Tech Tips: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಈ ಸಿಕ್ರೇಟ್ ಕೋಡ್ ಬಳಸಿದ್ದೀರಾ?: ಒಮ್ಮೆ ಚೆಕ್ ಮಾಡಿ

ಕೆಲವೊಂದು ಕೋಡ್​ಗಳನ್ನು ಬಳಸಿ ಮೊಬೈಲ್​ನಲ್ಲಿ ಉಂಟಾದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು. ಎಲ್ಲಾ ಕೋಡ್​ಗಳು ಆರಂಭವಾಗುವುದು # ನಿಂದಲೇ ಆಗಿದೆ.

Tech Tips: ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಈ ಸಿಕ್ರೇಟ್ ಕೋಡ್ ಬಳಸಿದ್ದೀರಾ?: ಒಮ್ಮೆ ಚೆಕ್ ಮಾಡಿ
Smartphone
Follow us
|

Updated on: May 22, 2023 | 6:55 AM

ಸ್ಮಾರ್ಟ್​ಫೋನ್​ (SmartPhone)  ಗಳು ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುತ್ತವೆ. ನಮ್ಮ ಬಳಿಯೇ ಬೆಲೆಬಾಳುವ ಮೊಬೈಲ್​ ಫೋನ್​ಗಳಿದ್ದರೂ ಕೆಲವೊಂದು ಟ್ರಿಕ್ಸ್​ (Tricks) ತಿಳಿದೇ ಇರುವುದಿಲ್ಲ. ಮೊಬೈಲ್​ನಲ್ಲಿ ಸಮಸ್ಯೆಯಾದಾಗ ಏನು ಮಾಡಬೇಕೆಂದು ತೋಚದೆ ಸರ್ವೀಸ್​ ಸೆಂಟರ್​ಗಳಿಗೆ ಹೋಗುತ್ತೇವೆ. ಸಣ್ಣ ಸಣ್ಣ ಸಮಸ್ಯೆಗಳಿಗೂ ಸರ್ವೀಸ್​ ಸೆಂಟರ್​ಗೆ ತೆಗೆದುಕೊಂಡು ಹೋಗದೆ ಕೆಲವೊಂದು ಕೋಡ್​ಗಳನ್ನು ಬಳಸಿ ಮೊಬೈಲ್​ನಲ್ಲಿ ಉಂಟಾದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದು. ಎಲ್ಲಾ ಕೋಡ್​ (Code)ಗಳು ಆರಂಭವಾಗುವುದು # ನಿಂದಲೇ ಆಗಿದೆ. ಆದರೆ ನೆನಪಿಡಿ ವಿಭಿನ್ನ ಹಾರ್ಡ್​ವೇರ್​​ ತಯಾರಕರು ಬೇರೆ ಬೇರೆ ಕಾನ್ಫಿಗರೇಷನ್​ಅನ್ನು ಬಳಸುವುದರಿಂದ ಈ ಎಲ್ಲಾ ಕೋಡ್​ಗಳು ನಿಮ್ಮ ಫೋನ್​ನಲ್ಲಿ ಇರಲು ಸಾಧ್ಯವಿಲ್ಲ. ಅಲ್ಲದೇ ಎಲ್ಲಾ ಫೋನ್​ಗಳಿಗೂ ಸರಿಹೊಂದುವ ಒಂದೇ ಕೋಡ್​ ಇರುವುದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಸಾಮಾನ್ಯವಾಗಿ ಮೊಬೈಲ್​ನ ಕೆಲವು ಸಮಸ್ಯೆಗಳಿಗೆ ಬಳಸುವ ಕೋಡ್​ಗಳನ್ನು ಇಲ್ಲಿ ತಿಳಿಸಲಾಗಿದೆ.

ಫೋನ್​ ಸ್ವಿಚ್ಡ್​ ಆಫ್​ ಮಾಡಲು

ಕೆಲವೊಮ್ಮೆ ನಿಮ್ಮ ಫೋನ್​ಗಳ ಸ್ಕ್ರೀನ್​  ಬ್ಲಿಂಕ್​ ಆಗುತ್ತದೆ. ಅಂಥಹ ಸಂದರ್ಭಗಳಲ್ಲಿ ಯಾವಾಗಲೂ ಸ್ವಿಚ್​ ಆಫ್​ ಮಾಡುವಂತೆ ಕೀ ಬಟನ್​ ಅಥವಾ ಸ್ಕ್ರೀನ್​ ಮೇಲೆ ಕಾಣಿಸುವ ಆಯ್ಕೆಯನ್ನು ಬಳಸಿ ಸ್ವಿಚ್​ ಆಫ್​ ಮಾಡಲು ಯತ್ನಿಸಿ. ಮೊಬೈಲ್​ಗೆ ವೈರಸ್​ ಅಟ್ಯಾಕ್​ ಅದಾಗ ಅಥವಾ ಬಟನ್​ಗಳು ಕಾರ್ಯನಿರ್ವಹಿಸದೇ ಇದ್ದಾಗ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆಗ ಈ ಕೋಡ್​ಅನ್ನು ಬಳಸಿ ಫೋನ್​ ಅನ್ನು ಸ್ವಿಚ್​ ಆಫ್​ ಮಾಡಬಹುದು. *#*#7594#*#* ಕೋಡ್​ ಉಪಯೋಗಿಸುವ ಮೂಲಕ ಫೋನ್​ ಅನ್ನು ಸ್ವಿಚ್​ ಮಾಡಬಹುದು. ಫೋನ್​ ಸ್ವಿಚ್​ ಮಾಡುವುದು ಅಥವಾ ರೀ ಸ್ಟಾರ್ಟ್​ ಮಾಡುವುದು  ಅನೇಕ್ ಫೋನ್​ಗಳ ಸಾಪ್ಟವೇರ್​ಗಳ ಸಮಸ್ಯೆಯನ್ನು ನಿವಾರಿಸುತ್ತದೆ.

Vivo S17e: ಗ್ಯಾಜೆಟ್ ಮಾರುಕಟ್ಟೆಗೆ ಬಂದಿದೆ ಮತ್ತೊಂದು ಸ್ಟೈಲಿಶ್ ವಿವೊ ಫೋನ್

ಇದನ್ನೂ ಓದಿ
Image
Galaxy F54 5G: 108MP ಕ್ಯಾಮೆರಾ, ನೈಟೋಗ್ರಫಿ ಫೀಚರ್: ಬರುತ್ತಿದೆ ಸ್ಯಾಮ್​ಸಂಗ್ ಗ್ಯಾಲಕ್ಸಿ F54 ಎಂಬ ಅದ್ಭುತ ಸ್ಮಾರ್ಟ್​ಫೋನ್
Image
iPhone 15: ಐಫೋನ್ 15 ನಲ್ಲಿ ಯುಎಸ್​ಬಿ ಟೈಪ್-ಸಿಯ ಅತ್ಯಂತ ವೇಗದ ಚಾರ್ಜರ್
Image
Tech Tips: ಲ್ಯಾಪ್​ಟಾಪ್ ತುಂಬಾ ಸ್ಲೋ ಆಗಿದೆಯೆ?: ಹಾಗಿದ್ರೆ ಈ ಟ್ರಿಕ್ ಉಪಯೋಗಿಸಿ ಸೂಪರ್ ಫಾಸ್ಟ್ ಮಾಡಿ
Image
Alienware m16: ಡೆಲ್ ಸೂಪರ್ ಸ್ಪೀಡ್ ಗೇಮಿಂಗ್ ಲ್ಯಾಪ್​ಟಾಪ್ ಬಿಡುಗಡೆ

ಫೋನ್​ ರೀಸೆಟ್​ ಮಾಡಲು

ನಿಮ್ಮ ಫೋನ್​ ಸರಿಯಾಗಿ ಕೆಲಸ ಮಾಡದಿದ್ದಾಗ ಅಥವಾ ಸ್ಲೋ ಆದಾಗ  ಸಮಸ್ಯೆಗಳು ಉಲ್ಬಣಿಸುತ್ತದೆ. ಫೋನ್​ ಸರಿಯಾಗಿ ಕೆಲಸ ಮಾಡದಿದ್ದಾಗ ನಿಮ್ಮ ತಾಳ್ಮೆಯೂ ಕುಸಿಯುತ್ತದೆ. ನಿಮ್ಮ ಫೊನ್​ ಎಷ್ಟೇ ಹೊಸದಾಗಿದ್ದರೂ ಮಾರುವ ಮನಸ್ಥಿತಿ ನಿಮಗೆ ಬರುತ್ತದೆ.  ಅಂತಹ ಸಂದರ್ಭಗಳಲ್ಲಿ ಫ್ಯಾಕ್ಟರಿ  ರೀ ಸೆಟ್​ ಮಾಡುವ ಅಗತ್ಯವಿದೆ. ಇದಕ್ಕಾಗಿ ನಿಮಗೆ ನೀಡಿದ ಪಿನ್​ಗಳ ಅಗತ್ಯವಿದೆ. ಅದು ಸಿಗಿದ್ದರೆ ಈ ಈಸಿ ಕೋಡ್​ ಪ್ರಯತ್ನಿಸಿ. *2767*3855# ಇದು ಫೋನ್​ನ ಫ್ಯಾಕ್ಟರಿ ರಿಸೆಟ್​ ಮಾಡುವ ಸರಳ ಕೋಡ್​ ಆಗಿದೆ.

ಡಾಟಾ SMS ಮೆಸೇಜ್​ಗಳನ್ನು ಪರೀಕ್ಷಿಸಿಲು

ಇಂದಿನ ದಿನಗಳಲ್ಲಿ ಇಂಟರ್​ನೆಟ್ ಅತೀ ಅಗತ್ಯವಾಗಿದೆ. ಪ್ರತಿದಿನದ ಇಂಟರ್​ನೆಟ್​ ಕೋಟಾಗಳನ್ನು ಹೊರತುಪಡಿಸಿಯೂ ಎಕ್ಸ್ಟಾ ಡಾಟಾ ಬಳಕೆ ಮಾಡುವವರೂ ಇದ್ದಾರೆ. ಕೆಲವೊಮ್ಮ ನಿಮ್ಮ ಡೇಟಾ ಅಥವಾ ಇಂಟರ್​​ನೆಟ್​ ಖಾಲಿಯಾಗಿದೆ ಎಂದು ಗೊತ್ತಾಗುವುದೇ SMS  ಬಂದ ಬಳಿಕ. ಅಷ್ಟರಲ್ಲಿ  ನಿಮ್ಮ ಇಂಟರ್​ನೆಟ್​ ಖಾಲಿಯಾಗಿರುತ್ತದೆ. ಅದರ ಬದಲು ಈ ಸರಳ ವಿಧಾನದ ಮೂಲಕ ನಿಮ್ಮ ಡಾಟಾ ಎಷ್ಟಿದೆ ಎನ್ನುವುದನ್ನು ತಿಳಿಯಿರಿ. ನಿಮ್ಮ ಡಯಲ್​ ಪ್ಯಾಡ್​ನಲ್ಲಿ *3282#  ಅನ್ನು ಹಾಕಿದಾಗ ನಿಮ್ಮ ದೈನಂದಿನ ಡಾಟಾ ಹಾಗೂ ಆ ಕ್ಷಣದಲ್ಲಿ ಉಳಿದಿರುವ  ಇಂಟರ್​ನೆಟ್​ಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ