ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಫೋನ್‌ಗಳ (Phones) ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ, ಅಷ್ಟೇ ಪ್ರೀತಿಸುತ್ತಾರೆ ಕೂಡ. ಆದರೆ ಪ್ರೀಮಿಯಂ ಫೋನ್ ಹೊಂದಿರುವ ಜನರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಐಫೋನ್ ಬಳಕೆದಾರರಿಗೆ ಫೋನ್ ಬಿದ್ದರೆ ಹೃದಯವೇ ಕಳಚಿ ಬಿದ್ದಂತೆ. ಇದರಿಂದ ಪಾರಾಗಲು, ಹೆಚ್ಚಿನ ಜನರು ತಮ್ಮ ಫೋನ್ ಬಿದ್ದರೆ ಸುರಕ್ಷಿತವಾಗಿ ಉಳಿಯಲು ಬಲವಾದ ಕವರ್ ಅನ್ನು ಖರೀದಿಸಲು ಯೋಚಿಸುತ್ತಾರೆ. ಆದರೆ, ಈಗ ಅಂತಹ ಕವರ್ ಮರೆತು ಬಿಡಿ. ಯಾಕೆಂದರೆ ಇಂದು ನಾವು ನಿಮಗೆ ಕಾರಿನಂತಹ ಸುರಕ್ಷತೆಯನ್ನು ಪಡೆಯುವ ಕವರ್ ಬಗ್ಗೆ ಹೇಳುತ್ತೇವೆ. ಈ ಕವರ್‌ನ ದೊಡ್ಡ ವಿಶೇಷವೆಂದರೆ ಫೋನ್‌ನಲ್ಲಿ ಈ ಕವರ್ ಹಾಕಿದರೆ ಫೋನ್ ಬಿದ್ದ ತಕ್ಷಣ ಏರ್‌ಬ್ಯಾಗ್ ತೆರೆದುಕೊಳ್ಳುತ್ತದೆ. ಇದರಿಂದಾಗಿ ಫೋನ್ ಬಿದ್ದರೆ ಯಾವುದೇ ಹಾನಿ ಆಗುವುದಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಐಫೋನ್ ಕವರ್ ಅನ್ನು ತೋರಿಸಲಾಗಿದೆ. ಇಲ್ಲಿ ಫೋನ್ ಬಿದ್ದ ತಕ್ಷಣ ಏರ್ ಬ್ಯಾಗ್ ತೆರೆದುಕೊಳ್ಳುತ್ತದೆ. ನಂತರ ಫೋನ್‌ನಲ್ಲಿ ಒಂದು ಸಣ್ಣ ಸ್ಕ್ರಾಚ್ ಕೂಡ ಗೋಚರಿಸುವುದಿಲ್ಲ. ಫೋನ್ ಕೆಳಗೆವೇ ಬಿದ್ದಿಲ್ಲ ಎಂಬಂತೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇಲ್ಲಿ ನಾವು ಆ ವೀಡಿಯೊವನ್ನು ಸಹ ಹಂಚಿಕೊಡಿದ್ದೇವೆ.
ವಾಟ್ಸ್ಆ್ಯಪ್ನಲ್ಲಿ ಹೊಸ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯುವುದು ಹೇಗೆ ಗೊತ್ತೇ?
ಏರ್‌ಬ್ಯಾಗ್ ಹೊಂದಿರುವ ಐಫೋನ್ ಕವರ್ ಇದಾಗಿದ್ದು, ಫೋನ್ ಮೇಲಿನಿಂದ ಬಿದ್ದರೂ ಸುರಕ್ಷಿತವಾಗಿರುವುದನ್ನು ಈ ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣಬಹುದು. ಈ ಕವರ್‌ನ ಬಣ್ಣವು ಕಿತ್ತಳೆ ಬಣ್ಣದ್ದಾಗಿದೆ. ಇದು ನೋಡಲು ಸಾಕಷ್ಟು ಕ್ಲಾಸಿಯಾಗಿದೆ. ಈ ಕವರ್ ಅನ್ನು ಒಮ್ಮೆ ಬಳಸಿದರೆ, ಅದನ್ನು ಬಹುಶಃ ಪುನಃ ಬಳಸಲಾಗುವುದಿಲ್ಲ ಎಂದು ಹೇಳಲಾಗಿದೆ. ಸದ್ಯ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಮಾತ್ರವಲ್ಲದೆ ಯೂಟ್ಯೂಬ್‌ನಲ್ಲಿಯೂ ವೈರಲ್ ಆಗುತ್ತಿದೆ.
ಈ ಏರ್‌ಬ್ಯಾಗ್ ಫೋನ್ ಕವರ್ ಭಾರತಕ್ಕೆ ಇನ್ನಷ್ಟೆ ಬರಬೇಕಿದೆ ಎಂದು ಹೇಳಲಾಗಿದೆ. ಇದು ಯಾವಾಗ ಲಭ್ಯ ಇರುತ್ತದೆ?, ಇದರ ಬೆಲೆ ಎಷ್ಟು? ಎಂಬ ಕುರಿತ ಸಂಪೂರ್ಣ ಮಾಹಿತಿ ಹೊರಬೀಳಬೇಕಷ್ಟೆ. ಸದ್ಯಕ್ಕೆ ಇದು ವಿದೇಶದಲ್ಲಿ ಮಾತ್ರ ಸೇಲ್ ಆಗುತ್ತಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:57 pm, Thu, 1 February 24