ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್ (Aadhaar Card) ಎಂಬುದು ಒಂದು ಪ್ರಮುಖ ದಾಖಲೆ. ಆದರೆ ಆಧಾರ್ ಕಾರ್ಡ್ ಅನ್ನು ಎಲ್ಲೆಡೆ ಕೊಂಡೊಯ್ಯಲು ಸಾಧ್ಯವಿಲ್ಲ. ಇದಕ್ಕಾಗಿಯೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದವರು ಬಳಕೆದಾರರ ಅನುಕೂಲಕ್ಕಾಗಿ ಆಧಾರ್ ಆ್ಯಪ್ ಅನ್ನು ಉನ್ನತೀಕರಿಸಿದ್ದಾರೆ. ಈ ಆ್ಯಪ್ ಆಂಡ್ರಾಯ್ಡ್ (Android) ಮತ್ತು ಐಓಸ್ (iOS) ಅಧಿಕೃತ ಆ್ಯಪ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ ಆಧಾರ್ ಕಾರ್ಡಿನ ಸಾಫ್ಟ್ ಕಾಪಿ ಡೌನ್‌ಲೋಡ್ ಮಾಡುವುದರ ಜತೆಗೆ ಆಧಾರ್‌ಗೆ ಸಂಬಂಧಿಸಿದ ಹಲವು ಸೇವೆಗಳು ಲಭ್ಯವಿದೆ. ಈ ಆ್ಯಪ್ ಮೂಲಕ ನಿಮ್ಮ ಮೊಬೈಲ್ ಫೋನ್‌ನಲ್ಲಿ ಆಧಾರ್‌ಗೆ ಸಂಬಂಧಿಸಿದ 35ಕ್ಕೂ ಹೆಚ್ಚು ಸೇವೆಗಳ ಲಾಭವನ್ನು ಪಡೆಯಬಹುದು. mAadhaar ಅಪ್ಲಿಕೇಶನ್ ಬಳಕೆದಾರರಿಗೆ ಅದರ ಆಧಾರ್ ಡೇಟಾವನ್ನು ಸಿಂಕ್ ಮಾಡಲು ಅನುಮತಿಸುತ್ತದೆ. ಈರೀತಿ ಮಾಡುವುದರಿಂದ ಯಾವುದೇ ಸಮಯದಲ್ಲಿ ಆಧಾರ್‌ಗೆ ಸಂಬಂಧಿಸಿದ ಮಾಹಿತಿಯನ್ನು ನೀವು ನಿಮ್ಮ ಬೆರಳ ತುದಿಯಲ್ಲಿ ಪಡೆಯಲು ಇದು ಸಹಾಯ ಮಾಡುತ್ತದೆ. ಹಾಗಾದ್ರೆ ಇದನ್ನು ಬಳಕೆ ಮಾಡುವುದು ಹೇಗೆ ಎಂಬುದನ್ನು ನೋಡೋಣ.
Budget 2023: ಬಿಎಸ್ಎನ್ಎಲ್ 5ಜಿ ನೆಟ್ವರ್ಕ್ ಅಭಿವೃದ್ಧಿಗೆ 53 ಸಾವಿರ ಕೋಟಿ ರೂ
mAadhaar ಅಪ್ಲಿಕೇಶನ್ ಅನ್ನು ಭಾರತದಲ್ಲಿ ಎಲ್ಲಿಯಾದರೂ ಯಾವಾಗ ಬೇಕಾದರೂ ಬಳಸಬಹುದು. ಇದು ವ್ಯಾಲೆಟ್ ನಲ್ಲಿರುವ ಆಧಾರ್ ಕಾರ್ಡ್ ಗಿಂತ ಹೆಚ್ಚು. ಒಂದೆಡೆ, ಎಂ-ಆಧಾರ್ ಪ್ರೊಫೈಲ್ ಅನ್ನು ವಿಮಾನ ನಿಲ್ದಾಣವು ಮಾನ್ಯ ಐಡಿ ಪ್ರೂಫ್ ಆಗಿ ಸ್ವೀಕರಿಸುತ್ತದೆ ಮತ್ತು ಮತ್ತೊಂದೆಡೆ, ರೈಲ್ವೆಗಳು ತಮ್ಮ ಇಕೆವೈಸಿ ಅಥವಾ ಕ್ಯೂಆರ್ ಕೋಡ್ ಅನ್ನು ಆಧಾರ್ ಸೇವೆಗಳನ್ನು ಒದಗಿಸಿದ ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಳ್ಳಲು ಅಪ್ಲಿಕೇಶನ್‌ನಲ್ಲಿನ ವೈಶಿಷ್ಟ್ಯಗಳನ್ನು ಬಳಸಬಹುದು.
mAadhaar ಅಪ್ಲಿಕೇಶನ್ ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ನಿಮ್ಮ ಬಯೋಮೆಟ್ರಿಕ್ ಲಾಕಿಂಗ್ / ಅನ್ಲಾಕಿಂಗ್ ಅನ್ನು ಮಾಡಬಹುದು. ಇದಕ್ಕಾಗಿ ನೀವು ಅಪ್ಲಿಕೇಶನ್‌ನಲ್ಲಿ ಸೆಟ್ಟಿಂಗ್ಸ್ ಸಕ್ರಿಯಗೊಳಿಸಬೇಕು. ಎಸ್ಎಮ್ಎಸ್ ಆಧಾರಿತ ಓಟಿಪಿ ಬದಲಿಗೆ, mAadhaar ಸಮಯ ಆಧಾರಿತ ಒಂದು ಬಾರಿ ಪಾಸ್‌ವರ್ಡ್ (OTP) ಅನ್ನು ಉತ್ಪಾದಿಸುತ್ತದೆ. ಇದು ಬಹಳ ಕಡಿಮೆ ಸಮಯದವರೆಗೆ ಲೈವ್ ಒಟಿಪಿ ಆಗಿದೆ. ಇದು ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಕೂಡ ನೀಡುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ