Tech Tips: ಮನೆಯ ವೈಫೈ ವೇಗ ಕಡಿಮೆಯಾಗಿದೆಯೇ? ಈ ಟ್ರಿಕ್ ಮೂಲಕ ನಿಮಿಷಗಳಲ್ಲಿ ವೇಗ ಹೆಚ್ಚಿಸಿ

| Updated By: ಅಕ್ಷತಾ ವರ್ಕಾಡಿ

Updated on: Nov 10, 2024 | 11:29 AM

ನಿಮ್ಮ ಮನೆಯ ವೈಫೈ ಸ್ಪೀಡ್ ಕಡಿಮೆಯಾಗಿದ್ದರೆ ಅಥವಾ ಇಂಟರ್‌ನೆಟ್ ನಿಧಾನವಾಗಿದೆ ಎಂದೆನಿಸಿದರೆ, ಕೆಲವು ಸುಲಭ ಸಲಹೆಗಳನ್ನು ಅಳವಡಿಸಿಕೊಂಡು ನಿಮ್ಮ ವೈಫೈ ವೇಗವನ್ನು ಹೆಚ್ಚಿಸಬಹುದು. ಈ ಸಲಹೆಗಳು ನಿಮ್ಮ ಇಂಟರ್ನೆಟ್ ಕಾರ್ಯಕ್ಷಮತೆಯನ್ನು ತಕ್ಷಣವೇ ಸುಧಾರಿಸುತ್ತದೆ.

Tech Tips: ಮನೆಯ ವೈಫೈ ವೇಗ ಕಡಿಮೆಯಾಗಿದೆಯೇ? ಈ ಟ್ರಿಕ್ ಮೂಲಕ ನಿಮಿಷಗಳಲ್ಲಿ ವೇಗ ಹೆಚ್ಚಿಸಿ
Tech Tips
Follow us on

ಮನೆಯಲ್ಲಿ ಮೊಬೈಲ್ ನೆಟ್​ವರ್ಕ್ ಸರಿಯಾಗಿ ಸಿಗುತ್ತಿಲ್ಲ, ಇಂಟರ್ನೆಟ್ ಬಳಸಲು ಆಗುತ್ತಿಲ್ಲ ಎಂದು ವೈಫೈ ಹಾಕಿದರೆ ಅದುಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲವೇ?. ಆಪರೇಟರ್‌ಗೆ ಪದೇ ಪದೇ ಕರೆ ಮಾಡಿದರೂ ಪ್ರಯೋಜನವಾಗುತ್ತಿಲ್ಲವೇ?. ಹಾಗಾದರೆ ಇದಕ್ಕೆಲ್ಲ ಏನು ಕಾರಣ?. ಈ ಪ್ರಶ್ನೆಗೆ ಉತ್ತರವನ್ನು ನಾವು ನೀಡುತ್ತೇವೆ. ನಿಮ್ಮ ಮನೆಯ ವೈಫೈ ಸ್ಪೀಡ್ ಕಡಿಮೆಯಾಗಿದ್ದರೆ ಅಥವಾ ಇಂಟರ್‌ನೆಟ್ ನಿಧಾನವಾಗಿದೆ ಎಂದೆನಿಸಿದರೆ, ಕೆಲವು ಸುಲಭ ಸಲಹೆಗಳನ್ನು ಅಳವಡಿಸಿಕೊಂಡು ನಿಮ್ಮ ವೈಫೈ ವೇಗವನ್ನು ಹೆಚ್ಚಿಸಬಹುದು. ಈ ಸಲಹೆಗಳು ನಿಮ್ಮ ಇಂಟರ್ನೆಟ್ ಕಾರ್ಯಕ್ಷಮತೆಯನ್ನು ತಕ್ಷಣವೇ ಸುಧಾರಿಸುತ್ತದೆ.

ರೂಟರ್ ಅನ್ನು ಸರಿಯಾದ ಸ್ಥಳದಲ್ಲಿ ಇರಿಸಿ:

ರೂಟರ್ ಅನ್ನು ಮನೆಯ ಮಧ್ಯದಲ್ಲಿ ಮತ್ತು ಸ್ವಲ್ಪ ಎತ್ತರದಲ್ಲಿ ಇರಿಸಿ ಇದರಿಂದ ಅದರ ಸಂಪರ್ಕ ಇಡೀ ಮನೆಗೆ ಸುಲಭವಾಗಿ ತಲುಪುತ್ತದೆ. ಗೋಡೆಗಳು ಅಥವಾ ಲೋಹದ ವಸ್ತುಗಳಿಂದ ದೂರವಿದ್ದರೆ ನೀವು ಉತ್ತಮ ವೇಗವನ್ನು ಪಡೆಯುತ್ತೀರಿ.

ರೂಟರ್ ಅನ್ನು ಮರುಪ್ರಾರಂಭಿಸಿ:

ಕಾಲಕಾಲಕ್ಕೆ ರೂಟರ್ ಅನ್ನು ರಿ-ಸ್ಟಾರ್ಟ್ ಮಾಡುವುದರಿಂದ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು. ಇದು ಹಳೆಯ ಡೇಟಾ ಮತ್ತು ಸ್ಟೋರೇಜ್ ಅನ್ನು ತೆರವುಗೊಳಿಸುತ್ತದೆ.

ಅನಗತ್ಯ ಸಾಧನಗಳ ಸಂಪರ್ಕ ಕಡಿತಗೊಳಿಸಿ:

ಅನೇಕ ಸಾಧನಗಳು ಏಕಕಾಲದಲ್ಲಿ ಸಂಪರ್ಕಗೊಂಡಿರುವುದರಿಂದ ಇಂಟರ್ನೆಟ್ ವೇಗವು ಕಡಿಮೆಯಾಗಬಹುದು. ನಿಮ್ಮ ರೂಟರ್‌ನಿಂದ ನಿಮಗೆ ಅಗತ್ಯವಿಲ್ಲದ ಸಾಧನಗಳ ಸಂಪರ್ಕ ಕಡಿತಗೊಳಿಸಿ. ಅಲ್ಲದೆ, ನಿಮ್ಮ ವೈಫೈ ಪಾಸ್‌ವರ್ಡ್ ಬದಲಾಯಿಸುವ ಮೂಲಕ ಅಪರಿಚಿತ ಸಾಧನಗಳನ್ನು ದೂರವಿಡಿ.

ಫರ್ಮ್‌ವೇರ್ ಅನ್ನು ನವೀಕರಿಸಿ:

ನಿಮ್ಮ ರೂಟರ್‌ನ ಫರ್ಮ್‌ವೇರ್ ಅನ್ನು ನಿಯಮಿತವಾಗಿ ನವೀಕರಿಸುವುದು ಮುಖ್ಯವಾಗಿದೆ. ಅಪ್ಡೇಟ್ ಮಾಡುವುದರಿಂದ ನೆಟ್‌ವರ್ಕ್ ಕಾರ್ಯಕ್ಷಮತೆ ಸುಧಾರಿಸುತ್ತದೆ ಮತ್ತು ರೂಟರ್‌ಗೆ ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ನವೀಕರಣಗಳನ್ನು ಒದಗಿಸಲಾಗುತ್ತದೆ.

ಮೋಡೆಮ್ ಮತ್ತು ರೂಟರ್ ಅನ್ನು ಸರಿಯಾಗಿ ಇರಿಸಿ:

ನೀವು ಪ್ರತ್ಯೇಕ ಮೋಡೆಮ್‌ಗಳು ಮತ್ತು ರೂಟರ್‌ಗಳನ್ನು ಹೊಂದಿದ್ದರೆ, ಅವುಗಳನ್ನು ಪರಸ್ಪರ ಹತ್ತಿರ ಇರಿಸಿ ಮತ್ತು ಸಂಪರ್ಕವು ಸರಿಯಾಗಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ.

ಆವರ್ತನ ಚಾನಲ್ ಬದಲಾಯಿಸಿ:

ವೈಫೈ 2.4 GHz ಮತ್ತು 5 GHz ನ ಎರಡು ಆವರ್ತನ ಬ್ಯಾಂಡ್‌ಗಳನ್ನು ಹೊಂದಿದೆ. 2.4 GHz ಉತ್ತಮ ಶ್ರೇಣಿಯನ್ನು ಹೊಂದಿದೆ ಆದರೆ ಇತರ ಸಾಧನಗಳೊಂದಿಗೆ ಘರ್ಷಣೆಯಾಗಬಹುದು, ಅದೇ 5 GHz ಹೈ-ಸ್ಪೀಡ್ ವೇಗವನ್ನು ಹೊಂದಿದೆ. ಇದು ಕಡಿಮೆ ವ್ಯಾಪ್ತಿಯನ್ನು ಹೊಂದಿದೆ. ನಿಮ್ಮ ಸಾಧನದ ಅಗತ್ಯಗಳಿಗೆ ಅನುಗುಣವಾಗಿ ಸರಿಯಾದ ಬ್ಯಾಂಡ್ ಅನ್ನು ಆರಿಸಿ.

ವೈಫೈ ಬೂಸ್ಟರ್ ಬಳಸಿ:

ಮನೆಯಲ್ಲಿ ವೈಫೈ ಸಿಗ್ನಲ್ ದುರ್ಬಲವಾಗಿದ್ದರೆ, ವೈಫೈ ರೇಂಜ್ ಎಕ್ಸ್‌ಟೆಂಡರ್ ಅಥವಾ ಬೂಸ್ಟರ್ ಬಳಸುವುದು ಉತ್ತಮ. ಇವು ಸಿಗ್ನಲ್ ಅನ್ನು ಹೆಚ್ಚಿಸಲು ಮತ್ತು ಮನೆಯಾದ್ಯಂತ ಉತ್ತಮ ವೇಗವನ್ನು ಒದಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Xನಲ್ಲಿ ಯಾವುದೇ ವಿಷಯ ರಾತ್ರೋರಾತ್ರಿ ಹೇಗೆ ಟ್ರೆಂಡ್ ಆಗುತ್ತದೆ?: ತಿಳಿಯಿರಿ ಈ ಇಂಟ್ರೆಸ್ಟಿಂಗ್ ಮ್ಯಾಟರ್

ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳ ಮೇಲೆ ಕಣ್ಣಿಡಿ:

ಬ್ಯಾಕ್​ಗ್ರೌಂಡ್​ನಲ್ಲಿ ಚಾಲನೆಯಲ್ಲಿರುವ ಅಪ್ಲಿಕೇಶನ್‌ಗಳು ಮತ್ತು ಡೌನ್‌ಲೋಡ್‌ಗಳು ವೇಗವನ್ನು ಕಡಿಮೆ ಮಾಡಬಹುದು. ಭಾರೀ ಗಾತ್ರದ ಫೈಲ್‌ಗಳ ಡೌನ್‌ಲೋಡ್‌ಗಳನ್ನು ಆಫ್-ಪೀಕ್ ಸಮಯದಲ್ಲಿ ಮಾಡಿ. ಅಗತ್ಯವಿಲ್ಲದೆ ಹಿನ್ನೆಲೆ ಅಪ್ಲಿಕೇಶನ್‌ಗಳನ್ನು ಕ್ಲೋಸ್ ಮಾಡಿ.

ಈ ಎಲ್ಲ ಸಲಹೆಗಳನ್ನು ಪ್ರಯತ್ನಿಸುವ ಮೂಲಕ, ನಿಮ್ಮ ವೈಫೈ ವೇಗವು ತ್ವರಿತವಾಗಿ ಸುಧಾರಿಸಬಹುದು, ನೀವು ಅಡಚಣೆಯಿಲ್ಲದೆ ಇಂಟರ್ನೆಟ್ ಅನ್ನು ಆನಂದಿಸಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ