ದಾಗ ಯಾರಿಗೆ ಕಾಣಬೇಕು?
  • ಆನ್​ಲೈನ್​ನಲ್ಲಿ ಇದ್ದಾಗ ಯಾರಿಗೆ ಕಾಣಬೇಕು ಎಂಬಲ್ಲಿ Everyone ಹಾಗೂ Same as Last Seen ಎರಡು ಆಯ್ಕೆ ಇದೆ
  • ಇಲ್ಲಿ ನಿಮಗೆ ಯಾವ ಆಯ್ಕೆ ಬೇಕೋ ಅದನ್ನು ಸೆಲೆಕ್ಟ್ ಮಾಡಿದರೆ ಆಯಿತು

Tech Tips: ವಾಟ್ಸ್​ಆ್ಯಪ್​ನಲ್ಲಿ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋ ಕಳುಹಿಸುವ ಟ್ರಿಕ್ ನಿಮಗೆ ಗೊತ್ತೇ?

ಇದನ್ನೂ ಓದಿ
POCO C55: ಪೋಕೋ C55 ಬಿಡುಗಡೆಗೆ ಒಂದೇ ದಿನ ಬಾಕಿ: ಇದು ಬಜೆಟ್ ಬೆಲೆಯ ಬಂಪರ್ ಸ್ಮಾರ್ಟ್​ಫೋನ್
WhatsApp Picture-in-Picture: ವಾಟ್ಸ್​ಆ್ಯಪ್ ವಿಡಿಯೋ ಕರೆಯಲ್ಲಿ ಬಂತು ಹೊಸ ಆಯ್ಕೆ: ಬಳಕೆದಾರರಿಂದ ಭಾರೀ ಮೆಚ್ಚುಗೆ
Meta Verified: ಹಣ ಕೊಟ್ಟು ಫೇಸ್​ಬುಕ್, ಇನ್​ಸ್ಟಾಗ್ರಾಮ್​ ಬ್ಲೂ ಟಿಕ್ ಪಡೆದುಕೊಳ್ಳಿ: ಮೆಟಾದಿಂದ ಮಹತ್ವದ ಘೋಷಣೆ
Tech Tips: 68GB, 128GB ಸ್ಟೊರೇಜ್ ಸಾಮರ್ಥ್ಯವೂ ಸಾಕಾಗ್ತಿಲ್ವಾ?: ಈ ಟ್ರಿಕ್ ಫಾಲೋ ಮಾಡಿ ಮೆಮೋರಿ ಹೆಚ್ಚಿಸಿ

ಒಂದೇ ಬಾರಿಗೆ 100 ಫೋಟೋ-ವಿಡಿಯೋ ಕಳುಹಿಸುವುದು ಹೇಗೆ?:

ಮೊನ್ನೆಯಷ್ಟೆ ವಾಟ್ಸ್​ಆ್ಯಪ್ ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ವಿಶೇಷ ಫೀಚರ್​ವೊಂದನ್ನು ಬಿಡುಗಡೆ ಮಾಡಿತ್ತು. ಅದುವೇ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋವನ್ನು ಕಳುಹಿಸುವ ಆಯ್ಕೆ. ಈ ಹಿಂದೆ ವಾಟ್ಸ್​ಆ್ಯಪ್​ನಲ್ಲಿ ಒಂದೇ ಬಾರಿಗೆ ಕೇವಲ 30 ಫೋಟೋಗಳನ್ನು ಮಾತ್ರ ಕಳುಹಿಸಬಹುದಾಗುತ್ತು, ಆದರೆ ಈ ಹೊಸ ಫೀಚರ್​ನ ಪ್ರಕಾರ ಇದರ ಮಿತಿಯನ್ನು ಹೆಚ್ಚಿಸಲಾಗಿದ್ದು 100 ಫೋಟೋಗಳನ್ನು ಅಥವಾ ವಿಡಿಯೋಗಳನ್ನು ಕಳುಹಿಸಬಹುದು. ಹಾಗಾದರೆ ವಾಟ್ಸ್​ಆ್ಯಪ್​ನಲ್ಲಿ ಒಂದೇ ಬಾರಿಗೆ 100 ಫೋಟೋ ಅಥವಾ ವಿಡಿಯೋ ಕಳುಹಿಸುವುದು ಹೇಗೆ ಎಂಬುದನ್ನು ನೋಡೋಣ.

  • ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ವಾಟ್ಸ್​ಆ್ಯಪ್ ತೆರೆಯಿರಿ
  • ಈಗ ನೀವು ಯಾರಿಗೆ ಫೋಟೋ ಅಥವಾ ವಿಡಿಯೋಗಳನ್ನು ಸೆಂಡ್‌ ಮಾಡಲು ಬಯಸುತ್ತೀರೊ ಅವರ ಚಾಟ್‌ ಓಪನ್ ಮಾಡಿ
  • ಸ್ಕ್ರೀನ್‌ ಕೇಳಭಾಗದಲ್ಲಿ ಕಾಣುವ ಲಗತ್ತು ಐಕಾನ್ (ಪೇಪರ್ ಕ್ಲಿಪ್) ಮೇಲೆ ಟ್ಯಾಪ್ ಮಾಡಿ
  • ನಂತರ ಫೋಟೋ ಅಥವಾ ವಿಡಿಯೋಗಳನ್ನು ಆಯ್ಕೆ ಮಾಡಲು ಪಟ್ಟಿಯಿಂದ “ಗ್ಯಾಲರಿ” ಸೆಲೆಕ್ಟ್ ಮಾಡಿ
  • ಇದೀಗ ನೀವು ನಿಮ್ಮ ಫೋಟೋ ಅಥವಾ ವಿಡಿಯೋಗಳನ್ನು ಸ್ಟೋರೇಜ್‌ ಮಾಡಿರುವ ಫೋಲ್ಡರ್ ತೆರೆಯಿರಿ
  • ನಂತರ ನೀವು ಶೇರ್‌ ಮಾಡಲು ಬಯಸುವ ವಿಡಿಯೋ, ಫೋಟೋವನ್ನು ಟ್ಯಾಪ್ ಮಾಡುವ ಮೂಲಕ ಆಯ್ಕೆ ಮಾಡಿ
  • ಮೊದಲ ಫೋಟೋ ಅಥವಾ ವಿಡಿಯೋ ಹೈಲೈಟ್ ಆಗುವವರೆಗೆ ಅದನ್ನು ಪ್ರೆಸ್‌ ಮಾಡಿ ಹಿಡಿದುಕೊಳ್ಳಬೇಕು
  • ನಂತರ ನೀವು ಶೇರ್‌ ಮಾಡಲು ಬಯಸುವ ಇತರ ಫೋಟೋ-ವಿಡಿಯೋಗಳ ಮೇಲೆ ಟ್ಯಾಪ್‌ ಮಾಡಬೇಕು
  • ಹೀಗೆ ನೀವು ಒಂದು ಭಾರಿಗೆ 100 ಫೋಟೋಗಳು ಅಥವಾ ವಿಡಿಯೋಗಳನ್ನು ಸೆಲೆಕ್ಟ್ ಮಾಡಿ ಸೆಂಡ್ ಮಾಡಬಹುದು

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ