Tech Tips: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಸಣ್ಣ ಟ್ರಿಕ್ ಮಾಡಿ, 1GB ಡೇಟಾ ಇಡೀ ದಿನ ಇರುತ್ತೆ

ಇಂದು ರೀಚಾರ್ಜ್ ಯೋಜನೆಗಳು ದುಬಾರಿಯಾಗಿರುವುದರಿಂದ, ಹೆಚ್ಚಿನ ಜನರು 1.5GB ಅಥವಾ 2GB ದೈನಂದಿನ ಡೇಟಾದ ರೀಚಾರ್ಜ್ ಯೋಜನೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂಟರ್ನೆಟ್‌ಗೆ ಸಂಬಂಧಿಸಿದ ನಮ್ಮ ಕೆಲಸವು ಎಷ್ಟು ಹೆಚ್ಚಾಗಿದೆಯೆಂದರೆ ದಿನದ ಅಂತ್ಯದ ಮುಂಚೆಯೇ ಸಂಪೂರ್ಣ ಡೇಟಾ ಖಾಲಿಯಾಗುತ್ತದೆ. ಈ ಟ್ರಿಕ್ ಮೂಲಕ ನಿಮ್ಮ ಡೇಟಾವನ್ನು ಖರ್ಚು ಮಾಡದಂತೆ ಉಳಿಸಬಹುದು.

Tech Tips: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಸಣ್ಣ ಟ್ರಿಕ್ ಮಾಡಿ, 1GB ಡೇಟಾ ಇಡೀ ದಿನ ಇರುತ್ತೆ
Mobile Data Saving Tips
Follow us
ಪ್ರೀತಿ ಭಟ್​, ಗುಣವಂತೆ
| Updated By: Vinay Bhat

Updated on:Jan 10, 2025 | 1:30 PM

Smartphone data Saving Tips and Tricks: ಇಂದಿನ ಬಿಡುವಿಲ್ಲದ ಜೀವನದಲ್ಲಿ ಸ್ಮಾರ್ಟ್‌ಫೋನ್ ಪ್ರಮುಖ ಗ್ಯಾಜೆಟ್ ಆಗಿದೆ. ದಿನನಿತ್ಯದ ಅನೇಕ ಕೆಲಸಗಳಿಗೆ ಮೊಬೈಲ್ ಫೋನ್‌ಗಳ ಅತ್ಯಗತ್ಯ. ನಮ್ಮ ಫೋನ್‌ನಲ್ಲಿ ಇಂಟರ್ನೆಟ್ ಇಲ್ಲದಿದ್ದರೆ ನಮ್ಮ ಅನೇಕ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಡೇಟಾ ಬೇಗನೆ ಖಾಲಿಯಾಗುವುದು ಕೂಡ ದೊಡ್ಡ ಸಮಸ್ಯೆಯಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಡೇಟಾ ಕೂಡ ವೇಗವಾಗಿ ಖಾಲಿಯಾಗುತ್ತಿದ್ದರೆ, ನಾವು ನಿಮಗೆ ಕೆಲವು ಸಲಹೆಗಳನ್ನು ಹೇಳಲಿದ್ದೇವೆ. ಇದರ ಮೂಲಕ ನೀವು ದಿನವಿಡೀ 1GB ಡೇಟಾವನ್ನು ಉಳಿಸಬಹುದು.

ಇಂದು ರೀಚಾರ್ಜ್ ಯೋಜನೆಗಳು ದುಬಾರಿಯಾಗಿರುವುದರಿಂದ, ಹೆಚ್ಚಿನ ಜನರು 1.5GB ಅಥವಾ 2GB ದೈನಂದಿನ ಡೇಟಾದ ರೀಚಾರ್ಜ್ ಯೋಜನೆಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂಟರ್ನೆಟ್‌ಗೆ ಸಂಬಂಧಿಸಿದ ನಮ್ಮ ಕೆಲಸವು ಎಷ್ಟು ಹೆಚ್ಚಾಗಿದೆಯೆಂದರೆ ದಿನದ ಅಂತ್ಯದ ಮುಂಚೆಯೇ ಸಂಪೂರ್ಣ ಡೇಟಾ ಖಾಲಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇನ್ನಷ್ಟು ಹೆಚ್ಚು ಹಣ ವ್ಯಹಿಸಿ ಡೇಟಾ ಆಡನ್-ಆನ್ ತೆಗೆದುಕೊಳ್ಳುತ್ತೇವೆ. ಆದರೆ, ಕೆಲವು ಸುಲಭವಾದ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಡೇಟಾವನ್ನು ಖರ್ಚು ಮಾಡದಂತೆ ಉಳಿಸಬಹುದು.

ಅಟೊಮೆಟಿಕೆ ಅಪ್ಡೇಟ್ ತಕ್ಷಣವೇ ನಿಲ್ಲಿಸಿ:

ಡೇಟಾವನ್ನು ತ್ವರಿತವಾಗಿ ಖಾಲಿ ಮಾಡಲು ಗೂಗಲ್ ಪ್ಲೇ ಸ್ಟೋರ್ ಸಹ ಒಂದು ಪ್ರಮುಖ ಕಾರಣವಾಗಿದೆ. ಆಟೋ ಅಪ್‌ಡೇಟ್‌ನ ವೈಶಿಷ್ಟ್ಯವು ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿದೆ. ಈ ವೈಶಿಷ್ಟ್ಯವು ಕಾಲಕಾಲಕ್ಕೆ ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳನ್ನು ಸ್ವಯಂಚಾಲಿತವಾಗಿ ಅಪ್ಡೇಟ್ ಮಾಡುತ್ತದೆ. ಇದರಿಂದಾಗಿ ಡೇಟಾ ಕೂಡ ಬೇಗನೆ ಖಾಲಿಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಫೋನ್‌ನಲ್ಲಿ ಈ ಸೆಟ್ಟಿಂಗ್ ಸಹ ಆನ್ ಆಗಿರುವ ಸಾಧ್ಯತೆಯಿದೆ, ಇದರಿಂದಾಗಿ ಡೇಟಾ ತ್ವರಿತವಾಗಿ ಖಾಲಿಯಾಗುತ್ತದೆ. ನೀವು ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗುವ ಮೂಲಕ ಮತ್ತು ಅಪ್ಲಿಕೇಶನ್ ಡೌನ್‌ಲೋಡ್ ಆದ್ಯತೆಗಳಿಗೆ ತೆರಳಿ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು.

X AI Grok: ಎಕ್ಸ್​ನಲ್ಲೂ ಬಂತು ಎಐ: ಬಳಕೆದಾರರಿಗಾಗಿ ಗ್ರೋಕ್ ಎಐ ಬಿಡುಗಡೆ

ಡೇಟಾ ಸೇವರ್ ಮೋಡ್ ಬಳಸಿ:

ಡೇಟಾ ಸೇವರ್ ಮೋಡ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ. ಇದನ್ನು ಬಳಸುವುದರಿಂದ ನಿಮ್ಮ ಡೇಟಾದ ಅತಿಯಾದ ಬಳಕೆಯನ್ನು ನೀವು ತಡೆಯಬಹುದು. ಬ್ಯಾಟರಿ ಸೇವರ್ ಮೋಡ್ ಹೇಗೆ ಕಾರ್ಯನಿರ್ವಹಿಸುವಂತೆಯೇ ಇದು ಕೂಡ ಕೆಲಸ ಮಾಡುತ್ತದೆ. ಈ ವೈಶಿಷ್ಟ್ಯದ ಸಹಾಯದಿಂದ ನೀವು ಡೇಟಾ ಬಳಕೆಯ ಮಿತಿಯನ್ನು ಸಹ ಹೊಂದಿಸಬಹುದು. ನೀವು ಸೆಟ್ಟಿಂಗ್‌ಗಳಿಗೆ ಹೋಗಿ ಡೇಟಾ ಸೇವರ್ ಮೋಡ್ ಅನ್ನು ಸರ್ಚ್ ಮಾಡಬಹುದು ಮತ್ತು ಅದನ್ನು ಸಕ್ರಿಯಗೊಳಿಸಬಹುದು.

ಯಾವ ಅಪ್ಲಿಕೇಶನ್ ಹೆಚ್ಚು ಡೇಟಾ ಬಳಸುತ್ತಿದೆ:

ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ವಿವಿಧ ಅಪ್ಲಿಕೇಶನ್‌ಗಳು ಡೇಟಾವನ್ನು ವಿಭಿನ್ನ ರೀತಿಯಲ್ಲಿ ಬಳಸುತ್ತವೆ. ಹೆಚ್ಚಿನ ಅಗತ್ಯವಿಲ್ಲದ ಇಂತಹ ಅಪ್ಲಿಕೇಶನ್‌ಗಳನ್ನು ನಾವು ಅನೇಕ ಬಾರಿ ಡೌನ್‌ಲೋಡ್ ಮಾಡಿ ಇರಿಸುತ್ತೇವೆ ಆದರೆ ಅವುಗಳು ಬ್ಯಾಕ್​ಗ್ರೌಂಡ್​ನಲ್ಲಿ ಸಾಕಷ್ಟು ಡೇಟಾವನ್ನು ಬಳಸುತ್ತವೆ. ನೀವು ಫೋನ್‌ನ ಸೆಟ್ಟಿಂಗ್‌ಗಳಿಗೆ ಹೋಗಿ, ವೈ-ಫೈ ಮತ್ತು ನೆಟ್‌ವರ್ಕ್‌ಗೆ ಹೋಗಿ ಮತ್ತು ಯಾವ ಅಪ್ಲಿಕೇಶನ್‌ನಿಂದ ಎಷ್ಟು ಡೇಟಾವನ್ನು ಬಳಸಲಾಗುತ್ತಿದೆ ಎಂಬುದನ್ನು ನೋಡಿ ಡೇಟಾ ಬಳಕೆಯನ್ನು ಹತೋಟಿಯಲ್ಲಿ ಇಡಬಹುದು.

ವಾಟ್ಸ್​ಆ್ಯಪ್ ಸೆಟ್ಟಿಂಗ್‌ಗಳಲ್ಲಿ ಬದಲಾವಣೆಗಳನ್ನು ಮಾಡಿ:

ನಿಮ್ಮ ಮೊಬೈಲ್ ಡೇಟಾ ತ್ವರಿತವಾಗಿ ಖಾಲಿಯಾಗುತ್ತಿದ್ದರೆ, ಇದಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ನಿಮ್ಮ ವಾಟ್ಸ್​ಆ್ಯಪ್ ಅಪ್ಲಿಕೇಶನ್. ವಾಟ್ಸ್​ಆ್ಯಪ್​ನಲ್ಲಿ ಪ್ರತಿದಿನ ಎಷ್ಟೋ ಫೋಟೋಗಳು ಮತ್ತು ವಿಡಿಯೋಗಳನ್ನು ಸ್ವೀಕರಿಸಲಾಗುತ್ತದೆ. ನೀವು ವಾಟ್ಸ್ಆ್ಯಪ್​ನಲ್ಲಿ ಅಟೊ ಡೌನ್‌ಲೋಡ್ ಅನ್ನು ಹೊಂದಿಸಿದ್ದರೆ, ಅಗತ್ಯವಿಲ್ಲದ ಫೋಟೋಗಳನ್ನು ಸಹ ಡೌನ್‌ಲೋಡ್ ಮಾಡಲಾಗುತ್ತದೆ. ಡೌನ್‌ಲೋಡ್ ಮಾಡಿದಾಗ ಡೇಟಾ ಕೂಡ ಹೆಚ್ಚು ವೆಚ್ಚವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಾಟ್ಸ್​ಆ್ಯಪ್​ನ ಅಟೊ ಡೌನ್‌ಲೋಡ್ ಅನ್ನು ನಿಷ್ಕ್ರಿಯಗೊಳಿಸಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:30 pm, Fri, 10 January 25

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ